‘೨೦೨೨ರಲ್ಲಿ ಒಂದು ಜಿಲ್ಲೆಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ಸನಾತನದ ಗ್ರಂಥ ಪ್ರದರ್ಶನವನ್ನು ಆಯೋಜಿಸಲಾಗಿತ್ತು, ಈ ಗ್ರಂಥ ಪ್ರದರ್ಶನಕ್ಕೆ ಜಿಜ್ಞಾಸು ವ್ಯಕ್ತಿ ಒಬ್ಬರು ಭೇಟಿ ನೀಡಿದ್ದರು., ಆ ವ್ಯಕ್ತಿಗೆ ಕೇಳಲು ಮತ್ತು ಮಾತನಾಡಲು ಬರುವುದಿಲ್ಲ ಎಂಬುದನ್ನು ಆ ವಕ್ತಿಯ ಜೊತೆ ಮಾತನಾಡುವಾಗ ಸಾಧಕರ ಗಮನಕ್ಕೆ ಬಂತು. ಆದರೂ ಅವರಿಗೆ ಸನಾತನ ಸಂಸ್ಥೆಯ ಗ್ರಂಥಗಳನ್ನು ನೋಡಲು ಬಹಳ ಆಸಕ್ತಿ ಮತ್ತು ಜಿಜ್ಞಾಸೆಯಿತ್ತು. ಸಂವಾದ ಮಾಡಲು ಸಾಧ್ಯವಾಗದೆ, ಅವರು ತನ್ನ ಮನಸ್ಸಿನ ಸಂದೇಹಗಳನ್ನು ಸಂಚಾರಿದೂರವಾಣಿಯುಲ್ಲಿ ಬರೆದು ಪ್ರದರ್ಶನ ಸ್ಥಳದಲ್ಲಿ ಸೇವೆ ಸಲ್ಲಿಸುವ ಸಾಧಕರಿಗೆ ತೋರಿಸಿದರು. ಸಾಧಕರು ನೋಟ್‌ಬುಕ್‌ಗಳಲ್ಲಿ ಬರೆದು ಅವರ ಸಂದೇಹಗಳನ್ನು ಪರಿಹರಿಸಿದ ನಂತರ ಅವರು ಕೆಲವು ಗ್ರಂಥಗಳನ್ನು ಮತ್ತು ಕರಪತ್ರಗಳನ್ನು ಖರೀದಿಸಿದರು. ‘ಸನಾತನ ಪ್ರಭಾತ ದೈನಿಕದ ಬಗ್ಗೆ ತಿಳಿದ ಬಳಿಕ ಅವರು ದೈನಿಕದ ಚಂದಾದಾರರೂ ಆದರು.
ಆ ಜಿಜ್ಞಾಸು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ತೀವ್ರ ಜಿಜ್ಞಾಸೆ ಮತ್ತು ಜ್ಞಾನ ಪಡೆಯಬೇಕೆಂಬ ತೀವ್ರ ಇಚ್ಛೆಯಿತ್ತು. ಆದ್ದರಿಂದ ಅವರು ತಕ್ಷಣ ಗ್ರಂಥಗಳನ್ನು ಖರೀದಿಸಿದರು. ಕೇಳಲು ಮತ್ತು ಮಾತನಾಡಲು ಬರದಿದ್ದರು ಅವರು ಸಂಚಾರಿದೂರವಾಣಿಯ ಮೂಲಕ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡಿರುವುದು ಪ್ರಶಂಸನೀಯವಾಗಿದೆ. ಅಧ್ಯಾತ್ಮದಲ್ಲಿ ‘ತಳಮಳ ಮತ್ತು ‘ಜಿಜ್ಞಾಸೆಯ ಮನೋಭಾವ ಈ ಗುಣಗಳಿಗೆ ಬಹಳ ಮಹತ್ವವಿದೆ.
ಈ ಉದಾಹರಣೆಯಿಂದ ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಜಿಜ್ಞಾಸುವೇ ಜ್ಞಾನದ ನಿಜವಾದ ಅಧಿಕಾರಿ !, ಎಂಬ ಮಾತು ಎಷ್ಟು ಸತ್ಯವಾಗಿದೆ, ಇದು ಗಮನಕ್ಕೆ ಬರುತ್ತದೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೬.೨.೨೦೨೩)