|
ಮುಂಬಯಿ, ಜುಲೈ ೧೧ – ರಾಜ್ಯದಲ್ಲಿನ ಭ್ರಷ್ಟಾಚಾರ ನಿಗ್ರಹ ದಳವು ಕಳೆದ ೯ ವರ್ಷಗಳಲ್ಲಿ ‘ಭ್ರಷ್ಟಾಚಾರಿ’ ಎಂದು ಕ್ರಮ ಕೈಗೊಂಡಿರುವುದರ ಪೈಕಿ ಶೇಕಡ ೯೪.೧೧ ರಷ್ಟು ಆರೋಪಿಗಳು ಬಿಡುಗಡೆ ಹೊಂದಿರುವ ಮಾಹಿತಿ ಬಹಿರಂಗವಾಗಿದೆ. ಭ್ರಷ್ಟಾಚಾರ ನಿಗ್ರಹ ದಳದಿಂದ ೨೦೧೪ ರಿಂದ ೨೦೨೨ ಈ ಕಾಲಾವಧಿಯಲ್ಲಿ ೮ ಸಾವಿರ ೫೧೨ ಅಪರಾಧ ದಾಖಲಿಸಲಾಗಿದ್ದವು. ಅದರಲ್ಲಿ ಕೇವಲ ೫೦೨ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. ಅಪರಾಧ ಸಾಬಿತಾಗುವ ಪ್ರಮಾಣ ಕೇವಲ ಶೇಕಡ ೫.೮೯ ರಷ್ಟೇ ಇದೆ. ೮ ಸಾವಿರ ೫೧೨ ಅಪರಾಧಗಳಲ್ಲಿ ೭ ಸಾವಿರ ೧೪೮ ಅಪರಾಧಗಳಲ್ಲಿ ಆರೋಪ ಪತ್ರ ದಾಖಲಿಸಲಾಗಿದೆ. ಅಂದರೆ ಶೇಕಡ ೧೭ ಅಪರಾಧಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಆರೋಪ ಪತ್ರ ದಾಖಲಿಸದೇ ಇರುವುದು ಬಹಿರಂಗವಾಗಿದೆ. ವಿಶೇಷ ಎಂದರೆ ಕ್ರಮ ಕೈಗೊಂಡ ನಂತರ ಜನಪ್ರತಿನಿಧಿಗಳು ಮತ್ತು ಸರಕಾರಿ ಸೇವೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ. ಲಂಚ ಪಡೆಯುವಾಗ ಬಲೆಗೆ ಬಿದ್ದ ಶೇಕಡ ೮೫ ಜನರು ಮತ್ತೆ ಸರಕಾರಿ ಸೇವೆಗೆ ಹಾಜರಾಗಿದ್ದಾರೆ. ಪ್ರಸ್ತುತ ವರ್ಷದ ಜುಲೈ ೯ ವರೆಗೆ ರಾಜ್ಯದಲ್ಲಿನ ಭ್ರಷ್ಟಾಚಾರದ ೪೬೬ ಅಪರಾಧಗಳು ನೋಂದಣಿ ಆಗಿವೆ. ಇದರಲ್ಲಿ ೬೫೩ ಜನರು ಆರೋಪೀಗಳಾಗಿದ್ದರೆ; ಕಳೆದ ೯ ವರ್ಷಗಳ ಅಂಕಿಅಂಶಗಳನ್ನು ನೋಡಿದರೆ ಈ ಅಪರಾಧಿಗಳಿಗೆ ಶಿಕ್ಷೆ ಆಗುವುದು ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ.
ಅಪರಾಧ ಸಾಬೀತಾಗದಿರುವುದರ ಹಿಂದಿನ ಅನೇಕ ಕಾರಣಗಳು ! – ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ
ಇದರ ಬಗ್ಗೆ ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಭ್ರಷ್ಟಾಚಾರ ನಿಗ್ರಹ ದಳದ ವರಳಿ (ಮುಂಬಯಿ) ಇಲ್ಲಿಯ ಮುಖ್ಯಕಾರ್ಯಲಯದ ಓರ್ವ ಹಿರಿಯ ಅಧಿಕಾರಿಗಳ ಭೇಟಿ ಮಾಡಿ ಅಪರಾಧ ಸಾಬೀತಾಗಲು ಅತ್ಯಲ್ಪ ಪ್ರಮಾಣದ ಬಗ್ಗೆ ವಿಚಾರಿಸಿದಾಗ ಅವರು ಲಂಚ ತೆಗೆದುಕೊಳ್ಳುವಾಗಿನ ಪರಿಸ್ಥಿತಿ, ಆರೋಪಿ ಸ್ವತಃ ಲಂಚ ಪಡೆಯದೆ ಇತರ ವ್ಯಕ್ತಿಯ ಮೂಲಕ ಲಂಚ ಪಡೆಯುತ್ತಾರೆ, ಪ್ರತ್ಯಕ್ಷ ಕಾರ್ಯಾಲಯದಲ್ಲಿ ಲಂಚ ಪಡೆಯದೆ ಹೊರಗೆ ಬಂದು ಪಡೆಯುವುದು ಮುಂತಾದ ವಿವಿಧ ಕಾರಣಗಳಿಂದ ಆರೋಪ ಸಾಬೀತಾಗಲು ಸಾಕ್ಷಿಗಳನ್ನು ಒಗ್ಗೂಡಿಸುವಲ್ಲಿ ಅಡಚಣೆ ಬರುವುದಾಗಿ ಹೇಳಲಾಗುತ್ತದೆ. (ಕಾನೂನಿಗಿಂತಲೂ ಜಾಣರಾಗಿರುವ ಭ್ರಷ್ಟಾಚಾರಿ ! – ಸಂಪಾದಕರು) ಈ ವಿಷಯದ ಬಗ್ಗೆ ಇನ್ನೋರ್ವ ಹಿರಿಯ ಅಧಿಕಾರಿಗಳ ಜೊತೆಗೆ ಪೊಲೀಸ ಮಹಾ ಸಂಚಾಲಕರ ಅನುಮತಿಯಿಂದಲೇ ಈ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿ ಇದರ ಮಾಹಿತಿ ನೀಡಲು ನಿರಾಕರಿಸಿದರು.
ಸಂಪಾದಕೀಯ ನಿಲುವುಭ್ರಷ್ಟಾಚಾರ ಏಕೆ ನಿಲ್ಲುತ್ತಿಲ್ಲ ? ಇದೇ ಇದರಿಂದ ಗಮನಕ್ಕೆ ಬರುತ್ತದೆ ! ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆದಾಗ ‘ಒಬ್ಬ ಭ್ರಷ್ಟಾಚಾರಿಗೆ ಶಿಕ್ಷೆ ಆಗಿದೆ ಎಂದು ರಾಷ್ಟ್ರಪ್ರೇಮಿ ನಾಗರೀಕರಿಗೆ ಅನಿಸುತತ್ಇದ್ದರೇ ಈ ವಾರ್ತೆಯಿಂದ ಅವರ ಭ್ರಮೆ ದೂರವಾಗಲಿದೆ. ಒಟ್ಟಾರೆ ‘ಭ್ರಷ್ಟಾಚಾರಿ’ ಎಂದು ಬಂಧಿಸಿರುವ ಮತ್ತು ಅಪರಾಧ ದಾಖಲಾಗಿದ್ದರೂ ಕೂಡ ಆರೋಪಿಗಳು ಬಿಡುಗಡೆ ಆಗುತ್ತಿದ್ದರೆ, ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಯಬೇಕು. |