ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿ ಅವರನ್ನು ಸಾಧನೆಯ ಮುಂದಿನ ಹಂತಕ್ಕೆ ಕರೆದೊಯ್ಯುವ ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯದಾಯಕ ಸತ್ಸಂಗ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ೧೯೯೦ ರಿಂದ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಪ್ರಾರಂಭಿಸಿದರು. ಇದರಲ್ಲಿ, ಅವರು ‘ಆನಂದಪ್ರಾಪ್ತಿಗಾಗಿ ಸಾಧನೆ’, ಈ ವಿಷಯದ ಬಗ್ಗೆ ಅಧ್ಯಯನ ವರ್ಗಗಳನ್ನು ತೆಗೆದುಕೊಳ್ಳುವುದು, ವಿವಿಧ ಗ್ರಂಥಗಳ ಸಂಕಲನ ಮಾಡುವುದು, ಅನೇಕ ದೊಡ್ಡ ಪ್ರವಚನಗಳನ್ನು ಮಾಡುವುದು ಇಂತಹ ವಿವಿಧ ಮಾರ್ಗಗಳನ್ನು ಅವಲಂಬಿಸಿದ್ದಾರೆ. ಆರಂಭದಿಂದಲೂ, ಜಿಜ್ಞಾಸುಗಳ ಸಂದೇಹ ನಿವಾರಣೆ ಮಾಡುವುದು ಮತ್ತು ‘ಉತ್ತಮ ಸಾಧಕನಾಗುವುದು ಹೇಗೆ ?’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು’ ಇದು ಅವರ ಕಾರ್ಯದ ಏಕೈಕ ಉದ್ದೇಶವಾಗಿತ್ತು. ‘ಸಾಧಕರ ಸಾಧನೆಗೆ ಸಂಬಂಧಿಸಿದ ತೊಂದರೆಗಳನ್ನು ತಿಳಿದುಕೊಳ್ಳುವುದು ಮತ್ತು ಅವರ ತೊಂದರೆಗಳನ್ನು ನಿವಾರಿಸಿ, ಉಪಾಯಗಳನ್ನು ಹೇಳುವುದು, ಇದು ಅವರ ಕಾರ್ಯದ ಒಂದು ಅವಿಭಾಜ್ಯ ಅಂಗವಾಗಿದೆ.

‘ಮಗು ತೊದಲುತ್ತಿದ್ದರೂ ಅದು ತಾಯಿಗೆ ಅರ್ಥವಾಗುತ್ತದೆ’ ಎನ್ನುವ ಹೇಳಿಕೆಯಂತೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಗೆ ಸಂಬಂಧಿಸಿದ ತೊಂದರೆಗಳನ್ನು ತಕ್ಷಣವೇ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅವುಗಳಿಗೆ ಸರಿಯಾದ ಉಪಾಯಗಳನ್ನು ಹೇಳುತ್ತಾರೆ ಎನ್ನುವ ಅನುಭೂತಿಯನ್ನು ಅನೇಕ ಸಾಧಕರು ಅನುಭವಿಸಿದ್ದಾರೆ. ಈ ಲೇಖನದಲ್ಲಿ, ಪರಾತ್ಪರ ಗುರು ಡಾ. ಆಠವಲೆ ಅವರು ವಿವಿಧ ಸ್ಥಳಗಳಲ್ಲಿ ಮಾಡಿರುವ ಮಾರ್ಗದರ್ಶನದಿಂದ ಕೆಲವು ಆಯ್ದ ಅಂಶಗಳನ್ನು ನೀಡಲಾಗಿದೆ.

(ಭಾಗ ೧)

೧. ಸಾಧನೆಯಿಂದ ಆನಂದವನ್ನು ಪಡೆದ ನಂತರ, ಸಾಧನೆಯನ್ನು ಹೆಚ್ಚಿಸಲು ಪ್ರಯತ್ನಗಳಾಗುತ್ತವೆ !

ಓರ್ವ ಸಾಧಕಿ : ನಾನು ವ್ಯಷ್ಟಿ ಸಾಧನೆ ಮತ್ತು ಸೇವೆ (ಸಮಷ್ಟಿ) ಎರಡನ್ನೂ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಿಂದೆ ನಾನು, ‘ಇವು ನನ್ನ ಸ್ವಭಾವದೋಷಗಳೇ ಅಥವಾ ನನ್ನ ಅಹಂಕಾರದ ಮಗ್ಗಲುಗಳೇ ಆಗಿವೆ ?’ ಎಂದು ಯೋಚಿಸುತ್ತಿದ್ದೆನು. ಅವುಗಳನ್ನು ದೂರ ಮಾಡಲು ಯಾವ ಪ್ರಯತ್ನಗಳನ್ನು ಮಾಡಬೇಕು ?’ ಎಂದು ನನಗೆ ತಿಳಿಯುತ್ತಿರಲಿಲ್ಲ. ಹಿಂದಿನದ್ದನ್ನು ಹೋಲಿಸಿದರೆ, ಈಗ ನನ್ನ ಸ್ವಭಾವದೋಷಗಳು ಮತ್ತು ಅಹಂನ ಮಗ್ಗಲುಗಳು ನನ್ನ ಗಮನಕ್ಕೆ ಬರುತ್ತಿವೆ ಮತ್ತು ಅವುಗಳನ್ನು ನಿವಾರಿಸಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ನೀವು (ಪರಾತ್ಪರ ಗುರು ಡಾ. ಆಠವಲೆ) ಹೇಳಿದಂತೆ, ಜವಾಬ್ದಾರ ಸಾಧಕರಿಗೆ ಸ್ವಭಾವದೋಷ-ನಿರ್ಮೂಲನೆ ತಖ್ತೆಯನ್ನು ತೋರಿಸಲು ಪ್ರಾರಂಭಿಸಿದ್ದೇನೆ; ಆದರೆ ನನ್ನಿಂದ ಅವಶ್ಯಕವಿರುವಷ್ಟು ಪ್ರಯತ್ನಗಳು ಆಗುತ್ತಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾವು ಮಾಡುತ್ತಿರುವ ಸಾಧನೆಯಿಂದ ನಮಗೆ ಆನಂದ ಸಿಗಲು ಪ್ರಾರಂಭವಾದರೆ ಮಾತ್ರ ನಮ್ಮ ಸಾಧನೆಯ ಪ್ರಯತ್ನಗಳು  ಪ್ರಾರಂಭವಾಗುತ್ತವೆ. ಸಾಧನೆಯ ಆರಂಭದಲ್ಲಿ ಆನಂದ ಸಿಗುವುದಿಲ್ಲ. ೧೦-೧೫ ವರ್ಷಗಳ ನಂತರ, ಆನಂದದ ಅನುಭೂತಿ ಬರಲು ಪ್ರಾರಂಭವಾಗುತ್ತದೆ. ನಂತರ ಯಾರೂ ಸಾಧನೆಯನ್ನು ಬಿಡುವುದಿಲ್ಲ. ಸಾಧಕರು ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಈಶ್ವರಪ್ರಾಪ್ತಿಯ ವರೆಗೆ ನಮ್ಮ ಪ್ರಯತ್ನಗಳು ಮತ್ತಷ್ಟು ಹೆಚ್ಚಾಗುತ್ತವೆ.

೨. ಎಷ್ಟು ವೈಯಕ್ತಿಕ ಕೆಲಸಗಳಿದ್ದರೂ, ಸಾಧಕರೊಂದಿಗೆ ಮಾತನಾಡುವುದು ಮತ್ತು ಅವರಿಗೆ ಸಾಧನೆಯಲ್ಲಿ ಸಹಾಯ ಮಾಡುವುದು ಆವಶ್ಯಕವಾಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಡಾ. (ಸೌ.) ಅರುಣಾ ಸಿಂಗ್‌ ಇವರಿಗೆ) : ನೀವು ಅವರೊಂದಿಗೆ (ಸಾಧಕಿ) ಮಾತನಾಡುತ್ತೀರೋ ಇಲ್ಲವೋ ?

ಡಾ. (ಸೌ.) ಅರುಣಾ ಸಿಂಗ್‌ : ಈಗ ಕಳೆದ ೨-೩ ತಿಂಗಳಿನಿಂದ ಮನೆಗೆಲಸದ ಕಾರಣ ನಾನು ಹೊರಗಿದ್ದೇನೆ. ಇಲ್ಲದಿದ್ದರೆ ಅಲ್ಪ ಸ್ವಲ್ಪ ಮಾತನಾಡುತ್ತಿದ್ದೆನು.

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ : ಆದರೆ ನೀವು ಮೊಬೈಲ್‌ ಫೋನ್‌ ಮೂಲಕ ಮಾತನಾಡಬಹುದಾಗಿತ್ತಲ್ಲ ? ಮನೆಗೆಲಸಗಳಿವೆ; ಎಂದು ನೀವು ಅದನ್ನು ಹೇಗೆ ಬಿಟ್ಟಿರಿ ? ಭಾರತದಾದ್ಯಂತ ಪ್ರಯಾಣಿಸುವವರು ಸಹ ತಾನು ಈಗ ಬೇರೆ ರಾಜ್ಯದಲ್ಲಿದ್ದೇನೆ, ಆದ್ದರಿಂದ ನನಗೆ ಸಾಧಕರೊಂದಿಗೆ ಮಾತನಾಡಲು ಸಾಧ್ಯವಿಲ್ಲವೆಂದು ಹೇಳುವುದಿಲ್ಲ. ಈಗ ನೀವು ಅವರ ಸಾಧನೆಯ ವರದಿಯನ್ನು ನಿಯಮಿತವಾಗಿ ತೆಗೆದುಕೊಳ್ಳಿರಿ. ಆರಂಭದಲ್ಲಿ ಪ್ರತಿದಿನ ತೆಗೆದುಕೊಳ್ಳಿರಿ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಸಾಧಕಿಯನ್ನು ಉದ್ದೇಶಿಸಿ) : ನೀವು ಪ್ರತಿದಿನ (ಡಾ. (ಸೌ.) ಅರುಣಾ ಸಿಂಗ್) ಅವರಿಗೆ ನೀವು ತಖ್ತೆಯನ್ನು ಬರೆದಿರುವ ಬಗ್ಗೆ ಹೇಳಿರಿ. ಕೆಲವು ತಿಂಗಳು ಹೀಗೆ ಮಾಡಿದ ನಂತರ, ವಾರಕ್ಕೆ ಎರಡು ಬಾರಿ ಹೇಳಿ. ನಂತರ ವಾರಕ್ಕೊಮ್ಮೆ ಹೇಳಿ. ನಂತರ, ನಿಮ್ಮಿಂದಲೇ ಹಾಗೆ ಪ್ರಯತ್ನಗಳಾಗುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಡಾ. (ಸೌ.) ಅರುಣಾ ಸಿಂಗ್‌ ಅವರನ್ನು ಉದ್ದೇಶಿಸಿ) : ಇದು ನಿಮ್ಮ ಜವಾಬ್ದಾರಿಯಾಗಿದೆ.

೩. ಸಾಧಕನ ವ್ಯಷ್ಟಿ ಸಾಧನೆಯಲ್ಲಿ ಸಾತತ್ಯ ಬಂದಿರುವುದರಿಂದ ಸಾಧಕನಿಗೆ ಮನಸ್ಸಿನ ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗುವುದು.

ಶ್ರೀ. ಸುನೀಲ ಘನವಟ : ಕಳೆದ ೬ ತಿಂಗಳುಗಳಿಂದ ನಾನು ‘ಸಮಷ್ಟಿ ಸಾಧನೆ ಮಾಡುತ್ತಾ ಮಾಡುತ್ತಾ, ನನ್ನ ವ್ಯಷ್ಟಿ ಸಾಧನೆ ಮಾಡುವ ಆಸಕ್ತಿ ತನ್ನಿಂತಾನೇ ಹೆಚ್ಚಾಗುತ್ತಿದೆ’ ಎನ್ನುವುದನ್ನು ಅನುಭವಿಸುತ್ತಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಬಹಳ ಚೆನ್ನಾಗಿದೆ. ಈಗ ನೀವು ಗೆದ್ದಿರಿ !

ಶ್ರೀ. ಸುನೀಲ ಘನವಟ : ನಿಮ್ಮ ಕೃಪೆಯಿಂದ ! ಸದ್ಗುರು ಕಾಕಾ ರವರಿಗೆ (ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ) ಸಾಧನೆಯ ಪ್ರಯತ್ನಗಳ ವರದಿಯನ್ನು ನೀಡುತ್ತಿದ್ದೆನು. ಆಗ ನನ್ನ ಗಮನಕ್ಕೆ ಬಂದ ಅಂಶವೆಂದರೆ ನಾನು ಕಳೆದ ೨೦ ವμರ್Àಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೆ ಗುರುದೇವಾ ಈ ೬ ತಿಂಗಳಿನಲ್ಲಿ ತಖ್ತೆ ಬರವಣಿಗೆಯಲ್ಲಿ ಸಾತತ್ಯ ಮತ್ತು ಸಾಧನೆಯ ವರದಿ ನೀಡುವ ಪ್ರಯತ್ನ ನಿಮ್ಮ ಕೃಪೆಯಿಂದಲೇ ಆಗಿದೆ. ಆದುದರಿಂದ ೬ ತಿಂಗಳಿನಿಂದ ನಾನು ಮನಸ್ಸಿನ ಸ್ಥಿರತೆಯನ್ನು ಅನುಭವಿಸುತ್ತಿದ್ದೇನೆ.

೪. ಸಾಧನೆಯಲ್ಲಿ ಪ್ರಗತಿ ಸಾಧಿಸುತ್ತಿರುವ ಸಾಧಕನ ಮಾತುಗಳಲ್ಲಿ ಚೈತನ್ಯವಿರುವುದರಿಂದ ಅವನ ಮಾತುಗಳ ಪರಿಣಾಮ ಸಮಾಜದ ಮೇಲಾಗುತ್ತದೆ ಮತ್ತು ಸಮಾಜವು ಸಾಧನೆಯನ್ನು ಮಾಡಲು ಪ್ರಾರಂಭಿಸುತ್ತದೆ!

ಶ್ರೀ. ಹರ್ಷದ ಖಾನವಿಲಕರ : ಪ್ರಸ್ತುತ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಮಹಿಳೆಯರು ವಿರೋಧಿಸಲು ಪ್ರಾರಂಭಿಸಿದರೆ, ಅವರಿಗೆ ತೊಂದರೆ ಕೊಡಲು ಯಾರೂ ಧೈರ್ಯ ಮಾಡುವುದಿಲ್ಲ. ಮಹಿಳೆಯರು ಪ್ರತಿರೋಧ ಮತ್ತು ಹೋರಾಡುವ ವೃತ್ತಿಯನ್ನು ಬೆಳೆಸಿಕೊಂಡರೆ, ಅವರು ಹೋರಾಡಬಹುದು. ಹಿಂದೂ ಜನಜಾಗೃತಿ ಸಮಿತಿಯ ಸ್ವರಕ್ಷಣೆ ತರಬೇತಿ ವರ್ಗದಲ್ಲಿ ಮಹಿಳೆಯರ ಪ್ರತಿಸ್ಪಂದನ ಹೆಚ್ಚುತ್ತಿದೆ. ಅವರ ಸಿದ್ಧತೆಯು ನಮಗಿಂತ ಅಧಿಕವಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಸತ್ಸಂಗದಲ್ಲಿರುವ ಸಾಧಕರನ್ನು ಉದ್ದೇಶಿಸಿ) : ಈಗ ನೀವು ಇವರ ಮಾತನ್ನು ಕೇಳುತ್ತಿದ್ದೀರಿ. ೧-೨ ಬಾರಿ ದೀರ್ಘಶ್ವಾಸ ತೆಗೆದುಕೊಂಡು ನೋಡಿ. ಯಾವುದಾದರೂ ಸುಗಂಧದ ಬರುತ್ತಿದೆಯೇ ? ಯಾರಿಗೆಲ್ಲ ಸುಗಂಧ ಬಂದಿತು ? ಯಾರಿಗೆ ಸುಗಂಧ ಬಂದಿತೋ, ಅವರು ತಮ್ಮ ಕೈಯನ್ನು ಮೇಲಕ್ಕೆ ಎತ್ತಿರಿ. (ಸತ್ಸಂಗದಲ್ಲಿನ ಅನೇಕ ಸಾಧಕರಿಗೆ ಸುಗಂಧದ ಬಂದಿತು’ – ಸಂಕಲನಕಾರರು)

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ (ಶ್ರೀ ಹರ್ಷದ ಅವರನ್ನು ಉದ್ದೇಶಿಸಿ) : ಈಗ ನಿಮ್ಮ ಧ್ವನಿಯಲ್ಲಿ ಚೈತನ್ಯ ಬಂದಿದೆ. ಅದರಿಂದ ಕೇಳುವವರ ಮೇಲೆ ಪರಿಣಾಮವಾಗುತ್ತಿದೆ ಮತ್ತು ಅವರು ಸಾಧನೆಯನ್ನು ಮಾಡಲು ಸಿದ್ಧರಾಗುತ್ತಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ನಮ್ಮ ಸಾಧಕರು ಬಹಳ ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರಲ್ಲ ? ೧೦-೧೫ ವರ್ಷಗಳ ಹಿಂದೆ ಏನು ಫಲ ಸಿಕ್ಕಿತು ? ಏನೂ ಇರಲಿಲ್ಲ ಅಲ್ಲ ? ಈಗ ಸಮಯ ಬಂದಿದೆ ಮತ್ತು ಮಾತಿನಲ್ಲಿ ಚೈತನ್ಯವಿರುವ ಸಾಧಕರ ಆವಶ್ಯಕತೆಯೂ ಇದೆ. ಚೈತನ್ಯವಿರುವ ಅಂದರೆ ಸಾಧನೆ ಮಾಡುವ ಮತ್ತು ಸಾಧನೆಯಲ್ಲಿ ಮುನ್ನಡೆಯುವವರು ನಮಗೆ ಬೇಕಾಗಿದ್ದಾರೆ. ದೇವರು ನಿಮ್ಮ ರೂಪದಲ್ಲಿ ಒಳ್ಳೆಯ ಸಾಧಕನನ್ನು ನೀಡಿದ್ದಾನೆ.

೫. ಕಾಲಾನುಸಾರ ಈಶ್ವರನು ಎಲ್ಲವನ್ನೂ ಮಾಡುವವನಿದ್ದರೂ, ಅವನಿಗೂ ಮಾಧ್ಯಮ ಬೇಕು

ಶ್ರೀ. ಹರ್ಷದ ಖಾನವಿಲಕರ : ಗುರುದೇವರೇ ನಿಮ್ಮ ಕೃಪೆಯಿಂದಲೇ ಅಧ್ಯಾತ್ಮಪ್ರಸಾರದ ವೇಗ ಹೆಚ್ಚುತ್ತಿದೆ. ೨ ದಿನಗಳ ಹಿಂದೆ ಧರ್ಮಪ್ರೇಮಿಗಳ ಸತ್ಸಂಗ ನಡೆಯಿತು. ಸತ್ಸಂಗಕ್ಕೆ ಬಂದಿದ್ದ ಧರ್ಮಪ್ರೇಮಿಗಳು ೨ ದಿನಗಳಲ್ಲಿ ಜಿಜ್ಞಾಸುಗಳನ್ನು ಸಂಪರ್ಕಿಸಿದರು ಮತ್ತು ಈಗ ಅದೇ ಸಂಪರ್ಕದಿಂದ ಸತ್ಸಂಗಗಳ ನಿಯೋಜನೆಯಾಗುತ್ತಿವೆ. ಈ ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ. ಕಾಲಾನುಸಾರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ಕಾಲಕ್ಕೆ ತಕ್ಕಂತೆ ಅಗತ್ಯವಾದ ವೇಗವನ್ನು ಪಡೆದಿದೆ; ಹಾಗಾಗಿ ಇದು ನಡೆಯುತ್ತಿದೆ. ಈ ಹಿಂದೆ ನಮಗೆ ‘ಜನರಿಗೆ ಹೇಗೆ ಹೇಳುವುದು ? ಅವರಿಂದ ಸಾಧನೆಯನ್ನು ಹೇಗೆ ಮಾಡಿಸಿಕೊಳ್ಳುವುದು ? ಎಂದು ಅನಿಸುತ್ತಿತ್ತು. ತದನಂತರ ನಾವೇ ಇಲ್ಲಿ ಕಡಿಮೆ ಬೀಳುತ್ತಿದ್ದೇವೆ, ಕಾರ್ಯದ ಈ ವೇಗವನ್ನು ನೋಡಿದಾಗ ಈಗ ಪರಿವರ್ತನೆಯ ಕಾಲ ಪ್ರಾರಂಭವಾಗುತ್ತಿದೆಯೆಂದು ನನಗೆ ಅನಿಸುತ್ತದೆ. ಸಮಾಜದಲ್ಲಿ ಪರಿವರ್ತನೆಯಾಗುತ್ತಿದೆ.

ಈಶ್ವರನ ಕೃಪೆಯಿಂದ ಸಾಧಕರಿಂದ ಅಧ್ಯಾತ್ಮ ಪ್ರಸಾರದ ವಿವಿಧ ಪ್ರಯತ್ನಗಳು ಆಗುತ್ತಿವೆ. ಹಾಗೆಯೇ ಅವರಿಗೆ ವಿವಿಧ ಉಪಕ್ರಮಗಳು ಗಮನಕ್ಕೆ ಬರುತ್ತಿವೆ. ಉತ್ತರ ಭಾರತದಲ್ಲಿಯೂ ಈಗ ಮಹಿಳೆಯರಿಗಾಗಿ ಸ್ವಸಂರಕ್ಷಣಾ ಪ್ರಶಿಕ್ಷಣವರ್ಗ ಪ್ರಾರಂಭವಾಗಿದೆ. ಒಮ್ಮೆ ಮಹಿಳೆಯರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಸತ್ರವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಯುವತಿಯರು ಹಂಚಿಕೊಂಡ ಅನುಭವಗಳು ಪ್ರಾಯೋಗಿಕ ಮಟ್ಟದಲ್ಲಿದ್ದವು. ದೇವರ ಕೃಪೆಯಿಂದಲೇ ಈ ಬದಲಾವಣೆ ಕೇವಲ ೭ ದಿನಗಳಲ್ಲಿ ಆಯಿತು. ಇಷ್ಟೊಂದು  ಬದಲಾವಣೆ ಯಾವ ವ್ಯಕ್ತಿಯಲ್ಲಿಯೂ ಖಾಸಗಿ ಕರಾಟೆ ವರ್ಗಕ್ಕೆ ಹೋಗುವುದರಿಂದಲೂ ಆಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನೀವು ಕಾಲಮಹಾತ್ಮ್ಯೆಯ ಬಗ್ಗೆ ಮಾತನಾಡುತ್ತಿದ್ದೀರಿ, ಅಲ್ಲವೇ ? ಅದರಲ್ಲಿ ಮುಖ್ಯವಾದ ವಿಷಯವೆಂದರೆ ಕಾಲಾನುಸಾರ ಈಶ್ವರನು ಎಲ್ಲವನ್ನೂ ಮಾಡುವವನಿದ್ದಾನೆ; ಆದರೆ ಅವನಿಗೂ ಒಂದು ಮಾಧ್ಯಮ ಬೇಕಾಗಿರುತ್ತದೆ. ಅವನು ಯಾರ ಮಾಧ್ಯಮದಿಂದ ಮಾಡುತ್ತಾನೆ ? ದೇವರು ನಿಮ್ಮನ್ನು ಆಯ್ಕೆ ಮಾಡಿದ್ದಾನೆ. ತನ್ನಿಂತಾನೇ ಏನೂ ಆಗುವುದಿಲ್ಲ. ಸಮಯ ಬಂದಿದೆ; ಎಂದು ಹೀಗಾಗಿದೆಯೇ ? ಇಲ್ಲ. ಅಲ್ಲಿ ಯಾರಾದರೂ ಮಾಡುವವನು ಇದ್ದಾನೆ. ತುಂಬಾ ಚೆನ್ನಾಗಿದೆ !

(ಮುಂದುವರಿಯುವುದು)

ಸನಾತನವು ಮುಂಬರುವ ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳಿಗೆ ಸಾಧನೆಯಲ್ಲಿ ಆಸಕ್ತಿ ಮೂಡಿಸುವಂತಹ ಮಾನಸಿಕ ಸ್ತರದ ಜ್ಞಾನವುಳ್ಳ ಗ್ರಂಥಗಳನ್ನೂ ಪ್ರಕಟಿಸಲಿದೆ !

‘ಸಾಮಾನ್ಯ ವ್ಯಕ್ತಿಗಳು ಅಧ್ಯಾತ್ಮ, ಸಾಧನೆ, ಈಶ್ವರಪ್ರಾಪ್ತಿ ಇಂತಹ ವಿಷಯಗಳ ಸಂದರ್ಭದಲ್ಲಿ ತಪ್ಪು ಸಂಕಲ್ಪನೆಗಳಿಂದ ಸಾಧನೆ ಮಾಡಲು ಮಾಡುವುದಿಲ್ಲ. ಇದರಿಂದಾಗಿ ಅವರ ಜನ್ಮ ವ್ಯರ್ಥವಾಗುತ್ತದೆ. ಸನಾತನ ಸಂಸ್ಥೆಯು ಇದುವರೆಗೆ ಕೇವಲ ಈಶ್ವರಪ್ರಾಪ್ತಿಗೆ ಪ್ರಯತ್ನಿಸುವವರಿಗಾಗಿ ಆಧ್ಯಾತ್ಮಿಕ ಸ್ತರದ ಜ್ಞಾನವಿರುವ ಗ್ರಂಥಗಳನ್ನು ಮುದ್ರಿಸಿದೆ. ಆದರೆ ಮುಂಬರುವ ಕಾಲಗಳಲ್ಲಿ ಸನಾತನವು ಸಾಮಾನ್ಯ ವ್ಯಕ್ತಿಗಳಿಗೆ ಸಾಧನೆಯಲ್ಲಿ ಆಸಕ್ತಿ ಮೂಡುವಂತಹ ಮಾನಸಿಕ ಸ್ತರದ ಜ್ಞಾನವುಳ್ಳ ಗ್ರಂಥಗಳನ್ನು ಸಹ ಮುದ್ರಿಸಲಿದೆ’.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ