’ಈ ಕಲಿಯುಗದಲ್ಲಿ ಅನೇಕ ವ್ಯಕ್ತಿಗಳಲ್ಲಿ ’ಪೂರ್ವಗ್ರಹ ಇರುವುದು’, ಈ ಸ್ವಭಾವದೋಷವು ಹೆಚ್ಚು-ಕಡಿಮೆ ಪ್ರಮಾಣ ದಲ್ಲಿರುತ್ತದೆ. ವ್ಯಕ್ತಿಯಲ್ಲಿನ ’ಪೂರ್ವಗ್ರಹ ಇರುವುದು’ ಈ ಸ್ವಭಾವದೋಷವು ಅವನಿಗೆ ಕೇವಲ ಸಾಧನೆಯಲ್ಲಿಯೇ ಅಲ್ಲದೇ, ಅದು ಕಾರ್ಯದಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾಯಕಾರಿಯಾಗಿದೆ. ಈ ಲೇಖನದಲ್ಲಿ ನಾವು ’ಪೂರ್ವಗ್ರಹ ಇರುವುದು’ ಈ ಸ್ವಭಾವದೋಷದ ಸ್ವರೂಪ, ಪೂರ್ವಗ್ರಹವನ್ನುಂಟು ಮಾಡುವ ಕಾರಣಗಳು, ಅದರ ಪರಿಣಾಮ ಮತ್ತು ಅದನ್ನು ಹೇಗೆ ನಿವಾರಿಸ ಬಹುದು’, ಎಂಬುದನ್ನು ತಿಳಿದುಕೊಳ್ಳೋಣ.

೧. ವಿಶ್ಲೇಷಣೆ
’ಈ ಹಿಂದೆ ಘಟಿಸಿದ ಕೆಲವು ಪ್ರಸಂಗಗಳಿಂದ ಯಾವುದಾದರೊಬ್ಬ ವ್ಯಕ್ತಿಯ ಬಗ್ಗೆ ಅಥವಾ ಕೆಲವು ವ್ಯಕ್ತಿಗಳ ಬಗ್ಗೆ ಸ್ವತಃ ನಿಷ್ಕರ್ಷವನ್ನು ತೆಗೆದು ಆ ವ್ಯಕ್ತಿಗಳ ಬಗ್ಗೆ ನಕಾರಾತ್ಮಕ ವಿಚಾರಗಳು ತನ್ನ ಮನಸ್ಸಿನಲ್ಲಿ ಬಿಂಬಿಸುವುದು’, ಹೀಗೆ ಪೂರ್ವಗ್ರಹದ ವಿಶ್ಲೇಷಣೆಯನ್ನು ಮಾಡಬಹುದು.
೨. ವ್ಯಕ್ತಿಯಲ್ಲಿ ’ಪೂರ್ವಗ್ರಹ’
ಈ ಸ್ವಭಾವದೋಷವು ಹೇಗೆ ಉಂಟಾಗುತ್ತದೆ ?
೨ ಅ. ಯಾವುದಾದರೊಬ್ಬ ವ್ಯಕ್ತಿಯು ಬೆಂಬಲ ನೀಡದಿದ್ದರೆ ಅವನ ಬಗ್ಗೆ ಪೂರ್ವಗ್ರಹ ಉಂಟಾಗುವುದು ಮತ್ತು ಅವನೊಂದಿಗೆ ಮಾತನಾಡು ವುದನ್ನು ತಪ್ಪಿಸುವುದು : ಯಾವುದಾದರೊಬ್ಬ ವ್ಯಕ್ತಿಯು ನಾವು ’ಹೇಳಿದ ವಿಷಯ, ಸಂಚಾರವಾಣಿಯಲ್ಲಿ ಕಳುಹಿಸಿದ ಸಂದೇಶ, ’ಪೋಸ್ಟ್’ ಅಥವಾ ಪ್ರತ್ಯಕ್ಷ ಮಾತನಾಡುವುದು’, ಇವುಗಳಿಗೆ ಸ್ಪಂದಿಸುವುದಿಲ್ಲ. ಆಗ ನಾವು ’ಈ ವ್ಯಕ್ತಿಯು ಯಾವಾಗಲೂ ಬೆಂಬಲಿಸುವುದಿಲ್ಲ ಮತ್ತು ನಂತರವೂ ಬೆಂಬಲಿಸುವುದೇ ಇಲ್ಲ. ಅವನು ಹೀಗೆಯೇ ಇದ್ದಾನೆ’, ಎಂದು ನಿಷ್ಕರ್ಷವನ್ನು ತೆಗೆಯುತ್ತೇವೆ. ನಾವು ಆ ವ್ಯಕ್ತಿಯೊಂದಿಗೆ ಅಥವಾ ಇಂತಹ ಕೆಲವು ವ್ಯಕ್ತಿ ಗಳೊಂದಿಗೆ ಪ್ರತಿಕ್ರಿಯಾತ್ಮಕವಾಗಿ ಮಾತನಾಡುತ್ತೇವೆ ಅಥವಾ ಇತರ ವ್ಯಕ್ತಿಗಳಿಗೆ ಅವರ ವಿರೋಧವಾಗಿ ಹೇಳುತ್ತೇವೆ ಮತ್ತು ಉಪಾಯವೆಂದು ಅವರೊಂದಿಗೆ ಮಾತನಾಡುವುದಿಲ್ಲ ಅಥವಾ ಅವರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತೇವೆ. ಆ ವ್ಯಕ್ತಿಯ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಿರುವ ಪ್ರಸಂಗಗಳು ಪ್ರತಿದಿನ ಘಟಿಸುತ್ತವೆ ಮತ್ತು ನಮ್ಮ ಮನಸ್ಸಿನಲ್ಲಿನ ಆ ವ್ಯಕ್ತಿಯ ಸಂದರ್ಭ ದಲ್ಲಿನ ಪೂರ್ವಗ್ರಹ ಹೆಚ್ಚಾಗುತ್ತದೆ. ಆ ವ್ಯಕ್ತಿಗೆ ಮಾತ್ರ ಇದರ ಬಗ್ಗೆ ಹೆಚ್ಚು ಅರಿವು ಇರುವುದಿಲ್ಲ.
೨ ಆ. ಯಾವುದಾದರೊಂದು ವ್ಯಕ್ತಿಯ ಬಗ್ಗೆ ಸತತವಾಗಿ ಪ್ರತಿಕ್ರಿಯೆ ಬರುತ್ತಿದ್ದರೆ ಪೂರ್ವಗ್ರಹ ಉಂಟಾಗುತ್ತದೆ.
೨ ಇ. ಯಾವ ವ್ಯಕ್ತಿಯೊಂದಿಗೆ ನಮ್ಮ ನಿಕಟ ಸಂಬಂಧವಿರುತ್ತದೆಯೋ, ಆ ವ್ಯಕ್ತಿಯು ಇತರ ವ್ಯಕ್ತಿಗಳ ಬಗ್ಗೆ ಸತತವಾಗಿ ಕೆಡಕು ಮಾತನಾಡು ತ್ತಿರುವಾಗಲೂ ನಮ್ಮ ಮನಸ್ಸಿನಲ್ಲಿನ ಇತರ ವ್ಯಕ್ತಿಯ ಸಂದರ್ಭದಲ್ಲಿನ ಪೂರ್ವಗ್ರಹದ ವಿಚಾರಗಳು ಹೆಚ್ಚಾಗುತ್ತವೆ.
೨ ಈ. ’ಪೂರ್ವಗ್ರಹ ಕಾಪಾಡುವುದು’ ಈ ಸ್ವಭಾವದೋಷವು ಉಕ್ಕಿಬರುವ ಇತರ ಸ್ವಭಾವದೋಷಗಳು ಮತ್ತು ಅಹಂನ ಅಂಶಗಳು : ’ತೀವ್ರ ಅಪೇಕ್ಷೆ ಮಾಡುವುದು; ’ಎದುರಿಗಿನ ವ್ಯಕ್ತಿಯು ನನ್ನ ಮನಸ್ಸಿನಂತೆ ವರ್ತಿಸಬೇಕು’ ಎಂದೆನಿಸುವುದು, ಬಹಿರ್ಮುಖತೆ, ಕೇಳುವ ವೃತ್ತಿ ಇಲ್ಲದಿರುವುದು, ಪರಿಸ್ಥಿತಿ ಸ್ವೀಕರಿಸದಿರುವುದು, ಸೇವೆಯಲ್ಲಿ ಇಷ್ಟಾನಿಷ್ಟಗಳಿರುವುದು, ಕರ್ತೃತ್ವ, ಪ್ರತಿಷ್ಠೆ ಕಾಪಾಡುವುದು, ಅತೀ ವಿಮರ್ಶಕತೆ, ಸತತವಾಗಿ ಕಲಿಸುವ ಭೂಮಿಕೆಯಲ್ಲಿರುವುದು, ನಿಷ್ಕರ್ಷ ತೆಗೆಯುವುದು, ತುಲನೆ ಮಾಡುವುದು’, ಇಂತಹ ಕೆಲವು ಸ್ವಭಾವದೋಷಗಳು ಮತ್ತು ಅಹಂನ ಅಂಶಗಳು ’ಪೂರ್ವಗ್ರಹ’ ಉಂಟಾಗಲು ಕಾರಣವಾಗಿವೆ.
೩. ಯಾರ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆ ?

ಕುಟುಂಬದಲ್ಲಿನ ಕೆಲವು ಸದಸ್ಯರು, ಮುಖ್ಯವಾಗಿ ಪತಿ-ಪತ್ನಿ, ಅತ್ತೆ-ಸೊಸೆ, ನಾದಿನಿ-ಅತ್ತಿಗೆ, ಕೆಲವು ಸಂಬಂಧಿಕರು, ಯಾವ ವ್ಯಕ್ತಿಯು ಸತತವಾಗಿ ಸಂಪರ್ಕದಲ್ಲಿರುತ್ತಾರೆಯೋ ಅವರ ಬಗ್ಗೆ, ಜವಾಬ್ದಾರಿ ಸಾಧಕರು, ಕೆಲವು ಸಹಸಾಧಕರು, ಅಕ್ಕಪಕ್ಕದವರು, ಕಚೇರಿಯಲ್ಲಿನ ಸಹಕಾರಿಗಳು, ಪದಾಧಿಕಾರಿಗಳು ಅಥವಾ ಎಲ್ಲರ ಬಗ್ಗೆಯೂ ಪೂರ್ವಗ್ರಹ ಉಂಟಾಗುತ್ತದೆ.
೪. ’ಪೂರ್ವಗ್ರಹ’ ಈ ಸ್ವಭಾವದೋಷದಿಂದಾಗುವ ಹಾನಿ
ಅ. ಸ್ವಭಾವವು ಸಿಡಿಮಿಡಿಗೊಳ್ಳುತ್ತದೆ. (ಕಿರಿಕಿರಿಯಾಗುತ್ತದೆ)
ಆ. ಮನಸ್ಸಿನ ಮೇಲೆ ಪೂರ್ವಗ್ರಹದ ಸಂಸ್ಕಾರವಾಗುತ್ತದೆ. ಅನೇಕ ವ್ಯಕ್ತಿಗಳ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆ.
ಇ. ಸಾಧನೆಯ ಅಮೂಲ್ಯ ಸಮಯವು ವ್ಯರ್ಥವಾಗುತ್ತದೆ.
ಈ. ಸಾಧನೆಯ ಹಾನಿಯಾಗುತ್ತದೆ.
ಉ. ಕುಟುಂಬದಲ್ಲಿನ ವ್ಯಕ್ತಿಗಳ ಬಗ್ಗೆ ಪೂರ್ವಗ್ರಹವಿದ್ದರೆ, ಮನೆಯಲ್ಲಿನ ಸ್ಪಂದನಗಳು ಕಲುಷಿತವಾಗುತ್ತವೆ.
ಊ. ಯಾವುದೇ ವಿಷಯದಿಂದ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಎ. ಮನಸ್ಸಿನ ಮೇಲೆ ಸತತವಾಗಿ ಒತ್ತಡವಿರುತ್ತದೆ.
ಐ. ’ಬಿಂಬ-ಪ್ರತಿಬಿಂಬ’ ಈ ನ್ಯಾಯದಂತೆ ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆಯೋ, ಅವರ ಮನಸ್ಸಿನಲ್ಲಿಯೂ ಇದೇ ರೀತಿ ಪೂರ್ವಗ್ರಹದ ಸಂಸ್ಕಾರ ಉಂಟಾಗುತ್ತದೆ.
೫. ’ಪೂರ್ವಗ್ರಹ ಕಾಪಾಡುವುದು’, ಈ ಸ್ವಭಾವದೋಷವನ್ನು ನಿವಾರಿಸಲು ಮಾಡುವ ಕೆಲವು ಉಪಾಯಗಳು
೫ ಅ. ’ಪೂರ್ವಗ್ರಹ ಕಾಪಾಡುವುದು’ ಈ ಸ್ವಭಾವದೋಷವು ಉಕ್ಕಿಬರುವ ಇತರ ಸ್ವಭಾವದೋಷಗಳು ಮತ್ತು ಅಹಂನ ಅಂಶ ಗಳನ್ನು ನಿವಾರಿಸಲು ಮಾಡುವ ಪ್ರಯತ್ನಗಳು
೧. ನಿರಪೇಕ್ಷತೆಯಿಂದ ಕೃತಿ ಮಾಡಬೇಕು.
೨. ನನಗೆ ಒಂದು ಅಭಿಪ್ರಾಯವಿರುವಂತೆ, ಆ ವ್ಯಕ್ತಿಗೂ ಏನಾದರು ಅಭಿಪ್ರಾಯವಿರುತ್ತದೆ, ಎಂಬ ವಿಚಾರ ಮಾಡಿ ಆ ವ್ಯಕ್ತಿಯ ಮೇಲೆ ನನ್ನ ಅಭಿಪ್ರಾಯವನ್ನು ಹೇರಬಾರದು.
೩. ಪ್ರತಿಯೊಂದು ಕೃತಿಯನ್ನು ಅಂತರ್ಮುಖವಾಗಿ ಮಾಡಬೇಕು.
೪. ಕೇಳುವ ವೃತ್ತಿಯನ್ನು ಹೆಚ್ಚಿಸಬೇಕು.
೫. ’ಪ್ರತಿಯೊಂದು ಪರಿಸ್ಥಿತಿಯ ನಿರ್ಮಾಪಕನು ಈಶ್ವರನಾಗಿದ್ದಾನೆ’, ಎಂಬ ಅರಿವನ್ನಿಟ್ಟು ಪರಿಸ್ಥಿತಿಯನ್ನು ಸ್ವೀಕರಿಸಬೇಕು.
೬. ಸಾಧನೆಯಲ್ಲಿ ಯಾವುದೇ ಸಾಧಕನು ಸಹಸಾಧಕನೆಂದು ಲಭಿಸಿದರೆ, ಅವನೊಂದಿಗೆ ಹೊಂದಿಕೊಳ್ಳಬೇಕು. ಯಾವುದೇ ಸೇವೆ ಸಿಕ್ಕಿದರೂ, ’ಅದು ಗುರುಸೇವೆಯೇ ಆಗಿದೆ’, ಎಂಬ ಭಾವವನ್ನಿಡಬೇಕು.
೭. ತಮ್ಮ ಕಡೆಗೆ ಶ್ರೇಯಸ್ಸು ತೆಗೆದುಕೊಳ್ಳುವ ವೃತ್ತಿಯನ್ನು ತಪ್ಪಿಸ ಬೇಕು. ’ಗುರುದೇವರು ಸೇವೆಯನ್ನು ನೀಡಿದ್ದಾರೆ ಮತ್ತು ಅವರೇ ಮಾಡಿಸಿಕೊಳ್ಳಲಿದ್ದಾರೆ’, ಎಂಬ ಭಾವವನ್ನಿಡಬೇಕು. ಅದಕ್ಕಾಗಿ ಕೃತಜ್ಞತೆಯ ಭಾವವನ್ನು ಹೆಚ್ಚಿಸಬೇಕು.
೮. ಪ್ರತಿಷ್ಠೆ ಕಾಪಾಡದೇ, ಎಲ್ಲವನ್ನು ಮನಮುಕ್ತತೆಯಿಂದ ಹೇಳಬೇಕು.
೯. ಅತೀಚಿಕಿತ್ಸಕವಾಗಿರದೇ ಆವಶ್ಯಕವಿದ್ದಷ್ಟು ತಿಳಿದುಕೊಳ್ಳಬೇಕು.
೧೦. ನಮ್ಮ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಪ್ರತಿಯೊಂದು ಪ್ರಸಂಗದಿಂದ ಹೇಗೆ ಕಲಿಸುತ್ತಿರುತ್ತಾರೋ, ಹಾಗೆ ಸತತವಾಗಿ ಕಲಿಯುವ ಭೂಮಿಕೆಯಲ್ಲಿರಬೇಕು.
೧೧. ಯಾವುದೇ ಪ್ರಸಂಗದಲ್ಲಿ ಮನಸ್ಸಿನಂತೆ ನಿಷ್ಕರ್ಷವನ್ನು ತೆಗೆಯದೇ ಖಚಿತಗೊಳಿಸಬೇಕು.
೧೨. ’ಎಷ್ಟು ವ್ಯಕ್ತಿಗಳೋ, ಅಷ್ಟು ಪ್ರಕೃತಿ’, ಇದನ್ನು ಗುರುದೇವರು ನೀಡಿದ ಬೋಧನೆಯನ್ನು ಗಮನದಲ್ಲಿಟ್ಟು ಪ್ರತಿಯೊಬ್ಬರನ್ನು ಹೊಂದಿಸಿಕೊಳ್ಳಬೇಕು.
೫ ಆ. ಇತರ ಉಪಾಯಗಳು
೧. ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿರುತ್ತದೆಯೋ, ಆ ವ್ಯಕ್ತಿಯೊಂದಿಗೆ ಪ್ರತ್ಯಕ್ಷ ಮಾತನಾಡಿ ಯಾವ ಕಾರಣಗಳಿಂದ ಪೂರ್ವಗ್ರಹ ಉಂಟಾಯಿತೋ, ಆ ಪ್ರಸಂಗವನ್ನು ಮನಮುಕ್ತತೆಯಿಂದ ಹೇಳಿ ಸತ್ಯಸ್ಥಿತಿಯನ್ನು ತಿಳಿದುಕೊಳ್ಳಬೇಕು.
೨. ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿರುತ್ತದೆಯೋ, ಆ ವ್ಯಕ್ತಿಗೆ ’ಅವನಲ್ಲಿರುವ ಸ್ವಭಾವದೋಷಗಳೊಂದಿಗೆ ನನಗೆ ಸ್ವೀಕರಿಸ ಬೇಕಾಗಿದೆ; ಏಕೆಂದರೆ ನನ್ನಲ್ಲಿ ಸ್ವಭಾವದೋಷಗಳಿದ್ದರೂ ಗುರುಗಳು ನನ್ನನ್ನು ಸ್ವೀಕರಿಸಿದ್ದಾರೆ’, ಎಂಬ ಸ್ವಯಂಸೂಚನೆಯನ್ನು ಕೊಡಬಹುದು.
೩. ನಮಗೆ ಸಾಧಕನ ಬಗ್ಗೆ ಪೂರ್ವಗ್ರಹವಿದ್ದರೆ, ನಾವು ಮನಸ್ಸಿನ ಮೇಲೆ ಪ್ರತಿಯೊಂದು ಸಾಧಕನಲ್ಲಿ ಗುರುರೂಪವನ್ನು ನೋಡುವ ಸಂಸ್ಕಾರವನ್ನು ಮಾಡಬೇಕು. ನಮಗೆ ಇತರ ಯಾರ ಬಗ್ಗೆ ಪೂರ್ವಗ್ರಹವಿದ್ದರೆ, ನನ್ನಲ್ಲಿ ’ಅವನೂ ಭಗವಂತನ ರೂಪವಾಗಿದ್ದಾನೆ’, ಎಂಬ ಭಾವವನ್ನು ನಿರ್ಮಾಣ ಮಾಡಬೇಕು.
೪. ನಮ್ಮಲ್ಲಿ ಪೂರ್ವಗ್ರಹದ ತೀವ್ರತೆ ಹೆಚ್ಚಿದ್ದರೆ ಆ ವ್ಯಕ್ತಿಗೆ ನಮ್ಮ ಕಿವಿಯನ್ನು ಹಿಡಿದು ಪ್ರತ್ಯಕ್ಷ ಕ್ಷಮೆ ಕೇಳಬೇಕು. ಈ ರೀತಿ ನಮ್ಮಿಂದ ಸಾಧ್ಯವಾಗದಿದ್ದರೆ ಕೆಲವು ದಿನಗಳ ವರೆಗೆ ಕಿವಿಗಳನ್ನು ಹಿಡಿದು ಮಾನಸ ರೀತಿಯಲ್ಲಿ ಕ್ಷಮೆ ಕೇಳಬೇಕು ಮತ್ತು ಕೆಲವು ದಿನಗಳ ನಂತರ ಪ್ರತ್ಯಕ್ಷ ಕ್ಷಮೆ ಕೇಳಬೇಕು.
೫. ಪೂರ್ವಗ್ರಹವಿರುವ ವ್ಯಕ್ತಿಯಲ್ಲಿನ ಗುಣಗಳ ಪಟ್ಟಿಯನ್ನು ಸಿದ್ಧ ಪಡಿಸಿ ನಾವು ಆ ಗುಣಗಳನ್ನು ಅಂಗೀಕರಿಸಲು ಪ್ರಯತ್ನಿಸಬೇಕು.
೬. ಪೂರ್ವಗ್ರಹವಿರುವ ವ್ಯಕ್ತಿಯು ಒಳ್ಳೆಯ ಕೃತಿ ಮಾಡಿದರೆ ಅವರನ್ನು ಪ್ರಶಂಸಿಸಬೇಕು.
೭. ’ಯಾವ ಸ್ವಭಾವದೋಷಗಳಿಂದ ಪೂರ್ವಗ್ರಹ ಉಂಟಾಗು ತ್ತದೆಯೋ, ಆ ಪ್ರತಿಯೊಂದು ಸ್ವಭಾವದೋಷದ ನಿರೀಕ್ಷಣೆ ಮಾಡಿ ಪ್ರಸಂಗಕ್ಕನುಸಾರ ಸ್ವಯಂಸೂಚನೆಯನ್ನು ಕೊಡುವುದು’, ಇದು ಅತ್ಯಧಿಕ ಪ್ರಭಾವಿ ಉಪಾಯವಾಗಿದೆ.
೮. ಅತ್ಯಂತ ಮಹತ್ವದ ವಿಷಯವೆಂದರೆ ’ತನ್ನಲ್ಲಿ ಪ್ರೇಮಭಾವವನ್ನು ಹೆಚ್ಚಿಸಬೇಕು.’ ಇದರಿಂದ ಕಾಲಾಂತರದಿಂದ ನಮಗೆ ಪ್ರೀತಿಯ ಹಂತಕ್ಕೆ ಹೋಗಲು ಸಾಧ್ಯವಾಗುತ್ತದೆ. ’ಗುರುದೇವರು ಸೂಚಿಸಿದ ಈ ಅಂಶಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ.’
– (ಪೂ.) ಅಶೋಕ ಪಾತ್ರೀಕರ (ವಯಸ್ಸು ೭೪ ವರ್ಷ), ಅಮರಾವತಿ (೧೫.೧೨.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !