ಅಶುಭ ಕಾಲದಲ್ಲಿ ಜನಿಸಿದ ಶಿಶುವಿನ ‘ಜನನಶಾಂತಿ’ ಮಾಡುವುದು ಏಕೆ ಆವಶ್ಯಕವಾಗಿದೆ ?
ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ. ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಅದಕ್ಕೆ ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ.