ಮತಾಂತರಕ್ಕೆ ಒಪ್ಪದ ಪತ್ನಿ ಮತ್ತು ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ

ಮಂಡ್ಯ – ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಮತ್ತು ಅತ್ತೆಯ ಮೇಲೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಪ್ರಕರಣದಲ್ಲಿ ಆಕೆಯ ಪತಿ ಶ್ರೀಕಾಂತ್ ಸೇರಿದಂತೆ 9 ಜನರ ವಿರುದ್ಧ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವಿವಿಧ ಆಮಿಷಗಳನ್ನು ತೋರಿಸಿ ಹಿಂದೂಗಳ ಮತಾಂತರ ಮಾಡಿ ಹಿಂದೂ ಕುಟುಂಬಗಳನ್ನು ಬೇರ್ಪಡಿಸುವ ಕ್ರೈಸ್ತರು ಪೊಲೀಸರಿಗೆ ಕಾಣಿಸುತ್ತಿಲ್ಲವೇ? – ಸಂಪಾದಕರು)

ಪತ್ನಿ ಲಕ್ಷ್ಮಿ ಮತ್ತು ಅತ್ತೆ ಶ್ರುತಿಯ ಮೇಲೆ ಅವರ ಪತಿ ಶ್ರೀಕಾಂತ್ ಸೇರಿದಂತೆ ಅನೇಕ ಜನರು ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಈ ಇಬ್ಬರೂ ಇದನ್ನು ನಿರಾಕರಿಸಿದ ನಂತರ, ಅವರ ಮೇಲೆ ಹಲ್ಲೆ ಮಾಡಲಾಯಿತು.