ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕ ಅಭಿಯಾನ
ದೆಹಲಿ – ಅಮೇರಿಕಾದ ಹಿಂದೂಗಳಿಗೆ ಸಹಾಯ ಮಾಡುವ ಶ್ರೀ ನಿರ್ಮಲ ಝುನಝುನವಾಲ ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರನ್ನು ಇತ್ತೀಚಿಗೆ ಅನೌಪಚಾರಿಕವಾಗಿ ಭೇಟಿಯಾದರು.
ಅಮೇರಿಕಾದಲ್ಲಿ ಆರ್ಥಿಕ ಅಡಚಣೆಗಳಿಂದ ಪ್ರಲೋಭನೆಗೆ ಒಳಗಾಗಿ ಅಲ್ಲಿಯ ಹಿಂದೂಗಳು ಮತಾಂತರ ಆಗಬಾರದೆಂದು, ಶ್ರೀ ಝುನಝನವಾಲ ಅವರನ್ನು ಸ್ವಾವಲಂಬಿಯನ್ನಾಗಿಸುವ ಮಾಡುವ ದೃಷ್ಟಿಯಿಂದ ಸಹಾಯ ಮಾಡುತ್ತಾರೆ. ಅವರು ಭಾರತಕ್ಕೆ ಬಂದಾಗ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯಮಾಡುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಭೇಟಿಯಾಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಕಾರಣಕ್ಕಾಗಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಅವರ ಜೊತೆಗೆ ಪ್ರತ್ಯಕ್ಷ ಸಂವಾದ ನಡೆಸಿದರು. ಆ ಸಮಯದಲ್ಲಿ ಸದ್ಗುರು ಡಾ. ಪಿಂಗಳೆ ಇವರು ಅವರಿಗೆ ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿರುವ ಧರ್ಮಕಾರ್ಯದ ಪರಿಚಯವನ್ನು ಮಾಡಿಕೊಟ್ಟರು ಅವಂತರ ಅವರಿಗೆ ಮುಂಬರುವ ಆಪತ್ಕಾಲದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಹಾಗೆ ೨೦೨೩ ರಲ್ಲಿ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರ, ಈಶ್ವರೀ ನಿಯೋಜನೆಗನುಸಾರ ಆಗುತ್ತಿರುವ ಹಿಂದೂ ಸಂಘಟನೆಯಲ್ಲಿ ಮಾಧ್ಯಮವಾಗಿ ಕಾರ್ಯ ಮಾಡುವುದರ ಮಹತ್ವ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಆ ಸಮಯದಲ್ಲಿ ಶ್ರೀ ಝುನಝುನವಾಲ ಇವರು ಸಮಿತಿಯ ಕಾರ್ಯವನ್ನು ಹೊಗಳಿದರು. ಹಾಗೂ ಅವರು ಸನಾತನ ಸಂಸ್ಥೆಯ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಕಾಶಿತ ೧೫ ಗ್ರಂಥಗಳನ್ನು ಸಹ ಖರೀದಿಸಿದರು.