೧. ‘ಚಿತ್ತಶುದ್ಧಿಗಾಗಿ ವರ್ಷಾನುಗಟ್ಟಲೇ ತಪಸ್ಸು, ಧ್ಯಾನ, ಯೋಗ ಇತ್ಯಾದಿ ಮಾಡುವುದಕ್ಕಿಂತ ಸುಲಭ ಮತ್ತು ಶೀಘ್ರಮಾರ್ಗವೆಂದರೆ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (ಗುರುದೇವರು)ಯವರು ಕಲಿಸಿದ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ಯನ್ನು ಆಚರಣೆಯಲ್ಲಿ ತರುವುದು
೨. ‘ಗೊತ್ತಿದೆ ಆದರೆ ಬದಲಾವಣೆ ಆಗುವುದಿಲ್ಲ’, ಇದಕ್ಕೆ ಒಂದೇ ಒಂದು ಉತ್ತರವಿದೆ ಮತ್ತು ಅದುವೇ ಗುರುದೇವರು ಕಲಿಸಿದ ‘ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆ’ !
೩. ದೇವರು ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾನೆ; ಆದುದರಿಂದ ನಾವು ಇತರರ ಬಗ್ಗೆ ನಕಾರಾತ್ಮಕ ಮಾತನಾಡಿದರೆ ದೇವರು ನಮ್ಮ ಮೇಲೆ ಅಸಮಾಧಾನಗೊಳ್ಳುತ್ತಾನೆ.
೪. ನಾವು ನಮ್ಮ ತಪ್ಪನ್ನು ಮರೆಮಾಚಲು ಎಷ್ಟೇ ಜಾಣತನದಿಂದ ನಡೆದುಕೊಂಡರೂ, ನಮ್ಮ ಮನಸ್ಸಿನಿಂದ ಮತ್ತು ಅದಕ್ಕಿಂತಲೂ ಹೆಚ್ಚು ಈಶ್ವರನಿಂದ ಆ ತಪ್ಪು ಮುಚ್ಚಿಡಲು ಸಾಧ್ಯವಿಲ್ಲ. ಆ ತಪ್ಪಿನ ಫಲವನ್ನು ಎಂದಾದರೂ ಭೋಗಿಸಲೇಬೇಕಾಗುತ್ತದೆ.’
– (ಪೂ.) ಸಂದೀಪ ಆಳಶಿ (೧೧.೯.೨೦೨೪)
ಭಾವದ ವಿಷಯದಲ್ಲಿ ಉಪಯುಕ್ತ ದೃಷ್ಟಿಕೋನ !೧. ‘ಈಶ್ವರಪ್ರಾಪ್ತಿ’ಯಾಗಲು ನಮ್ಮಲ್ಲಿ ಕೇವಲ ಭಾವ ಅಷ್ಟೇ ಅಲ್ಲ, ಶುದ್ಧ ಭಾವ (ಭಕ್ತಿ) ಮೂಡುವುದು ಆವಶ್ಯಕವಾಗಿರುತ್ತದೆ. ಅಂತಃಕರಣವು ಶುದ್ಧವಾಗದೇ ಭಾವವು ಶುದ್ಧಭಾವದಲ್ಲಿ ರೂಪಾಂತರವಾಗಲು ಸಾಧ್ಯವಿಲ್ಲ. ೨. ‘ಯಾವ ನಾಮಜಪ ಮಾಡುತ್ತೇವೆ ?’ ಎಂಬುದಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪ್ರಮಾಣದಲ್ಲಿ ‘ಅದನ್ನು ಮಾಡುವ ಹಿಂದಿನ ಮತ್ತು ಮಾಡುವಾಗಿನ ಭಾವ’ವೂ ಮಹತ್ವದ್ದಾಗಿದೆ. ೩. ಇನ್ನೊಬ್ಬರ ಬಗ್ಗೆ ನಕಾರಾತ್ಮಕ ಮಾತನಾಡುವುದರಿಂದ ನಮ್ಮಲ್ಲಿನ ಭಾವದ ಮಟ್ಟ ಕಡಿಮೆಯಾಗತೊಡಗುತ್ತದೆ. ೪. ಪ್ರತಿಕೂಲ ಪರಿಸ್ಥಿತಿಯಲ್ಲಿ ಭಾವದ ಸ್ತರದಲ್ಲಿ ಇರಬೇಕೆಂದರೆ ನಾವು ಅನುಕೂಲ ಸ್ಥಿತಿಯಲ್ಲಿರುವಾಗಲೇ ಭಾವಜಾಗೃತಿಗಾಗಿ ಸತತ ಪ್ರಯತ್ನಿಸಬೇಕಾಗುತ್ತದೆ.’ – (ಪೂ.) ಸಂದೀಪ ಆಳಶಿ (೧೬.೯.೨೦೨೪) |