ಕರ್ನಾಟಕ ರಾಜ್ಯದಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ (ಗ್ರಂಥ ಅಭಿಯಾನ)ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಆರಂಭಿಸುವಾಗ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಭಾವಪೂರ್ಣ ಮಾರ್ಗದರ್ಶನವನ್ನು ಮಾಡಿದರು. ಅವರು ತಮ್ಮ ಮಾರ್ಗದರ್ಶನದಲ್ಲಿ ಸನಾತನವು ಪ್ರಕಾಶಿಸಿದ ಗ್ರಂಥಗಳ ಮಹತ್ವವನ್ನು ಹೇಳಿದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಮಹಾನ ಕೊಡುಗೆಯನ್ನು ನೀಡುವ ಈ ದಿವ್ಯ ಮತ್ತು ಚೈತನ್ಯದಾಯಕ ಗ್ರಂಥಗಳನ್ನು ಸಮಾಜದಲ್ಲಿ ಮನೆಮನೆಗೆ ತಲುಪಿಸುವ ಮಹತ್ವವನ್ನೂ ಗಮನಕ್ಕೆ ತಂದುಕೊಟ್ಟರು. ‘ಇದರಿಂದ ಸಾಧಕರ ಸಾಧನೆ ಹೇಗಾಗುತ್ತದೆ ?, ಈ ಬಗ್ಗೆಯೂ ಅವರು ಹೇಳಿದರು. ಅವರ ಮಾರ್ಗದರ್ಶನದಿಂದ ಕರ್ನಾಟಕದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದ ಮೊದಲ ಹದಿನೈದು ದಿನಗಳಲ್ಲಿ ದಕ್ಷಿಣ ಕನ್ನಡ, ಬೆಳಗಾವ ಮತ್ತು ಧಾರವಾಡ ಈ ಜಿಲ್ಲೆಗಳಲ್ಲಿನ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಸಮಾಜದಿಂದ ದೊರಕಿದ ಬೆಂಬಲ, ಹಾಗೆಯೇ ಸಾಧಕರಿಗೆ ಬಂದ ಅನುಭೂತಿಗಳನ್ನು ಇಲ್ಲಿ ನೀಡಲಾಗಿದೆ.
೧. ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರು ಮಾಡಿದ ಪ್ರಯತ್ನ
೧ ಅ. ‘ಗ್ರಂಥಗಳನ್ನು ಯಾರಿಗೆ ವಿತರಿಸಲಿ ?’, ಎಂಬ ಬಗ್ಗೆ ಪರಾತ್ಪರ ಗುರು ಡಾಕ್ಟರರಲ್ಲಿ ಪ್ರಾರ್ಥಿಸಿದಾಗ ಒಂದೊಂದೇ ಹೆಸರು ಕಣ್ಣೆದುರು ಬರುವುದು ಮತ್ತು ಗುರುದೇವರು ಮತ್ತು ಪೂ. ರಮಾನಂದ ಅಣ್ಣ ಇವರ ಸಂಕಲ್ಪದಿಂದ ಅನೇಕ ಗ್ರಂಥ-ಕಿರುಗ್ರಂಥಗಳು ವಿತರಣೆಯಾಗುವುದು : ‘ಪೂ. ರಮಾನಂದ ಗೌಡ ಇವರು ಗ್ರಂಥ ಅಭಿಯಾನ’ದ ಬಗ್ಗೆ ಮಾರ್ಗದರ್ಶನ ಮಾಡಿದ ನಂತರ ‘ಗ್ರಂಥಗಳನ್ನು ಯಾರಿಗೆ ವಿತರಿಸಬೇಕು ?’, ಎಂಬ ಬಗ್ಗೆ ಪರಾತ್ಪರ ಗುರು ಡಾಕ್ಟರರಲ್ಲಿ ಪ್ರಾರ್ಥನೆಯಾಗತೊಡಗಿತು. ನಾನು ಗುರುದೇವರಿಗೆ ಸಂಪೂರ್ಣವಾಗಿ ಶರಣಾದೆನು ಮತ್ತು ರಾತ್ರಿ ನಿದ್ದೆಯಿಂದ ಎಚ್ಚರವಾದಾಗ ಒಂದೊಂದೇ ಹೆಸರುಗಳು ನನ್ನ ಕಣ್ಣೆದುರು ಬರತೊಡಗಿದವು. ಆಗ ಪೂ. ರಮಾನಂದ ಅಣ್ಣ ಇವರು ಹೇಳಿದ ‘ಪ್ರತಿಯೊಂದು ಕ್ಷಣ ಗ್ರಂಥವನ್ನು ಯಾರಿಗೆ ಕೊಡಬೇಕು, ಎಂಬ ಬಗ್ಗೆ ತಳಮಳದಿಂದ ಚಿಂತನೆ ಮಾಡಬೇಕು’, ಎಂಬ ವಾಕ್ಯವು ನನಗೆ ನೆನಪಾಗುತ್ತಿತ್ತು.
ನಂತರ ಜಿಜ್ಞಾಸುಗಳನ್ನು ಸಂಪರ್ಕಿಸುವಾಗ ಅವರ ಆಸಕ್ತಿಗನುಸಾರ ಅಧ್ಯಯನ ಮಾಡಿ ನಾವು ಅವರಿಗೆ ಗ್ರಂಥಗಳ ಬಗ್ಗೆ ಹೇಳುತ್ತಿದ್ದೆವು. ಒಬ್ಬರಿಗೆ ಗ್ರಂಥವನ್ನು ತೆಗೆದುಕೊಳ್ಳುವ ಬಗ್ಗೆ ಕೇಳಿದಾಗ ಅವರು, “ನಾನು ಈ ಗ್ರಂಥವನ್ನು ಯಾರಿಗೆ ನೀಡಲಿ ?” ಎಂದು ಕೇಳಿದರು. ಆಗ ನನಗೆ ಒಳಗಿನಿಂದಲೇ ವಿಚಾರ ಹೊಳೆಯಿತು ಮತ್ತು ನಾನು ಅವರಿಗೆ, “ನೀವು ಭಜನೆಗೆ ಹೋಗುತ್ತಿರಲ್ಲ. ನವರಾತ್ರಿಯಲ್ಲಿ ಭಜನೆಗೆ ಬರುವ ವ್ಯಕ್ತಿಗಳಿಗೆ ಈ ಗ್ರಂಥಗಳನ್ನು ನೀಡಿರಿ. ನಿಮಗೆ ಗ್ರಂಥಗಳಲ್ಲಿನ ಜ್ಞಾನವನ್ನು ೧೦೦ ಮನೆಗಳಿಗೆ ತಲುಪಿಸುವ ಗುರುಸೇವೆಯನ್ನು ಮಾಡುವ ಅವಕಾಶವಿದೆ”, ಎಂದು ಹೇಳಿದೆನು. ನಾನು ಆ ರೀತಿ ಹೇಳಿದಾಗ ಅದು ಅವರಿಗೆ ಒಪ್ಪಿಗೆಯಾಯಿತು ಮತ್ತು ಅವರಿಗೆ ಬಹಳ ಕೃತಜ್ಞತೆ ಎನಿಸಿತು. ವಾಸ್ತವದಲ್ಲಿ ನಾವು ೨೦೦ ದೊಡ್ಡ ಗ್ರಂಥ ಮತ್ತು ೨೫೦ ಕಿರುಗ್ರಂಥಗಳನ್ನು ವಿತರಿಸುವ ಧ್ಯೇಯವನ್ನು ಇಟ್ಟುಕೊಂಡಿದ್ದೆವು; ಆದರೆ ಪರಾತ್ಪರ ಗುರು ಡಾಕ್ಟರ್ ಮತ್ತು ಪೂ. ರಮಾನಂದ ಅಣ್ಣ ಇವರ ಸಂಕಲ್ಪದಿಂದ ೨೨೦ ದೊಡ್ಡ ಗ್ರಂಥ ಮತ್ತು ೨೭೫ ಕಿರುಗ್ರಂಥಗಳ ವಿತರಣೆಯಾಯಿತು. ಈ ರೀತಿ ಧ್ಯೇಯವನ್ನು ಪೂರ್ಣ ಮಾಡಿಸಿಕೊಳ್ಳುವ ಗುರುದೇವರ ಚರಣಗಳಲ್ಲಿ ಕೃತಜ್ಞತೆಗಳು !’ – ಸೌ. ವಾಣಿ ಆಚಾರ್ಯ, ಮಂಗಳೂರು
೧ ಆ. ಗ್ರಂಥ ಅಭಿಯಾನದ ಮೊದಲ ದಿನವೇ ಸಂಬಂಧಿಕರಿಗೆ ಗ್ರಂಥಗಳ ಮಾಹಿತಿಯನ್ನು ಹೇಳಿದಾಗ ಅವರು ಗ್ರಂಥಗಳನ್ನು ಖರೀದಿಸಲು ಒಪ್ಪಿಕೊಳ್ಳುವುದು ಮತ್ತು ‘ಗುರುಗಳ ಈ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕು’, ಎಂದು ಗಮನಕ್ಕೆ ಬರುವುದು : ‘ನನ್ನ ಆರೋಗ್ಯವು ಚೆನ್ನಾಗಿರಲಿಲ್ಲ. ಆದುದರಿಂದ ಗ್ರಂಥ ಅಭಿಯಾನದ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತಿತ್ತು. ಗ್ರಂಥ ಅಭಿಯಾನದ ಮೊದಲ ದಿನವೇ ನಾನು ನನ್ನ ಸಂಬಂಧಿಕರಿಗೆ ಗ್ರಂಥಗಳ ಬಗ್ಗೆ ಮಾಹಿತಿಯನ್ನು ಹೇಳಿದೆನು. ಆಗ ಎಲ್ಲರೂ ಗ್ರಂಥಗಳನ್ನು ಖರೀದಿಸಲು ಒಪ್ಪಿಕೊಂಡರು. ಪ. ಪೂ. ಗುರುದೇವರೇ ನನ್ನಿಂದ ಈ ಪ್ರಯತ್ನವನ್ನು ಮಾಡಿಸಿಕೊಂಡರು. ‘ಪೂ. ಅಣ್ಣಾ ಇವರ ಮಾರ್ಗದರ್ಶನಕ್ಕನುಸಾರ ಈ ಗ್ರಂಥ ಅಭಿಯಾನದ ಸೇವೆಯನ್ನು ಹೆಚ್ಚೆಚ್ಚು ಮಾಡಿ ಗುರುಗಳ ಈ ಮಹಾನ ಕಾರ್ಯದಲ್ಲಿ ನಮ್ಮ ಕುಟುಂಬ, ಹಿತಚಿಂತಕರು, ಹಾಗೆಯೇ ಚಂದಾದಾರರನ್ನು ಪಾಲ್ಗೊಳ್ಳುವಂತೆ ಮಾಡಬೇಕು’, ಎಂದು ನನ್ನ ಗಮನಕ್ಕೆ ಬಂದಿತು. – ಸೌ. ಸರಸ್ವತಿ ನಾಯಕ (ಆಧ್ಯಾತ್ಮಿಕ ಮಟ್ಟ ಶೇ. ೬೧), ಮಂಗಳೂರು
೧ ಇ. ಗ್ರಂಥ ಅಭಿಯಾನದ ಸೇವೆಯನ್ನು ಮಾಡುವಾಗ ಶಾರೀರಿಕ ತೊಂದರೆಯು ಕಡಿಮೆಯಾಗುವುದು ಮತ್ತು ಧರ್ಮಪ್ರೇಮಿಗಳೊಂದಿಗೆ ಮಾತನಾಡುವಾಗ ‘ಗುರುದೇವರು ವಿಚಾರವನ್ನು ನೀಡುತ್ತಿದ್ದಾರೆ’, ಎಂದು ಅರಿವಾಗಿ ಸೇವೆಯ ಕಾಲಾವಧಿಯಲ್ಲಿ ಗುರುಪೂರ್ಣಿಮೆಯಂತಹ ವಾತಾವರಣವನ್ನು ಅನುಭವಿಸುವುದು : ‘ನಮ್ಮ ಸ್ವಭಾವದೋಷ ಮತ್ತು ಅಹಂಅನ್ನು ನಾಶ ಮಾಡಲು ಗುರುದೇವರೇ ಸೇವೆಯ ಈ ಅವಕಾಶವನ್ನು ನೀಡಿದ್ದಾರೆ’, ಎಂಬ ವಿಚಾರ ಬಂದು ನನಗೆ ಬಹಳ ಕೃತಜ್ಞತೆ ಎನಿಸಿತು. ಸೇವೆಯನ್ನು ಮಾಡುವಾಗ ಓರ್ವ ಧರ್ಮಪ್ರೇಮಿಯ ಮಾಧ್ಯಮದಿಂದ ಅನೇಕ ಧರ್ಮಪ್ರೇಮಿಗಳನ್ನು ಭೇಟಿಯಾಗಲು ಸಾಧ್ಯವಾಯಿತು ಮತ್ತು ಪ್ರತಿಯೊಬ್ಬರಿಂದ ಸಕಾರಾತ್ಮಕ ಬೆಂಬಲ ಸಿಕ್ಕಿತು. ಈ ಸೇವೆಯನ್ನು ಮಾಡುವಾಗ ನನ್ನ ಶಾರೀರಿಕ ತೊಂದರೆಯು ಕಡಿಮೆಯಾಗುತ್ತಿತ್ತು. ಧರ್ಮಪ್ರೇಮಿಗಳೊಂದಿಗೆ ಮಾತನಾಡುವಾಗ ‘ಗುರುದೇವರೇ ನನಗೆ ವಿಚಾರವನ್ನು ನೀಡುತ್ತಿದ್ದಾರೆ’, ಎಂದು ನನಗೆ ಅರಿವಾಗುತ್ತಿತ್ತು. ಈ ಸೇವೆಯ ಅವಧಿಯಲ್ಲಿ ಪ್ರತಿದಿನ ಗುರುಪೂರ್ಣಿಮೆ ಇರುವಂತಹ ವಾತಾವರಣವು ನಿರ್ಮಾಣವಾಗುತ್ತಿತ್ತು.’ – ಶ್ರೀ. ಉಪೇಂದ್ರ ಆಚಾರ್ಯ, ಮಂಗಳೂರು
೧ ಈ. ಹಿತಚಿಂತಕರು, ಸ್ನೇಹಿತರು, ಸಂಬಂಧಿಕರು ಮುಂತಾದ ಹೆಸರುಗಳ ಪಟ್ಟಿಯನ್ನು ತಯಾರಿಸಿ ‘ಪ್ರತಿದಿನ ಸಮಾಜದಲ್ಲಿ ೫೦-೧೦೦ ಗ್ರಂಥಗಳನ್ನು ವಿತರಿಸಬೇಕು’, ಎಂಬ ಧ್ಯೇಯವನ್ನಿಟ್ಟುಕೊಳ್ಳುವುದು ಮತ್ತು ಈ ಸೇವೆಯಿಂದ ಬಹಳ ಆನಂದ ಸಿಗುವುದು : ‘ಪೂ. ಅಣ್ಣನವರು ಗ್ರಂಥ ಅಭಿಯಾನದ ಮಹತ್ವವನ್ನು ಹೇಳಿದ ನಂತರ ನನಗೆ ‘ಹೆಚ್ಚೆಚ್ಚು ಸೇವೆಯನ್ನು ಮಾಡಬೇಕು’, ಎಂದೆನಿಸಿತು. ನಾನು ಗುರುಚರಣಗಳಲ್ಲಿ ಶರಣಾಗತಭಾವದಿಂದ, ‘ಗುರುದೇವಾ, ನನಗೇನೂ ತಿಳಿಯುವುದಿಲ್ಲ. ನೀವೇ ನನ್ನಿಂದ ಉತ್ತಮ ರೀತಿಯಲ್ಲಿ ಸೇವೆಯನ್ನು ಮಾಡಿಸಿಕೊಳ್ಳಿರಿ’ ಎಂದು ಪ್ರಾರ್ಥನೆಯನ್ನು ಮಾಡಿದೆನು. ನಂತರ ಗುರುದೇವರು ನನಗೆ ಸೇವೆಯ ವಿಚಾರವನ್ನು ನೀಡಿದರು ಮತ್ತು ನಾನು ನನ್ನ ಎಲ್ಲ ಹಿತಚಿಂತಕರು, ಸ್ನೇಹಿತರು, ಸಂಬಂಧಿಕರು, ಹಾಗೆಯೇ ನನ್ನ ಸಹೋದ್ಯೋಗಿಗಳು ಇವರೆಲ್ಲರ ಹೆಸರುಗಳ ಪಟ್ಟಿಯನ್ನು ತಯಾರಿಸಿದೆನು. ನಾನು ‘ಪ್ರತಿದಿನ ೫೦-೧೦೦ ಗ್ರಂಥಗಳನ್ನು ಸಮಾಜದಲ್ಲಿ ವಿತರಿಸಬೇಕು’, ಎಂದು ಧ್ಯೇಯವನ್ನಿಟ್ಟುಕೊಂಡೆನು ಮತ್ತು ಅದಕ್ಕನುಸಾರ ಪ್ರಯತ್ನಿಸತೊಡಗಿದೆನು. ಈ ಸೇವೆಯಿಂದ ನನಗೆ ಬಹಳ ಆನಂದ ದೊರಕಿತು. ಈಗ ನನ್ನ ವ್ಯಷ್ಟಿ ಸಾಧನೆಯ ಪ್ರಯತ್ನವೂ ಚೆನ್ನಾಗಿ ನಡೆಯುತ್ತಿದೆ. ನನ್ನಲ್ಲಿನ ಸಂಕುಚಿತ ವಿಚಾರ ಮಾಡುವ ದೋಷವು ದೂರಾಗಿ ವ್ಯಾಪಕತೆ ಈ ಗುಣವು ಹೆಚ್ಚಾಗಿದೆ, ಹಾಗೆಯೇ ನನ್ನ ಆತ್ಮವಿಶ್ವಾಸವೂ ಹೆಚ್ಚಾಗಿದೆ.’ – ಎಂ. ಹರೀಶ, ಉಜಿರೆ
೨. ಬೆಳಗಾವಿಯ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !
೨ ಅ. ಗ್ರಂಥಗಳ ಬಗ್ಗೆ ಮಾಹಿತಿಯನ್ನು ಹೇಳುವಾಗ ಹಿತಚಿಂತಕರಿಗೆ ಸುಗಂಧ ಬರುವುದು, ಗುರುದೇವರ ಅಸ್ತಿತ್ವದ ಅರಿವಾಗುವುದು ಮತ್ತು ಹಿತಚಿಂತಕರು ಎಲ್ಲ ಗ್ರಂಥಗಳನ್ನು ಖರೀದಿಸುವುದು : ‘ನಾನು ಮತ್ತು ಓರ್ವ ಸಹಸಾಧಕಿ ಓರ್ವ ಹಿತಚಿಂತಕರಿಗೆ ಗ್ರಂಥಗಳ ಬಗ್ಗೆ ಹೇಳುತ್ತಿದ್ದೆವು. ಆಗ ನಾವು ಯಾವುದೇ ಸುಗಂಧಿತ ಅತ್ತರ ಹಚ್ಚಿಕೊಂಡಿರದಿದ್ದರೂ ಅವರಿಗೆ ಇದ್ದಕ್ಕಿದ್ದಂತೆ ಸುಗಂಧ ಬರತೊಡಗಿತು. ಅವರು ನಮ್ಮನ್ನು, “ನನಗೆ ಒಳ್ಳೆಯ ಸುಗಂಧವು ಬರುತ್ತಿದೆ. ನೀವು ಅತ್ತರ ಹಚ್ಚಿಕೊಂಡು ಬಂದಿರುವಿರಾ ?” ಎಂದು ಕೇಳಿದರು. ಅವರು ನಮಗೆ ೨ – ೩ ಬಾರಿ ಈ ರೀತಿ ಕೇಳಿದರು. ಆ ಸಮಯದಲ್ಲಿ ನಮಗೆ ಗುರುದೇವರ ಅಸ್ತಿತ್ವದ ಅರಿವಾಗಿ ಬಹಳ ಕೃತಜ್ಞತೆ ಅನಿಸಿತು. ನಾವು ಅವರಿಗೆ ಗ್ರಂಥಗಳ ಮಾಹಿತಿಯನ್ನು ಹೇಳಿ ಕೆಲವು ಗ್ರಂಥಗಳನ್ನು ತೋರಿಸಿದೆವು. ನಾವು ಯಾವೆಲ್ಲ ಗ್ರಂಥಗಳನ್ನು ಅವರಿಗೆ ತೋರಿಸಿದೆವೋ, ‘ಆ ಎಲ್ಲ ಗ್ರಂಥಗಳು ನನಗೆ ಬೇಕು’, ಎಂದು ಹೇಳಿ ಅವರು ಆ ಎಲ್ಲ ಗ್ರಂಥಗಳನ್ನು ಖರೀದಿಸಿದರು.’ – ಸೌ. ಅಶ್ವಿನಿ ಚೌಗುಲೆ (ಆಧ್ಯಾತ್ಮಿಕ ಮಟ್ಟ ಶೇ. ೬೦) ಮತ್ತು ಸೌ. ಅರುಣಾ ಕಾಯಸ್ಥ (ಆಧ್ಯಾತ್ಮಿಕ ಮಟ್ಟ ಶೇ. ೬೦)
೨ ಆ. ಸೇವೆಯನ್ನು ಆರಂಭಿಸುವ ಮೊದಲು ಪ್ರಾರ್ಥನೆಯನ್ನು ಮಾಡುತ್ತಲೇ ನನ್ನ ಸುತ್ತಲೂ ಹಳದಿ ವಲಯವು ನಿರ್ಮಾಣವಾಗಿ ಚಂದನದ ಸುಗಂಧವು ಬರುವುದು : ನಾನು ಸೇವೆಯನ್ನು ಆರಂಭಿಸುವ ಮೊದಲು ಪ್ರಾರ್ಥನೆಯನ್ನು ಮಾಡಿದ ತಕ್ಷಣ ನನ್ನ ಸುತ್ತಲೂ ಹಳದಿ ವಲಯವು ನಿರ್ಮಾಣವಾಯಿತು ಮತ್ತು ನನಗೆ ಚಂದನದ ಸುಗಂಧವು ಬಂದಿತು. ಆದುದರಿಂದ ಪೂರ್ಣ ದಿನ ಯಾವುದೇ ತೊಂದರೆಯಾಗದೇ ನನಗೆ ಆನಂದ ಮತ್ತು ಉತ್ಸಾಹದ ಅರಿವಾಗುತ್ತಿತ್ತು.’ – ಸೌ. ಲತಾ ಬಡಿಗೇರ, ರಾಯಬಾಗ (ಆಧ್ಯಾತ್ಮಿಕ ಮಟ್ಟ ಶೇ. ೬೨)
೨ ಇ. ಶ್ರೀ ಜಯ ಹನುಮಾನ ದೇವಸ್ಥಾನದ ಕಳಶಾರೋಹಣ ಕಾರ್ಯಕ್ರಮಕ್ಕಾಗಿ ಸೇರಿದ ಭಕ್ತವೃಂದಕ್ಕೆ ಪೂ. ಶ್ರೀ ಮಹಂತ ದೇವ ಇವರು ಸನಾತನದ ಗ್ರಂಥಗಳನ್ನು ತೋರಿಸಿ ‘ಗ್ರಂಥಗಳ ಲಾಭವನ್ನು ಪಡೆದುಕೊಳ್ಳಿರಿ’, ಎಂದು ಕರೆ ನೀಡುವುದು : ‘ಬೆಳಗಾವಿ ಜಿಲ್ಲೆಯಲ್ಲಿ ರಾಯಬಾಗದಲ್ಲಿ ಶ್ರೀ ಜಯ ಹನುಮಂತ ದೇವಸ್ಥಾನದ ಕಳಶಾರೋಹಣದ ಕಾರ್ಯಕ್ರಮವಿತ್ತು. ಆ ಸಮಯದಲ್ಲಿ ಪೂ. ಶ್ರೀ ಮಹಂತ ದೇವರು ತಮ್ಮ ಅಮೃತಹಸ್ತಗಳಿಂದ ಅಲ್ಲಿ ಸೇರಿದ ಭಕ್ತವೃಂದಕ್ಕೆ ಸನಾತನವು ಪ್ರಕಾಶಿಸಿದ ಗ್ರಂಥಗಳನ್ನು ತೋರಿಸಿ ಮತ್ತು ಅವುಗಳ ಮಾಹಿತಿಯನ್ನು ನೀಡಿ ‘ಎಲ್ಲರೂ ಈ ಗ್ರಂಥ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಿ’, ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ೪೫೦ ಭಕ್ತರು ಉಪಸ್ಥಿತರಿದ್ದರು. ಭಕ್ತರು ಗ್ರಂಥಗಳ ಲಾಭ ಪಡೆದರು.’ – ಶ್ರೀ. ಸಿದ್ಧೇಶ್ವರ ದೇಸಾಯಿ, ರಾಯಬಾಗ
೩. ಧಾರವಾಡ
೩ ಅ. ಸಾಧಕರು ಮಾಡಿದ ಭಾವಪೂರ್ಣ ಪ್ರಯತ್ನಗಳು : ವೃದ್ಧ ಮತ್ತು ಅನಾರೋಗ್ಯವಿರುವ ಸಾಧಕರೂ ಈ ಗ್ರಂಥ ಪ್ರಸಾರದ ಅಭಿಯಾನದಲ್ಲಿ ಭಾವವಿಟ್ಟು ಪ್ರಯತ್ನಿಸಿದರು. ಆದುದರಿಂದ ಗ್ರಂಥ ವಿತರಣೆಯ ಸೇವೆಯಲ್ಲಿ ಉತ್ತಮ ಫಲನಿಷ್ಪತ್ತಿಯು ದೊರಕಿತು.
೧. ಹುಬ್ಬಳ್ಳಿಯ ಶ್ರೀಮತಿ ರಾಧಾ ನಾಯಕ (೭೫ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೪) ಇವರು ತೀವ್ರ ಅನಾರೋಗ್ಯ ಹಾಗೂ ವಯಸ್ಸಾಗಿದ್ದರಿಂದ ಮಲಗಿದ್ದಲ್ಲೇ ಇದ್ದಾರೆ. ಆದರೂ ಅವರು ಭಾವಪೂರ್ಣ ಮತ್ತು ತಳಮಳದಿಂದ ಪ್ರಯತ್ನಿಸಿದರು. ಅವರು ಮನೆಯಲ್ಲಿ ಕುಳಿತುಕೊಂಡೇ ಸಂಚಾರವಾಣಿ ಕರೆ ಮಾಡಿ ಪರಿಚಿತರನ್ನು ಸಂಪರ್ಕಿಸಿ ಈ ಸೇವೆಯನ್ನು ಮಾಡಿದರು.
೨. ಧಾರವಾಡದ ಶ್ರೀಮತಿ ಶಶಿಕಲಾ ಹರಿಹರ ಮಠ (೬೫ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೪) ಇವರಿಗೆ ಸಂಧಿವಾತದ ಬಹಳ ತೊಂದರೆ ಇದೆ. ಆಧುನಿಕ ವೈದ್ಯರು ಅವರಿಗೆ ಅವರ ಕಣ್ಣುಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೇಳಿದ್ದಾರೆ. ಹೀಗಿದ್ದರೂ ಗ್ರಂಥ ಸೇವೆಯನ್ನು ಮಾಡಲು ಸಾಧ್ಯವಾಗಬೇಕೆಂದು, ಅವರು ತಮ್ಮ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದರು ಮತ್ತು ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡಿದರು.
೩ ಆ. ಸಮಾಜದಿಂದ ದೊರಕಿದ ಬೆಂಬಲ !
೧. ಡಾ. ಉಮೇಶ ನಾಗಲೋತಿಮಠ ವಿದೇಶದಲ್ಲಿರುತ್ತಾರೆ. ಗ್ರಂಥ ಅಭಿಯಾನದ ಬಗೆಗಿನ ಮಾಹಿತಿಯನ್ನು ಹೇಳಿದಾಗ ಅವರು ತಕ್ಷಣ ಅನೇಕ ಆಂಗ್ಲ ಭಾಷೆಯ ಗ್ರಂಥಗಳ ಬೇಡಿಕೆಯನ್ನು ನೀಡಿದರು. ಅದರಂತೆ ದೇವಸ್ಥಾನಗಳಲ್ಲಿ ನೀಡಲು ಕಿರುಗ್ರಂಥಗಳ ಬೇಡಿಕೆಯನ್ನೂ ನೀಡಿದರು.
೨. ಸಾಧಕರು, ಧಾರವಾಡದ ಓರ್ವ ಶಾಸಕರನ್ನು ಭೇಟಿಯಾಗಲು ಹೋದಾಗ ಅವರಿಲ್ಲದ ಕಾರಣ ಅವರ ಪತ್ನಿಯ ಭೇಟಿಯಾಯಿತು. ಶಾಸಕರ ಪತ್ನಿಯು ‘ಸನಾತನ ಸಂಸ್ಥೆಯ ಉದ್ದೇಶ, ಹಾಗೆಯೇ ಗ್ರಂಥಗಳ ಮಹತ್ವವನ್ನು ತಿಳಿದುಕೊಂಡು ಸನಾತನದ ಗ್ರಂಥಗಳನ್ನು ನೋಡಿ ‘ಇವೆಲ್ಲ ಗ್ರಂಥಗಳನ್ನು ಈಗಲೇ ಓದಬೇಕು’ ಎಂದೆನಿಸುತ್ತದೆ, ಎಂಬ ಉದ್ಗಾರ ತೆಗೆದು ಅವರು ತಮಗಾಗಿ ಕನ್ನಡ ಗ್ರಂಥಗಳ ಸಾಹಿತ್ಯಗಳ ಬೇಡಿಕೆಯನ್ನು ನೀಡಿದರು. ಈ ಗ್ರಂಥಗಳನ್ನು ನೋಡಿ ಅವರಿಗೆ ತುಂಬ ಆನಂದ ಸಹ ಆಯಿತು (೨೪.೯.೨೦೨೧)