ಸಹಜಭಾವದಲ್ಲಿರುವ ಇತರರಿಗೆ ಸಹಾಯ ಮಾಡುವ ಮತ್ತು ಸಂತರು ಹಾಗೂ ಗುರುಗಳ ಬಗ್ಗೆ ವಾತ್ಸಲ್ಯವನ್ನು ಹೊಂದಿರುವ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ)
ಪೂ. ರಾಧಾ ಪ್ರಭು ಅಜ್ಜಿಯವರು ಸಾಧಕರ ಜೊತೆಗೆ ಜಪ ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಪೂ. ಭಾರ್ಗವರಾಮ ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ. ನಾಮಜಪವಾದ ಕೂಡಲೇ ಪೂ. ಭಾರ್ಗವರಾಮ ಪೂ. ಅಜ್ಜಿಯ ಚರಣಗಳ ಕೆಳಗಿಟ್ಟಿರುವ ಫುಟ್‌ರೆಸ್ಟ್ ಮತ್ತು ಆಸನ (ಮ್ಯಾಟ)ವನ್ನು ತಕ್ಷಣವೇ ತೆಗೆದು ಇಡುತ್ತಾರೆ.