ಸರ್ವಪ್ರಥಮ ಹಾಗೂ ನಿತ್ಯನೂತನ `ಸನಾತನ ಪ್ರಭಾತ’…!

ಸನಾತನ ಪ್ರಭಾತವು ಇತರ ಪತ್ರಿಕೆಗಳಿಗಿಂತ ಆಧ್ಯಾತ್ಮಿಕ ಸ್ತರದಲ್ಲಿ ವಿಭಿನ್ನವಾಗಿಯಂತೂ ಇದ್ದೇ ಇದೆ; ಆದರೆ ಪತ್ರಿಕಾರಂಗದ ವಿಚಾರ ಮಾಡುವಾಗ ಸನಾತನ ಪ್ರಭಾತವು ಮೊತ್ತಮೊದಲ ಬಾರಿ ಪ್ರಕಟಿಸಿದ ಕೆಲವು ವೈಶಿಷ್ಟ÷್ಯಪೂರ್ಣ ವಿಷಯಗಳಿವೆ, ಅದರಲ್ಲಿನ ಕೆಲವು ವಿಷಯಗಳನ್ನು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ಮತ್ತು ವಾರ್ತಾವಾಹಿನಿಗಳು ಈಗ ಬಿತ್ತರಿಸುತ್ತಿವೆ. ಈ ಬಗ್ಗೆ ಗಾಂಭೀರ್ಯವನ್ನು ಗುರುತಿಸಿದ ಸನಾತನ ಪ್ರಭಾತವು ಆರಂಭದಿAದಲೂ ಪ್ರಕಾಶಿಸಿದ್ದರಿಂದ ಸಮಾಜದಲ್ಲಿ ಈ ವಿಷಯದ ಕುರಿತಾದ ಜಾಗೃತಿಯ ಬೀಜವನ್ನು ಸನಾತನ ಪ್ರಭಾತವು ಮೊದಲಿನಿಂದಲೇ ಬಿತ್ತಿದೆ. ಇದರಿಂದ ಸನಾತನ ಪ್ರಭಾತದ ದೂರದೃಷ್ಟಿ, ಸಮಾಜದ ಮನಸ್ಸಿನಲ್ಲಿ ಅಚ್ಚು ಮೂಡಿಸುವ ಕೌಶಲ್ಯದ ಪರಿಚಯವಾಗುತ್ತದೆ. ಇಲ್ಲಿ ಕೇವಲ ಕೆಲವು ವೈಶಿಷ್ಟ÷್ಯಪೂರ್ಣ ವಿಷಯಗಳನ್ನು ಉಲ್ಲೇಖಿಸಿದ್ದು ಈ ರೀತಿಯ ಅನೇಕ ವಿಷಯವನ್ನು ಸನಾತನ ಪ್ರಭಾತವು ನಿರ್ವಹಿಸಿದೆ. – ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ.