ಪುಣೆಯ ಶ್ರೀಮತಿ ಉಷಾ ಕುಲಕರ್ಣಿ (೭೯ ವರ್ಷ) ಇವರು ಸನಾತನದ ೧೧೦ ನೇ ಸಂತ ಹಾಗೂ ಶ್ರೀ. ಗಜಾನನ ಸಾಠೆ (೭೮ ವರ್ಷ) ಇವರು ೧೧೧ ನೇ ಸಂತರೆಂದು ಘೋಷಣೆ !

ಶ್ರೀಕೃಷ್ಣ ಜಯಂತಿಯ ಹಿಂದಿನ ದಿನ ಸಾಯಂಕಾಲ ‘ಆನ್‌ಲೈನ್’ ಕೃಷ್ಣಾನಂದ ಸಮಾರಂಭದ ಆಚರಣೆ!

ಪೂ. ಉಷಾ ಕುಲಕರ್ಣಿ
ಪೂ. ಗಜಾನನ ಸಾಠೆ

ಪುಣೆ – ವಯಸ್ಸಾಗಿದ್ದರೂ ಅನಾರೋಗ್ಯದಲ್ಲಿ ಒಬ್ಬಂಟಿಗರಾಗಿ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸುವ, ‘ಗುರುದೇವರು ಜೊತೆಗಿದ್ದಾರೆ, ಎಂಬ ಅಖಂಡ ಭಾವವಿರುವ, ಹಾಗೆಯೇ ಮೊದಲಿನಿಂದಲೇ ಸ್ಥಿರತೆ ಈ ಗುಣವನ್ನು ಹೊಂದಿರುವ ಶ್ರೀಮತಿ ಉಷಾ ಕುಲಕರ್ಣಿ ಇವರನ್ನು ಸನಾತನದ ೧೧೦ ನೇ ವ್ಯಷ್ಟಿ ಸಂತರೆಂದು ಘೋಷಿಸಲಾಯಿತು. ಇವರೊಂದಿಗೆ ಶಾಂತ, ನಮ್ರತೆ ಸ್ವಭಾವ ಮತ್ತು ಕಡಿಮೆ ಅಹಂ ಇರುವ ಮತ್ತು ಶಸ್ತ್ರಚಿಕಿತ್ಸೆ ನಡೆಯುವಾಗ ಈಶ್ವರನ ಅಖಂಡ ಅನುಸಂಧಾನದಲ್ಲಿದ್ದ ಶ್ರೀ. ಗಜಾನನ ಸಾಠೆ ಇವರು ೧೧೧ ನೇ ವ್ಯಷ್ಟಿ ಸಂತರೆಂದು ಘೋಷಿಸಲಾಯಿತು. ಈ ಭಾವಪ್ರಸಂಗದಲ್ಲಿ ಸನಾತನದ ಧರ್ಮಪ್ರಚಾರಕರಾದ ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರ ಶುಭಹಸ್ತದಿಂದ ಪೂ. (ಶ್ರೀಮತಿ) ಉಷಾ ಕುಲಕರ್ಣಿ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿ ಅವರ ಸನ್ಮಾನ ಮಾಡಲಾಯಿತು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕೃಷ್ಣಾಜಿ ಪಾಟೀಲ (ಆಧ್ಯಾತ್ಮಿಕ ಮಟ್ಟ ಶೇ. ೬೮ ) ಇವರು ಪೂ. ಗಜಾನನ ಸಾಠೆ ಇವರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನ ಮಾಡಿದರು. ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಪೂ. ಗಜಾನನ ಸಾಠೆ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾ ಚಿತ್ರವನ್ನು ಉಡುಗೊರೆಯಾಗಿ ನೀಡಿ ಅವರ ಸನ್ಮಾನ ಮಾಡಿದರು.

ಈ ಸಮಯದಲ್ಲಿ ಪೂ. ಉಷಾ ಕುಲಕರ್ಣಿ ಇವರ ಮಗಳು ಪುಣೆ ಜಿಲ್ಲೆಯಲ್ಲಿ ಲೆಕ್ಕಪತ್ರದ ಸೇವೆಯನ್ನು ಮಾಡುವ ಸೌ. ಜ್ಯೋತಿ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೨) ಮತ್ತು ಅಳಿಯ ಆಧುನಿಕ ವೈದ್ಯ (ಡಾ.) ನರೇಂದ್ರ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಮತ್ತು ಇತರ ಸಂಬಂಧಿಕರು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.