ಹಣದ ದುರಾಸೆಯಿಂದ ದಾರಿತಪ್ಪಿದ ಈಗಿನ ಪತ್ರಿಕೋದ್ಯಮ !

ಸಮಾಜಮನಸ್ಸು ತಯಾರಾಗುವಾಗ ಪತ್ರಿಕೋದ್ಯಮದ ಸ್ಥಾನ ಅತ್ಯಂತ ಮಹತ್ವದ್ದಾಗಿರುತ್ತದೆ. ಸದ್ಯದ ಪತ್ರಿಕೋದ್ಯಮವನ್ನು ನೋಡಿದರೆ, ಈಗ ಸಮಾಜ ತಯಾರಾಗುತ್ತಿದೆಯೋ ಅಥವಾ ಹಾಳಾಗುತ್ತಿದೆ’ ಎಂಬ ಪ್ರಶ್ನೆ ಎದುರಾಗುತ್ತದೆ. ಪತ್ರಕರ್ತರು ಸಮಾಜಹಿತವನ್ನು ಸಾಧಿಸುವ ಪತ್ರಿಕೋದ್ಯಮವನ್ನು ಮಾಡಬೇಕು. ನಾಗರಿಕರೂ ಸಮಾಜಹಿತಕ್ಕೆ ಚಾಲನೆಯನ್ನು ನೀಡುವ ಪತ್ರಿಕೆಗಳನ್ನು ಓದಬೇಕು ಮತ್ತು ನೋಡಬೇಕು, ಇದೇ ಅಪೇಕ್ಷಿತವಿರುತ್ತದೆ. `ಸನಾತನ ಪ್ರಭಾತ’ ರಾಷ್ಟ್ರ ಮತ್ತು ಧರ್ಮಹಿತಕ್ಕೆ ಪ್ರಾಧಾನ್ಯತೆಯನ್ನು ಕೊಡುತ್ತದೆ. ಆದುದರಿಂದ `ಸನಾತನ ಪ್ರಭಾತ’ ಪತ್ರಿಕೆ ಇತರರಿಗಿಂತ ಬೇರೆಯಾಗಿದೆ. ಇದರಿಂದಲೇ `ಸನಾತನ ಪ್ರಭಾತ’ದ ವಾಚಕರಲ್ಲಿ ಪ್ರಖರ ರಾಷ್ಟ್ರಭಿಮಾನ ಮತ್ತು ಧರ್ಮಾಭಿಮಾನ ವೃದ್ಧಿ ಆಗುತ್ತಿದೆ. `ಸನಾತನ ಪ್ರಭಾತ’ದ ವರದಿಗಳ ಸೇವೆಯನ್ನು ಮಾಡುವಾಗ ಪತ್ರಿಕೋದ್ಯಮ ಬಗ್ಗೆ ಬಂದ ಕೆಲವು ಕಹಿ ಅನುಭವಗಳನ್ನು ಇಲ್ಲಿ ನೀಡುತ್ತಿದ್ದೇನೆ. ಸದ್ಯದ ಪತ್ರಿಕೋದ್ಯಮದಿಂದ ಸಮಾಜ ಹೇಗೆ ದಾರಿ ತಪ್ಪುತ್ತಿದೆ ಎಂಬುದು ಇದರಿಂದ ವಾಚಕರ ಗಮನಕ್ಕೆ ಬರಬಹುದು.

ಶ್ರೀ. ಪ್ರೀತಮ್ ನಾಚಣಕರ

ಸಂಕಂಲನಕಾರರು : ಶ್ರೀ. ಪ್ರೀತಮ್ ನಾಚಣಕರ, ವರದಿಗಾರರು, ಸನಾತನ ಪ್ರಭಾತ, ಮುಂಬಯಿ

೧. ನಿರರ್ಥಕ ವಾರ್ತೆಗಳ ಹಿಂದೆ ಧಾವಿಸಿ ಸಮಯವನ್ನು ವ್ಯರ್ಥಗೊಳಿಸುವ ಮಾಧ್ಯಮಗಳ ಪ್ರತಿನಿಧಿಗಳು !

ಪ್ರಸಿದ್ದ ನಟ ಶಾರೂಖ್ ಖಾನ್ ಇವರ ಮಗ ಆರ್ಯನ್ ಖಾನ್ ಇವನನ್ನು ಅಮಲು ಪದಾರ್ಥಗಳ ಪ್ರಕರಣದಲ್ಲಿ ಬಂಧಿಸಿ ಆರ್ಥರ್ ರೋಡ್ ಸೆರೆಮನೆಯಲ್ಲಿಡಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವನನ್ನು ಮನೆಗೆ ಕರೆದೊಯ್ಯಲು ಶಾರೂಖ ಖಾನ್ ಆರ್ಥರ್ ರೋಡ್ ಸೆರೆಮನೆಗೆ ಬರುವವರಿದ್ದರು. ಯಾವುದೋ ಒಂದು ಕೆಲಸದ ನಿಮಿತ್ತ ನಾನು ಆ ದಿನ ಬೆಳಗ್ಗೆ ೮ ಗಂಟೆಗೆ ಆರ್ಥರ್ ರೋಡ್ ಸೆರೆಮನೆಯ ಸಮೀಪ ಹೋಗಿದ್ದೆ. ಅಲ್ಲಿ ಸುದ್ದಿವಾಹಿನಿಗಳ ಪ್ರತಿನಿಧಿಗಳ ತುಂಬಾ ಜನಸಂದಣಿ ಇತ್ತು. ಜನಸಂದಣಿಯಿAದ ಸೆರೆಮನೆಯ ಹೊರಗಿನ ರಸ್ತೆಯಲ್ಲಿ ಸಾರಿಗೆಗೆ ವ್ಯತ್ಯಯ (ಟ್ರಾಫಿಕ್ ಜ್ಯಾಮ್)ವಾಗಿತ್ತು. ಜನಸಂದಣಿಯನ್ನು ಕಡಿಮೆಗೊಳಿಸಲು ಪೊಲೀಸರನ್ನು ಕರೆಸಲಾಗಿತ್ತು. ಅಲ್ಲಿನ ಕೆಲವು ಸುದ್ದಿವಾಹಿನಿಗಳ ಪ್ರತಿನಿಧಿಗಳನ್ನು ಕೇಳಿದಾಗ ಅವರು ಬೆಳಗ್ಗೆ ೫.೩೦ ರಿಂದ ರಸ್ತೆಯ ಮೇಲೆ ಕ್ಯಾಮೆರಾಗಳನ್ನು ಇಟ್ಟುಕೊಂಡು ನಿಂತಿರುವುದಾಗಿ ತಿಳಿಯಿತು. ವಾಸ್ತವದಲ್ಲಿ ಎಲ್ಲ ಕಾಗದಪತ್ರಗಳ ಕಾರ್ಯವನ್ನು ಪೂರ್ಣಗೊಳಿಸಿ ಬೆಳಗ್ಗೆ ೧೧ ರಿಂದ ೧೧.೩೦ ರ ಸುಮಾರಿಗೆ ಆರ್ಯನ್ ಖಾನ್‌ನ ಬಿಡುಗಡೆ ಆಯಿತು; ಆದರೆ ಅಲ್ಲಿಯವರೆಗೆ ಪತ್ರಿಕೆಗಳ ಪ್ರತಿನಿಧಿಗಳು ಸೆರೆಮನೆಯ ಹೊರಗೆ ಕಾಯುತ್ತಿದ್ದರು. ಪತ್ರಿಕೋದ್ಯದಲ್ಲಿ ಯಾವ ಘಟನೆಗೆ ಎಷ್ಟು ಸಮಯ ನೀಡಬೇಕು ಎಂಬುದನ್ನು ಮಾಧ್ಯಮಗಳು ನಿಶ್ಚಯಿಸುವುದು ಅಪೇಕ್ಷಿತವಿದೆ; ಆದರೆ ಸಮಾಜ ಕಲ್ಯಾಣಕ್ಕೆ ನಿರುಪಯುಕ್ತವಾದ ಸುದ್ದಿಗಳನ್ನು ವರದಿ ಮಾಡಲು ಪರ್ತಕರ್ತರು ಗಂಟೆಗಟ್ಟಲೇ ಸಮಯವನ್ನು ವ್ಯರ್ಥಗೊಳಿಸುತ್ತಾರೆ.

೨. ನೇರ ಪ್ರಕ್ಷೇಪಣೆಯ ಹೆಸರಿನಲ್ಲಿ ನಿರರ್ಥಕ ಸುದ್ದಿಗಳನ್ನು ತೋರಿಸುವ ವಾರ್ತಾವಾಹಿನಿಗಳು !

ನಟ ಸುಶಾಂತ ಸಿಂಹ ರಾಜಪೂತ ಇವರ ಮೃತ್ಯುವಿನ ನಂತರ ಕೆಲವು ದಿನ ಕೇಂದ್ರೀಯ ತನಿಖಾ ದಳದಿಂದ ಅವರ ಸ್ನೇಹಿತೆ ರಿಯಾ ಚಕ್ರವರ್ತಿಯವರ ವಿಚಾರಣೆ ನಡೆದಿತ್ತು. ಆ ಕಾಲಾವಧಿಯಲ್ಲಿ ಅನೇಕ ವಾರ್ತಾವಾಹಿನಿಗಳ ಪ್ರತಿನಿಧಿಗಳು ಮತ್ತು ಛಾಯಾಚಿತ್ರಗಾರರು ಅವರ ನಿವಾಸದ ಹೊರಗೆ ದಿನವಿಡಿ ಕಾಯು ತ್ತಿದ್ದರು. ರಿಯಾ ಚಕ್ರವರ್ತಿ ಇವರು ತನಿಖಾ ದಳದ ಕಚೇರಿಗೆ ಹೋಗಲು ಮನೆಯಿಂದ ಹೊರಬಂದ ತಕ್ಷಣ ಮಾಧ್ಯಮಗಳ ಪ್ರತಿನಿಧಿಗಳು ಅವರ ವಾಹನವನ್ನು ಅಪಾಯಕಾರಿ ರೀತಿಯಲ್ಲಿ ಬೆಂಬತ್ತಿ ವಾಹನದ ವಿಡಿಯೋವನ್ನು `ಎಕ್ಸಕ್ಲುಸಿವ್ ರಿಪೋರ್ಟ್’ (ವಿಶೇಷ ವಾರ್ತೆ) ಎಂದು ಪ್ರಸಾರ ಮಾಡುತ್ತಿದ್ದರು. `ಸಮಾಜಕ್ಕೆ ಎಳ್ಳಷ್ಟೂ ಉಪಯೋಗವಿಲ್ಲದ ಈ ಘಟನೆಗೆ ಬಹಳಷ್ಟು ಪ್ರಸಿದ್ಧಿ ನೀಡುವ ಈ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ೪ ನೇ ಆಧಾರಸ್ತಂಭವೆನ್ನಬಹುದೇ ? ಎಂಬ ಪ್ರಶ್ನೆ ಮೂಡುತ್ತದೆ.

೩. ನಿರರ್ಥಕ ವಾರ್ತೆಗಳನ್ನು ಪ್ರಸಾರ ಮಾಡಿ ಸಮಾಜದ ದಾರಿ ತಪ್ಪಿಸುವ ಮಾಧ್ಯಮಗಳು !

ಕೆಲವು ತಿಂಗಳÀ ಹಿಂದೆ ರಾಜಸ್ಥಾನದಲ್ಲಿ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕಿ ಕೌಶಲ್ ಇವರ ವಿವಾಹ ನಡೆಯಿತು. ಅಲ್ಲಿ ಪ್ರಸಾರಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧವಿತ್ತು. ಓರ್ವ ವಾರ್ತಾವಾಹಿನಿಯ ಪ್ರತಿನಿಧಿಗೆ ವಿವಾಹ ಸಮಾರಂಭದ ಸ್ಥಳದ ಒಂದು ಕಿಟಕಿಯಿಂದ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಇವರಿಬ್ಬರೂ ವಿವಾಹದ ಉಡುಪುಗಳನ್ನು ಧರಿಸಿ ಹೋಗುವಾಗಿನ `ವಿಡಿಯೋ’ ಸಿಕ್ಕಿತು. ೧-೨ ಸೆಕೆಂಡುಗಳ ಆ ವಿಡಿಯೋದಲ್ಲಿ ಅವರಿಬ್ಬರ ಮುಖಗಳೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆ ವಾರ್ತಾವಾಹಿನಿಯು ಸಂಪೂರ್ಣ ದಿನ ಇದನ್ನು `ಎಕ್ಸಕ್ಲುಸಿವ್ ವಿಡಿಯೋ’ ಎಂದು ಪ್ರಸಾರ ಮಾಡಿತು. ಈ ರೀತಿ ನಿರರ್ಥಕ ವಿಷಯಗಳಿಗೆ ಪ್ರಸಿದ್ಧಿ ನೀಡಿ ಅನೇಕ ಮಾಧ್ಯಮಗಳು ತಮ್ಮೊಂದಿಗೆ ಸಮಾಜದ ಸಮಯವನ್ನೂ ವ್ಯರ್ಥಗೊಳಿಸುತ್ತವೆ.

೪. `ಪಾರ್ಟಿ’ಗಳಲ್ಲಿ ಶರಾಬು ಸೇವಿಸಿ ಪತ್ರಿಕೋದ್ಯಮಕ್ಕೆ ಕಳಂಕ ಹಚ್ಚುವ ಪತ್ರಕರ್ತರು !

ಸದ್ಯ ಸೆರೆಮನೆಯಲ್ಲಿರುವ ಓರ್ವ ಮಂತ್ರಿಗಳು ಪತ್ರಕರ್ತರಿಗೆ ಉಪಹಾರಗೃಹದಲ್ಲಿ (ಹೊಟೇಲ್‌ನಲ್ಲಿ) ಒಂದು ಪಾರ್ಟಿಯನ್ನು ಇಟ್ಟುಕೊಂಡಿದ್ದರು. ಅಲ್ಲಿ ಶರಾಬನ್ನೂ ಕೊಡಲಾಗುತ್ತಿತ್ತು. ಅನೇಕ ಪತ್ರಕರ್ತರು ಮಂತ್ರಿಗಳೊAದಿಗೆ ಹರಟೆ ಹೊಡೆಯುತ್ತಾ ಶರಾಬು ಕುಡಿಯುತ್ತಿದ್ದರು. ಈ ಪತ್ರಕರ್ತರು ಆ ನೇತಾರರ ಪತ್ರಿಕಾಗೋಷ್ಠಿಗೆ ಬಹಳ ಪ್ರಸಿದ್ಧಿ ನೀಡುತ್ತಿರುವುದು ಗಮನಕ್ಕೆ ಬಂದಿತು. ಕೆಲವು ರಾಜಕೀಯ ನೇತಾರರು ಪತ್ರಕರ್ತರೊಂದಿಗೆ ಒಳ್ಳೆಯ ಸಂಬAಧವನ್ನಿಟ್ಟುಕೊಳ್ಳಲು ನಡುನಡುವೆ ಅವರಿಗೆ ಭೋಜನಕ್ಕೆ ಆಮಂತ್ರಿಸುತ್ತಾರೆ. ಈ ಸಮಯದಲ್ಲಿ ಆಗುವ ಅನೌಪಚಾರಿಕ ಹರಟೆಗಳಲ್ಲಿ ರಾಜಕೀಯ ಘಟನಾವಳಿಗಳ ಕೊಡಕೊಳ್ಳುವಿಕೆ ಯಾಗುತ್ತದೆ. ಜನಪ್ರತಿನಿಧಿಗಳು ಮತ್ತು ಪತ್ರಕರ್ತರು ನೈತಿಕತೆಯ ಅರಿವನ್ನಿಟ್ಟುಕೊಳ್ಳಬೇಕು; ಆದರೆ ದುರ್ದೈವದಿಂದ ಹಾಗಾಗುವುದಿಲ್ಲ.

೫. ಮೋಜುಮಜಾ (ಎಂಜಾಯ) ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪತ್ರಕರ್ತರು !

೨೦೨೧ ರಲ್ಲಿ ೯೫ ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವು ನಾಶಿಕದ ಭುಜಬಳ ಸಿಟಿಯಲ್ಲಿ ನೆರವೇರಿತು. ಸಮ್ಮೇಳನದ ಸುದ್ದಿಗಳ ಸಂಕಲನಕ್ಕಾಗಿ ಮುಂಬಯಿಯಿAದ ಬಂದಿರುವ ಪತ್ರಕರ್ತ
ರಿಗೆ ಅಲ್ಲಿನ ಪಂಚತಾರಾAಕಿತ ಉಪಾಹಾರಗೃಹದಲ್ಲಿ (ಫೈವ್ ಸ್ಟಾರ್ ಹೊಟೇಲ್‌ನಲ್ಲಿ) ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವು ಪತ್ರಕರ್ತರು ಕೇವಲ ತಿನ್ನುವುದು, ತಿರುಗಾಡುವುದು ಇಂತಹ ಮೋಜುಮಜಾ (ಎಂಜಾಯ) ಮಾಡಲು ಬಂದಿದ್ದರು. ಕೆಲವು ಪರ್ತಕರ್ತರು ದಿನವಿಡಿ ಸುತ್ತಾಡಿ ಮಧ್ಯದಲ್ಲಿ ನಮ್ಮ ಬಳಿಗೆ ಬಂದು ವಾರ್ತೆಗಳನ್ನು ಕೇಳುತ್ತಿದ್ದರು.

ಕೊರೊನಾದ ಸಂಕಟದ ಮೊದಲು ಮುಂಬಯಿಯ ಮರಾಠಿ ಪತ್ರಕರ್ತರ ಸಂಘದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿ ಯಿಂದ ಒಂದು ಪತ್ರಿಕಾಗೋಷ್ಠಿಯನ್ನು ತೆಗೆದುಕೊಳ್ಳಲಾಯಿತು. ಪತ್ರಿಕಾಗೋಷ್ಠಿಗೆ ಬಂದ `ಯು ಟ್ಯೂಬ್’ವಾಹಿನಿಯ ಇಬ್ಬರು ಪತ್ರಕರ್ತ ಯುವತಿಯರು ವಕ್ತಾರರ ಸಂದರ್ಶನವನ್ನು(ಬೈಟ್) ತೆಗೆದುಕೊಂಡರು. ಓರ್ವ ಯುವತಿಯು ನನಗೆ ಮರುದಿನ ದೂರ ವಾಣಿ ಕರೆ ಮಾಡಿ ತಾನು ತಯಾರಿಸಿದ ವಾರ್ತೆಯನ್ನು ನನಗೆ ಕಳುಹಿಸಿದಳು. ಕೆಲವು ದಿನಗಳ ನಂತರ ದಾದರ(ಮುಂಬಯಿ)ನಲ್ಲಿ ಸಮಿತಿಯ ರಾಷ್ಟಿçÃಯ ಹಿಂದೂ ಆಂದೋಲನವಿರುವಾಗ ಇಬ್ಬರೂ ಯುವತಿಯರು ಅಲ್ಲಿ ಬಂದಿದ್ದರು. ಆಂದೋಲನದ ವಾರ್ತೆಯನ್ನು ಪ್ರಕಟಿಸಲು ಅವರು ಹಣವನ್ನು ಕೇಳಿದರು. ಕೊರೊನಾದ ಸಮಯದಲ್ಲಿ ಸಣ್ಣ ವಾರ್ತಾಪತ್ರಿಕೆಗಳು ಮುಚ್ಚಿದವು. ಆದುದರಿಂದ ಅನೇಕ ಪರ್ತಕರ್ತರು ತಮ್ಮ ಸ್ವಂತದ `ಯು ಟ್ಯೂಬ್’ ವಾಹಿನಿಯನ್ನು ಪ್ರಾರಂಭಿಸಿದರು. ಮುಂಬಯಿಯಲ್ಲಿ ಆಝಾದ ಮೈದಾನ, ಮುಂಬಯಿ ಮರಾಠಿ ಪತ್ರಕರ್ತರÀ ಸಂಘ, ಪ್ರೆಸ್ ಕ್ಲಬ್ ಮುಂತಾದ ಸ್ಥಳಗಳಲ್ಲಿ ಪತ್ರಿಕಾಗೋಷ್ಠಿ, ಆಂದೋಲನಗಳು, ಚಿಕ್ಕ-ದೊಡ್ಡ ಕಾರ್ಯಕ್ರಮ ಮುಂತಾದವುಗಳ ಸುದ್ದಿಗಳನ್ನು ತಯಾರಿಸಿ ಸಂಬAಧಿತರಿಗೆ ಕಳುಹಿಸುತ್ತಾರೆ. ಕೆಲವು ಪತ್ರಕರ್ತರು ಸಂಬAಧಿತ ರಿಂದ ಹಣವನ್ನು ಪಡೆದು ಅವರ ವಾರ್ತೆಗಳನ್ನು ಪ್ರಕಟಿಸುತ್ತಾರೆ. ಇಂತಹ ಬೋಗಸ್ ಪತ್ರಕರ್ತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ.

ಪ್ರಗತಿಪರರ ದಾಸರಾಗಿರುವ ಪತ್ರಿಕೋದ್ಯಮ !

ಪುಣೆಯಲ್ಲಿನ ಎಲ್ಗಾರ ಪರಿಷದ್‌ನ ಪ್ರಕರಣದಲ್ಲಿ ಬೆಳಕಿಗೆ ಬಂದ ನಗರ ನಕ್ಸಲವಾದಕ್ಕೆ ಸಹಾಯ ಮಾಡುವ ಕೆಲವು ಪ್ರಗತಿಪರರನ್ನು ಬಂಧಿಸಲಾಯಿತು. ಗಂಭೀರ ಅಪರಾಧಗಳಲ್ಲಿ ಬಂಧಿಸಲಾದ ಇವರನ್ನು ಅನೇಕ ದೊಡ್ಡ ವರ್ತಮಾನ ಪತ್ರಿಕೆಗಳು `ವಿಚಾರವಂತ’ರು ಎಂದು ಉಲ್ಲೇಖಿಸುತ್ತವೆ. ಇನ್ನೊಂದು ಬದಿಗೆ ಮಾಲೆಗಾವ್ ಸ್ಫೋಟ್, ದಾಭೋಲಕರ, ಕಾ. ಪಾನಸರೆ ಇವರ ಹತ್ಯೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿದ ಹಿಂದುತ್ವನಿಷ್ಠರನ್ನು ಏಕವಚನ ದಿಂದ ಉಲ್ಲೇಖಿಸಿ ನ್ಯಾಯಾಲಯದ ತೀರ್ಪು ಬರುವ ಮೊದಲೇ ಅವರೇ ಅಪರಾಧಿಗಳೆಂಬAತೆ `ಮಿಡಿಯಾ ಟ್ರಾಯಲ್’ ನಡೆಸುತ್ತವೆ. ಇನ್ನೊಂದೆಡೆ ಸೈನ್ಯದಲ್ಲಿರುವ ಪ್ರಸಾದ ಪುರೋಹಿತ ಅಥವಾ ಸಾಧ್ವಿ ಪ್ರಜ್ಞಾ ಸಿಂಹ ಇವರನ್ನು ಏಕವಚನದಿಂದ ಉಲ್ಲೇಖಿಸ ಲಾಗುತ್ತದೆ. ಈ ವಿರೋಧಾಭಾಸದಿಂದ ಪತ್ರಿಕೋದ್ಯಮದಲ್ಲಿನ ಹಿಂದೂದ್ವೇಷ ನೋಡಲು ಸಿಗುತ್ತದೆ. ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಎಡಪಂಥೀಯ ಮತ್ತು ಪ್ರಗತಿಪರರ ವಿಚಾರಗಳ ಪ್ರಭಾವ ಇಂತಹ ಅನೇಕ ಉದಾಹರಣೆಗಳಲ್ಲಿ ಕಾಣಿಸುತ್ತದೆ.

ಪತ್ರಿಕೋದ್ಯಮಕ್ಕೆ ಸಾಧನೆಯ ಸಾಂಗತ್ಯ ಆವಶ್ಯಕ !

ಪ್ರಸ್ತುತ ಪತ್ರಿಕೋದ್ಯಮಕ್ಕೆ ವ್ಯಾಪಾರೀ ಸ್ವರೂಪ ಬಂದಿದ್ದರೂ, ಅದು ರಾಜಕಾರಣಿಗಳ ಆಧೀನದಲ್ಲಿಲ್ಲ. ನಮಗೆ ಅಧ್ಯಯನದ ವೃತ್ತಿ ಯಿಂದ ಪತ್ರಿಕೋದ್ಯಮವನ್ನು ಮಾಡುವ ಕೆಲವು ಪತ್ರಕರ್ತರೂ ನೋಡಲು ಸಿಗುತ್ತಾರೆ. ಕೆಲವು ಪತ್ರಕರ್ತರು ರಾಜಕಾರಣಿಗಳು ನೀಡುವ ಪಾಕೀಟಗಳನ್ನು (ಹಣವನ್ನು) ಮತ್ತು ಉಡುಗೊರೆಗಳನ್ನು ಸ್ವೀಕರಿಸದೇ ಪ್ರಾಮಾಣಿಕವಾಗಿ ಪತ್ರಿಕೋದ್ಯಮವನ್ನು ಮಾಡುತ್ತಾರೆ. ಇಂತಹÀವರಿAದ ಅನೇಕ ವಿಷಯಗಳು ಕಲಿಯಲು ಸಿಗುತ್ತವೆ. ಅವರ ಅನುಭವಗಳು ಮಾರ್ಗದರ್ಶಕವಾಗಿರುತ್ತವೆ. ಇಂತಹ ಪತ್ರಕರ್ತರು ಪ್ರಾಮಾಣಿಕವಾಗಿ ಪತ್ರಿಕೋದ್ಯಮವನ್ನು ಮಾಡುತ್ತಾರೆ; ಆದರೆ ಸಾಧನೆಯ ಜೊತೆ ಇಲ್ಲದಿರುವುದರಿಂದ ಅವರಲ್ಲಿ ಕರ್ತೃತ್ವದ ಭಾವನೆ ನಿರ್ಮಾಣವಾಗುತ್ತದೆ. – ಶ್ರೀ. ಪ್ರೀತಮ್ ನಾಚಣಕರ, ಮುಂಬಯಿ