(ಹಿಜಾಬ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)
ಪ್ಯಾರಿಸ್(ಫ್ರಾನ್ಸ್) – ಇಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಸ್ಪರ್ಧೆಗಾಗಿ ಮುಸಲ್ಮಾನ ಮಹಿಳಾ ಸ್ಪರ್ಧಿಗಳಿಂದ ಹಿಜಾಬ್ ಕುರಿತು ವಿವಾದ ನಿರ್ಮಾಣವಾಯಿತು. ಫ್ರಾನ್ಸಿನ ಹಿಜಾಬ ವಿರೋಧಿ ಕಾನೂನಿನಿಂದ ಫ್ರಾನ್ಸಿನ ಮಹಿಳಾ ಸ್ಪರ್ಧಿಗಳಿಗೆ ಹಿಜಾಬ್ ಧರಿಸಿ ಆಡಲು ತಡೆಯಲಾಗುತ್ತಿದೆ. ವಿಶೇಷ ಎಂದರೆ ಸ್ಪರ್ಧೆಯಲ್ಲಿ ಇತರ ದೇಶದಲ್ಲಿನ ಮುಸಲ್ಮಾನ ಮಹಿಳೆಯರು ಹಿಜಾಬದರಿಸಿ ಸ್ಪರ್ಧಿಸುತ್ತಿದ್ದಾರೆ.
೧. ೨೦೧೭ ರಲ್ಲಿ ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್, ಫೆಡರೇಶನ್ ಇಂದ ಹಿಜಾಬ ಧರಿಸಿ ಆಡಲು ನಿಷೇಧ ತೆರವುಗೊಳಿಸಿತು; ಆದರೆ ಫ್ರೆಂಚ್ ಬಾಸ್ಕೆಟ್ ಬಾಲ್ ಫೆಡರೇಶನ್ ಹಿಜಾಬ ಮೇಲಿನ ನಿಷೇಧ ತೆರವುಗೊಳಿಸಲು ನಿರಾಕರಿಸಿತು. ಫ್ರಾನ್ಸಿನಲ್ಲಿ ಸ್ಪರ್ಧಿಗಳು ಹಾಗೂ ಪ್ರಶಿಕ್ಷಕ ಮತ್ತು ಪಂಚ ಇವರಿಗೆ ಹಿಜಾಬ ಧರಿಸಲು ನಿಷೇಧವಿದೆ.
೨. ಜೂನ್ ತಿಂಗಳಲ್ಲಿ ‘ಹ್ಯೂಮನ್ ರೈಟ್ಸ್ ವಾಚ್’ ಮತ್ತು ‘ಆಮ್ನೇಸ್ಟಿ ಇಂಟರ್ನ್ಯಾಷನಲ್’ ಈ ಸುಳ್ಳು ಮಾನವ ಹಕ್ಕುಗಳ ಸಂಘಟನೆಯು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಪತ್ರ ಬರೆದು ಫ್ರಾನ್ಸಿನ ಹಿಜಾಬ ನಿಷೇಧವನ್ನು ಖಂಡಿಸಿದ್ದು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಆಗ್ರಹಿಸಿತ್ತು. ಈ ಸಂಘಟನೆಯ ಪತ್ರದಲ್ಲಿ, ಫ್ರಾನ್ಸಿನ ಕ್ರೀಡಾ ಅಧಿಕಾರಿಗಳು ಹೇರಿರುವ ಹಿಜಾಬ ನಿಷೇಧ ತಾರತಮ್ಯ ಪೂರ್ಣವಾಗಿದೆ. ಈ ನಿಷೇಧ ಹಿಜಾಬ ಧರಿಸಿರುವ ಮುಸಲ್ಮಾನ ಆಟಗಾರರಲ್ಲಿ ತಾರತಮ್ಯ ಮಾಡುತ್ತಾ ಯಾವುದೇ ಆಟ ಆಡಲು ಅವರ ಮಾನವ ಹಕ್ಕುಗಳಿಂದ ತಡೆಯುತ್ತಿದೆ.
೩. ಫ್ರೆಂಚ್ ಬಾಸ್ಕೆಟ್ ಬಾಲ್ ಫೆಡರೇಶನ್ ಇದರ ಕುರಿತು ಮಾತನಾಡಿ, ಅದು (ಹಿಜಾಬ್ ನಿಷೇಧ) ಫ್ರಾನ್ಸಿನ ಜಾತ್ಯತೀತತೆಯ ನೀತಿ ಪ್ರತಿಬಿಂಬಿಸುತ್ತದೆ. ಫ್ರಾನ್ ಸರಕಾರ ಈ ನೀತಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪು ಧರಿಸಲು ನಿಷೇಧಿಸುತ್ತದೆ ಎಂದು ಹೇಳಿದೆ.
೪. ಫ್ರಾನ್ಸಿನ ಮಹಿಳಾ ಬಾಸ್ಕೆಟ್ ಬಾಲ್ ಸ್ಪರ್ಧಿ ದೈಬಾ ಕೊನಾಟೆ ಇವರು, ‘ಹಿಜಾಬ್ ಮೇಲಿನ ನಿಷೇಧ ನಮಗೆ ದೊರೆಯುವ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಹಿಜಾಬ್ ಬಿಡುವುದು ಇದು ಪರ್ಯಾಯವಲ್ಲ. ನಾನು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ; ಕಾರಣ ಅದು ನನ್ನ ಜೀವನದ ಒಂದು ಭಾಗವಾಗಿದೆ.’ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಜಾಬ ನಿಷೇಧಿಸಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧವಾದ ನಂತರ ಕೂಡ ಈ ನಿರ್ಣಯದ ಮೇಲೆ ದೃಢವಾಗಿರುವ ಫ್ರಾನ್ಸ್ ನಿಂದ ಭಾರತವು ‘ಜಾತ್ಯತೀತ’ ಕಲಿಯುವುದು ಆವಶ್ಯಕ ! |