ಅಶುಭ ಕಾಲದಲ್ಲಿ ಜನಿಸಿದ ಶಿಶುವಿನ ‘ಜನನಶಾಂತಿ’ ಮಾಡುವುದು ಏಕೆ ಆವಶ್ಯಕವಾಗಿದೆ ?

‘ಜನನವೆಂದರೆ ಜನ್ಮವಾಗುವುದು. ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ. ನವಜಾತ ಶಿಶುವು ಅಶುಭ ಕಾಲದಲ್ಲಿ ಜನಿಸಿದ್ದರಿಂದ ಅಥವಾ ವಿಶಿಷ್ಟ ಪರಿಸ್ಥಿತಿಯಲ್ಲಿ ಜನಿಸಿದ್ದರಿಂದ ದೋಷ ತಗಲುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.       

(ಲೇಖನ ಕ್ರ. ೩)

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/81487.html

 

ಶ್ರೀ. ರಾಜ ಕರ್ವೆ
ಶ್ರೀ. ನಿಷಾದ ದೇಶಮುಖ

೧. ಅಶುಭ ಕಾಲದಲ್ಲಿ ಜನಿಸಿದ್ದರಿಂದ ತಗಲುವ ದೋಷಗಳು

ಮುಂದಿನ ಕೋಷ್ಟಕದಲ್ಲಿ ನೀಡಲಾದ ಯೋಗಗಳ ಮೇಲೆ ಶಿಶುವಿನ ಜನ್ಮವಾಗಿದ್ದರೆ ಅಶುಭ ಕಾಲಕ್ಕೆ ಸಂಬಂಧಿಸಿದ ದೋಷಗಳನ್ನು ಕೊಡಲಾಗಿದೆ.

(ಆಧಾರ : ದಾತೆ ಪಂಚಾಂಗ)

ಟಿಪ್ಪಣಿ ೧ – ಕ್ಷಯತಿಥಿ : ‘ಯಾವ ತಿಥಿ ಸೂರ್ಯೋದಯದ ನಂತರ ಆರಂಭವಾಗಿ ಮರುದಿನ ಸೂರ್ಯೋದಯದ ಮೊದಲು ಮುಗಿಯುತ್ತದೆಯೋ, ಅಂದರೆ ಯಾವುದೇ ಸೂರ್ಯೋದಯವನ್ನು ನೋಡಲು ಬರುವುದಿಲ್ಲವೋ, ಇಂತಹ ತಿಥಿಗೆ ‘ಕ್ಷಯತಿಥಿ’, ಎಂದು ಹೇಳುತ್ತಾರೆ.

ಟಿಪ್ಪಣಿ ೨ – ಗ್ರಹಣ ಪರ್ವಕಾಲ : ಸೂರ್ಯ ಅಥವಾ ಚಂದ್ರ ಗ್ರಹಣಗಳ ಕಾಲ

ಟಿಪ್ಪಣಿ ೩ – ಸೂರ್ಯಸಂಕ್ರಮಣದ ಪುಣ್ಯಕಾಲ : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕಾಲ.

ಟಿಪ್ಪಣಿ ೪ – ದಗ್ಧಯೋಗ, ಯಮಘಂಟಯೋಗ ಮತ್ತು ಮೃತ್ಯುಯೋಗ : ತಿಥಿ, ವಾರ ಮತ್ತು ನಕ್ಷತ್ರ ಇವುಗಳ ಸಂಯೋಗದಿಂದ ನಿರ್ಮಾಣವಾಗುವ ಅಶುಭ ಯೋಗ

೧ ಅ. ಅಶುಭ ಕಾಲದಲ್ಲಿ ಜನ್ಮವಾದುದರಿಂದ ಶಿಶುವಿನ ಮೇಲಾಗುವ ಪರಿಣಾಮ : ‘ಪ್ರಾರಬ್ಧಕ್ಕನುಸಾರ ಯಾವ ಜೀವಗಳಿಗೆ ಹೆಚ್ಚು ಕಷ್ಟದ ಪ್ರಸಂಗಗಳನ್ನು ಭೋಗಿಸ ಬೇಕಾಗುತ್ತದೆಯೋ, ಇಂತಹ ಜೀವಗಳ ಜನ್ಮವು ಅಶುಭ ಕಾಲದಲ್ಲಿ ಆಗಿರುತ್ತದೆ. ಇಂತಹ ಜೀವಗಳಿಗೆ ವಿಶಿಷ್ಟ ಗ್ರಹಗಳ ಶಕ್ತಿ ಅಲ್ಪ ಪ್ರಮಾಣದಲ್ಲಿ ಗ್ರಹಣವಾಗುತ್ತದೆ. ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ. ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಅದಕ್ಕೆ ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ. ಮಧ್ಯಮ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ ಅದರ ನಡೆಯುವುದು ಅಥವಾ ಮಾತನಾಡುವುದು ತಡವಾಗಿ ಆರಂಭವಾಗುತ್ತದೆ, ಬುದ್ಧಿಗೆ ಸಂಬಂಧಿಸಿದ ತೊಂದರೆಗಳಾಗು ವುದು ಮುಂತಾದ ತೊಂದರೆಗಳೂ ಆಗುತ್ತವೆ. ತೀವ್ರ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ ಶಿಕ್ಷಣ ಇತ್ಯಾದಿಗಳಲ್ಲಿ ತಡವಾಗಿ ಆಸಕ್ತಿ ನಿರ್ಮಾಣವಾಗುವುದು ಅಥವಾ ಆಗದೇ ಇರುವುದು, ಯುವಾವಸ್ಥೆಯಲ್ಲಿ ವಿವಿಧ ರೀತಿಯ ಚಟಗಳು (ಹವ್ಯಾಸಗಳು) ನಿರ್ಮಾಣವಾಗುವುದು, ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆಯಾಗುವುದು ಮುಂತಾದ ತೊಂದರೆಗಳಾಗುತ್ತವೆ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದ ಜನನ ಶಾಂತಿಯನ್ನು ಮಾಡುವುದರಿಂದ ಜೀವದ ಮಂದ ಮತ್ತು ಮಧ್ಯಮ ಪ್ರಾರಬ್ಧ ಕೆಲವೊಂದು ಪ್ರಮಾಣದಲ್ಲಿ ಕಡಿಮೆ ಯಾಗುತ್ತದೆ ಮತ್ತು ತೀವ್ರ ಪ್ರಾರಬ್ಧವನ್ನು ಭೋಗಿಸಲು ಜೀವಕ್ಕೆ ಈಶ್ವರನಿಂದ ಶಕ್ತಿ ಸಿಗುತ್ತದೆ.

೨. ವಿಶಿಷ್ಟ ಪರಿಸ್ಥಿತಿಯಲ್ಲಿ ಜನ್ಮವಾದುದರಿಂದ ತಗಲುವ ದೋಷಗಳು

ಮುಂದಿನ ಕೋಷ್ಟಕದಲ್ಲಿ ನೀಡಲಾದ ಪರಿಸ್ಥಿತಿಯಲ್ಲಿ ಶಿಶುವಿನ ಜನ್ಮವಾಗಿದ್ದರೆ ಜನನಶಾಂತಿ ಮಾಡಲಾಗುತ್ತದೆ.

(ಆಧಾರ : ಧರ್ಮಸಿಂಧು)

೨ ಅ. ವಿಶಿಷ್ಟ ಪರಿಸ್ಥಿತಿಯಲ್ಲಿ ಶಿಶುವಿನ ಜನ್ಮವಾದಾಗ ಜನನಶಾಂತಿಯನ್ನು ಮಾಡಬೇಕಾಗುವುದರ ಹಿಂದಿನ ಕಾರಣ : ಪ್ರತಿಯೊಂದು ಜೀವದ ಪ್ರಾರಬ್ಧ ಬೇರೆಬೇರೆಯಾಗಿರುತ್ತದೆ. ಕೆಲವು ಜೀವಗಳ ಪ್ರಾರಬ್ಧದ ತೀವ್ರತೆ (ಕಷ್ಟದ ಪ್ರಸಂಗಗಳು) ಇತರರ ತುಲನೆಯಲ್ಲಿ ಹೆಚ್ಚಿರುತ್ತದೆ. ಆ ಜೀವಗಳ ಜನ್ಮ ವಿಶಿಷ್ಟ ಪರಿಸ್ಥಿತಿಯಲ್ಲಾಗುತ್ತದೆ. ಮಕ್ಕಳು ‘ಅವಳಿಜವಳಿ ಅಥವಾ ‘ಏಕನಕ್ಷತ್ರ ಇರುವುದು, ಇದು ಅದರ ಕುಟುಂಬದಲ್ಲಿನ ವ್ಯಕ್ತಿಗಳೊಂದಿಗೆ ಕೊಡು-ಕೊಳ್ಳುವಿಕೆ ಹೆಚ್ಚು ಇರುವುದನ್ನು ತೋರಿಸುತ್ತದೆ. ಮಕ್ಕಳು ‘ತ್ರಿಕಪ್ರಸವ (ಮೂರು ಹುಡುಗರ ನಂತರ ಹುಡಗಿ ಅಥವಾ ಮೂರು ಹುಡಗಿಯರ ನಂತರ ಹುಡುಗ ಜನ್ಮತಾಳುವುದು) ಇರುವುದು ಇದು ಕುಟಂಬದಲ್ಲಿ ಪೂರ್ವಜರ ತೊಂದರೆ ಇರುವುದನ್ನು ತೋರಿಸುತ್ತದೆ. ಶಿಶುವಿಗೆ ಜನ್ಮದಿಂದಲೇ ಹಲ್ಲುಗಳು ಇರುವುದು ಅಥವಾ ಅವಯವಗಳು ಚಮತ್ಕಾರಿಕ ರೀತಿಯಲ್ಲಿ ಇರುವುದು, ಇದು ಅದರ ಪ್ರಾರಬ್ಧಚಕ್ರವು ವೇಗದಿಂದ ನಡೆದಿರುವುದನ್ನು ತೋರಿಸುತ್ತದೆ, ಅಂದರೆ ಜೀವಕ್ಕೆ ಪ್ರಾರಬ್ಧಭೋಗಗಳನ್ನು ಒಂದರ ನಂತರ ಒಂದು ಹೀಗೆ ಕೂಡಲೇ ಕೂಡಲೇ ಭೋಗಿಸಬೇಕಾಗುತ್ತದೆ. ಜನ್ಮದಿಂದಲೇ ಅವಯವಗಳು ಕಡಿಮೆ ಇರುವುದು, ಇದು ಜೀವದ ಜೀವನದಲ್ಲಿ ದುಃಖದ ಪ್ರಸಂಗಗಳು ಹೆಚ್ಚು ಇರುವುದನ್ನು ತೋರಿಸುತ್ತದೆ. ಈ ರೀತಿಯ ತೀವ್ರ ಪ್ರಾರಬ್ಧವನ್ನು ಸಹಿಸಲು ಕಾಲದೇವತೆಯ, ಅಂದರೆ ಗ್ರಹಗಳ ಸಕಾರಾತ್ಮಕ ಶಕ್ತಿ ಪ್ರಾಪ್ತವಾಗಬೇಕು, ಎಂಬುದಕ್ಕಾಗಿ ಹಿಂದೂ ಧರ್ಮದಲ್ಲಿ ಜನನಶಾಂತಿ ಮಾಡುವ ಉಪಾಯವನ್ನು ಹೇಳಿದ್ದಾರೆ.

೩. ಜನನಶಾಂತಿ ವಿಧಿಯನ್ನು ಮಾಡುವುದರಿಂದ ಶಿಶುವಿಗಾಗುವ ಲಾಭ !

ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ

ಜನನಶಾಂತಿ ವಿಧಿಯಿಂದ ಮೇಲಿನ ಕೋಷ್ಟಕದಲ್ಲಿ ನೀಡಲಾದ ಎಲ್ಲ ಲಾಭಗಳೂ ಶಿಶುವಿಗೆ ಪ್ರಾಪ್ತವಾಗುವವು, ಎಂದಿರುವುದಿಲ್ಲ. ಶಿಶುವಿನ ಪ್ರಾರಬ್ಧ ಮತ್ತು ಭಾವ ಇವುಗಳಿಗನುಸಾರ ಅದರ ಮೇಲೆ ಕಡಿಮೆ ಅಥವಾ ಹೆಚ್ಚು ಪರಿಣಾಮವಾಗುತ್ತದೆ. ಗುರುಗಳ ಆಜ್ಞೆಗನುಸಾರ ಅಥವಾ ಉತ್ತಮ ಆಧ್ಯಾತ್ಮಿಕ ಮಟ್ಟವಿರುವ ಪುರೋಹಿತರ ಮಾರ್ಗದರ್ಶನದಲ್ಲಿ ಭಾವಪೂರ್ಣ ಮತ್ತು ಪರಿಪೂರ್ಣ ರೀತಿಯಲ್ಲಿ ಈ ವಿಧಿಯನ್ನು ಮಾಡುವುದು ಆವಶ್ಯಕವಾಗಿದೆ. ವರ್ತಮಾನ ಕಲಿಯುಗದಲ್ಲಿ ಭಾವಪೂರ್ಣ ಮತ್ತು ಪರಿಪೂರ್ಣ ವಿಧಿಯನ್ನು ಮಾಡುವ ಪುರೋಹಿತರು ಸಿಗುವುದು ಬಹಳ ದುರ್ಲಭವಾಗಿದೆ. ಹೀಗಿದ್ದರೂ, ಈ ವಿಧಿಯ ಮಾಧ್ಯಮದಿಂದ ಧರ್ಮಶಾಸ್ತ್ರಾನುಸಾರ ಆಚರಣೆ, ಅಂದರೆ ಸಾಧನೆ ಆಗುವುದರಿಂದ ಜೀವಕ್ಕೆ ಅದರ ಫಲ ನಿಶ್ಚಿತ ಸಿಗುತ್ತದೆ’.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧೦.೨೦೨೨)

೪. ಜನ್ಮವಾದ ನಂತರ ಎಷ್ಟು ದಿನಗಳ ನಂತರ ಜನನಶಾಂತಿಯನ್ನು ಮಾಡಬೇಕು ?

ಶಿಶುವಿನ ಜನ್ಮವಾದ ನಂತರ ಹನ್ನೆರಡನೇ ದಿನ ಜನನಶಾಂತಿಯನ್ನು ಮಾಡಬೇಕು. ಆ ದಿನ ಶಾಂತಿಗಾಗಿ ಬೇರೆ ಮುಹೂರ್ತವನ್ನು ನೋಡುವ ಆವಶ್ಯಕತೆ ಇರುವುದಿಲ್ಲ ಹನ್ನೆರಡನೇ ದಿನ ಜನನಶಾಂತಿಯನ್ನು ಮಾಡುವುದು ಸಾಧ್ಯವಿಲ್ಲದಿದ್ದರೆ ಶಿಶುವಿನ ಜನ್ಮನಕ್ಷತ್ರದಲ್ಲಿ ಚಂದ್ರ ಬಂದಾಗ ಅಥವಾ ಇತರ ಶುಭದಿನದಂದು ಮುಹೂರ್ತವನ್ನು ನೋಡಿ ಶಾಂತಿಕರ್ಮವನ್ನು ಮಾಡಬೇಕು. ಜನನಶಾಂತಿಯನ್ನು ಮಾಡಲು ತಡ ಮಾಡಿದರೆ ಅದರ ಪರಿಣಾಮಕಾರತೆ ಕಡಿಮೆಯಾಗುತ್ತದೆ ಆದುದರಿಂದ ಅದನ್ನು ಸಕಾಲದಲ್ಲಿ ಮಾಡುವುದು ಲಾಭದಾಯಕವಾಗಿದೆ’.

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೧೦.೨೦೨೨)