ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಉದ್ಧಾರ ಮಾಡಿಕೊಳ್ಳಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.

ಪೂ. (ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರ ದೇಹತ್ಯಾಗದ ಬಳಿಕ ೧೧ ನೇ ದಿನ ಮುದ್ರಿಸಿದ ಅವರ ಛಾಯಾಚಿತ್ರವನ್ನು ನೋಡಿ ಸಂತರು ಮತ್ತು ಸಾಧಕರಿಗೆ ಬಂದ ಅನುಭೂತಿಗಳು

‘ಪೂ. ಅಜ್ಜಿಯವರ ಕಣ್ಣುಗಳನ್ನು ನೋಡಿದಾಗ ಮೊದಲು ಭಾವ ಅರಿವಾಗುತ್ತದೆ ಮತ್ತು ಸೂಕ್ಷ್ಮದಲ್ಲಿ ಅವರ ಕಣ್ಣುಗಳು ನೀಲಿ ಕಾಣಿಸುತ್ತವೆ. ಕಣ್ಣುಗಳನ್ನು ಒಂದೇ ಸಮನೆ ನೋಡಿದಾಗ ‘ಅವರ ಕಣ್ಣುಗಳು ಶೂನ್ಯದಲ್ಲಿ ಸ್ಥಿರವಾಗಿವೆ ಎಂದು ಅರಿವಾಗುತ್ತದೆ.

ಸಾಧಕರ ಮುಂದೆ ಭಾವದ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ವೇದನೆಯಾಗುತ್ತದೆ. ಭಕ್ತನು ಭಗವಂತನೊಂದಿಗೆ ಏಕರೂಪವಾಗಿದ್ದರೆ ಮಾತ್ರ ಈ ರೀತಿ ಘಟಿಸುತ್ತದೆ. ಅವನು ವಿಭಕ್ತನಾಗಿದ್ದರೆ, ಏನೂ ಘಟಿಸುವುದಿಲ್ಲ. ಭಗವಂತನು ನಿರ್ಗುಣ-ನಿರಾಕಾರನಿದ್ದಾನೆ.