ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಪದಗಳನ್ನು ತೆಗೆದುಹಾಕಿರಿ !

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ!

ನವದೆಹಲಿ – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ಕಟ್ಟಾ ಹಿಂದುತ್ವನಿಷ್ಠ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಮಹತ್ವದ ಅರ್ಜಿಯನ್ನು ದಾಖಲಿಸಿದ್ದಾರೆ. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 1976 ರಲ್ಲಿ `ಜಾತ್ಯಾತೀತ’ ಮತ್ತು ‘ಸಮಾಜವಾದ’ ಎರಡೂ ಶಬ್ದಗಳನ್ನು ತುರುಕಲಾಯಿತು. ಸಂವಿಧಾನದ ಮೂಲ ಸ್ವರೂಪದಲ್ಲಿ ಮಾಡಿರುವ ಈ ಬದಲಾವಣೆ ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿತ್ತು. ಜುಲೈ ತಿಂಗಳಿನಲ್ಲಿ ಈ ದೂರಿನ ಕುರಿತು ವಿಚಾರಣೆ ನಡೆಯಲಿದೆ. ಈ ವಿಷಯದಲ್ಲಿ ಉಪಾಧ್ಯಾಯ ಇವರು `ಸನಾತನ ಪ್ರಭಾತ’ದ ಪ್ರತಿನಿಧಿಯವರಿಗೆ ಮಾತನಾಡಿ, ಈ ದೂರನ್ನು ಎಪ್ರಿಲ್ ತಿಂಗಳಿನಲ್ಲಿ ದಾಖಲಿಸಲಾಗಿದ್ದು, ಭಾರತದ ಸಂಸ್ಕೃತಿಯ ರಕ್ಷಣೆಯ ದೃಷ್ಟಿಯಿಂದ ಅದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ

ನ್ಯಾಯವಾದಿ ಉಪಾಧ್ಯಾಯ ಅವರು ಈ ಸಂದರ್ಭದಲ್ಲಿ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಸಂವಿಧಾನದಲ್ಲಿನ ಮೂಲ ಸ್ವರೂಪದಲ್ಲಿನ ಬದಲಾವಣೆಯ ಕುರಿತು ಮಾತನಾಡಿ,

1. ಡಿಸೆಂಬರ್ 13, 1946 ಮತ್ತು ಜನವರಿ 22, 1947 ರ ನಡುವೆ ಸಂವಿಧಾನದ ಪ್ರಸ್ತಾವನೆಯ ಸಂದರ್ಭದಲ್ಲಿ ಚರ್ಚೆಯಾಗಿತ್ತು. ಆಗ ಸರ್ವಾನುಮತದ ಅದನ್ನು ಸ್ವೀಕರಿಸಲಾಗಿತ್ತು. 1976 ರ ವರೆಗೂ ಅದರಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.

2. ನವೆಂಬರ್ 15, 1948 ಮತ್ತು ಡಿಸೆಂಬರ್ 3, 1948 ಹೀಗೆ ಎರಡು ಸಲ ಪ್ರಾಧ್ಯಾಪಕ ಕೆ.ಟಿ ಶಾಹ ಇವರು ಸಂವಿಧಾನದ ಸಭೆಯ ಮೂಲ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಫೆಡರಲ(ಒಕ್ಕೂಟ)’ ಎಂಬ ಮೂರು ಪದಗಳನ್ನು ಸೇರಿಸಲು ಶಾ ಮನವಿ ಮಾಡಿದರು. ಎರಡೂ ಬಾರಿ, ಸಂವಿಧಾನ ಸಭೆಯಲ್ಲಿ ಅದನ್ನು ಸರ್ವಾನುಮತದಿಂದ ತಿರಸ್ಕರಿಸಲಾಯಿತು.

3. ಡಿಸೆಂಬರ್ 6, 1948 ರಂದು, ಪುನಃ ಮೇಲಿನ ಅಂಶಗಳ ಮೇಲೆ ಚರ್ಚೆ ನಡೆಯಿತು. ಆಗ ಸಭೆಯಲ್ಲಿ ಪಂಡಿತ್ ಲೋಕನಾಥ್ ಮಿಶ್ರಾ ಅವರು ಮಾತನಾಡಿ, ಜಾತ್ಯಾತೀತತೆಯ ಪರಿಕಲ್ಪನೆ ಭಾರತದ್ದಲ್ಲ, ಅದು ವಿದೇಶದ್ದಾಗಿದೆ. ಒಂದು ವೇಳೆ ನಾವು ಇದನ್ನು ಸಂವಿಧಾನದಲ್ಲಿ ಸೇರಿಸಿದರೆ, ಭಾರತೀಯ ಸಂಸ್ಕೃತಿ ನೆಲಸಮವಾಗುತ್ತದೆ ಎಂದು ಹೇಳಿದರು. ಎಚ್. ವ್ಹಿ. ಕಾಮತ ಇವರೂ ಕೂಡ ಈ ಮನವಿಯು ಭಾರತ ಸಂಸ್ಕೃತಿಗೆ ಆಘಾತಕಾರಿಯಾಗಿದೆಯೆಂದು ಹೇಳುತ್ತಾ ವಿರೋಧಿಸಿದ್ದರು.

4. ಸಂವಿಧಾನ ಸಭೆಯು ಅಕ್ಟೋಬರ್ 17, 1949 ರಂದು ಪ್ರಸ್ತಾವನೆಯನ್ನು ಅಂಗೀಕರಿಸಿತು ಮತ್ತು ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. 1950 ರ ಜನವರಿ 14 ರಂದು ರಾಷ್ಟ್ರಗೀತೆಯನ್ನು ಅಂತಿಮಗೊಳಿಸಲಾಯಿತು ಮತ್ತು ಜನವರಿ 25 ರಂದು ಸಂವಿಧಾನ ಸಭೆಯನ್ನು ವಿಸರ್ಜಿಸಲಾಯಿತು.

5. 1967 ರಲ್ಲಿ, ಗೋಲಕನಾಥ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂಸತ್ತಿನಲ್ಲಿ ಸಂವಿಧಾನದ ಮೂಲ ಸ್ವರೂಪದಲ್ಲಿ ಅಂದರೆ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿತ್ತು.

6. 1971 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 352 ಸ್ಥಾನ ಗೆಲುವು ಸಾಧಿಸಿತು. ಆ ಸಮಯದಲ್ಲಿ ಕಾಂಗ್ರೆಸ್ ಸರಕಾರ ಒಂದು ಕಾನೂನನ್ನು ಜಾರಿಗೊಳಿಸಿ ಗೋಲಕನಾಥ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತ್ತು.

7. 1973 ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯಮಹತ್ವದ ತೀರ್ಪು ನೀಡಿತು. ನ್ಯಾಯಾಲಯದ 13 ನ್ಯಾಯಮೂರ್ತಿಗಳ ಪೀಠವು ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿತ್ತು.

8. ಜೂನ್ 12, 1975 ರಂದು, ಅಲಹಾಬಾದ ಉಚ್ಚ ನ್ಯಾಯಾಲಯವು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಚುನಾವಣೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿತ್ತು. ಮತ್ತು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿತು. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದಾಗ ಜೂನ್ 24, 1975 ರಂದು ನ್ಯಾಯಾಲಯವು ನೀವು ಪ್ರಧಾನಮಂತ್ರಿ ಹುದ್ದೆಯಲ್ಲಿ ಉಳಿಯಬಹುದು ಎಂದು ಹೇಳಿತು; ಆದರೆ ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಯಾವುದೇ ನಿಯಮವನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಮುಂದಿನ ಚುನಾವಣೆಯವರೆಗೂ ನೀವು ಹಂಗಾಮಿ ಪ್ರಧಾನಿಯಾಗಿ ಉಳಿಯಬಹುದು ಎಂದು ಹೇಳಿತು.

9. ಇದರ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂದಿರಾಗಾಂಧಿಯವರು ಮರುದಿನವೇ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

10. ಮಾರ್ಚ್ 1976 ರಲ್ಲಿ, ಲೋಕಸಭೆಯ ಅಧಿಕಾರಾವಧಿಯನ್ನು ಕೊನೆಗೊಂಡಿತು. ಆಗ ಇಂದಿರಾ ಗಾಂಧಿಯವರು ಅದರ ಅಧಿಕಾರಾವಧಿಯನ್ನು ಒಂದು ವರ್ಷದ ವರೆಗೆ ವಿಸ್ತರಿಸಿದರು. ಮುಂದೆ, ಡಿಸೆಂಬರ್ 1976 ರಲ್ಲಿ, ಅವರು ಭಾರತದ 42 ನೇ ಸಂವಿಧಾನದ ಮೂಲ ಸ್ವರೂಪದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಎರಡು ಶಬ್ದಗಳನ್ನು ಸೇರಿಸಿದರು.

11. ತಾಂತ್ರಿಕ ದೃಷ್ಟಿಯಿಂದ ಸಂಪೂರ್ಣವಾಗಿ ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿ ಇಲ್ಲದಿರುವಾಗಲೂ, ಹಾಗೆಯೇ ಸಂವಿಧಾನ ಸಭೆ ಅಸ್ತಿತ್ವದಲ್ಲಿ ಇಲ್ಲದಿರುವಾಗಲೂ ಮತ್ತು ಲೋಕಸಭೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವಾಗಲೂ ಅವರು ಮೇಲಿನಂತೆ ಸಂವಿಧಾನದ ಮೂಲ ಸ್ವರೂಪದಲ್ಲಿ ಬದಲಾವಣೆ ಮಾಡಿದರು.

12. ಆದ್ದರಿಂದಲೇ ನಾವು ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದೇವೆ.

ಸಂಪಾದಕೀಯ ನಿಲುವು

ಸರಕಾರವು ಆದ್ಯತೆಯಿಂದ ಈ ಕೃತಿಯನ್ನು ಮಾಡಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಾಗಿದೆ.