ದೇವದ (ಪನವೆಲ್) ಇಲ್ಲಿನ ಸನಾತನ ಆಶ್ರಮದಲ್ಲಿರುವ ಅನೇಕ ಗುಣರತ್ನಗಳ ಗಣಿಯಾದ ಸುಶ್ರೀ (ಕು.) ರತ್ನಮಾಲಾ ದಳವಿ (೪೫ ವರ್ಷ) ಸನಾತನದ ೧೧೮ ನೇ ಸಮಷ್ಟಿ ಸಂತರೆಂದು ಘೋಷಣೆ !

ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಪೂ. (ಸೌ.) ಅಶ್ವಿನಿ ಪವಾರ ಇವರು ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !

‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.

ಶ್ರೀಮತಿ ಸುಧಾ ಸಿಂಗಬಾಳ ಇವರು ಸನಾತನದ ೧೧೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸ್ಥಿರ, ತ್ಯಾಗ ವೃತ್ತಿ, ದೇವರ ಬಗ್ಗೆ ಶ್ರದ್ಧೆ ಹಾಗೂ ಭಾವವಿರುವ ಶ್ರೀಮತಿ ಸುಧಾ ಉಮಾಕಾಂತ ಸಿಂಗಬಾಳ (ವಯಸ್ಸು 82) ಸನಾತನದ 117ನೇ ಸಂತಪದವಿಯಲ್ಲಿ ವಿರಾಜಮಾನರಾದರು. ಸಿಂಗಬಾಳ ಕುಟುಂಬದವರ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸುಶ್ರೀ (ಕು.) ಕಲಾ ಖೆಡೆಕರ ಸಹ ಶೇ. 61 ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ.

ರಹಾತಾ (ನಗರ ಜಿಲ್ಲೆ)ಯಲ್ಲಿನ ಸನಾತನದ ೩೯ ನೇ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಲೊಂಡೆ (೯೫ ವರ್ಷ) ಇವರ ದೇಹತ್ಯಾಗ !

ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.

‘ಭಗವಂತನ ಭಕ್ತರ ಯೋಗಕ್ಷೇಮವನ್ನು ಯಾರು ವಹಿಸುತ್ತಾರೆಯೋ, ಅವರ ಯೋಗಕ್ಷೇಮವನ್ನು ಭಗವಂತನೇ ವಹಿಸುತ್ತಾನೆ !’, ಎನ್ನುವ ವಚನದ ಬಗ್ಗೆ ಮುಂಗಳೂರಿನ ಶ್ರೀ. ಭರತ ಪ್ರಭು ಇವರಿಗಾದ ಅನುಭವ !

ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು !

ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಅಪಾರ ಕ್ಷಮತೆಯಿರುವ ಮತ್ತು ಸತತ ಗುರುದೇವರ ಅನುಸಂಧಾನದಲ್ಲಿರುವ (ಜನ್ಮತಃ ಸಂತರಾಗಿರುವ) ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಭರತ ಪ್ರಭು (೪ ವರ್ಷ)

ಆಗ ಅವರು, ಗುರುದೇವರ ಛಾಯಾಚಿತ್ರಕ್ಕೆ “ಗುರುದೇವರ ಹೊಟ್ಟೆ ನೋಯುತ್ತಿದೆ ಮತ್ತು ಅವರು ಏನೂ ತಿನ್ನುತ್ತಿಲ್ಲ”, ಎಂದು ಹೇಳಿದರು. ಪೂ. ಭಾರ್ಗವರಾಮ ಗುರುದೇವರಿಗೆ ಪುನಃ ಪುನಃ ‘ಸ್ವಲ್ಪವಾದರೂ ತಿನ್ನಿ’, ಎಂದು ಹೇಳುತ್ತಿದ್ದರು. ಅಂದು ಗುರುದೇವರ ಹೊಟ್ಟೆ ನಿಜವಾಗಿಯೂ ಸರಿ ಇರಲಿಲ್ಲ.

ಸಾಗರದ ವರದಹಳ್ಳಿಯ ಶ್ರೀ ಶ್ರೀಧರಾಶ್ರಮಕ್ಕೆ ಪ.ಪೂ. ದಾಸ ಮಹಾರಾಜ ಹಾಗೂ ಪೂ. ಲಕ್ಷ್ಮೀ ನಾಯಿಕ ಭೇಟಿ !

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಗೌತಮಾಶ್ರಮದ ಪ.ಪೂ. ದಾಸ ಮಹಾರಾಜರು ಮತ್ತು ಅವರ ಧರ್ಮಪತ್ನಿಯಾದ ಪೂ. ಸೌ. ಲಕ್ಷ್ಮೀ ನಾಯಿಕ ಇವರು ಇತ್ತೀಚೆಗೆ ಸಾಗರದ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ನೀಡಿದ್ದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು

ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.

ಧನತ್ಯಾಗದ ಮೂಲಕ ತಮ್ಮನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಧಕರ ಬಗ್ಗೆ ಪ್ರೇಮಭಾವವಿರುವ ದೆಹಲಿಯ ಸಾಧಕ ದಂಪತಿ ಶ್ರೀ. ಸಂಜೀವ ಕುಮಾರ (೭೦ ವರ್ಷ) ಮತ್ತು ಸೌ. ಮಾಲಾ ಕುಮಾರ (೬೭ ವರ್ಷ) ಸನಾತನದ ೧೧೫ ಮತ್ತು ೧೧೬ ನೆಯ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸದ್ಗುರು ಡಾ. ಪಿಂಗಳೆ ಇವರು ಪೂ. ಸಂಜೀವ ಕುಮಾರ ಇವರಿಗೆ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಲಾ ಹರಿಶ ಕಪೂರ ಇವರು ಪೂ. (ಸೌ.) ಮಾಲಾ ಕುಮಾರ ಇವರಿಗೆ ಪುಷ್ಪಹಾರವನ್ನು ಹಾಕಿ ಸನ್ಮಾನಿಸಿದರು.

ಎಲ್ಲ ಪರಿಸ್ಥಿತಿಗಳಲ್ಲಿ ಸಾಧನೆಯ ದೃಷ್ಟಿಕೋನವನ್ನು ಕೃತಿಯಲ್ಲಿ ತರಲು ಸಾಧ್ಯವಾಗಬೇಕೆಂದು ಸಾಧನೆಯ ಪ್ರಯತ್ನವನ್ನು ಅಂತರ್ಮನಸ್ಸಿನಿಂದ ಮಾಡುವುದು ಆವಶ್ಯಕ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ

ಕುಟುಂಬ, ವೈಯುಕ್ತಿಕ ಜೀವನ, ಪ್ರಸಾರ ಮತ್ತು ಆಶ್ರಮ ಹೀಗೆ ಎಲ್ಲ ಕಡೆಗಳಲ್ಲಿ ಪ್ರಾಮಾಣಿಕವಾಗಿ, ತಳಮಳದಿಂದ ಹಾಗೂ ಪಾರದರ್ಶಕರಾಗಿದ್ದು ಸಾಧನೆಗಾಗಿ ಪ್ರಯತ್ನಿಸುವುದೇ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿಯ ವ್ಯಷ್ಟಿ ಧ್ಯೇಯ ಮತ್ತು ಹಿಂದೂ ರಾಷ್ಟ ಸ್ಥಾಪನೆಯ ಸಮಷ್ಟಿ ಧ್ಯೇಯವನ್ನು ಸಾಧಿಸುವ ಗುರುಕೀಲಿಕೈಯಾಗಿದೆ !