ಸಾಧನೆಯಲ್ಲಿ ಮೌನವಿರುವುದರ ಮಹತ್ವ !

ಪೂ. ಶಿವಾಜಿ ವಟಕರ

‘ಮೌನಂ ಸರ್ವಾರ್ಥಸಾಧನಮ್‌ |’ ಎಂದು ಹೇಳುತ್ತಾರೆ. ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಮೌನ ವಹಿಸುವುದು ತುಂಬಾ ಮಹತ್ವವಿದೆ. ನಾವು ಸ್ವಭಾವದೋಷಗಳಿಂದಾಗಿ ಯಾವುದಾದರೊಬ್ಬ ವ್ಯಕ್ತಿಯೊಂದಿಗೆ ಸಿಟ್ಟಿನಿಂದ ಅಥವಾ ಪ್ರತಿಕ್ರಿಯಾತ್ಮಕವಾಗಿ ಮಾತನಾಡುತ್ತೇವೆ, ಆಗ ನಮ್ಮ ಮಾತಿನಿಂದ ಆ ವ್ಯಕ್ತಿಗೆ ನೋವಾಗುತ್ತದೆ. ತದ್ವಿರುದ್ಧ ನಾವು ಆ ಪ್ರಸಂಗದಲ್ಲಿ ಮೌನ ವಹಿಸಿದರೆ, ನಮ್ಮ ಸಿಟ್ಟು ನಮ್ಮ ನಿಯಂತ್ರಣದಲ್ಲಿರುತ್ತದೆ. ಅಯೋಗ್ಯ ಮತ್ತು ನಕಾರಾತ್ಮಕ ವಿಚಾರ ಮತ್ತು ಅನಾವಶ್ಯಕ ಮಾತನಾಡುವುದು, ಇವುಗಳ ಮೇಲೆ ನಿಯಂತ್ರಣವನ್ನಿಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಗುರುಕೃಪಾಯೋಗ’ ಈ ಸಾಧನಾಮಾರ್ಗವನ್ನು ಹೇಳಿದ್ದಾರೆ. ಆದ್ದರಿಂದ ಸಾಧಕರ ಮನಸ್ಸು ಬುದ್ಧಿ ಮತ್ತು ಚಿತ್ತದ ಶುದ್ಧಿಯಾಗುತ್ತದೆ. ಅವರ ಕೃಪೆಯಿಂದ ನನಗೆ ಮೌನದ ಬಗ್ಗೆ ಮುಂದಿನ ಅಂಶಗಳು ಕಲಿಯಲು ಸಿಕ್ಕಿದವು.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕನಿಗೆ ಅನಾವಶ್ಯಕವಾಗಿ ಮಾತನಾಡುವುದನ್ನು ತಡೆಯಲು ಮೌನವನ್ನು ಪಾಲಿಸಲು ಹೇಳುವುದು

೧೯೮೯ ರಿಂದ ನಾನು ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಕ್ಕೆ ಹೋಗುತ್ತಿದ್ದೆನು. ೧೯೯೨ ರಲ್ಲಿ ನಮ್ಮ ಅಭ್ಯಾಸವರ್ಗದಲ್ಲಿ ರಾಯಗಡ ಜಿಲ್ಲೆಯ ನಾಗೋಠಣೆ ಯಲ್ಲಿನ ಓರ್ವ ಸಾಧಕನು ಬರುತ್ತಿದ್ದನು. ಅವರು ಅಭ್ಯಾಸವರ್ಗದಲ್ಲಿ ಅನಾವಶ್ಯಕವಾಗಿ ಮಾತನಾಡುತ್ತಿದ್ದರು ಮತ್ತು ಇತರರಿಗೆ ಕಲಿಸುತ್ತಿದ್ದರು. ಆ ಸಮಯದಲ್ಲಿ ಅವರ ಮಾತಿನಲ್ಲಿ ಅಹಂಕಾರದ ಅರಿವಾಗುತ್ತಿತ್ತು. ಪರಾತ್ಪರ ಗುರು ಡಾಕ್ಟರರು ಆ ಸಾಧಕನಿಗೆ ಮೌನವಾಗಿರಲು ಹೇಳಿದರು. ‘ಸಾಧಕನು ಅಂತರ್ಮುಖವಾಗಿ ಸಾಧನೆ ಮಾಡಬೇಕು’, ಎಂಬುದು ಅದರ ಹಿಂದಿನ ಉದ್ದೇಶವಾಗಿತ್ತು. ಪರಾತ್ಪರ ಗುರು ಡಾಕ್ಟರರು ಮೊದಲಿನಿಂದಲೂ ಸಾಧಕರಿಗೆ ಮಾನಸಿಕ ಸ್ತರದಲ್ಲಿ ನಿರ್ವಹಿಸದೇ ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

೨. ಮೌನವನ್ನು ಪಾಲಿಸುವುದರಿಂದ ಆಗುವ ಲಾಭ

೨ ಅ. ಈಶ್ವರೀ ಚೈತನ್ಯ ಸಿಗುವುದು : ಮೌನವನ್ನು ಪಾಲಿಸುವುದರಿಂದ ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಲಾಭವಾಗುತ್ತವೆ. ಸಾಧಕರ ಶಕ್ತಿ ಖರ್ಚಾಗದೇ ಅವರಿಗೆ ಈಶ್ವರೀ ಚೈತನ್ಯ ಸಿಗುತ್ತದೆ.

೨ ಆ. ಮೌನದಿಂದ ವಾದವಿವಾದ ಆಗದಿರುವುದು : ನಾವು ಯಾವಾಗ ಇನ್ನೊಬ್ಬರೊಂದಿಗೆ ವಾದವಿವಾದ ಮಾಡುತ್ತೇವೆ ಅಥವಾ ಜಗಳಾಡುತ್ತೇವೆಯೋ, ಆಗ ಎದುರಿನ ವ್ಯಕ್ತಿಯೂ ತನ್ನ ಮಾತಿನ ಬಗ್ಗೆ ದೃಢವಾಗಿರುತ್ತಾನೆ. ಆ ಸಮಯದಲ್ಲಿ ನಾವು ‘ಮೌನಂ ಸರ್ವಾರ್ಥಸಾಧನಮ್‌ |’ ಎಂದು ಹೇಳಿ ಸುಮ್ಮನಿದ್ದರೆ ವಾದವಿವಾದ ತಪ್ಪುತ್ತದೆ ಮತ್ತು ವಾದವಿವಾದದಿಂದಾಗುವ ವಿಪರೀತ ಪರಿಣಾಮವನ್ನು ತಪ್ಪಿಸಬಹುದು.

೨ ಇ. ಶಕ್ತಿ ಮತ್ತು ಸಮಯ ಉಳಿಯುವುದು : ನಾವು ಅಧ್ಯಾತ್ಮಪ್ರಸಾರಕ್ಕೆ ಹೋದಾಗ ಯಾವುದಾದರೊಬ್ಬ ವ್ಯಕ್ತಿಗೆ ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಅಥವಾ ಯಾವುದಾದರೊಬ್ಬ ವ್ಯಕ್ತಿಯು ನಮ್ಮೊಂದಿಗೆ ವಾದ ಮಾಡುತ್ತಿದ್ದರೆ, ನಾವು ಅವರೊಂದಿಗೆ ಮಾತನಾಡುವುದರಲ್ಲಿ ಸಮಯವನ್ನು ಕಳೆಯಬಾರದು. ಬುದ್ಧಿಜೀವಿ ಅಥವಾ ಪ್ರಗತಿಪರರೊಂದಿಗೆ ವಾದವಿವಾದ ಮಾಡುತ್ತ ಕುಳಿತರೆ ನಮ್ಮ ಶಕ್ತಿ ಮತ್ತು ಸಮಯ ವ್ಯರ್ಥವಾಗುತ್ತದೆ. ಮೌನವನ್ನು ಪಾಲಿಸುವುದರಿಂದ ನಮ್ಮ ಶಕ್ತಿ ಮತ್ತು ಸಮಯ ಉಳಿಯುತ್ತದೆ.

೨ ಈ. ಸಂತರು ಮೌನವಾಗಿದ್ದರೂ, ಅವರ ಕೇವಲ ಸತ್ಸಂಗದಿಂದ ಅವರ ಸಂಪರ್ಕದಲ್ಲಿನ ವ್ಯಕ್ತಿಗಳ ಸಂದೇಹನಿವಾರಣೆಯಾಗಿ ಮನಸ್ಸು ಶಾಂತವಾಗುವುದು : ಪೂ. ವಿನೋಬಾ ಭಾವೆ ಇವರು ಆಗಾಗ ಮೌನವನ್ನು ಪಾಲಿಸುತ್ತಿದ್ದರು. ಅವರು ತುಂಬಾ ಜ್ಞಾನಿಗಳಾಗಿರುವುದರಿಂದ ಅವರ ಬಳಿ ಅನೇಕ ಜನರು ಪ್ರಶ್ನೆಯನ್ನು ಕೇಳುತ್ತಿದ್ದರು. ಅವರು ಮೌನವಾಗಿರುವುದರಿಂದ ಅವರು ಏನು ಮಾತನಾಡುತ್ತಿರಲಿಲ್ಲ. ಕೊನೆಗೆ ಜನರು ಅಸಮಾಧಾನಗೊಳ್ಳುತ್ತಿದ್ದರು; ಆದರೆ ಅವರು ಮೌನವಾಗಿರುವುದರಿಂದ ಜನರೂ ಶಾಂತವಾಗಿ ಕುಳಿತಿರುತ್ತಿದ್ದರು. ನಂತರ ಜನರಿಗೆ, ‘ಪೂ. ವಿನೋಬಾ ಭಾವೆ ಇವರ ಕೇವಲ ಸತ್ಸಂಗದಿಂದ ಅವರ ಮನಸ್ಸಿನಲ್ಲಿನ ಪ್ರಶ್ನೆಗಳು ತನ್ನಷ್ಟಕ್ಕೆ ಪರಿಹಾರವಾಗುತ್ತಿವೆ ಮತ್ತು ಅವರ ಮನಸ್ಸು ಶಾಂತವಾಗುತ್ತಿದೆ’ ಎಂಬುದು ಗಮನಕ್ಕೆ ಬಂದಿತು.

೩. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಮೌನ ಪಾಲಿಸುವುದು ಆವಶ್ಯಕವಾಗಿರುವುದು

ಸಾಧಕನು ಸಮಯ ಬಂದಾಗ ಕಾಯಾ, ವಾಚಾ ಮತ್ತು ಮನಸ್ಸಿನಿಂದ ಮೌನ ಪಾಲಿಸುವುದು ಆವಶ್ಯಕವಾಗಿರುತ್ತದೆ; ಆದರೆ ಅಹಂಕಾರಿ ವ್ಯಕ್ತಿಗೆ ‘ಅವನ ಮಾತಿನಿಂದ ಮನೆಯಲ್ಲಿನ ಅಥವಾ ಹೊರಗಿನ ಎಲ್ಲ ಕೆಲಸಗಳಾಗುತ್ತವೆ’, ಎಂದೆನಿಸುತ್ತದೆ. ವಾಸ್ತವದಲ್ಲಿ ಹಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕ್ಷಮತೆಗನುಸಾರ ವಿಚಾರ ಮಾಡಿ ಕೃತಿ ಮಾಡುತ್ತಿರುತ್ತಾನೆ, ಆದರೂ ವ್ಯಕ್ತಿಯಲ್ಲಿನ ಅಹಂಕಾರದಿಂದ ಅವನು ಎದುರಿಗಿನ ವ್ಯಕ್ತಿಗೆ ಅನಾವಶ್ಯಕ ವಿಷಯ ಹೇಳುತ್ತಾನೆ, ಸೂಚಿಸುತ್ತಾನೆ ಮತ್ತು ಕಲಿಸುತ್ತಿರುತ್ತಾನೆ. ನಾವು ಮಾತನಾಡದಿದ್ದರೂ, ದೇವರ ಕೃಪೆಯಿಂದ ಎಲ್ಲ ಕೆಲಸಗಳು ಆಗುತ್ತಿರುತ್ತವೆ, ಆದರೂ ನಾವು ‘ನಾನು ಮಾತನಾಡುತ್ತೇನೆ, ನಾನು ಹೇಳುತ್ತೇನೆ, ನಾನು ಸೂಚಿಸುತ್ತೇನೆ, ನನಗೆ ಚೆನ್ನಾಗಿ ಬರುತ್ತದೆ’, ಎಂದೆನಿಸಿ ಕರ್ತೃತ್ವವನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಿ ಅಥವಾ ಎಲ್ಲಿಯೂ ನಮಗೆ ಸುಮ್ಮನೆ ಕುಳಿತುಕೊಳ್ಳಬೇಕಾದರೆ, ಎದುರಿನ ವ್ಯಕ್ತಿಯನ್ನು ಸುಮ್ಮನಿರಿಸಬೇಕು ಮತ್ತು ಎದುರಿಗಿನ ವ್ಯಕ್ತಿಯು ಸುಮ್ಮನಿರಲು ನಾವು ಮೊದಲು ಸುಮ್ಮನಿರಬೇಕು. ಅದಕ್ಕಾಗಿ ಕೆಲವು ಸಾಧಕರಿಗೆ ಅಂತರ್ಮುಖರಾಗಲು ಕೆಲವು ಸಮಯದ ವರೆಗೆ ಮೌನವಾಗಿರಲು ಹೇಳುತ್ತಾರೆ.

ಶಿಷ್ಯನ ಆರಂಭದ ಕಾಲದಲ್ಲಿ ಗುರುಗಳು ಶಿಷ್ಯನಿಗೆ ಮಾರ್ಗದರ್ಶನ ಮಾಡಿ, ಗ್ರಂಥಗಳ ಅಧ್ಯಯನದಿಂದ ಅಥವಾ ಸತ್ಸಂಗದಿಂದ ಕಲಿಸುತ್ತಾರೆ. ಕೊನೆಗೆ ಶಿಷ್ಯನು ಗುರುಗಳೊಂದಿಗೆ ಏಕರೂಪವಾದ ನಂತರ ಅವರು ಅವನಿಗೆ ಮೌನದಿಂದ ಕಲಿಸುತ್ತಾರೆ. ‘ಗುರುಗಳು ಮೌನದಿಂದ ಕಲಿಸಿದರು ಮತ್ತು ಶಿಷ್ಯನು ಮೌನದಿಂದ ಕಲಿತನು’, ಇದು ಉಚ್ಚಮಟ್ಟದ ಸಾಧನೆಯಾಗಿದೆ. ಸಾಧಕರಿಗೆ ಮೌನದಿಂದ ಮತ್ತು ಸೂಕ್ಷ್ಮದಿಂದ ಸಾಧನೆಯನ್ನು ಕಲಿಸಿ ಅದನ್ನು ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ನಾನು ಶರಣಾಗತಭಾವದಿಂದ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

(ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ (ಸಮಷ್ಟಿ ಸಂತರು)), ಸನಾತನ ಆಶ್ರಮ, ದೇವದ, ಪನವೇಲ. (೨೯.೧೦.೨೦೨೩)