ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಸಾಧನೆಯ ವಿಷಯದಲ್ಲಿ ನೀಡಿದ ಅಮೂಲ್ಯ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧೧ ರಿಂದ ೧೩.೧೦.೨೦೨೨ ರ ಕಾಲಾವಧಿಯಲ್ಲಿ, ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ಒಂದು ಶಿಬಿರದ ಸಮಾರೋಪದ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೋಕ್ಷಗುರುಗಳಾಗಿರುವುದರಿಂದ ಸಾಧಕರಿಗಾಗಿ ಇದು ಸುವರ್ಣಕಾಲವಾಗಿದೆ !

“ನಮ್ಮ ಹಿಂದಿನ ಜನ್ಮಗಳ ಪುಣ್ಯದಿಂದಾಗಿ ನಮಗೆ ಮನುಷ್ಯ ಜನ್ಮ ಸಿಕ್ಕಿದೆ ಮತ್ತು ನಮಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಗುರುಗಳೆಂದು ಲಭಿಸಿದ್ದಾರೆ. ಸಾಧಕರಿಗಾಗಿ ಇದು ಸಮೃದ್ಧಿಯ ಕಾಲವಾಗಿದೆ. ಈ ಕಲಿಯುಗದಲ್ಲಿ ನಮ್ಮ ಯೋಗ್ಯತೆ ಇಲ್ಲದಿರುವಾಗಲೂ ನಮಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಮೋಕ್ಷಗುರುಗಳಾಗಿ ಲಭಿಸಿದ್ದಾರೆ.

೨. ಸಾಧನೆ ಎಂದರೆ ನಮ್ಮಲ್ಲಿ ಪರಿವರ್ತನೆ ಮಾಡಿಕೊಳ್ಳುವುದು. ಸಾಧಕರು ತಮ್ಮಲ್ಲಿ ಗುಣವೃದ್ಧಿ ಮಾಡಿಕೊಂಡು ಸ್ವಭಾವದೋಷಗಳ ನಿರ್ಮೂಲನೆ ಮಾಡಬೇಕು

೩. ಸಾಧನೆ ಮಾಡುವುದರ ಮಹತ್ವ

ನಮ್ಮಲ್ಲಿ ಚೈತನ್ಯದ ವೃದ್ಧಿಯಾಗಲು ಸಾಧನೆ ಮಾಡಿ ನಮ್ಮ ಆಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ತುಂಬಾ ಮಹತ್ವದ್ದಾಗಿದೆ.

೪. ಸಹಸಾಧಕರ ಬಗ್ಗೆ ಇಡಬೇಕಾದ ಭಾವ

‘ಜವಾಬ್ದಾರ ಸಾಧಕರ ಅಥವಾ ಸಹಸಾಧಕರ ಮಾಧ್ಯಮದಿಂದ ಗುರುಗಳು ಅಥವಾ ದೇವತೆಗಳೇ ಹೇಳುತ್ತಿದ್ದಾರೆ’, ಎಂದು ವಿಚಾರ ಮಾಡಿ ಸಾಧಕರು ಅವರು ಹೇಳಿದಂತೆ ಕೃತಿ ಮಾಡುವುದು ಅಪೇಕ್ಷಿತವಿದೆ.

ಶ್ರೀ. ಪ್ರಶಾಂತ ಹರಿಹರ

೫. ಸೇವಾಭಾವ

ಅ. ಸಾಧಕರು ಪ್ರತಿಯೊಂದು ಸೇವೆಯನ್ನು ಸಮರ್ಪಿತರಾಗಿ ಮತ್ತು ಶ್ರಮಪಟ್ಟು ಮಾಡಬೇಕು; ಏಕೆಂದರೆ ಸೇವೆಯಿಂದಲೇ ಸಾಧಕರು ರೂಪುಗೊಳ್ಳುತ್ತಾರೆ.

ಆ. ಈ ಕಲಿಯುಗದಲ್ಲಿ ಸಾಧಕರು ಹಗಲಿರುಳು ಪ್ರಯತ್ನಿಸಬೇಕು. ಸಾಧಕರು ಗುರುಪೂರ್ಣಿಮೆಯ ನಿಮಿತ್ತ ಸೇವೆಯನ್ನು ದೇಹಬುದ್ಧಿಯನ್ನು ಮರೆತು ಮಾಡುವಂತೆಯೇ ಪ್ರತಿ ದಿನವೂ ಸಮರ್ಪಣಾಭಾವದಿಂದ ಸೇವೆಯನ್ನು ಮಾಡಬೇಕು.

೬. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡುವುದರ ಮಹತ್ವ

ಅ. ಯಾರಾದರೂ ಸಾಧಕರು ನಮ್ಮ ತಪ್ಪುಗಳನ್ನು ಹೇಳಿದರೆ ‘ಗುರುಗಳೇ ಅವರ ಮಾಧ್ಯಮದಿಂದ ನಮ್ಮ ಸಾಧನೆಗೆ ಸಹಾಯವಾಗಲೆಂದು ತಪ್ಪುಗಳನ್ನು ಹೇಳುತ್ತಿದ್ದಾರೆ’, ಎಂಬ ದೃಷ್ಟಿಕೋನವನ್ನಿಟ್ಟು ಪ್ರಯತ್ನಿಸಬೇಕು.

ಆ. ಕೆಲವೊಮ್ಮೆ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತವೆ. ಆಗ ‘ಈ ವಿಚಾರಗಳ ಮೂಲದಲ್ಲಿ ಏನು ಕಾರಣವಿದೆ ?’, ಎಂಬುದನ್ನು ಸಂಬಂಧಪಟ್ಟ ಸಾಧಕರು ಹುಡುಕಿ ಅದಕ್ಕಾಗಿ ಪ್ರಯತ್ನಿಸಬೇಕು. ಸಾಧಕರ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳು ಆಧ್ಯಾತ್ಮಿಕ ತೊಂದರೆಯಿಂದ ಬರುತ್ತಿದ್ದರೆ, ಸಾಧಕರು ನಾಮಜಪಾದಿ ಉಪಾಯಗಳನ್ನು ಮಾಡಿ ಅವುಗಳಿಗೆ ಪರಿಹಾರೋಪಾಯವನ್ನು ಮಾಡಬೇಕು. ತಮ್ಮಲ್ಲಿನ ಸ್ವಭಾವದೋಷಗಳಿಂದ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ ಅವುಗಳನ್ನು ಕಡಿಮೆ ಮಾಡಲು ಸಾಧಕರು ಅವುಗಳಿಗೆ ಸ್ವಯಂಸೂಚನೆಗಳನ್ನು ಕೊಡಬೇಕು.

ಇ. ಸಾಧಕರಿಗೆ ತಮ್ಮ ಮನಸ್ಸಿನಲ್ಲಿನ ಅಹಂನ ವಿಚಾರಗಳು ಗಮನಕ್ಕೆ

ಬರುತ್ತಿದ್ದರೆ, ಅದು ಪ್ರಗತಿಯ ಲಕ್ಷಣವಾಗಿದೆ; ಆದರೆ ಈ ಅಹಂನ ವಿಚಾರಗಳನ್ನು ಕಡಿಮೆ ಮಾಡಲು ಅವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುವುದು ಆವಶ್ಯಕವಾಗಿದೆ. ನಮ್ಮಲ್ಲಿನ ರಜ-ತಮದ ಹೆಚ್ಚಳದಿಂದ ನಮ್ಮ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುತ್ತವೆ. ನಮ್ಮ ಮನಸ್ಸು ಶಾಂತವಾದ ನಂತರ ಕ್ರಮೇಣ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಮತ್ತು ದೇವರ ಬಗೆಗಿನ ವಿಚಾರಗಳು ಬರುತ್ತವೆ. ನಂತರ ನಮ್ಮ ಮನಸ್ಸಿನಲ್ಲಿನ ಆ ವಿಚಾರಗಳೂ ಕಡಿಮೆಯಾಗಿ ನಮ್ಮ ಮನಸ್ಸು ನಿರ್ವಿಚಾರ ವಾಗುತ್ತದೆ. ನಾವು ಈ ನಿರ್ವಿಚಾರ ಅವಸ್ಥೆಯನ್ನು ಮಧ್ಯಮಧ್ಯದಲ್ಲಿ ಅನುಭವಿಸುತ್ತೇವೆ. ನಮ್ಮ ಸಾಧನೆಯಲ್ಲಿ ಪ್ರಗತಿಯಾಗುತ್ತ ಹೋದಂತೆ ನಮ್ಮ ಮನಸ್ಸು ಶಾಂತ ಮತ್ತು ಸ್ಥಿರವಾಗುತ್ತದೆ.

ಈ. ಸಾಧಕರು ತಮ್ಮ ಮನಶುದ್ದಿಯಾಗಲು ತಮ್ಮಲ್ಲಿನ ಸ್ವಭಾವದೋಷಗಳನ್ನು ಮತ್ತು ಅಹಂ ಕಡಿಮೆ ಮಾಡಿ ಶ್ರದ್ಧೆಯನ್ನು ಹೆಚ್ಚಿಸುವುದು ಅಪೇಕ್ಷಿತವಿದೆ. ‘ಸಾಧನೆಯ ಆರಂಭದಲ್ಲಿ ತನ್ನಲ್ಲಿ ತ್ರಿಗುಣಗಳ (ಸತ್ತ್ವ, ರಜ ಮತ್ತು ತಮ ಇವುಗಳ) ಪ್ರಮಾಣ ಎಷ್ಟಿತ್ತು, ಅಂದರೆ ತೊಂದರೆ ಎಷ್ಟಿತ್ತು ? ಈಗ ಅದು ಎಷ್ಟು ಕಡಿಮೆಯಾಗಿದೆ ? ಎಷ್ಟು ಪ್ರಗತಿಯಾಗಿದೆ ? ಎಂಬುದರ ವರದಿಯನ್ನು ತೆಗೆದುಕೊಳ್ಳಬೇಕು.

ಉ. ತಮ್ಮಲ್ಲಿನ ಸ್ವಭಾವದೋಷಗಳ ನಿರ್ಮೂಲನೆಯಾಗಲು ಸಾಧಕರು ಯೋಗ್ಯ ದೃಷ್ಟಿಕೋನವನ್ನು ಇಟ್ಟರೆ ಅವರಿಂದ ಯೋಗ್ಯ ಕೃತಿಯಾಗುವುದು. ‘ಎದುರಿಗಿನ ವ್ಯಕ್ತಿಯು ನನ್ನನ್ನು ಅರ್ಥಮಾಡಿಕೊಳ್ಳಬೇಕು’, ಎಂಬ ವಿಚಾರ ಮಾಡಿ ಸಾಧಕರು ಅದರಲ್ಲಿ ಸಿಲುಕುತ್ತಾರೆ. ಸಾಧಕರು ಹಾಗಾಗದಂತೆ ತಮ್ಮನ್ನು ಮತ್ತು ಇತರರನ್ನು ರೂಪಿಸುವ ವಿಚಾರವಿಡಬೇಕು. ಸಾಧಕರಿಗೆ ಅವರ ತಪ್ಪುಗಳನ್ನು ತೋರಿಸಿದರೆ ಕೆಲವೊಮ್ಮೆ ಅವರು ನಿರಾಶರಾಗುತ್ತಾರೆ. ಸಾಧಕರು ನಿರಾಶರಾಗದೇ ಸತತವಾಗಿ ಗುರುಗಳನ್ನು ಸ್ಮರಿಸಬೇಕು.

ಊ. ‘ಸಾಧಕರಲ್ಲಿನ ಒಂದೊಂದು ಸ್ವಭಾವದೋಷದಿಂದಾಗುವ ದೃಷ್ಟಿಕೋನದಲ್ಲಿ ಬದಲಾವಣೆ ಯಾವುದು ಮತ್ತು ಅದರಲ್ಲಿ ಒಂದೊಂದು ಗುಣವನ್ನು ಹೆಚ್ಚಿಸುವುದು’, ಇದೂ ಪ್ರಗತಿಯ ಲಕ್ಷಣವಾಗಿದೆ. ಸಾಧಕರ ಪ್ರಗತಿಯಾಗುತ್ತಿದೆ; ಆದರೆ ಅವರ ವೇಗ ಕಡಿಮೆಯಿದೆ.

ಎ. ‘ನನ್ನಿಂದ ಏನೂ ಆಗುವುದಿಲ್ಲ, ಎಲ್ಲವೂ ಗುರುಗಳ ಕೃಪೆ ಯಿಂದಲೇ ಆಗುತ್ತದೆ. ಈ ಕಾರ್ಯ ಮತ್ತು ಸಾಧಕರು ದೇವರದ್ದೇ ಆಗಿದ್ದಾರೆ’, ಎಂಬ ಭಾವವು ಸತತವಾಗಿ ನಮ್ಮಲ್ಲಿರಬೇಕು. ಸಾಧನೆ ಎಂದರೆ ಗುರುಗಳು ಕಲಿಸಿದಂತೆ ಕ್ರಿಯಮಾಣವನ್ನು ಉಪಯೋಗಿಸುವುದು. ಸಾಧಕರಲ್ಲಿ ನಿರಂತರ ಸಾಧನೆ ಮತ್ತು ಸೇವೆಯ ಹಂಬಲವಿರಬೇಕು.’

– ಶ್ರೀ. ಪ್ರಶಾಂತ ಹರಿಹರ, ಮಂಗಳೂರು (೧೫.೧೦.೨೦೨೨)