೨೩ ಜುಲೈ ೨೦೨೧ ರಲ್ಲಿ ‘ಆನ್‌ಲೈನ್ನಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನ
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/46378.html |
ಜುಲೈ ೨೩ ರಂದು ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ‘ಆನ್‌ಲೈನ್ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ ! ಈ ವಿಷಯದಲ್ಲಿ ಮಾರ್ಗರ್ಶನ ಮಾಡಿದರು. ಆ ವಿಷಯದ ಬಗ್ಗೆ ಕಳೆದ ಸಂಚಿಕೆಯಲ್ಲಿ ಮುದ್ರಣವಾದ ವಿಷಯದ ಮುಂದುವರಿದ ಭಾಗವನ್ನು ಈ ವಾರ ನೋಡೋಣ.
೨೦೨೦ ರಿಂದ ೨೦೨೩ ರ ಕಾಲವು ಸಂಪೂರ್ಣ ಜಗತ್ತಿಗೆ ಸಂಕಟದ ಕಾಲವಾಗಿದೆ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದುಆಪತ್ಕಾಲವು ಎಂದರೆ ಕೇವಲ ಮಹಾಮಾರಿಯಷ್ಟೇಯಲ್ಲ, ಒಂದರ ಹಿಂದೆ ಒಂದು ಹೀಗೆ ಅನೇಕ ಭೀಕರ ಸಂಕಟದ ಮಾಲಿಕೆಯೂ ಬರಲಿದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರು ಈ ಆಪತ್ಕಾಲದ ಬಗ್ಗೆ “ಸದ್ಯ ಭಾರತದೊಂದಿಗೆ ಸಂಪೂರ್ಣ ಪೃಥ್ವಿಯು ಸಂಕಟಕಾಲದಿಂದ ಸಾಗುತ್ತಿದೆ. ಈ ವರ್ಷವಿಡಿ ಪ್ರವಾಹ, ದಂಗೆ, ಮಹಾಮಾರಿ, ಆರ್ಥಿಕ ಮುಗ್ಗಟ್ಟು ಮುಂತಾದ ಸಂಕಟದ ಪರಿಣಾಮವನ್ನು ದೇಶವು ಭೋಗಿಸಬೇಕಾಯಿತು. ೨೦೨೦ ರಿಂದ ೨೦೨೩ ಇಸವಿಯ ಕಾಲವು ಕೇವಲ ಭಾರತಕ್ಕಷ್ಟೇ ಅಲ್ಲ ಸಂಪೂರ್ಣ ಜಗತ್ತಿಗೆ ಸಂಕಟದ ಕಾಲವಾಗಿದೆ. ಈ ಕಾಲದಲ್ಲಿ ಆರ್ಥಿಕ ಮುಗ್ಗಟ್ಟು, ಗೃಹಯುದ್ಧ, ಗಡಿಯುದ್ಧ, ಪೃಥ್ವಿಯಲ್ಲಿ ಯುದ್ಧ ಮತ್ತು ನೈಸರ್ಗಿಕ ಆಪತ್ತು ಇವುಗಳನ್ನು ಜನಸಾಮಾನ್ಯರು ಎದುರಿಸಬೇಕಾಗುವುದು. ಇಂತಹ ಆಪತ್ಕಾಲದಲ್ಲಿ ಜೀವಂತವಾಗಿರುವುದು ಮತ್ತು ಸಹನೀಯವಾಗಿ ಜೀವನ ಜೀವಿಸುವುದು ಒಂದು ಸವಾಲಾಗಿರು ವುದು ಎಂದು ಹೇಳಿದ್ದಾರೆ. – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ |
೫. ಕೊರೊನಾದ ದೂರಗಾಮಿ ಪರಿಣಾಮಗಳು
ಈಗಲೂ ಕೊರೊನಾದಿಂದ ಅನೇಕರು ಹೀಗೆ ಅನುಭವಿಸಿರಬಹುದು, ಅಂದರೆ ಕೊರೊನಾ ಎಂಬ ಸೋಂಕು ರೋಗವು ಶಾರೀರಿಕವಾಗಿದ್ದರೂ ಅದರಿಂದ ಆರ್ಥಿಕ ಸ್ಥಿತಿಯಿಂದ ಹಿಡಿದು ಕೌಟುಂಬಿಕ ವ್ಯವಸ್ಥೆಯ ತನಕ ಅದರ ದುಷ್ಪರಿಣಾಮವಾಗಿದೆ. ‘ಸಿ.ಎಮ್. ಐ.ಈ. ಎಂದರೆ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ವರದಿಗನುಸಾರ ಕೊರೊನಾದ ಎರಡನೆಯ ಅಲೆಯಲ್ಲಿ ಭಾರತದಲ್ಲಿ ಒಂದು ಕೋಟಿಗಿಂತ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ; ಶೇ. ೯೭ ರಷ್ಟು ಕುಟುಂಬಗಳ ಆರ್ಥಿಕ ಉತ್ಪನ್ನದಲ್ಲಿ ಕುಸಿತವಾಗಿದೆ. ನಿರುದ್ಯೋಗದ ದರ ಶೇ. ೩-೪ ರಷ್ಟು ಇದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ೨೦೨೧ ರಲ್ಲಿ ಮಾತ್ರ ಅದು ಹೆಚ್ಚು ಕಡಿಮೆ ಶೇ. ೧೨ ರಷ್ಟಿತ್ತು. ಕೊರೊನಾದ ಕಾಲದಲ್ಲಿ ಅನೇಕ ನಗರಗಳಲ್ಲಿ ವಿವಾಹ ವಿಚ್ಛೇದನದ ಪ್ರಕರಣಗಳಲ್ಲಿ ಶೇ. ೩೦ ಕ್ಕಿಂತಲೂ ಹೆಚ್ಚಳವಾಗಿರುವುದು ಕಂಡುಬಂದಿದೆ. ಮುಂಬೈಯಲ್ಲಿ ಈ ಪ್ರಮಾಣವು ನಿತ್ಯಕ್ಕಿಂತ ಹೆಚ್ಚು ಕಡಿಮೆ ಮೂರು ಪಟ್ಟು ಅಂದರೆ ಶೇ. ೩೦೦ ಕ್ಕಿಂತ ಹೆಚ್ಚಿತ್ತು.
೬. ಜಾಗತಿಕ ಯುದ್ಧಜನ್ಯ ಸ್ಥಿತಿ ಮತ್ತು ಮೂರನೇ ಮಹಾಯುದ್ಧದ ಕಿಡಿ
ಜಾಗತಿಕ ಮಟ್ಟದಲ್ಲಿ ನೈಸರ್ಗಿಕ ಆಪತ್ತುಗಳು ಬರುತ್ತಿರುವಾಗಲೇ ಇನ್ನೊಂದೆಡೆ ಜಾಗತಿಕ ಸ್ತರದಲ್ಲಿಯೂ ಅಸ್ಥಿರ ಪರಿಸ್ಥಿತಿಯಿದೆ. ಕೊರೊನಾ ಮಹಾಮಾರಿಯಿಂದ ಜಗತ್ತಿನಾದ್ಯಂತ ಅನೇಕ ದೇಶಗಳು ಒಂದಾಗಿವೆ. ಇನ್ನೊಂದೆಡೆ ಕುತಂತ್ರಿ ಚೀನಾದ ಮೊಂಡುತನ ಹೆಚ್ಚಾಗುತ್ತಲೇ ಇದೆ. ಉತ್ತರ ಕೊರಿಯಾ-ಅಮೇರಿಕಾದಲ್ಲಿಯೂ ಅಣ್ವಸ್ತ್ರಗಳನ್ನು ನಾಶಗೊಳಿಸುವ ಸಂಘರ್ಷ ಶಾಂತವಾಗಿಲ್ಲ. ಅಮೇರಿಕಾ ಮತ್ತು ರಷ್ಯಾದ ನಡುವಿನ ಶೀತಲ ಯುದ್ಧವು ಪುನಃ ಪ್ರಾರಂಭವಾಗಿದೆ. ಆರ್ಮೇನಿಯಾ -ಅಝರಬೈಜಾನ್ ಈ ದೇಶಗಳಲ್ಲಿ ಕೆಲವು ತಿಂಗಳುಗಳ ಹಿಂದೆ ಯುದ್ಧವಾಗಿತ್ತು. ಅದೇ ರೀತಿ ಇಸ್ರೈಲ್ ಮತ್ತು ಪ್ಯಾಲೆಸ್ತೇನ್‌ನಲ್ಲಿಯೂ ಆಗಿತ್ತು. ಇಸ್ರೈಲ್‌ನ ಪಕ್ಷದಲ್ಲಿ ಅಮೇರಿಕಾ ಇಂಗ್ಲೆಂಡ್ ಸಹಿತ ಜಗತ್ತಿನಾದ್ಯಂತದ ೨೫ ದೇಶಗಳು ನಿಂತಿದ್ದರೆ ಮುಸಲ್ಮಾನ ರಾಷ್ಟ್ರಗಳು ಪ್ಯಾಲೆಸ್ತೇನನನ್ನು ಬೆಂಬಲಿಸಿದ್ದವು. ಭಾರತದ ಸಂದರ್ಭದಲ್ಲಿ ನೋಡುವುದಾದರೆ ಗಲವಾನ ಕಣಿವೆಯಲ್ಲಾದ ರಕ್ತರಂಜಿತ ಸಂಘರ್ಷದ ನಂತರ ಮೊದಲೇ ಉದ್ವಿಗ್ನವಾಗಿರುವ ಭಾರತ-ಚೀನಾ ಸಂಬಂಧವು ಇನ್ನಷ್ಟು ಉದ್ವಿಗ್ನಗೊಂಡಿದೆ. ಸ್ವಲ್ಪದರಲ್ಲಿ ಅಲ್ಲಲ್ಲಿ ಆಗುತ್ತಿರುವ ಯುದ್ಧಗಳ ಕಿಡಿಗಳು ಯಾವಾಗ ಭುಗಿಲೆದ್ದು ಯಾವಾಗ ಮೂರನೆಯ ಜಾಗತಿಕ ಮಹಾಯುದ್ಧ ಪ್ರಾರಂಭವಾಗುವುದೋ ಎಂಬಂತಹ ಸ್ಥಿತಿಯಿದೆ. ಈ ಯುದ್ಧದಲ್ಲಿ ಸ್ವಂತದ ಹಾಗೂ ರಾಷ್ಟ್ರದ ರಕ್ಷಣೆಯನ್ನು ಮಾಡಲು ಪ್ರತಿಯೊಬ್ಬ ನಾಗರಿಕರು ಒಬ್ಬ ಸೈನಿಕನಂತೆ ಭೂಮಿಕೆಯನ್ನು ತಾಳಬೇಕಾಗಬಹುದು.
೬ ಅ. ಯುದ್ಧಪರಿಸ್ಥಿತಿಯ ದೂರಗಾಮಿ ಪರಿಣಾಮ
೧. ಯುದ್ಧಜನ್ಯ ಸ್ಥಿತಿಯಲ್ಲಿ ಪೆಟ್ರೋಲ್, ಡಿಸಲ್, ಇಂಧನಗಳನ್ನು ಉಪಯೋಗಿಸಲು ನಿರ್ಬಂಧ ಬರುವ ಸಾಧ್ಯತೆಯಿದೆ. ಇಂಧನ ಮತ್ತು ಜೀವನಾವಶ್ಯಕ ವಸ್ತುಗಳು ದುಬಾರಿಯಾಗುತ್ತವೆ.
೨. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯು ಬ್ರಿಟನ್ನಿನ ವಿರುದ್ಧ ಯುದ್ಧವನ್ನು ಸಾರಿತು. ಇದರಿಂದ ಬ್ರಿಟನ್ನಿಗೆ ಮೊದಲ ೪ ದಿನಗಳಲ್ಲಿ ೧೩ ಲಕ್ಷ ಜನರನ್ನು ಸ್ಥಳಾಂತರಿಸಬೇಕಾಯಿತು. ಯುದ್ಧಕಾಲದಲ್ಲಿ ಬೆಳಕಿನ ಮೇಲೆ ನಿರ್ಬಂಧವನ್ನೂ ಹೇರಲಾಯಿತು. ರಾತ್ರಿ ಹೊರಗೆ ರಸ್ತೆಯಲ್ಲಿ ಸಂಪೂರ್ಣ ಕತ್ತಲೆಯಿರುತ್ತಿತ್ತು. ಕಿಟಿಕಿಯಿಂದ ಅಥವಾ ಬಾಗಿಲಿನಿಂದ ಸ್ವಲ್ಪ ಬೆಳಕು ಕಂಡರೂ ದಂಡವನ್ನು ವಿಧಿಸಲಾಗುತ್ತಿತ್ತು. ಇಂದು ನಮಗೆ ಮನೆಯಲ್ಲಿ ಒಂದು ಗಂಟೆ ವಿದ್ಯುತ್ ಸ್ಥಗಿತವಾದರೂ ನಮ್ಮ ಸ್ಥಿತಿ ಏನಾಗುವುದು ? ಆದರೆ ಬ್ರಿಟನ್‌ನಲ್ಲಿ ಇಷ್ಟು ಕಟ್ಟುನಿಟ್ಟಾದ ಬೆಳಕಿನ ನಿರ್ಬಂಧವು ಒಂದೆರಡು ದಿನ ಅಥವಾ ಒಂದೆರಡು ತಿಂಗಳಲ್ಲ ನಿರಂತರ ೫ ವರ್ಷಗಳವರೆಗೆ ಇತ್ತು !
೩. ಯುದ್ಧಕಾಲ ಅಥವಾ ಆಪತ್ಕಾಲದಲ್ಲಿ ಸಂಚಾರ ಸಾರಿಗೆ ಸ್ಥಗಿತವಾಗುತ್ತದೆ. ಹಾಗಾಗಿ ಸರಕಾರಿ ವ್ಯವಸ್ಥೆಗೆ ಎಲ್ಲೆಡೆ ಸಹಾಯಕ್ಕಾಗಿ ತಲುಪಲು ಸಾಧ್ಯವಾಗುವುದಿಲ್ಲ. ಸರಕಾರವು ಮಾಡುತ್ತಿರುವ ಸಹಾಯ ಕಾರ್ಯದಲ್ಲಿ ಅಡಚಣೆಗಳೂ ಬರುವ ಸಾಧ್ಯತೆಯಿರುತ್ತದೆ. ಅಡುಗೆ ಅನಿಲ, ಊಟ ತಿಂಡಿಯ ಸಾಮಗ್ರಿಗಳು ಇತ್ಯಾದಿಗಳ ಕೊರತೆಯುಂಟಾಗುತ್ತದೆ. ಅದನ್ನು ದುರುಪಯೋಗಿಸಿಕೊಂಡು ವಿತರಣಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಾಗುವ ಸಾಧ್ಯತೆಯಿರುತ್ತದೆ.
೪. ಸದ್ಯದ ಕೊರೊನಾ ಲಸಿಕಿಕರಣದಲ್ಲಿನ ಹಗರಣಗಳು ಬೆಳಕಿಗೆ ಬರುತ್ತಿವೆ. ಸರಕಾರವು ಕೆಲವು ವಸ್ತುಗಳ ಪಡಿತರ ವ್ಯವಸ್ಥೆ (ರೇಶನಿಂಗ್) ಪ್ರಾರಂಭಿಸಿ ಮತ್ತು ಔಷಧಿ ಹಂಚುವಿಕೆ ಕೇಂದ್ರಗಳನ್ನು ತೆರೆದು ನಾಗರಿಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಆದರೆ ಸರಕಾರಕ್ಕೂ ಸಹಾಯ ಮಾಡುವಲ್ಲಿ ಮಿತಿಯುಂಟಾಗುತ್ತದೆ.
೫. ಡಾಕ್ಟರರು, ವೈದ್ಯರು, ಔಷಧಿಗಳು ಆಸ್ಪತ್ರೆಗಳು ಸಹಜವಾಗಿ ಲಭ್ಯವಾಗಲು ಕಠಿಣವಾಗುತ್ತದೆ.
ಇವೆಲ್ಲವುಗಳನ್ನು ಗಮನದಲ್ಲಿರಿಸಿ ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
೭. ಆಪತ್ಕಾಲವನ್ನು ಎದುರಿಸಲು ವಿವಿಧ ಹಂತಗಳಲ್ಲಿ ಮಾಡಬೇಕಾದ ಸಿದ್ಧತೆ !
ನಾವು ಆಪತ್ಕಾಲದ ದೃಷ್ಟಿಯಿಂದ ಅವಶ್ಯಕವಿರುವ ವಿದ್ಯೆ ಹಾಗೂ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಸ್ವಸಂರಕ್ಷಣೆ, ಪ್ರಥಮಚಿಕಿತ್ಸೆ, ಅಗ್ನಿಶಮನ ಪ್ರಶಿಕ್ಷಣ, ಈಜುವಿಕೆ, ವಾಹನ ಚಲಾಯಿಸುವುದು ಮುಂತಾದ ವಿಷಯಗಳನ್ನು ಕಲಿಯಲು ಪ್ರಾಧಾನ್ಯತೆಯನ್ನು ನೀಡಬೇಕಾಗಿದೆ. ಕೌಟುಂಬಿಕ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಮುಂದಿನ ಕೆಲವು ಕಾಲ ಉಳಿಯುವ ಹಾಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸಂಗ್ರಹವನ್ನು ಮಾಡಿಡಬೇಕಾಗುವುದು. ಆಪತ್ಕಾಲದಲ್ಲಿ ವೈದ್ಯಕೀಯ ಉಪಚಾರಗಳೂ ಲಭ್ಯವಿರುವುವು ಎಂದು ಖಾತ್ರಿ ನೀಡಲು ಆಗುವುದಿಲ್ಲ. ಈಗ ಕೊರೊನಾ ಕಾಲದಲ್ಲಿಯೇ ತಮ್ಮಲ್ಲಿ ಅನೇಕ ಜನರು ಅದರ ಅನುಭವವನ್ನು ಪಡೆದಿರಬಹುದು.
ಈ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆಯ ದೃಷ್ಟಿಯಿಂದ ಉಪಯುಕ್ತವಾಗಿರುವ ಬಿಂದು ಒತ್ತಡದ ವಿದ್ಯೆಯನ್ನು ಕಲಿತುಕೊಂಡಲ್ಲಿ ಹಾಗೂ ನಮ್ಮ ಅಂಗಳದಲ್ಲಿ ಅಥವಾ ಗದ್ದೆಯಲ್ಲಿ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮಾಡಿದರೆ ಅದು ಉಪಯುಕ್ತವಾಗಲಿದೆ. ಆಪತ್ಕಾಲದ ಬಿಸಿಯು ದೊಡ್ಡ ಮಹಾನಗರಗಳಿಗೆ ತಗಲುವ ಸಾಧ್ಯತೆಯು ಜಾಸ್ತಿಯಿರುವುದರಿಂದ ನಮಗೆ ಸಾಧ್ಯವಿದ್ದಷ್ಟು ದೊಡ್ಡ ನಗರಗಳಿಂದ ನೀರಿನ ದೊಡ್ಡ ಜಲಸಂಗ್ರಹವಿರುವಲ್ಲಿಂದ ದೂರವಿರುವ ಪರ್ಯಾಯ ಸ್ಥಳಕ್ಕೆ ಸ್ಥಳಾಂತರವಾಗುವ ದೃಷ್ಟಿಯಿಂದ ತಯಾರಿಯನ್ನು ಮಾಡಬೇಕು.
ಇದರೊಂದಿಗೆ ತಮಗೆ ಸಾಧ್ಯವಿದ್ದಲ್ಲಿ ಸೌರ ಇಂಧನದಲ್ಲಿ ನಡೆಯುವಂತಹ ಉಪಕರಣಗಳನ್ನಿಡಬೇಕು. ಮನೆಯ ಹತ್ತಿರ ಬಾವಿಯನ್ನು ತೋಡಬೇಕು. ದೈನಂದಿನ ಜೀವನದಲ್ಲಿ ವಿದ್ಯುತ್ ಅನ್ನು ಅತ್ಯಂತ ಕಡಿಮೆ ಉಪಯೋಗಿಸಿ ಪಾರಂಪಾರಿಕ ಪದ್ಧತಿಯಿಂದ ಹೇಗೆ ಕೆಲಸಗಳನ್ನು ಮಾಡಬಹುದು ಎಂದು ಕಲಿತುಕೊಳ್ಳಬೇಕು ಹಾಗೂ ಅದರ ಅಭ್ಯಾಸವನ್ನು ಸಹ ಮಾಡಬೇಕು. ಉದಾಹರಣೆಗೆ ಮಿಕ್ಸರ್ ನ ಬದಲು ಬೀಸುವ ಕಲ್ಲು, ಒನಕೆ ಮತ್ತು ಅರೆಯುವ ಕಲ್ಲನ್ನು ಉಪಯೋಗಿಸುವುದು. ವಾಹನಗಳ ಬದಲು ಸೈಕಲ್ ಉಪಯೋಗಿಸಲು ಅಭ್ಯಾಸ ಮಾಡುವುದು, ಕುದುರೆಗಾಡಿ, ಎತ್ತಿನಗಾಡಿ ನಡೆಸಲು ಕಲಿಯುವುದು, ಸಂಚಾರಿ ವಾಣಿಯನ್ನು ಅನವಶ್ಯಕ ಉಪಯೋಗಿಸದಿರುವುದು,
೮. ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ
ತಮ್ಮ ಇಷ್ಟಾನಿಷ್ಟಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು, ಎದುರಾದ ಪರಿಸ್ಥಿತಿಯನ್ನು ಸ್ವೀಕರಿಸಿ ಅದನ್ನು ಸಕಾರಾತ್ಮಕವಾಗಿ ಎದುರಿಸಲು ಪ್ರಯತ್ನಿಸುವುದು, ಹೀಗೆ ಅನೇಕ ವಿಷಯಗಳನ್ನು ಇಂದಿನಿಂದಲೇ ಅಭ್ಯಾಸ ಮಾಡಿದರೆ ನಮಗೆ ಆಪತ್ಕಾಲವು ಸುಸಹ್ಯವಾಗುವುದು.
೭ ಅ. ಆಪತ್ಕಾಲದ ಸಿದ್ಧತೆಗಳನ್ನು ಮಾಡುವ ಬಗ್ಗೆ ಮಾರ್ಗದರ್ಶನ ಮಾಡುವ ಸನಾತನದ ಗ್ರಂಥಗಳ ಲಾಭ ಪಡೆಯಿರಿ : ಆಪತ್ಕಾಲದ ಸಿದ್ಧತೆಗಳನ್ನು ಮಾಡುವ ಬಗ್ಗೆ ಅತ್ಯಂತ ಉಪಯುಕ್ತವಾಗಬಲ್ಲ ಗ್ರಂಥಗಳನ್ನು ಸಹ ಸನಾತನವು ಮುದ್ರಿಸಿದೆ. ಅದನ್ನು www.sanatanshop.com ಈ ಜಾಲತಾಣ ದಲ್ಲಿ ‘ಆನ್‌ಲೈನ್ ಮಾರಾಟಕ್ಕಾಗಿ ಇಡಲಾಗಿದೆ. ತಾವೆಲ್ಲರೂ ಅವಶ್ಯವಾಗಿ ಅದರ ಲಾಭವನ್ನು ಪಡೆದುಕೊಳ್ಳಿ. ನಾವು ನಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರಿಂದಲೂ ಆ ಗ್ರಂಥಗಳನ್ನು ತರಿಸಿಕೊಳ್ಳಬೇಕು.
೮ ಅ. ಆಪತ್ಕಾಲದ ದೃಷ್ಟಿಯಿಂದ ಸಮಾಜದ ಪ್ರಬೋಧನೆ ಮಾಡುವುದು ಕಾಲಾನುಸಾರ ಪೂರಕ ಸಮಷ್ಟಿ ಸಾಧನೆ : ಇಂದಿನ ತನಕದ ಮೇಲೆ ಹೇಳಿದ ಅಂಶಗಳಿಂದ ಆಪತ್ಕಾಲದಲ್ಲಿ ಜೀವಂತವಿರಲು ಪ್ರತಿಯೊಬ್ಬರೂ ಸಿದ್ಧತೆ ಮಾಡಬೇಕಾಗಲಿದೆ ಎಂಬುದರ ಅರಿವು ಎಲ್ಲರಿಗೂ ಖಂಡಿತವಾಗಿಯೂ ಆಗಿರಬಹುದು. ಈ ಭೀಕರ ಆಪತ್ಕಾಲದಲ್ಲಿ ಕೇವಲ ಸ್ವಂತದ ರಕ್ಷಣೆಗಷ್ಟೇ ಸೀಮಿತವಾಗಿರಬೇಡಿ. ನಮ್ಮೊಂದಿಗೆ ನಮ್ಮ ಸಂಪರ್ಕದಲ್ಲಿರುವವರ ಜೀವರಕ್ಷಣೆಗಾಗಿ ಆಪತ್ಕಾಲದಲ್ಲಿ ಮಾಡಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಪ್ರಬೋಧನೆ ಮಾಡಿ. ಇಂತಹ ಪ್ರಬೋಧನೆಯು ಕಾಲಾನುಸಾರ ಪೂರಕವಾದ ಸಮಷ್ಟಿ ಸಾಧನೆಯೇ ಆಗಿದೆ ಎಂಬುದನ್ನು ಗಮನದಲ್ಲಿಡಿ. ಇಂತಹ ಪ್ರಬೋಧನೆಯಿಂದ ಆಪತ್ಕಾಲದಲ್ಲಿ ಅನೇಕ ಹಿಂದೂಗಳ ಪ್ರಾಣಗಳು ಉಳಿಯಬಹುದು.
೮ ಆ. ಇತರ ಕೃತಿ : ಆಪತ್ಕಾಲವನ್ನು ಎದುರಿಸುವ ದೃಷ್ಟಿಯಿಂದ ಜನಜಾಗೃತಿ ಮೂಡಿಸುವುದು, ಸನಾತನದ ಆಪತ್ಕಾಲೀನ ಗ್ರಂಥಮಾಲಿಕೆಯಲ್ಲಿನ ಗ್ರಂಥಗಳನ್ನು ಬಂಧುಬಳಗದವರು, ಮಿತ್ರರು, ಸಾರ್ವಜನಿಕ ವಾಚನಾಲಯಗಳಿಗೆ ಎಲ್ಲರಿಗೂ ಉಡುಗೊರೆಯಾಗಿ ನೀಡಿ ! ‘ಆಪತ್ಕಾಲವನ್ನು ಎದುರಿಸುವ ದೃಷ್ಟಿಯಿಂದ ಮಾಡಬೇಕಾದ ಸಿದ್ಧತೆ ಈ ವಿಷಯದಲ್ಲಿ ತಮ್ಮ ಪರಿಚಿತರಿಗೂ ವ್ಯಾಖ್ಯಾನಗಳನ್ನು ಆಯೋಜಿಸಿರಿ. ಇದಕ್ಕಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ನಿಮಗೆ ಸರ್ವತೋಮುಖವಾಗಿ ಸಹಾಯ ಮಾಡಲಿದೆ !
೮ ಇ. ಸಂತರು, ಸಾಧಕರು, ಭಕ್ತರು ಮತ್ತು ಸಜ್ಜನ ಹಿಂದೂ ಇವರಿಗೆ ಆದ್ಯತೆಯಿಂದ ಎಲ್ಲ ರೀತಿಯಿಂದ ಸಹಾಯ ಮಾಡಿ ! : ಈ ಆಪತ್ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿಯಾಗುತ್ತಿದ್ದರೂ ಅವುಗಳಲ್ಲಿ ಕೆಲವು ಜನರ ಪ್ರಾಣವನ್ನಾದರೂ ಉಳಿಸಲು ನಮ್ಮ ಸ್ವಕ್ಷಮತೆಗನುಸಾರ ಪ್ರಯತ್ನಿಸ ಬೇಕಾಗುವುದು. ಈ ಸಂಕಟಕಾಲದಲ್ಲಿ ನೈಸರ್ಗಿಕ ಆಪತ್ತುಗಳು, ದಂಗೆಗಳಲ್ಲಿ ಸಿಲುಕಿದ ಎಲ್ಲ ಹಿಂದೂಗಳನ್ನು ಬದುಕಿಸಲು ಆಗುವುದಿಲ್ಲ. ಆದರೆ ಅಂತಹ ಸಮಯದಲ್ಲಿ ಸಂತರು, ಸಾಧಕರು, ಭಕ್ತರು ಮತ್ತು ಸಜ್ಜನ ಹಿಂದೂಗಳಿಗೆ ಸರ್ವತೋಮುಖ ವಾಗಿ ಸಹಾಯವನ್ನು ಮಾಡಬೇಕು. ಇಂತಹ ಸಮಯದಲ್ಲಿ ಗೂಂಡಾ, ಭ್ರಷ್ಟಾಚಾರಿ, ಬಲಾತ್ಕಾರಿ ಮುಂತಾದವರನ್ನು ಬದುಕಿಸಲು ಪ್ರಯತ್ನಿಸಬಾರದು. ಏಕೆಂದರೆ ಪೃಥ್ವಿಗೆ ಭಾರವಾಗಿರುವ ವರನ್ನು ಈಶ್ವರನು ಸಹ ಬದುಕಿಸಲಾರನು.
೯. ಆಪತ್ಕಾಲದಲ್ಲಿ ಜೀವಂತವಾಗಿರಲು ಸಾಧನೆಯನ್ನು ಮಾಡಿರಿ !
ಪರಾತ್ಪರ ಗುರು ಡಾ. ಆಠವಲೆಯವರು ಆಪತ್ಕಾಲದಲ್ಲಿ ಸಾಧನೆಯ ಮಹತ್ವವನ್ನು ಸ್ಪಷ್ಟಗೊಳಿಸುವಾಗ ಅಡಚಣೆಗಳ ಸಮಯದಲ್ಲಿ ಸಹಾಯವಾಗಬೇಕು ಎಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟ ಕಾಲದಲ್ಲಿ ಸಹಾಯವಾಗಬೇಕು ಎಂದು ಸಾಧನೆಯ ದೊಡ್ಡ ಸಂಗ್ರಹವು ನಮ್ಮಲ್ಲಿರುವುದು ಅವಶ್ಯಕ ವಾಗಿದೆ. ಹಾಗಾಗಿ ಸಂಕಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.
ಭಗವಂತ ಶ್ರೀಕೃಷ್ಣನು ‘ನ ಮೆ ಭಕ್ತ ಪ್ರಣಶ್ಯತಿ ಎಂದರೆ ನನ್ನ ಭಕ್ತರು ಯಾವತ್ತಿಗೂ ನಾಶವಾಗುವುದಿಲ್ಲ ಎಂಬ ವಚನವನ್ನು ತನ್ನ ಭಕ್ತರಿಗೆ ನೀಡಿದ್ದಾನೆ. ಹಾಗಾಗಿ ನಾವು ಸಾಧನೆಯನ್ನು ಹೆಚ್ಚಿಸಿ ದೇವರ ಭಕ್ತರಾಗೋಣ. ಸದ್ಯದ ಕಾಲವು ಯುಗಪರಿವರ್ತನೆಯದ್ದಾಗಿದೆ. ಸಾಧನೆಯ ದೃಷ್ಟಿಯಿಂದ ಸಂಧಿಕಾಲವಾಗಿದೆ. ಈ ಕಾಲದಲ್ಲಿ ಮಾಡಿದ ಸಾಧನೆಯ ಫಲವು ಅನೇಕ ಪಟ್ಟುಗಳಲ್ಲಿ ಸಿಗುತ್ತದೆ. ಈ ಸಂಧಿಕಾಲದ ಲಾಭವನ್ನು ಪಡೆದುಕೊಂಡು ನಾವು ಜೀವತೇಯ್ದು ಸಾಧನೆಯನ್ನು ಮಾಡೋಣ. ಸಾಧನೆಯ ವಿಷಯದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರತಿವಾರ ಆನ್‌ಲೈನ್ ಸಾಧನಾ ಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ. ತಮ್ಮಲ್ಲಿ ಯಾರಿಗಾದರೂ ಸಾಧನೆಯನ್ನು ಮಾಡಲು ಆಸಕ್ತಿಯಿದ್ದಲ್ಲಿ ನೀವು ಅವಶ್ಯವಾಗಿ ಚಾಟ್ ಬಾಕ್ಸ್‌ನಲ್ಲಿ ತಮ್ಮ ಹೆಸರು ಮತ್ತು ಸಂಪರ್ಕ ಕ್ರಮಾಂಕವನ್ನು ಹಾಕಿ ಅಥವಾ ತಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರನ್ನು ಸಂಪರ್ಕಿಸಿರಿ. ನಾವು ತಮ್ಮನ್ನು ಸಾಧನಾ ಸತ್ಸಂಗಕ್ಕೆ ಜೋಡಿಸುವೆವು. ಅದರ ಜೊತೆಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿದಿನ ನಾಮಜಪ ಸತ್ಸಂಗ, ಭಾವಸತ್ಸಂಗ, ಮತ್ತು ಧರ್ಮಸಂವಾದ ಮುಂತಾದ ‘ಆನ್‌ಲೈನ್ ಸತ್ಸಂಗಗಳ ಪ್ರಸಾರ ಮಾಡಲಾಗುತ್ತದೆ ಹಾಗೂ ಬಾಲಸಂಸ್ಕಾರವರ್ಗಗಳನ್ನು ಪ್ರತಿ ಶನಿವಾರ ಮತ್ತು ರವಿವಾರದಂದು ನಡೆಸಲಾಗುತ್ತದೆ ಹಾಗೂ ದಿನನಿತ್ಯದ ಘಟನಾವಳಿಗಳ ಬಗ್ಗೆ ಹಿಂದುತ್ವದ ದೃಷ್ಟಿಕೋನದಿಂದ ದಿಶೆಯನ್ನು ನೀಡುವಂತಹ ‘ಚರ್ಚಾ ಹಿಂದೂ ರಾಷ್ಟ್ರ ಕಿ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರತಿ ಬುಧವಾರ ಮತ್ತು ಶನಿವಾರ ಪ್ರಸಾರ ಮಾಡಲಾಗುತ್ತದೆ. ತಾವು ಈ ‘ಆನ್‌ಲೈನ್ ಕಾರ್ಯಕ್ರಮಗಳಿಂದ ಅವಶ್ಯವಾಗಿ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ತಮ್ಮ ಪರಿಚಿತರಿಗೂ ಅದರ ವಿಷಯದಲ್ಲಿ ಹೇಳಿರಿ.
ಈ ಆಪತ್ಕಾಲ ಎಂದರೆ ಪೃಥ್ವಿಯ ಮೇಲಿನ ರಜತಮದ ಭಾರವನ್ನು ಹಗುರಗೊಳಿಸಿ ಸತ್ತ್ವಗುಣದ ಪ್ರಾಬಲ್ಯವನ್ನು ನಿರ್ಮಿಸಲು ಈಶ್ವರನು ಮಾಡಿದಂತಹ ಉಪಾಯಯೋಜನೆಯಾಗಿದೆ. ಅಂದರೆ ಸಜ್ಜನರ ದೃಷ್ಟಿಯಿಂದ ಈ ಆಪತ್ಕಾಲವು ಬಯಸದೇ ಬಂದ ಭಾಗ್ಯವಾಗಿರಲಿದೆ. ಹಾಗಾಗಿ ಆಪತ್ಕಾಲವು ಯೋಗ್ಯವೋ ಅಯೋಗ್ಯವೋ ಎಂಬ ವಿಚಾರವನ್ನು ಮಾಡದೇ ಈ ಆಪತ್ಕಾಲದಿಂದ ಪಾರಾಗಿ ಹೋಗಲು ಈಶ್ವರನು ಭಕ್ತರಾಗಲು ನೀಡಿ ದಂತಹ ಅವಕಾಶವಾಗಿದೆ ಎಂಬ ವಿಚಾರವನ್ನು ಎಲ್ಲರೂ ಮಾಡಬೇಕು.
೧೦. ಹಿಂದೂ ರಾಷ್ಟ್ರದ ಸ್ಥಾಪನೆ
ಕೆಟ್ಟದರಲ್ಲಿಯೂ ಒಳ್ಳೆಯದು ಘಟಿಸುತ್ತದೆ. ಹಾಗೆಯೇ ಈ ಆಪತ್ಕಾಲದ ನಂತರ ಕಾಲ ಮಹಿಮೆಗನುಸಾರ ಭಾರತಕ್ಕೆ ಒಳ್ಳೆಯ ದಿನ ಗಳು ಬರಲಿವೆ. ಜಗತ್ತಿನಾದ್ಯಂತ ಹಿಂದೂ ಧರ್ಮವು ಸ್ಥಾಪನೆಯಾಗಲಿದೆ. ಈ ಕಾಲದಲ್ಲಿ ಭಾರತದಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ನಾವೆಲ್ಲರೂ ಈಗಿನಿಂದಲೇ ಕೃತಿಶೀಲರಾಗಬೇಕಾಗಿದೆ. ಸದ್ಯ ಹಿಂದೂ ಧರ್ಮ ಮತ್ತು ಧರ್ಮೀಯರಿಗೆ ಒಂದು ರೀತಿಯ ಪ್ರತಿ ಕೂಲ ಕಾಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ.
೧೦ ಅ. ಹಿಂದೂ ಧರ್ಮವನ್ನು ಕಳಂಕಿತಗೊಳಿಸುವ ಷಡ್ಯಂತ್ರಗಳು : ಇಂದು ಅಂತರರಾಷ್ಟ್ರೀಯ ಸ್ತರದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಸಾಧು-ಸಂತರು ಹಾಗೂ ಶ್ರದ್ಧಾಸ್ಥಾನಗಳನ್ನು ಕಳಂಕಿತಗೊಳಿಸುವ ಷಡ್ಯಂತ್ರವು ನಡೆಯುತ್ತಿದೆ. ಉದಾಹರಣೆಗಾಗಿ ಇತ್ತೀಚೆಗೆ ಕೊರೊನಾದ ಸಂದರ್ಭದಲ್ಲಿ ಕುಂಭಮೇಳವನ್ನು ಕಳಂಕಿತಗೊಳಿಸುವಂತಹ ‘ಟೂಲ್ ಕಿಟ್ ಹಿಂದೂದ್ವೇಷಿ ರಾಜಕಾರಣಿಗಳಿಂದ ಪ್ರಸಾರ ಮಾಡಲಾಗಿತ್ತು. ಫೇಸ್‌ಬುಕ್, ಟ್ವಿಟರ್ ನಂತರ ಸಾಮಾಜಿಕ ಮಾಧ್ಯಮಗಳಿಂದ ಹಿಂದುತ್ವದ ಪ್ರಸಾರವನ್ನು ಹತ್ತಿಕ್ಕುವ ಪ್ರಯತ್ನಗಳಾಗುತ್ತಿವೆ.
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾನೂನಿನ ಚೌಕಟ್ಟಿನಲ್ಲಿ ನಡೆಯು ತ್ತಿರುವ ೩೫ ಕ್ಕಿಂತಲೂ ಹೆಚ್ಚಿನ ಫೇಸ್‌ಬುಕ್ ಪೇಜಸ್ ಬಂದ್ ಮಾಡುವುದರ ಹಿಂದೆ ಅಮೇರಿಕಾದ ಟೈಮ್ಸ್ ಎಂಬ ನಿಯತಕಾಲಿಕೆಯ ಕೈವಾಡವಿದೆ ಎಂದು ಇತ್ತೀಚೆಗೆ ಬಹಿರಂಗವಾಗಿದೆ. ‘ಶಾರ್ಲಿ ಹೆಬ್ಡೋ ಎಂಬ ನಿಯತಕಾಲಿಕೆಯು ಆಕ್ಸಿಜನ್ ನ ಕೊರತೆಯ ಸಂದರ್ಭದಲ್ಲಿ ವ್ಯಂಗ್ಯ ಚಿತ್ರಗಳನ್ನು ಮುದ್ರಿಸುವಾಗ, ‘೩ ಕೋಟಿ ೩೩ ಲಕ್ಷ ದೇವತೆಗಳಿದ್ದರೂ ಆಕ್ಸಿಜನ್ ತಯಾರಿಸಲು ಸಕ್ಷಮರಿಲ್ಲ ಎಂದು ಹೇಳಿತ್ತು. ಅಂತಾರಾಷ್ಟ್ರೀಯ ಸ್ತರದಲ್ಲಿ ಹಿಂದೂದ್ವೇಷಿಗಳ ಸರಪಳಿಯು ವಿವಿಧ ಮಾಧ್ಯಮಗಳಿಂದ ಕಾರ್ಯನಿರತವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
೧೦ ಆ. ಹಿಂದೂ ಸಮಾಜವು ಸಂಕಟದಲ್ಲಿದೆ : ಸದ್ಯ ಭಾರತದಲ್ಲಿ ಸೆಕ್ಯುಲರ್‌ವಾದದ ಹೆಸರಿನಲ್ಲಿ ಬಹುಸಂಖ್ಯಾತ ಹಿಂದೂಗಳನ್ನು ರಾಜಕೀಯ ಸ್ತರದಲ್ಲಿ ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ ಹಾಗೂ ಇತರ ಪಂಥೀಯರ ಓಲೈಕೆಯು ಕಂಡುಬರುತ್ತದೆ. ಬಂಗಾಲದಲ್ಲಿ ಚುನಾವಣೆಯ ನಂತರ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಂಗೆಯನ್ನು ನಡೆಸಲಾಯಿತು. ಇತ್ತೀಚೆಗೆ ನಡೆದ ಈದ್‌ನ ದಿನದಂದು ಪಂಜಾಬ ಸರಕಾರವು ಮಲೆರಕೊಟ ಎಂಬ ಮುಸಲ್ಮಾನ ಬಹುಸಂಖ್ಯಾತ ಪ್ರಾಂತ್ಯ ವನ್ನು ಸ್ವತಂತ್ರಜಿಲ್ಲೆ ಎಂದು ಘೋಷಿಸಿ ಅದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಅನುದಾನ ವನ್ನು ನೀಡಿತು. ಪಶ್ಚಿಮ ಬಂಗಾಲದ ಮುರ್ಶಿದಾಬಾದ ಜಿಲ್ಲೆಯ ಅದ್ವೈತನಗರ ಈ ಮುಸಲ್ಮಾನ ಬಹುಸಂಖ್ಯಾತ ಊರಿನಲ್ಲಿ ಸಾಮಾಜಿಕ ಸುಧಾರಣಾ ಸಮಿತಿಯು ಶರಿಯತ್ ಕಾನೂನಿಗನುಸಾರ ತೆಗೆದ ಫತ್ವಾಗನುಸಾರ ಸಂಗೀತ ಆಲಿಸುವುದು, ದೂರಚಿತ್ರವಾಹಿನಿಯನ್ನು ವೀಕ್ಷಿಸುವುದು ಇವುಗಳಿಗೆಲ್ಲ ನಿರ್ಬಂಧ ಹೇರಲಾಗಿದೆ. ಇಂದು ಪಂಜಾಬನಲ್ಲಿ ಸ್ವತಂತ್ರ ಖಲಿಸ್ತಾನದ ಬೇಡಿಕೆಯು ತಲೆ ಎತ್ತುತ್ತಿದೆ. ಉತ್ತರಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಮೌಲ್ವಿಗಳು ೧೦೦೦ ಕ್ಕಿಂತಲೂ ಹೆಚ್ಚು ಹಿಂದೂಗಳನ್ನು ಮತಾಂತರಿಸಿರುವುದು ಬಹಿರಂಗವಾಗಿದೆ. ಕ್ರೈಸ್ತ ಮಿಶನರಿಗಳಿಂದ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವು ನಡೆಯುತ್ತಲೇ ಇದೆ. ತಮಿಳುನಾಡು ರಾಜ್ಯದಲ್ಲಿಯಂತೂ ನಮ್ಮ ಪ್ರದೇಶವು ಮುಸಲ್ಮಾನ ಬಹುಸಂಖ್ಯಾತವಾಗಿದೆ, ಇಲ್ಲಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಯನ್ನು ನಡೆಸಲು ನಿರ್ಬಂಧಿಸಬೇಕು ಎಂಬ ಬೇಡಿಕೆಯ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಜಿಹಾದಿ ಶಕ್ತಿಗಳು ಹಿಂದೂ ನೇತಾರರನ್ನು ಮತ್ತು ಸಾಧು ಸಂತರನ್ನು ಆಯೋಜನಾಬದ್ಧವಾಗಿ ಹತ್ಯೆ ಮಾಡುತ್ತಿವೆ. ಸರಕಾರಿಕರಣದ ಹೆಸರಿನಲ್ಲಿ ರಾಜಕಾರಣಿಗಳು ಹಿಂದೂಗಳ ದೇವಸ್ಥಾನಗಳನ್ನು ಕಬಳಿಸುತ್ತಿದ್ದಾರೆ. ಸ್ವಲ್ಪದರಲ್ಲಿ ಸೆಕ್ಯುಲರ್ ಭಾರತದಲ್ಲಿ ಸನಾತನ ಹಿಂದೂ ಧರ್ಮದ ಉಪೇಕ್ಷೆಯನ್ನು ತಡೆಗಟ್ಟಬೇಕಾದರೆ ಹಿಂದೂ ರಾಷ್ಟ್ರದ ಏಕೈಕ ಬೇಡಿಕೆಯನ್ನು ಮಾಡಿ ಅದಕ್ಕಾಗಿ ನಮ್ಮ ಯೋಗದಾನವನ್ನು ನೀಡಬೇಕಾಗಿದೆ.
೧೦ ಇ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯೋಗದಾನ ನೀಡಿ : ರಾಮಸೇತುವೆಯನ್ನು ಕಟ್ಟುತ್ತಿರುವಾಗ ಅಳಿಲೊಂದು ತನ್ನ ಪಾಲನ್ನು ನಿಭಾಯಿಸಿತ್ತು. ಸೂರ್ಯಾಸ್ತವಾದ ನಂತರ ಅಂಧಃಕಾರವನ್ನು ದೂರಗೊಳಿಸಲು ಹಣತೆಯು ತನ್ನ ಪಾಲನ್ನು ಎತ್ತಿಕೊಳ್ಳುತ್ತದೆ. ಬಂಧುಗಳೇ, ನಾವೆಲ್ಲರೂ ನಮ್ಮ ಪಾಲಿನ ಧರ್ಮಸಂಸ್ಥಾಪನೆಯ ಪಾಲನ್ನು ಎತ್ತ ಬೇಕಾಗಿದೆ. ಹಾಗಾಗಿ ಕೊನೆಯಲ್ಲಿ ಈ ಗುರು ಪೂರ್ಣಿಮೆಯ ನಿಮಿತ್ತ ಗುರುತತತ್ತ್ವಕ್ಕೆ ಅಪೇಕ್ಷಿತ ದಕ್ಷಿಣೆಯನ್ನು ನೀಡುವ ಬುದ್ಧಿ ತಮಗೆಲ್ಲರಿಗೂ ಬರಲಿ ಎಂದು ನಾನು ಕರೆಯನ್ನು ನೀಡುತ್ತೇವೆ. ನಿಮ್ಮ ವಿಚಾರಗಳ ದಾನ, ನಿಮ್ಮ ಪ್ರಾಣದ ದಾನವನ್ನು ಈ ಹಿಂದೂ ರಾಷ್ಟ್ರಕ್ಕಾಗಿ ನೀಡಿರಿ !
– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
(ಮುಕ್ತಾಯ)