|
ಫೊಂಡಾ (ಗೋವಾ) – ೨೦೦೪ ರಲ್ಲಿ ನಾನು ಫ್ರಾನ್ಸ್ ನಲ್ಲಿ ವಾಸಿಸುತ್ತಿದೆ. ಆಗ ಒಂದು ಕ್ಷುಲ್ಲಕ ಘಟನೆಯಿಂದ ಉತ್ತರ ಆಫ್ರಿಕಾ ಮುಸಲ್ಮಾನ ಮತ್ತು ಅರಬ ಜನರು ಬರೋಬ್ಬರಿ ೧೦ ಸಾವಿರ ವಾಹನಗಳನ್ನು ಸುಟ್ಟು ಹಾಕಿದರು. ಯುರೋಪಿಯನ್ ಮುಸಲ್ಮಾನರಲ್ಲಿನ ಅಪರಾಧಿ ವೃತ್ತಿ ಇದು ಅವರ ಜನಸಂಖ್ಯೆಯಗಿಂತಲೂ ೧೦ ಪಟ್ಟು ಹೆಚ್ಚಾಗಿದೆ. ಅಲ್ಲಿಯ ಮಾದಕ ಪದಾರ್ಥಗಳ ದಲ್ಲಾಳಿಗಳು ಕೂಡ ಒಂದು ಅರಬಿ ಆಗಿರುತ್ತಾರೆ ಅಥವಾ ಪಾಕಿಸ್ತಾನಿ ! ಯುರೋಪಿನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವುದರಿಂದ ದೊಡ್ಡ ದರೋಡೆ ನಡೆಸುವವರು ಬಹುತೇಕ ಜನರು ಈ ಮತಾಂಧ ಮುಸಲ್ಮಾನರೇ ಆಗಿದ್ದಾರೆ ಎಂದು ಲಂಡನ್ ನಲ್ಲಿನ ಪ್ರಸಿದ್ಧ ಇಸ್ಲಾಮಿ ಅಭ್ಯಾಸಕ ಆರೀಫ್ ಅಜಾಕಿಯಾ ಇವರು ಹೇಳಿದರು. ಫ್ರಾನ್ಸ್ ನಲ್ಲಿ ಫ್ರೆಂಚ್ ಪೊಲೀಸರು ಅರಬ ಮೂಲದ ಒಬ್ಬ ಯುವಕನ ಹತ್ಯೆ ಮಾಡಿರುವುದರಿಂದ ಅಲ್ಲಿ ದೇಶ ವ್ಯಾಪಿ ಹಿಂಸಾಚಾರ ಭುಗಿಲೆದ್ದಿತು. ಅಲ್ಲಿಯ ಸಾವಿರಾರು ಮತಾಂಧ ಮುಸಲ್ಮಾನರು ಗಲಭೆ ನಡೆಸುತ್ತಿದ್ದಾರೆ. ಇದರ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಅಜಾಕಿಯಾ ಇವರನ್ನು ಈ ವಿಷಯದ ಬಗ್ಗೆ ಮಾತನಾಡಲು ಸಂಪರ್ಕಿಸಿದ್ದರು.
ಅಜಾಕಿಯಾ ತಮ್ಮ ಮಾತು ಮುಂದುವರೆಸಿ,
೧. ಯುರೋಪ್ ನಲ್ಲಿ ವಾಸಿಸುವ ಮುಸಲ್ಮಾನರಲ್ಲಿ ಹೆಚ್ಚಿನವರು ಉತ್ತರ ಆಫ್ರಿಕಾದ ಟ್ಯುನಿಶಿಯಾ, ಲಿಬಿಯಾ, ಅಲ್ಜೇರಿಯಾ, ಈಜಿಪ್ತ ಮತ್ತು ಮೊರೊಕ್ಕೋ ಈ ದೇಶದವರಾಗಿದ್ದಾರೆ. ಎಲ್ಲಾ ದೇಶ ಒಂದು ಏಕಾಧಿಕಾರ ಆಧಾರದಲ್ಲಿ ನಡೆಯುತ್ತದೆ ಅಥವಾ ಕಟ್ಟರ ಇಸ್ಲಾಮಿ ದೇಶಗಳಾಗಿವೆ.
೨. ಇತರ ದೇಶಗಳ ತುಲನೆಯಲ್ಲಿ ಯುರೋಪಿನ ಪೊಲೀಸರು ಅಷ್ಟೊಂದು ಕಟ್ಟುನಿಟ್ಟಾಗಿಲ್ಲ. ಆದ್ದರಿಂದ ಫ್ರಾನ್ಸ್ ನಲ್ಲಿ ಹಿಂಸಾಚಾರ ಆರಂಭವಾಗಿದೆ, ಅದು ಖಂಡನಿಯವಾಗಿದೆ. ಇಲ್ಲಿಯ ಮುಸಲ್ಮಾನರು, ‘ಫ್ರಾನ್ಸ್ ನಿಮಗೆ ಬಹಳಷ್ಟು ನೀಡಿದೆ. ನಿಮ್ಮ ದೇಶದಲ್ಲಿ ನಿಮಗೆ ಯಾವ ಸ್ವಾತಂತ್ರ್ಯ ನೀಡಿಲ್ಲ ಆ ಸ್ವಾತಂತ್ರ ಫ್ಯಾನ್ಸ್ ನಿಮಗೆ ನೀಡಿದೆ’ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು.
೩. ಯುರೋಪ್ ನಲ್ಲಿ ಬೇಗನೆ ಅಂತರ್ಯುದ್ಧ ನಡೆಯಲಿದೆ. ಫ್ರಾನ್ಸ್ ಇದನ್ನು ತಪ್ಪಿಸುವುದಕ್ಕಾಗಿ ಕೆಲವು ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಅಕ್ಟೋಬರ್ ೨೦೨೦ ರಲ್ಲಿ ಪ್ಯಾರಿಸ್ ನ ಶಿಕ್ಷಕ ಸಾಮ್ಯುಯೆಲ್ ಪ್ಯಾಟಿ ಇವರ ಶಿರಶ್ಚೇಧದ ನಂತರ ರಾಷ್ಟ್ರಪತಿ ಇಮ್ಯನ್ಯುಯೆಲ್ ಮೈಕ್ರಾನ್ ಇವರು ಕೆಲವು ಕಠಿಣ ಕಾನೂನು ಜಾರಿ ಮಾಡಿದರು.
೪. ಜಗತ್ತಿನಾದ್ಯಂತ ನಡೆಯುವ ಮದರಸಾಗಳೇ ಈ ಹಿಂಸಾಚಾರದ ಮೂಲ ಕಾರಣವಾಗಿದೆ. ಮದರಸಾದಲ್ಲಿ ಪ್ರವೇಶ ಪಡೆದ ನಂತರ ಹುಡುಗರಿಗೆ ಆರಂಭದಲ್ಲಿ, ಅದೃಷ್ಟದಿಂದ ನೀವು ಮುಸಲ್ಮಾನರಾಗಿದ್ದೀರಿ ! ಆದ್ದರಿಂದ ನಿಮಗೆ ಜನ್ನತ (ಸ್ವರ್ಗ) ಸಿಗುತ್ತದೆ. ಮುಸಲ್ಮಾನೆತರರಿಗೆ ಜಹನ್ನುಮ (ನರಕ) ಸಿಗುವುದು !’ ಎಂದು ಹೇಳಿಕೊಡಲಾಗುತ್ತದೆ. ಅಲ್ಲಿಂದಲೇ ಮುಸಲ್ಮಾನ ಹುಡುಗರಲ್ಲಿ ಶ್ರೇಷ್ಠತ್ವದ ಅಥವಾ ಇತರರನ್ನು ಕಡಿಮೆ ಭಾವಿಸುವ ಭಾವನೆ ನಿರ್ಮಾಣ ಮಾಡಲಾಗುತ್ತದೆ. ಧರ್ಮವನ್ನು ಮನೆಯಲ್ಲಿ ಇಡಬೇಕು. ಕೇವಲ ಭಾರತ ಅಥವಾ ಯುರೋಪ ಅಷ್ಟೇ ಅಲ್ಲದೆ ಜಗತ್ತಿನಲ್ಲಿನ ಮದರಸಾದಿಂದ ನೀಡಲಾಗುವ ಶಿಕ್ಷಣವನ್ನು ನಿಷೇಧಿಸಬೇಕು. ಎಲ್ಲಾ ಮದರಸಾಗಳು ಮುಚ್ಚಬೇಕು. ಮುಸಲ್ಮಾನರಿಗೆ ಮುಖ್ಯ ವಾಹಿನಿಯಲ್ಲಿ ಆಧುನಿಕ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಯಾರಿಗೆ ಮೌಲ್ವಿ ಆಗುವುದಿದೇ (ಇಸ್ಲಾಮಿ ಅಭ್ಯಾಸಕ) ಅವರಷ್ಟೇ ಮದರಸಾಗೆ ಕಳುಹಿಸಬೇಕು, ಎಲ್ಲಾ ಮುಸಲ್ಮಾನರಿಗೆ ಅದರ ಅವಶ್ಯಕತೆ ಏನಿದೆ ?
೪. ೨೦೦೪ ರಲ್ಲಿ ಫ್ರಾನ್ಸ್ ನಲ್ಲಿ ಒಂದು ನಿಯಮ ಮಾಡಲಾಯಿತು. ಅದರಲ್ಲಿ ಯಾರಿಗೂ ಕೂಡ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶನಗೊಳಿಸುತ್ತಾ ಶಾಲೆಗಳಿಗೆ ಹೋಗಲಾಗುವುದಿಲ್ಲ. ನಾನು ಒಬ್ಬ ಫ್ರೆಂಚ್ ಸಂಸದನಿಗೆ ಇದರ ಹಿಂದಿನ ಕಾರಣ ಕೇಳಿದಾಗ ಅವರ ಉತ್ತರ ಬಹಳ ಸರಳವಿತ್ತು. ಅವರು, ”ನಮಗೆ ಫ್ರೆಂಚ್ ದೇಶ ನಿರ್ಮಿಸುವುದಿದೆ. ಸಮಾನ ಶೈಕ್ಷಣಿಕ ವ್ಯವಸ್ಥೆಯಿಂದ ಅದರ ನಿರ್ಮಾಣವಾಗುವುದು. ನಮಗೆ ದೇಶದ ವಿಭಜನೆ ಮಾಡುವುದಿಲ್ಲ.
ಯುರೋಪ್ ಮತ್ತು ಅಮೇರಿಕದ ಅಭಿವ್ಯಕ್ತಿ ಸ್ವಾತಂತ್ರ ವಿವಾದಿತ !ಸ್ವೀಡನ್ ನಲ್ಲಿ ಕುರಾನ್ ಸುಟ್ಟಿರುವ ಘಟನೆ ಬಗ್ಗೆ ಅಜಾಕೀಯಾ ಇವರು, ”ಇಂತಹ ಕೃತ್ಯ ನಡೆಸುವುದು ಅಯೋಗ್ಯವಾಗಿದೆ. ಕುರಾನ್ ಸುಟ್ಟು ಯಾವುದೇ ಲಾಭವಾಗುವುದಿಲ್ಲ. ಜಗತ್ತಿನಾದ್ಯಂತ ಒಂದುವರೆ ಅಬ್ಜ ಮುಸಲ್ಮಾನರಿಗೆ ಅನಾವಶ್ಯಕ ಪ್ರಚೋದನೆ ನೀಡುವುದು ಅಥವಾ ನೋಯಿಸುವ ಪ್ರಯತ್ನವಾಗಿದೆ. ಸ್ವೀಡನಿನಲ್ಲಿ ಒಬ್ಬ ಇರಾನಿ ನಿರಾಶ್ರಿತನು ಮಾಡಿರುವ ಕೃತ್ಯವಾಗಿದೆ. ಯುರೋಪಿನಲ್ಲಿ ಜ್ಯೂ ಗಳ ಹೋಲೋಕಾಸ್ಟ್ (ನರಸಂಹಾರ) ಅಥವಾ ಯುನೈಟೆಡ್ ಕಿಂಗಡಮ್ಮಿನ ರಾಜಮನೆತನದ ವಿರುದ್ಧ ಯಾರು ಮಾತನಾಡಲು ಸಾಧ್ಯವಿರಲಿಲ್ಲ. ಇತ್ತೀಚೆಗೆ ನಡೆದಿರುವ ಅಮೇರಿಕಾ ಪ್ರವಾಸದ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ‘ದ ವಾಲ್ ಸ್ಟ್ರೀಟ್ ಜರ್ನಲ್’ ದ ಮುಸಲ್ಮಾನ ಪತ್ರಕರ್ತನು ಭಾರತದಲ್ಲಿನ ಮುಸಲ್ಮಾನರ ಮೇಲೆ ತಥಾಕಥಿತ ಅನ್ಯಾಯದ ಬಗ್ಗೆ ಪ್ರಶ್ನೆ ಕೇಳಿದನು. ನಿಜವೆಂದರೆ ಈ ನಿಯತಕಾಲಿಕ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿತ ಇರುವುದರಿಂದ ಅವರು ಮೋದಿ ಇವರಿಗೆ ಆ ಕ್ಷೇತ್ರಕ್ಕೆ ಸಂಬಂಧಿತ ಪ್ರಶ್ನೆ ಕೇಳುವುದು ಅವಶ್ಯಕವಾಗಿತ್ತು. ಅಮೇರಿಕಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಡಂಗುರ ಸಾರುತ್ತದೆ; ಆದರೆ ಅನೇಕ ಸರಕಾರಗಳ ರಹಸ್ಯ ಬಯಲಿಗೆಳೆಯುವ ‘ವಿಕಿಲಿಕ್ಸ್’ ನ ಮುಖ್ಯಸ್ಥ ಜೂಲಿಯನ್ ಅಂಸಾಜೆ ಇವರನ್ನು ಜೈಲಿಗೆ ಕಳುಹಿಸಿದರು. ಆದ್ದರಿಂದ ಅಮೆರಿಕಾ ಆಗಿರಲಿ ಅಥವಾ ಯುರೋಪ್ ಇವರ ಅಭಿವ್ಯಕ್ತಿ ಸ್ವಾತಂತ್ರ್ಯ ಇದು ವಿವಾದಾತ್ಮಕವಾಗಿದೆ ಎಂದು ಹೇಳಿದರು. |