ಮೊಹರಮ್ ನ ತಾಜಿಯಾ ಒಯ್ಯಲು ತೊಂದರೆಯಾಗುತ್ತಿದೆ ಎಂದು ಪ್ರಾಚೀನ ಆಲದ ಮರದ ಕೊಂಬೆಗಳನ್ನು ಕತ್ತರಿಸಿದ ಹಿಂದೂಗಳು !

32 ವರ್ಷಗಳಿಂದ ಈ ಕುರಿತು ವಾಗ್ವಾದ

(ತಾಜಿಯಾ ಎಂದರೆ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಉತ್ತರಾಧಿಕಾರಿಯಾದ ಧಾರ್ಮಿಕ ಮುಖಂಡ ಇಮಾಮ್ ಹುಸೇನ್ ಅವರ ಸಮಾಧಿಯ ಪ್ರತಿರೂಪವಾಗಿದೆ. ಇದನ್ನು ಹಲವು ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಮಾಡುತ್ತಾರೆ.)

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಹಿಂದೂ ಬಹುಸಂಖ್ಯಾತವಿರುವ ಪ್ರದೇಶದಲ್ಲಿ, ಕಳೆದ 32 ವರ್ಷಗಳಿಂದ ಮೊಹರಂ ಸಮಯದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಆ ಸಮಯದಲ್ಲಿ ಎತ್ತರದ ತಾಜಿಯಾವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಇದರ ಎತ್ತರದಿಂದ ದಾರಿಯಲ್ಲಿರುವ ಪುರಾತನ ಆಲದ ಮರದ ರೆಂಬೆಗಳು ಅಡ್ಡಿಯಾಗುತ್ತಿದ್ದವು. ಇದರಿಂದ ಅಲ್ಲಿ ವಾದವೂ ಆಗುತ್ತಿತ್ತು. ತಾಜಿಯಾ ಒಯ್ಯಲು ಪ್ರತಿ ವರ್ಷವೂ ಈ ಸ್ಥಳದಲ್ಲಿ 30 ಅಡಿ ಎತ್ತರ ಮತ್ತು 4 ಅಡಿ ಆಳವಾದ ಹೊಂಡವನ್ನು ತೆಗೆದು ಅದರಿಂದ ಮೆರವಣಿಗೆಯನ್ನು ಮುಂದಕ್ಕೆ ಒಯ್ಯಲಾಗುತ್ತಿತ್ತು. ಈ ಪ್ರಕಾರವನ್ನು ನೋಡಿದರೆ ಈ ವರ್ಷ ಹಿಂದೂಗಳು ಮುಂದಾಳತ್ವವನ್ನು ವಹಿಸಿ ಅಡಚಣೆಯಾಗುತ್ತಿದ್ದ ಆಲದ ರೆಂಬೆಗಳನ್ನು ಕತ್ತರಿಸಿದರು.

1. ಈ ಸಮಸ್ಯೆಯ ಮೇಲೆ ಪರಿಹಾರವನ್ನು ಕಂಡುಹಿಡಿಯಲು ಮೊದಲು ಸ್ಥಳೀಯ ನಗರಸೇವಕ ಅನೀಸ್ ಸಕಲೈನಿ ಹಾಗೂ ಭಾಜಪ ಪದಾಧಿಕಾರಿ ಸಂಜೀವ್ ಮಿಶ್ರಾ ಅವರ ನಡುವೆ ಚರ್ಚೆಗಳು ನಡೆದವು. ತರುವಾಯ, ಹಿಂದೂಗಳ ಸಹಮತಿಯೊಂದಿಗೆ ರೆಂಬೆಗಳನ್ನು ಕತ್ತಿರಿಸಲಾಯಿತು. ತಾಜಿಯಾ ಒಯ್ಯುವ ಮಾರ್ಗವು ಕಿರಿದಾಗಿತ್ತು. ಆದರೂ ಮುಸಲ್ಮಾನರು ಇದೇ ಮಾರ್ಗದಿಂದ ತಾಜಿಯಾ ಒಯ್ಯಲು ಉದ್ದೇಶಪೂರ್ವಕವಾಗಿ ಅಟ್ಟಹಾಸ ಮಾಡುತ್ತಿದ್ದರು. ಇದರಿಂದ ಆಗುವ ಒತ್ತಡವನ್ನು ಕಡಿಮೆ ಮಾಡಲು ರೆಂಬೆಗಳನ್ನು ಕತ್ತರಿಸಲಾಯಿತು.

2. ಸ್ಥಳೀಯ ವ್ಯಕ್ತಿಯೊಬ್ಬರು, ಆಲದ ಮರವು 250 ವರ್ಷಗಳಷ್ಟು ಹಳೆಯದಾಗಿದೆ. ಅದಕ್ಕೆ ತಾಗಿ ಒಂದು ದೇವಸ್ಥಾನವಿದೆ. ಈ ಹಿಂದೆ ಯಾವುದೇ ತೊಂದರೆಯಿರಲಿಲ್ಲ; ಆದರೆ ರಸ್ತೆಯ ಗುಂಡಿ ರಿಪೇರಿ ಮಾಡಿದ್ದರಿಂದ ರಸ್ತೆಯ ಎತ್ತರ ಹೆಚ್ಚಾಗಿದ್ದರಿಂದ ತಾಜಿಯಾ ಒಯ್ಯುವಾಗ ಮರದ ರೆಂಬೆಗಳು ಅಡಚಣೆಯಾಗುತ್ತಿದ್ದವು, ಎಂದು ಹೇಳಿದ್ದಾರೆ.

3. ಭಾಜಪದ ಪದಾಧಿಕಾರಿ ಸಂಜೀವ್ ಮಿಶ್ರಾ ಮಾತನಾಡಿ, ಪೊಲೀಸರು ಮತ್ತು ಆಡಳಿತದ ಮಧ್ಯವರ್ತಿಯು ಅನೇಕ ಸಭೆಗಳನ್ನು ನಡೆಸಿದರು. ಈ ಕ್ಷೇತ್ರ ಶೇ.80 ಹಿಂದೂಬಹುಸಂಖ್ಯಾತರಾಗಿದ್ದಾರೆ. ನಾವು ಎರಡೂ ಸಮಾಜದಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸಿದೆವು. ಚರ್ಚೆಯ ನಂತರ, ರೆಂಬೆ ಕತ್ತರಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಸಂಪಾದಕೀಯ ನಿಲುವು

ಹಿಂದೂಗಳ ಆತ್ಮಘಾತುಕ ಜಾತ್ಯತೀತ ! ಹಿಂದೂ ಬಹುಸಂಖ್ಯಾತ ಪ್ರದೇಶದಿಂದ ಮೊಹರಮ್ ನ ತಾಜಿಯಾ ಯಾವ ಕಾರಣಕ್ಕೆ ಒಯ್ಯಲಾಗುತ್ತದೆ ? ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಯನ್ನು ಒಯ್ಯಲು ಯಾವಾಗಲೂ ವಿರೋಧಿಸಲಾಗುತ್ತದೆ. ಮಸೀದಿಯ ಹತ್ತಿರ ಇಂತಹ ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿ ದಾಳಿಗಳು ನಡೆಯುತ್ತಿವೆ. ಇನ್ನೊಂದೆಡೆ ಹಿಂದೂ ಗಾಂಧಿವಾದಿಗಳು ಆತ್ಮಘಾತುಕ ಜಾತ್ಯತೀತತೆಯನ್ನು ತೋರಿಸಿ ಪವಿತ್ರ ಪುರಾತನ ಆಲದ ಮರದ ರೆಂಬೆ ಕಡಿದು ಮರಕ್ಕೆ ಆಘಾತ ಮಾಡುತ್ತಾರೆ, ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !

ದಿನಕ್ಕೆ 5 ಬಾರಿ ಮಸೀದಿ ಮೇಲಿನ ಧ್ವನಿವರ್ಧಕದಿಂದ ಹಿಂದೂಗಳಿಗೆ ಅಜಾನ ಕೇಳಬೇಕಾಗುತ್ತದೆ. ಇದರಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದ್ದರೂ, ಮುಸಲ್ಮಾನರು ಎಂದಿಗೂ ತಾವಾಗಿಯೇ ಧ್ವನಿವರ್ಧಕವನ್ನು ಇಳಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು !