‘ಪಿತೃಋಣ’ವನ್ನು ತೀರಿಸಲು ‘ಶ್ರಾದ್ಧ ಮತ್ತು ಪ್ರತಿದಿನ ‘ಶ್ರೀ ಗುರುದೇವ ದತ್ತ’ ಜಪವನ್ನು ಮಾಡಿ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ‘ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದ ಮಹತ್ವಪೂರ್ಣ ಮಾರ್ಗದರ್ಶನ!

ಹಿಂದೂ ಧರ್ಮದಲ್ಲಿ ಈಶ್ವರಪ್ರಾಪ್ತಿಗಾಗಿ ‘ದೇವಋಣ’, ಋಷಿಋಣ’, ‘ಪಿತೃಋಣ’ ಮತ್ತು ‘ಸಮಾಜ ಋಣ’ ಹೀಗೆ 4 ಪ್ರಕಾರಗಳ ಋಣಗಳನ್ನು ತೀರಿಸಲು ಹೇಳಲಾಗಿದೆ. ಇದರಲ್ಲಿ ‘ಪಿತೃಋಣ’ ತೀರಿಸಲು ಪೂರ್ವಜರಿಗೆ ಮುಕ್ತಿ ದೊರಕಿಸಿಕೊಡಲು ಪ್ರಯತ್ನಿಸುವುದು ಅಗತ್ಯವಿರುತ್ತದೆ. ‘ಶ್ರಾದ್ಧ’ ಮಾಡುವುದು ಇದು ಪೂರ್ವಜರ ಮುಕ್ತಿಗಾಗಿ ಮಹತ್ವದ್ದಾಗಿದೆ. ಯಾರಿಗೆ ಸಾಧ್ಯವಿದೆಯೋ, ಅವರು ಪಿತೃಪಕ್ಷದಲ್ಲಿ ಪುರೋಹಿತರನ್ನು ಕರೆದು ಶ್ರಾದ್ಧವಿಧಿಯನ್ನು ಮಾಡಬೇಕು; ಆದರೆ ಎಲ್ಲಿ ಕೊರೊನಾದಿಂದ ಪುರೋಹಿತರ ಹಾಗೂ ಶ್ರಾದ್ಧದ ವಸ್ತುಗಳ ಕೊರತೆಯಿಂದ ಶ್ರಾದ್ಧ ಮಾಡಲು ಸಾಧ್ಯವಿಲ್ಲವೋ ಅಲ್ಲಿ ಆಪದ್ಧರ್ಮ ಎಂದು ಸಂಕಲ್ಪಪೂರ್ವಕವಾಗಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸವನ್ನು ಅರ್ಪಿಸಬೇಕು. ಅದೇ ರೀತಿ ಪೂರ್ವಜರಿಗೆ ಮುಂದಿನ ಗತಿ ಸಿಗಲು ಹಾಗೂ ಅತೃಪ್ತ ಪೂರ್ವಜರಿಂದ ತೊಂದರೆಯಾಗದಿರಲು, ನಿಯಮಿತವಾಗಿ ಸಾಧನೆ ಮಾಡುವುದೂ ಅಗತ್ಯವಿದೆ. ಅದಕ್ಕಾಗಿ ಶ್ರಾದ್ಧ ವಿಧಿಯೊಂದಿಗೆ ಪಿತೃಪಕ್ಷದಲ್ಲಿ ಹೆಚ್ಚೆಚ್ಚು ಸಮಯ, ಅದೇ ರೀತಿ ಇತರ ಸಮಯದಲ್ಲಿಯೂ ಪ್ರತಿದಿನ ಕಡಿಮೆ ಪಕ್ಷ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಎಲ್ಲರೂ ಮಾಡಬೇಕು, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಗಣೇಶೋತ್ಸವದ ನಂತರ ಆರಂಭವಾಗುವ ಪಿತೃಪಕ್ಷದ ನಿಮಿತ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ಶಾಸ್ತ್ರ ಮತ್ತು ಸಂದೇಹ ನಿವಾರಣೆ’ ಈ ವಿಷಯದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ‘ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ, ಪಾಶ್ಚಾತ್ಯರ ಅಂಧಾನುಕರಣೆ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಪರಿಗಣಿಸುವ ವೃತ್ತಿ ಇವುಗಳಿಂದಾಗಿ ಹಲವಾರು ಬಾರಿ ಶ್ರಾದ್ಧವಿಧಿಯನ್ನು ನಿರ್ಲಕ್ಷಿಸಲಾಗುತ್ತದೆ; ಆದರೆ ಇಂದೂ ಕೂಡ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಸಾವಿರಾರು ಜನರು ಭಾರತದ ತೀರ್ಥಕ್ಷೇತ್ರಗಳಿಗೆ ಬಂದು ಪೂರ್ವಜರಿಗೆ ಮುಂದಿನ ಗತಿ ಸಿಗಬೇಕು, ಎಂದು ಶ್ರದ್ಧೆಯಿಂದ ಶ್ರಾದ್ಧವಿಧಿ ಮಾಡುತ್ತಾರೆ. ‘ಮನು’ ಇವರು ಮೊದಲ ಬಾರಿ ಶ್ರಾದ್ಧವಿಧಿಯನ್ನು ಮಾಡಿದ್ದಾರೆ. ‘ಭಗೀರಥ ರಾಜ’ನು ಪೂರ್ವಜರ ಮುಕ್ತಿಗಾಗಿ ಮಾಡಿದ ಕಠೋರ ತಪಸ್ಸು, ಅದೇ ರೀತಿ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರ ಇವರ ಕಾಲದಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿಯೂ ಶ್ರಾದ್ಧವಿಧಿ ಮಾಡಿರುವ ಉದಾಹರಣೆಗಳು ಇವೆ. ಆದ್ದರಿಂದ ತಥಾಕಥಿತ ಪ್ರಗತಿಪರರು ಶ್ರಾದ್ಧವಿಧಿಯ ಬಗ್ಗೆ ಮಾಡುತ್ತಿರುವ ಅಪಪ್ರಚಾರಕ್ಕೆ ಬಲಿಯಾಗದೇ ಕೊರೊನಾದ ಸೋಂಕಿನ ಕಾಲದಲ್ಲಿಯೂ ತಮ್ಮ ಕ್ಷಮತೆಗನುಸಾರ ಪಿತೃಋಣ ತೀರಿಸಲು ಶ್ರದ್ಧೆಯಿಂದ ‘ಶ್ರಾದ್ಧವಿಧಿ’ ಮಾಡಿ, ಎಂದು ಪೂ. ರಮಾನಂದ ಗೌಡ ಇವರು ಹೇಳಿದರು.

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಭಾವಪೂರ್ಣವಾಗಿ ಮಾಡಿದರೆ ಯಶಸ್ಸು, ಧನ, ಕೀರ್ತಿ ಲಭಿಸುತ್ತದೆ. ಪೂರ್ವಜರಿಗೆ ಮರ್ತ್ಯ ಲೋಕದಿಂದ ಮುಂದೆ ಹೋಗಲು ಶ್ರಾದ್ಧವಿಧಿಯಿಂದ ಶಕ್ತಿ ಸಿಗುತ್ತದೆ. ಮೃತ್ಯುವಿನ ನಂತರವೂ ಸದ್ಗತಿಗಾಗಿ ಶ್ರಾದ್ಧವಿಧಿ ಹೇಳುವಂತಹ ಏಕೈಕ ಧರ್ಮವೆಂದರ ಹಿಂದೂ ಧರ್ಮ. ಸದ್ಯ ಸಮಾಜದಲ್ಲಿ ಧರ್ಮಶಿಕ್ಷಣದ ಅಭಾವದಿಂದ ‘ಶ್ರಾದ್ಧ ಮಾಡುವ ಬದಲು ಸಾಮಾಜಿಕ ಸಂಸ್ಥೆಗಳಿಗೆ ಅಥವಾ ಅನಾಥಾಲಯಗಳಿಗೆ ದೇಣಿಗೆ ನೀಡಿ’, ಎಂಬ ಅಯೋಗ್ಯ ಪರಿಕಲ್ಪನೆಯನ್ನು ಪ್ರಸಾರ ಮಾಡಲಾಗುತ್ತದೆ; ಆದರೆ ಹೀಗೆ ಮಾಡುವುದು ಅಯೋಗ್ಯವಾಗಿದೆ. ಧಾರ್ಮಿಕ ಕೃತಿಗಳು ಧರ್ಮಶಾಸ್ತ್ರಾಕ್ಕನುಸಾರ ಆಗುವುದು ಅಗತ್ಯವಿರುತ್ತದೆ. ಅದಕ್ಕನುಸಾರ ಕೃತಿ ಮಾಡಿದರೆ ಮಾತ್ರ ಪಿತೃಋಣ ತೀರುತ್ತದೆ, ಎಂದೂ ಪೂ. ರಮಾನಂದ ಗೌಡ ಇವರು ಹೇಳಿದರು.