`ಸನಾತನ ಪ್ರಭಾತ’ದಂತೆ ಹಿಂದೂ ರಾಷ್ಟ್ರದ ಪ್ರಚಾರಕರಾಗಲು ನಿಶ್ಚಯಿಸಿ ! – (ಪರಾತ್ಪರ ಗುರು) ಡಾ. ಆಠವಲೆ

ವರ್ಧಂತ್ಯುತ್ಸವದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನ ಪ್ರಭಾತ’ವು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮರ್ಪಿತವಾದ ಭಾರತದ ಏಕೈಕ ನಿಯತಕಾಲಿಕೆಯಾಗಿದೆ. `ಸನಾತನ ಪ್ರಭಾತ’ದಲ್ಲಿ ರಾಷ್ಟ್ರ ಮತ್ತು ಧರ್ಮವು ಎದುರಿಸುತ್ತಿರುವ ಆಪತ್ತುಗಳ ಕುರಿತು ಜಾಗೃತಿ ಮಾಡುವ ವಾರ್ತೆಗಳನ್ನು ಮತ್ತು ಲೇಖನಗಳನ್ನು ಪ್ರಕಾಶಿಸಲಾಗುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆಯನ್ನು ಹೇಳುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದ ಮಾನಸಿಕತೆಯನ್ನು ಸಿದ್ಧ ಮಾಡುವುದು ಅದರ ಹಿಂದಿನ ಉದ್ದೇಶವಾಗಿದೆ. ಇಂದು `ಸನಾತನ ಪ್ರಭಾತ’ವನ್ನು ಓದುವ ಸಾವಿರಕ್ಕೂ ಹೆಚ್ಚು ವಾಚಕರು ಹಿಂದೂ ರಾಷ್ಟ್ರದ ಸಮರ್ಥಕರಾಗಿದ್ದಾರೆ. ಇದು ‘ಸನಾತನ ಪ್ರಭಾತ’ವು ಪತ್ರಿಕೋದ್ಯಮದ ಮಾಧ್ಯಮದಿಂದ ಇತಿಹಾಸದಲ್ಲಿ ಮಾಡಿದ

ದಿವ್ಯ ಕಾರ್ಯವಾಗಿದೆ. ಸದ್ಯದ ಸಂಕ್ರಮಣದ ಕಾಲವನ್ನು ನೋಡಿದಾಗ ಕೇವಲ ಹಿಂದೂ ರಾಷ್ಟçದ ಸಮರ್ಥಕರಾಗಿದ್ದರೆ ಸಾಕಾಗದೇ ಭಾರತವನ್ನು ಸಂವಿಧಾನದತ್ತ ದೃಷ್ಟಿಯಿಂದ ಹಿಂದೂ ರಾಷ್ಟ್ರವನ್ನಾಗಿಸಲು ತಮ್ಮ ಕ್ಷಮತೆಗನುಸಾರ ಪ್ರತಿಯೊಬ್ಬರ ಯೋಗದಾನವು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಯೋಗದಾನ ನೀಡುವ ಒಂದು ದಿಶೆ ಎಂದರೆ `ಸನಾತನ ಪ್ರಭಾತ’ದಲ್ಲಿನ ವಾರ್ತೆ ಮತ್ತು ಲೇಖನಗಳ ಆಧಾರದಲ್ಲಿ ಹಿಂದೂ ರಾಷ್ಟ್ರದ ಪ್ರಚಾರ ಮಾಡುವುದು. ಸ್ವಲ್ಪದರಲ್ಲಿ `ಸನಾತನ ಪ್ರಭಾತ’ದಂತೆ ಹಿಂದೂ ರಾಷ್ಟ್ರದ ಪ್ರಚಾರಕರಾಗಲು ನಿಶ್ಚಯಿಸಿ !
– (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕ, ಸಪಾದಕರು, `ಸನಾತನ’ ಪ್ರಭಾತ ನಿಯತಕಾಲಿಕೆ ಸಮೂಹ