`ಸನಾತನ ಪ್ರಭಾತ’ದ ಕುರಿತು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಗೌರವೋದ್ಗಾರ !

‘ಸನಾತನ ಪ್ರಭಾತ’ವು ಕೇವಲ ಸುದ್ದಿಸಂಗ್ರಹದ ಪತ್ರಿಕೆಯಲ್ಲ, ನಿಜವಾದ ಅರ್ಥದಲ್ಲಿ ಸಮಾಜಪ್ರಬೋಧನೆಯ ನಿಯತಕಾಲಿಕೆ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

‘ವಿವಿಧ ದಿನಪತ್ರಿಕೆಗಳು ಸಮಾಜದಲ್ಲಿ ಪ್ರತಿದಿನ ಘಟಿಸುವ ಅಹಿತಕರ ಘಟನೆಗಳ ಬಗ್ಗೆ ಕೇವಲ ಸುದ್ದಿಸಂಕಲನವನ್ನು ಮಾಡುತ್ತವೆ; ಆದರೆ `ಆ ಕುರಿತು ಏನು ದೃಷ್ಟಿಕೋನವಿರಬೇಕು ?, ಈ ರೀತಿಯ ಘಟನೆಗಳ ಪುನರಾವರ್ತನೆಯಾಗದಂತೆ ಏನೆಲ್ಲ ಉಪಾಯಯೋಜನೆಗಳನ್ನು ಮಾಡಬೇಕು ?’, ಎಂಬುದರ ಬಗ್ಗೆ ಯಾವುದೇ ನಿಯತಕಾಲಿಕೆಯು ಪ್ರಬೋಧನೆಯನ್ನು ಮಾಡುವುದಿಲ್ಲ. ಈ ವಿಷಯವನ್ನು ಕೇವಲ `ಸನಾತನ ಪ್ರಭಾತ’ ನಿಯತಕಾಲಿಕೆಗಳಿಂದಲೇ ಮಂಡಿಸಲಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)

ಕೇವಲ ಕೆಟ್ಟ ಸುದ್ದಿಗಳನ್ನು ನೀಡದೇ ಅಂತಹ ಸುದ್ದಿಗಳು ಪುನಃ ಬರದಂತೆ ಪರಿಹಾರೋಪಾಯನ್ನೂ ಹೇಳುವ ಏಕೈಕ ನಿಯತಕಾಲಿಕೆ `ಸನಾತನ ಪ್ರಭಾತ’ !

‘ಹೆಚ್ಚಿನ ದಿನಪತ್ರಿಕೆಗಳು ಸಮಾಜದಲ್ಲಿ ಘಟಿಸುವ ಕೇವಲ ಅಯೋಗ್ಯ ಘಟನೆಗಳ ವಾರ್ತೆ ನೀಡುತ್ತವೆ. ಸಾಮಾನ್ಯವ್ಯಕ್ತಿಗಳು ಅವುಗಳನ್ನು ಕೇವಲ ಓದುತ್ತಾರೆ ಮತ್ತು ಅದರ ಕಡೆಗೆ ದುರ್ಲಕ್ಷಿಸುತ್ತಾರೆ. `ಸನಾತನ ಪ್ರಭಾತ’ವೂ ಇಂತಹ ಸುದ್ದಿಗಳನ್ನು ಕೊಡುತ್ತದೆ; ಆದರೆ ಅದರಲ್ಲಿ `ಈ ಘಟನೆಗಳು ಪುನಃ ಘಟಿಸದಿರಲು ಏನು ಮಾಡಬೇಕು ?’, ಹಾಗೆಯೇ `ಈ ಕುರಿತು ಸಮಾಜದ ಒಂದು ಅಂಗವೆAದು ವಾಚಕರು ಯಾವ ದೃಷ್ಟಿಕೋನವನ್ನಿಡಬೇಕು ?’ ಇತ್ಯಾದಿಗಳನ್ನು ವಾಚಕರಿಗೆ ಹೇಳುತ್ತದೆ. ಆದ್ದರಿಂದ ವಾಚಕರಿಗೆ `ಇಂತಹ ಘಟನೆಗಳು ಪುನಃ ಘಟಿಸಬಾರದು’, ಇದಕ್ಕಾಗಿ ಯೋಗ್ಯ ದೃಷ್ಟಿಕೋನ ಸಿಗುತ್ತದೆ ಮತ್ತು ಅವರಿಂದ ಆ ರೀತಿ ವಿಚಾರಪ್ರಕ್ರಿಯೆ ಆಗುತ್ತದೆ. ಈ ವಿಚಾರಪ್ರಕ್ರಿಯೆಯು ಮುಂದೆ ಆದರ್ಶ ಹಿಂದೂ ರಾಷ್ಟçಕ್ಕಾಗಿ ಸಹಾಯವಾಗಲಿದೆ.’

– (ಪರಾತ್ಪರ ಗುರು) ಡಾ. ಆಠವಲೆ (೨೦.೧೧.೨೦೨೧)