‘ಸ್ವಭಾವಕ್ಕೆ ಔಷಧಿ ಇಲ್ಲ’, ಎಂದು ಹೇಳಿ ದುಃಖಕರ, ಕಷ್ಟಕರ ಜೀವನವನ್ನು ನಡೆಸುವುದಕ್ಕಿಂತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಗನುಸಾರ ಪ್ರಯತ್ನಿಸಿ ಆನಂದಮಯ ಜೀವನವನ್ನು ನಡೆಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪ್ರಸ್ತುತ ಕಲಿಯುಗದ ಕಾಲದಲ್ಲಿ ಮಾನವನಲ್ಲಿ ಬಹಳ ಸ್ವಭಾವದೋಷಗಳು ಮತ್ತು ಅಹಂಗಳಿವೆ. ಆದುದರಿಂದ ಅವನ ಜೀವನ ಬಹಳ ದುಃಖಕರ ಮತ್ತು ಕಷ್ಟಕರವಾಗಿದೆ. ‘ಇದರಿಂದ ಹೊರಬರಲು ಕೆಲವು ಮಾರ್ಗಗಳಿವೆ’, ಎಂಬುದು ಅವನಿಗೆ ಗೊತ್ತಿಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾವಿರಾರು ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಅವರು ರಚಿಸಿದ ಪ್ರಕ್ರಿಯೆಯನ್ನು ನಡೆಸಿ ಸುಖಮಯ ಮತ್ತು ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ.

ಸಾಧಕರ ಕುಟುಂಬದವರು, ‘ಸನಾತನ ಪ್ರಭಾತ’ದ ವಾಚಕರು, ವಿವಿಧ ಸಂಪ್ರದಾಯಗಳಿಗನುಸಾರ ಸಾಧನೆಯನ್ನು ಮಾಡುವ ಸಾಧಕರು, ಹಿಂದುತ್ವನಿಷ್ಠರು, ಹಿತಚಿಂತಕರು ಮತ್ತು ಸಾಮಾನ್ಯ ವ್ಯಕ್ತಿಗಳು ಇವರೆಲ್ಲರೂ ತಮ್ಮ ಜೀವನದಲ್ಲಿ ಸುಖವನ್ನು ಪಡೆಯಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿಕೊಳ್ಳುವುದು ಬಹಳ ಆವಶ್ಯಕವಾಗಿದೆ. ಇದಕ್ಕಾಗಿ ‘ಈ ಪ್ರಕ್ರಿಯೆಯನ್ನು ಏಕೆ ನಡೆಸಬೇಕು ?’, ಎಂಬುದು ಮುಂದಿನ ಲೇಖನದಿಂದ ಗಮನಕ್ಕೆ ಬರುವುದು.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಮನಸ್ಸಿನ ಕಾರ್ಯ

‘ಮನಸ್ಸು’ ಈ ಶಬ್ದದ ಬಳಕೆಯನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಬಾರಿ ಮಾಡುತ್ತಿರುತ್ತೇವೆ. ಇದರ ಕೆಲವು ಉದಾಹರಣೆಗಳನ್ನು ನೋಡೋಣ.

೧ ಅ. ಮನಸ್ಸಿನ ನಕಾರಾತ್ಮಕತೆಯನ್ನು ತೋರಿಸುವ ವಾಕ್ಯಗಳು

* ಮನಸ್ಸಿಗೆ ಬಂದಂತೆ ಮಾಡಬೇಡ.

* ಯಾರ ಮನಸ್ಸನ್ನೂ ನೋಯಿಸಬೇಡ.

* ನನ್ನ ಮನಸ್ಸು ನಿರಾಶೆಯಲ್ಲಿದೆ.

* ನನ್ನ ಮನಸ್ಸು ಚಂಚಲವಿದೆ.

* ಅವನು ಮಾತನಾಡಿದ್ದು ಕೇಳಿ ನನ್ನ ಮನಸ್ಸಿಗೆ ತುಂಬ ನೋವಾಯಿತು.

* ನನ್ನ ಮನಸ್ಸಿಗೆ ಯಾವುದರಿಂದಲೂ ಸಂತೋಷವಿಲ್ಲ.

* ನನ್ನ ಮನಸ್ಸಿನಂತೆ ಆಗುವುದಿಲ್ಲ.

* ಮನಸ್ಸಿನ ವಿರುದ್ಧ ನಡೆದರೆ ನನ್ನ ಪಿತ್ತ ನೆತ್ತಿಗೇರುತ್ತದೆ.

* ನನ್ನ ಮನಸ್ಸಿಗೆ ಸೂಜಿಯಿಂದ ಚುಚ್ಚಿದಂತಾಗಿದೆ.

* ನನ್ನ ಮನಸ್ಸು ಅಲ್ಲೋಲಕಲ್ಲೋಲವಾಗಿದೆ.

* ಇವರ ಮನಸ್ಸಿನಲ್ಲಿ ಒಂದು ಮತ್ತು ಬಾಯಿಯಲ್ಲಿ ಇನ್ನೊಂದು, ಹೀಗೆ ಇರುತ್ತದೆ.

* ಇವನ ಮನಸ್ಸಿನಲ್ಲಿ ಬಹಳ ನಕಾರಾತ್ಮಕ ವಿಚಾರಗಳಿರುತ್ತವೆ.

* ಇವನ ಮನಸ್ಸಿನಲ್ಲಿ ಕೆಟ್ಟ ಸಂಸ್ಕಾರಗಳು ಬೇರೂರಿವೆ.

* ಬುದ್ಧಿಯಿಂದ ನನಗೆ ಎಲ್ಲವೂ ಮನವರಿಕೆಯಾಗುತ್ತದೆ; ಆದರೆ ನನ್ನ ಮನಸ್ಸು ನನ್ನ ಮಾತುಗಳನ್ನು ಕೇಳುವುದಿಲ್ಲ.

* ನನ್ನ ಮನಸ್ಸು ಉದ್ವಿಗ್ನವಾಗಿದೆ.

* ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿಲ್ಲ.

* ನನ್ನ ಮನಸ್ಸು ಏಕಾಗ್ರವಾಗುತ್ತಿಲ್ಲ.

* ಖಾಲಿ ಮನಸ್ಸು ಭೂತದ ಮನೆ ಇದ್ದಂತೆ !

* ನಮ್ಮ ಮನಸ್ಸು ಚಿಂತಿಸುವುದನ್ನು, ನಮ್ಮ ಶತ್ರುವೂ ಚಿಂತಿಸುವುದಿಲ್ಲ ! ಇತ್ಯಾದಿ.

೧ ಆ. ಮನಸ್ಸಿನ ಸಕಾರಾತ್ಮಕತೆಯನ್ನು ತೋರಿಸುವ ವಾಕ್ಯಗಳು

* ನನ್ನ ಮನಸ್ಸು ಆನಂದದಲ್ಲಿದೆ.

* ನನ್ನ ಮನಸ್ಸಿಗೆ ಇಷ್ಟವಾಗುವ ಹೆಂಡತಿ ಸಿಕ್ಕಳು

* ಇವನ ಮನಸ್ಸಿನ ಮೇಲೆ ಉತ್ತಮ ಸಂಸ್ಕಾರಗಳು ಬೇರೂರಿವೆ.

* ಈ ವಾಕ್ಯ ನನ್ನ ಮನಸ್ಸಿನಲ್ಲಿ ಕೆತ್ತಲ್ಪಟ್ಟಿದೆ.

* ಮನಸ್ಸು ಸ್ವಚ್ಛ ಮತ್ತು ನಿರ್ಮಲವಾಗಿರಬೇಕು.

* ಅವನ ಸ್ವಭಾವ ಎಲ್ಲರೊಂದಿಗೆ ಹೊಂದಿಕೊಳ್ಳುವುದಾಗಿದೆ.

* ಇವನ ಮನಸ್ಸು ಸಕ್ಷಮವಾಗಿದೆ.

* ನಿರ್ಮಲ ಮನಸ್ಸಿನಲ್ಲಿ ಭಗವಂತನ ವಾಸವಿರುತ್ತದೆ.

 * ಮನಸ್ಸನ್ನು ಜಯಿಸಿದರೆ, ಜಗತ್ತನ್ನು ಜಯಿಸಬಹುದು, ಇತ್ಯಾದಿ.

೨. ವ್ಯಕ್ತಿಯ ಮನಸ್ಸಿನ ಸ್ಥಿತಿ, ಆ ವ್ಯಕ್ತಿಯ ಗುಣ ಅಥವಾ ಸ್ವಭಾವದೋಷವನ್ನು ತೋರಿಸುತ್ತದೆ

ಅ. ಮನಸ್ಸಿನ ನಕಾರಾತ್ಮಕತೆಯನ್ನು ತೋರಿಸುವ ಮೇಲಿನ ವಾಕ್ಯಗಳು ವ್ಯಕ್ತಿಯಲ್ಲಿನ ಸ್ವಭಾವದೋಷಗಳ ತೀವ್ರತೆಯನ್ನು ತೋರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ದರ್ಶಿಸುವ ವಾಕ್ಯಗಳು ಸ್ವಭಾವ ದಲ್ಲಿನ ಗುಣಗಳನ್ನು ತೋರಿಸುತ್ತದೆ. ಮೇಲಿನ ವಾಕ್ಯಗಳನ್ನು ಓದಿದಾಗ ‘ನಮ್ಮ ಜೀವನದಲ್ಲಿ ಮನಸ್ಸು ಎಷ್ಟು ಪ್ರಮುಖ ಪಾತ್ರ ವನ್ನು ವಹಿಸುತ್ತದೆ ?’, ಎಂಬುದು ಸಹಜವಾಗಿ ನಮ್ಮ ಗಮನಕ್ಕೆ ಬರುತ್ತದೆ.

ಆ. ಹೇಗೆ ಕಣ್ಣುಗಳ ಕಾರ್ಯ ‘ನೋಡುವುದು’ ಮತ್ತು ಕಿವಿಗಳ ಕಾರ್ಯ ‘ಕೇಳುವುದು’ ಆಗಿದೆಯೋ, ಹಾಗೆಯೇ ಮನಸ್ಸಿನ ಕಾರ್ಯ ‘ವಿಚಾರ ಮಾಡುವುದು’, ಆಗಿದೆ. ‘ವ್ಯಕ್ತಿಯ ಮನಸ್ಸಿ ನಲ್ಲಿ ದಿನವಿಡಿ ಎಷ್ಟು ವಿಚಾರಗಳು ಬರುತ್ತವೆ ?’, ಈ ಬಗ್ಗೆ ೨೦೦೫ ರಲ್ಲಿ ‘ನ್ಯಾಶನಲ್‌ ಸೈನ್ಸ್ ಫೌಂಡೇಶನ್’ ಇವರು ಒಂದು ಸಂಶೋಧನಾತ್ಮಕ ಲೇಖನವನ್ನು ಪ್ರಕಟಿಸಿದ್ದರು. ಆ ಸಂಶೋಧನೆಯ ನಿಷ್ಕರ್ಷ ಮುಂದಿನಂತಿದೆ.

‘ದಿನದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ೧೨ ಸಾವಿರದಿಂದ ೬೦ ಸಾವಿರ ವಿಚಾರಗಳು ಬರುತ್ತವೆ. ಅದರಲ್ಲಿ ಶೇ. ೮೦ ರಷ್ಟು ವಿಚಾರಗಳು ನಕಾರಾತ್ಮಕ ವಿಚಾರಗಳಾಗಿರುತ್ತವೆ. ನಕಾರಾತ್ಮಕ ವಿಚಾರಗಳ ಪ್ರಮಾಣ ಆಘಾತಕಾರಿಯಾಗಿದೆ.’

ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ವ್ಯಕ್ತಿಯ ಮನಸ್ಸಿನಲ್ಲಿರುವ ನಕಾರಾತ್ಮಕ ವಿಚಾರಗಳನ್ನು ಬಹಳಷ್ಟು ಹೆಚ್ಚಿಸಿ ವ್ಯಕ್ತಿಯನ್ನು ಅಸ್ವಸ್ಥ ಮಾಡುತ್ತಿರುತ್ತವೆ. ಅವು ನಿರಂತರವಾಗಿ ಅವನನ್ನು ದುಃಖಿಯನ್ನಾಗಿ ಮಾಡುತ್ತವೆ.

೩. ವಿಚಾರಗಳ ನಿರ್ಮಾಣ ಅಂತರ್ಮನಸ್ಸಿನಲ್ಲಿ ಆಗುತ್ತದೆ

ಮನಸ್ಸಿನ ೨ ಭಾಗಗಳಿವೆ. ಒಂದು ಅಂತರ್ಮನಸ್ಸು ಮತ್ತು ಇನ್ನೊಂದು ಬಾಹ್ಯಮನಸ್ಸು. ಅಂತರ್ಮನಸ್ಸು ಬಾಹ್ಯಮನಸ್ಸಿಗಿಂತ ೯ ಪಟ್ಟು ದೊಡ್ಡದಾಗಿದೆ. ಈ ಅಂತರ್ಮನಸ್ಸಿನಲ್ಲಿ ವ್ಯಕ್ತಿಯ ಸಾವಿರಾರು ಜನ್ಮಗಳ ಲಕ್ಷಾಂತರ ಸ್ಮೃತಿಗಳ ಸಂಗ್ರಹವಿರುತ್ತದೆ. ಸ್ಥಳ, ಕಾಲ ಮತ್ತು ವ್ಯಕ್ತಿಗೆ ಸಂಬಂಧಿಸಿದಂತೆ ಆಯಾ ವೇಳೆಗೆ ಆ ಸ್ಮೃತಿಗಳು ಜಾಗೃತವಾಗಿ ಬಾಹ್ಯ ಮನಸ್ಸಿನ ಕಡೆಗೆ ಆ ವಿಷಯದ ಸಂವೇದನೆಗಳು ಬರುತ್ತಿರುತ್ತವೆ. ಅದಕ್ಕೆ ನಾವು ‘ವಿಚಾರ’ ಎಂದು ಹೇಳುತ್ತೇವೆ. ಅಂತರ್ಮನಸ್ಸಿನಲ್ಲಿನ ಈ ಸ್ವಭಾವದೋಷಗಳ ಕೇಂದ್ರ ಗಳು ಎಲ್ಲಿಯವರೆಗೆ ನಾಶವಾಗುವುದಿಲ್ಲವೋ, ಅಲ್ಲಿಯವರೆಗೆ ಮನಸ್ಸಿನಲ್ಲಿನ ವಿಚಾರಗಳು ಯಾವಾಗಲೂ ಬರುತ್ತಿರುತ್ತವೆ.

೪. ವ್ಯಕ್ತಿಯ ಜೀವನದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚಿರುವುದು

ಮನಸ್ಸಿಗೆ ಸುಖ ನೀಡುವ ನೆನಪುಗಳಿಗಿಂತ ದುಃಖವನ್ನು ನೀಡುವ ನೆನಪುಗಳು ಹೆಚ್ಚಿರುತ್ತವೆ, ಅವುಗಳಿಗೆ ನಾವು ಸ್ವಭಾವದೋಷಗಳ ಕೇಂದ್ರಗಳೆಂದು ಹೇಳೋಣ. ಆದುದರಿಂದಲೇ ಸಂತ ತುಕಾರಾಮ ಮಹಾರಾಜರು ಹೇಳುತ್ತಾರೆ,

ಸುಖ ಪಾಹತಾ ಜವಾಪಾಡೆ | ದುಃಖ ಪರ್ವತಾ ಎವಡೆ ||

– ತುಕಾರಾಮ ಗಾಥಾ, ಅಭಂಗ ೮೮, ದ್ವಿಪದಿ ೧

ಅರ್ಥ : ವ್ಯಕ್ತಿಯ ಜೀವನದಲ್ಲಿ ಸುಖ ಒಂದು ಸಾಸಿವೆಕಾಳಿನಷ್ಟು ಮತ್ತು ದುಃಖ ಪರ್ವತದಷ್ಟು.

೫. ಯಾವ ಸ್ವಭಾವದೋಷಗಳ ಕೇಂದ್ರಗಳು ಪ್ರಬಲವಾಗಿರು ತ್ತವೆಯೋ, ಆ ರೀತಿ ವ್ಯಕ್ತಿಯ ಸ್ವಭಾವವಿರುತ್ತದೆ, ಉದಾ. ಆಲಸ್ಯ, ಸಿಟ್ಟಿನ, ಆತ್ಮಕೇಂದ್ರಿತ, ಲೋಭಿ, ಕಪಟಿ ಇತ್ಯಾದಿ.

೬. ಮಾನವನಿಗಾಗುವ ಕೆಲವು ಮಾನಸಿಕ ಕಾಯಿಲೆಗಳು

ನಿರಾಶೆ, ಅಸಂಬದ್ಧವಾಗಿ ಬಡಬಡಿಸುವುದು, ಚಿಂತೆ ಅಥವಾ ಕಾಳಜಿ ಮಾಡುವುದು, ನಿದ್ರಾಹೀನತೆ, ಮರೆವು, ಸ್ಕಿಝೋಫ್ರೆನಿಯಾ (ವಾಸ್ತವವನ್ನು ಗುರುತಿಸಲು ಅಸಮರ್ಥ), ಉನ್ಮಾದ ಇತ್ಯಾದಿ.

೭. ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯಿಂದ ಕೌಟುಂಬಿಕ ಜಗಳಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವುದು

ಪ್ರಸ್ತುತ ಕೌಟುಂಬಿಕ ಜಗಳಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿವೆ. ‘ಮಕ್ಕಳು-ಹೆತ್ತವರು, ಸಹೋದರ-ಸಹೋದರಿ, ಆಪ್ತರು, ಸ್ನೇಹಿತರು, ಪತಿ-ಪತ್ನಿಯರ ಪರಸ್ಪರರೊಂದಿಗೆ ಹೊಂದಿಕೆಯಾಗದಿರಲು ಒಂದು ಕಾರಣವೆಂದರೆ ಅವರಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯಾಗಿದೆ. ಕಲಿಯುಗದ ಇತ್ತೀಚೆಗಿನ ಕಾಲದಲ್ಲಿ ಪತಿ-ಪತ್ನಿಯರು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳದಿರುವ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಅದರ ಮುಕ್ತಾಯವೆಂದು ಸದ್ಯ ಬಹಳಷ್ಟು ವಿವಾಹವಿಚ್ಛೇದನೆಗಳು ನಡೆಯುತ್ತಿವೆ.

೮. ಮಾನವನ ಸ್ವಭಾವದೋಷಗಳ ಬಗೆಗಿನ ಕೆಲವು ಮಾತುಗಳು

ಅ. ಹುಟ್ಟುಗುಣ ಸುಟ್ಟರೂ ಹೋಗದು !

ಅರ್ಥ : ಹುಟ್ಟುಗುಣ ಸುಟ್ಟರೂ ಹೋಗದು ಎಂದರೆ ಎಷ್ಟೇ ಪ್ರಯತ್ನಿಸಿದರೂ ಮಾನವನ ಸ್ವಭಾವದೋಷಗಳು ಹೋಗುವುದಿಲ್ಲ.

ಆ.  : ಮನುಷ್ಯನ ಸ್ವಭಾವದೋಷಗಳು ಸತ್ತ ಮೇಲೆಯೂ ಹೋಗುವುದಿಲ್ಲ !

ಇ. ಸ್ವಭಾವಕ್ಕೆ ಔಷಧಿ ಇಲ್ಲ !

ಅರ್ಥ : ವ್ಯವಹಾರದಲ್ಲಿ ವ್ಯಕ್ತಿಗೆ ‘ತನ್ನ ಸ್ವಭಾವದೋಷಗಳನ್ನು ಹೇಗೆ ದೂರಗೊಳಿಸಬೇಕು ?’, ಎಂಬುದು ಗೊತ್ತಿರುವುದಿಲ್ಲ. ಆದುದರಿಂದ ಅವನಿಗೆ ‘ಸ್ವಭಾವಕ್ಕೆ ಔಷಧಿ ಇಲ್ಲ’, ಎಂದು ಅನಿಸುತ್ತದೆ.

ಈ. ಮನ ಎವಂ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ |’

(ತ್ರಿಪುರಾತಾಪಿನ್ಯುಪನಿಷದ್, ಉಪನಿಷದ್‌ ೫, ಶ್ಲೋಕ ೩)

ಅರ್ಥ : ಮನುಷ್ಯನ ಮನಸ್ಸೇ ಬಂಧನ ಮತ್ತು ಮೋಕ್ಷಗಳಿಗೆ ಕಾರಣವಾಗಿದೆ.

೯. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿ ಮನಸ್ಸನ್ನು ಹೇಗೆ ಗೆಲ್ಲಬೇಕು, ಎಂಬುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸುವುದು

೯ ಅ. ಗುರುಕೃಪಾಯೋಗ ಸಾಧನಾಮಾರ್ಗಕ್ಕನುಸಾರ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ : ಜೀವನದಲ್ಲಿ ಮನಸ್ಸಿನ ಮಹತ್ವವನ್ನು ತಿಳಿದುಕೊಂಡು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿಕೊಳ್ಳುವ ಶಾಸ್ತ್ರಬದ್ಧ ಪದ್ಧತಿಯನ್ನು ಕಂಡು ಹಿಡಿದು ‘ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳನ್ನು ಹೇಗೆ ಕಡಿಮೆ ಮಾಡಬೇಕು ?’, ಎಂಬ ಶಿಕ್ಷಣವನ್ನು ಸಾಧಕರಿಗೆ ನೀಡಿದರು. ಇದರ ಬಳಕೆಯಿಂದ ಸನಾತನದ ಸಾವಿರಾರು ಸಾಧಕರು ಸ್ವಭಾವದೋಷ ಮತ್ತು ಅಹಂನ ಹಿಡಿತದಿಂದ ತಮ್ಮನ್ನು ಮುಕ್ತ ಮಾಡಿಕೊಂಡಿದ್ದಾರೆ, ಹಾಗೆಯೇ ಸಾಧಕರು ಸ್ವಭಾವದೋಷಗಳ ಮೇಲೆ ಪ್ರಕ್ರಿಯೆಯನ್ನು ನಡೆಸಿ ಅವುಗಳನ್ನು ದೂರ ಮಾಡುವುದರೊಂದಿಗೆ ಉತ್ತಮ ಗುಣಗಳನ್ನು ತಮ್ಮಲ್ಲಿ ಬಿತ್ತಿ ಅವುಗಳಿಗೆ ಸಾಧನೆಯ (ಟಿಪ್ಪಣಿ) ಜೊತೆಯನ್ನು ನೀಡಿ ಸುಖ-ದುಃಖದ ಆಚೆಗಿರುವ ಮತ್ತು ಸುಖಕ್ಕಿಂತ ಅನಂತ ಪಟ್ಟುಗಳಲ್ಲಿ ಶ್ರೇಷ್ಠವಾಗಿರುವ ಆನಂದವನ್ನು ಪ್ರಾಪ್ತಮಾಡಿಕೊಂಡಿದ್ದಾರೆ.

ಟಿಪ್ಪಣಿ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ‘ಗುರುಕೃಪಾಯೋಗ’ ಈ ಸಾಧನೆಯ ಮಾರ್ಗವನ್ನು ಹೇಳಿದ್ದಾರೆ. ಇದರಲ್ಲಿ ವ್ಯಷ್ಟಿ ಸಾಧನೆಯ

‘೧. ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸುವುದು

೨. ಅಹಂ-ನಿರ್ಮೂಲನೆಗಾಗಿ ಪ್ರಯತ್ನಿಸುವುದು

೩. ನಾಮಜಪ ೪. ಸತ್ಸಂಗ

೫. ಸತ್ಸೇವೆ

೬. ಭಾವಜಾಗೃತಿಗಾಗಿ ಪ್ರಯತ್ನಿಸುವುದು

೭. ಸತ್‌ಗಾಗಿ ತ್ಯಾಗ

೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ)’, ಈ ಅಷ್ಟಾಂಗಗಳಿವೆ, ಇದರೊಂದಿಗೆ ಸಮಷ್ಟಿ ಸಾಧನೆಯೂ ಇದೆ.

೯ ಆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವ ಪ್ರಾಯೋಗಿಕ ಭಾಗ : ಸನಾತನ ಸಂಸ್ಥೆಯ ವತಿಯಿಂದ ತೆಗೆದುಕೊಳ್ಳಲಾಗುವ ಸತ್ಸಂಗಗಳಲ್ಲಿ ‘ಸ್ವಭಾವದೋಷಗಳನ್ನು ಹೇಗೆ ಗುರುತಿಸಬೇಕು ? ಸ್ವಭಾವದೋಷಗಳಿಂದಾಗಿ ಆಗುವ ತಪ್ಪುಗಳನ್ನು ಹೇಗೆ ಬರೆಯಬೇಕು ? ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ಹೇಗೆ ದೂರ ಮಾಡಬೇಕು ?, ಎಂಬ ಬಗ್ಗೆ ಶಾಸ್ತ್ರೋಕ್ತ ಮತ್ತು ಸುಲಭ ಪದ್ಧತಿಯಲ್ಲಿ ಕಲಿಸಲಾಗುತ್ತದೆ. ಈ ಸತ್ಸಂಗವನ್ನು ಪ್ರತ್ಯಕ್ಷ ಮತ್ತು ಗಣಕೀಯ ವ್ಯವಸ್ಥೆಯ ಮೂಲಕವೂ (ಆನ್‌ಲೈನ್‌ ಸಹ) ತೆಗೆದುಕೊಳ್ಳಲಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದ ಗ್ರಂಥಸಂಪತ್ತನ್ನು ಸನಾತನ ಸಂಸ್ಥೆಯ ವತಿಯಿಂದ ಪ್ರಕಾಶಿಸಲಾಗಿದೆ. ಅವುಗಳ ಅಧ್ಯಯನ ಮಾಡಿ ತಮ್ಮಲ್ಲಿರುವ ಸ್ವಭಾವದೋಷಗಳನ್ನು ಕಡಿಮೆ ಮಾಡಿ ಎಲ್ಲರೂ ತಮ್ಮ ಜೀವನವನ್ನು ಸುಖಕರ ಮಾಡಿಕೊಳ್ಳಬೇಕು. ‘ಸ್ವಭಾವದೋಷ ಮತ್ತು ಅಹಂ ಇವುಗಳಿಂದ ಪೀಡಿತ ಸಮಾಜ ಬಾಂಧವರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಕ್ರಿಯೆಯನ್ನು ನಡೆಸುವ ಬುದ್ಧಿಸಿಗಲಿ’, ಎಂದು ನಾನು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಸುಮನಗಳನ್ನು ಕೃತಜ್ಞತಾಭಾವದಿಂದ ಅವರ ಚರಣ ಗಳಲ್ಲಿಯೇ ಅರ್ಪಿಸುತ್ತೇನೆ !’

ಇದಂ ನ ಮಮ |

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ಪನವೆಲ. (೧೨.೮.೨೦೨೩)

ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಬರೆದ ಸನಾತನದ ಉಪಯುಕ್ತ ಗ್ರಂಥಸಂಪತ್ತು !

ಗ್ರಂಥದ ಮುಖಪುಟ

೧. ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ

೨. ನಮ್ಮಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು  ?

೩. ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ-ನಿರ್ಮೂಲನೆ

೪. ಸ್ವಭಾವದೋಷ ಮತ್ತು ಅಹಂ ಇವುಗಳ ವಿವಿಧ ಲಕ್ಷಣಗಳ ವಿಶ್ಲೇಷಣೆ

೫. ಸ್ವಭಾವದೋಷ ನಿರ್ಮೂಲನೆಗಾಗಿ ಬೌದ್ಧಿಕ ಮತ್ತು ಕೃತಿಯ ಸ್ತರಗಳಲ್ಲಿನ ಪ್ರಯತ್ನ

೬. ದೋಷ ನಿವಾರಿಸಿ ಮತ್ತು ಆನಂದಿತರಾಗಿರಿ !

೭. ಗುಣ ವೃದ್ಧಿಸಿ ಮತ್ತು ಆದರ್ಶರಾಗಿರಿ !

೮. ಸ್ವಭಾವದೋಷ-ನಿರ್ಮೂಲನೆಗಾಗಿ ಆಧ್ಯಾತ್ಮಿಕ ಸ್ತರದದಲ್ಲಿನ ಪ್ರಯತ್ನ

ಆನ್‌ಲೈನ್‌ ಗ್ರಂಥಗಳ ಖರೀದಿಗಾಗಿ Sanatanshop.com ಮತ್ತು ಸಂಪರ್ಕ ಕ್ರಮಾಂಕ : ೯೧೬೭೫೧೨೧೬೧, ೯೩೪೨೫೯೯೨೯೯