
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಉಪಸ್ಥಿತರಿದ್ದರು, ಹಾಗೆಯೇ ಇತರ ಸಾಧಕರೂ ಇದ್ದರು. ಸತ್ಸಂಗಕ್ಕೆ ಬಂದ ಸೌ. ಸುಪ್ರಿಯಾ ಸುರಜೀತ ಮಾಥುರ (ವರ್ಷ ೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೭) ಇವರು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುತ್ತಾರೆ. ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನೀಡಿದ ದೃಷ್ಟಿಕೋನದಿಂದ ‘ಸೌ. ಸುಪ್ರಿಯಾ ಅಕ್ಕನವರು ತಮ್ಮಲ್ಲಿ ಯಾವ ಬದಲಾವಣೆ ಮಾಡಿಕೊಂಡರು ?’ ಮತ್ತು ‘ಸಾಧಕರಿಗೆ ಸುಪ್ರಿಯಾ ಅಕ್ಕನವರಲ್ಲಿ ಯಾವ ಬದಲಾವಣೆ ಕಂಡು ಬಂದಿದೆ ?’, ಈ ಬಗ್ಗೆ ಸತ್ಸಂಗದಲ್ಲಿ ಚರ್ಚೆ ನಡೆಯಿತು. ಆ ಸಮಯದಲ್ಲಿ ನಡೆದ ಸಂಭಾಷಣೆಯನ್ನು ಇಲ್ಲಿ ಕೊಡಲಾಗಿದೆ.
೧. ‘ಸಾಧಕನು ಪ್ರಗತಿಯನ್ನು ಹೇಗೆ ಮಾಡಿಕೊಳ್ಳಬಹುದು ?’, ಎಂಬ ದೃಷ್ಟಿಯಿಂದ ಚಿಂತನೆ ಕಡಿಮೆಯಾಗುತ್ತಿದ್ದು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಂದಾಗಿ ಆಧ್ಯಾತ್ಮಿಕ ಮತ್ತು ಸಮಷ್ಟಿ ಸ್ತರಗಳ ದೃಷ್ಟಿಕೋನ ಅರಿವಾಯಿತು’, ಎಂದು ಸೌ. ಸುಪ್ರಿಯಾ ಮಾಥುರ ಇವರು ಹೇಳುವುದು
ಸೌ. ಸುಪ್ರಿಯಾ ಮಾಥುರ : ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯ ಸತ್ಸಂಗವನ್ನು (ಟಿಪ್ಪಣಿ ೧) ತೆಗೆದುಕೊಳ್ಳುವಾಗ ಸಾಧಕರನ್ನು ಮುಂದೆ ಕೊಂಡೊಯ್ಯುವ ದೃಷ್ಟಿಯಿಂದ ವಿಚಾರ ಮಾಡಲು ನನ್ನ ಪ್ರಯತ್ನ ಬಹಳ ಕಡಿಮೆಯಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಅಪೇಕ್ಷಿತ ರೀತಿಯಲ್ಲಿ ಸಾಧಕರ ಬಗ್ಗೆ ವಿಚಾರ ಮಾಡುವುದನ್ನು ನಾನು ಹೆಚ್ಚಿಸಬೇಕು. ನನ್ನಿಂದ ‘ಸಾಧಕರ ಪ್ರಗತಿ ಹೇಗಾಗುವುದು ?’, ಎಂಬ ದೃಷ್ಟಿಯಿಂದ ಚಿಂತನೆ ಮತ್ತು ಪ್ರಯತ್ನ ಕಡಿಮೆಯಾಗುತ್ತದೆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಂದಾಗಿ ಮುಂದಿನ ಹಂತದ ವಿಚಾರ, ಹಾಗೆಯೇ ಆಧ್ಯಾತ್ಮಿಕ ಮತ್ತು ಸಮಷ್ಟಿ ಸ್ತರಗಳಲ್ಲಿ ಯಾವ ದೃಷ್ಟಿಕೋನಗಳಿರುತ್ತವೆ ?’, ಎಂಬುದು ನನ್ನ ಗಮನಕ್ಕೆ ಬರುತ್ತಿದೆ. ಮೊದಲು ನನ್ನ ವಿಚಾರಪ್ರಕ್ರಿಯೆ ಹೇಗಿರುತ್ತಿತ್ತೆಂದರೆ, ‘ಸಾಧಕನಿಗೆ ಆವಶ್ಯಕವಾದುದೆಲ್ಲವನ್ನೂ ಹೇಳಿದ್ದೇನೆ, ಅಂದರೆ ನನ್ನ ಮಟ್ಟಿಗಿನ ಪ್ರಯತ್ನವು ಮುಗಿದಿದೆ.’ ಅನಂತರ ನಾನು ನನ್ನೆದುರಿರುವ ಪರಿಸ್ಥಿತಿಯನ್ನು ದೂಷಿಸುತ್ತಿದ್ದೆ; ಆದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರು ಹೇಳಿದ ನಂತರ ನನ್ನತ್ತ ನೋಡುವ ನನ್ನ ದೃಷ್ಟಿಕೋನವೇ ಬದಲಾಯಿತು.
(ಟಿಪ್ಪಣಿ ೧ : ಸಾಧಕನು ಮಾಡುತ್ತಿರುವ ನಾಮಜಪ, ಪ್ರಾರ್ಥನೆ ಮತ್ತು ಭಾವಜಾಗೃತಿಯ ಪ್ರಯತ್ನ, ಕೃತಜ್ಞತಾಭಾವ, ಹಾಗೆಯೇ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆ, ಈ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸಾಧಕರಿಗೆ ಆ ವಿಷಯದಲ್ಲಿ ಸಾಧನೆಯ ಮುಂದಿನ ದಿಶೆಯನ್ನು ನೀಡುವುದು)

೨. ‘ಸಾಧಕರಿಗೆ ವ್ಯಷ್ಟಿ ಸಾಧನೆಯ ವರದಿ ಸತ್ಸಂಗದಲ್ಲಿ ಒತ್ತಡ ಬರದಂತೆ ಅವರಿಗೆ ಸಾಧನೆಯ ಪ್ರಯತ್ನವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗಬೇಕು’, ಎಂದು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದಾಗ ಆ ನಿಟ್ಟಿನಲ್ಲಿ ಪ್ರಯತ್ನವಾಗತೊಡಗುವುದು
ಸೌ. ಸುಪ್ರಿಯಾ ಮಾಥುರ : ಕೆಲವು ಸಾಧಕರಿಗೆ ವರದಿ ಸತ್ಸಂಗದಲ್ಲಿ ಒತ್ತಡವಾಗುತ್ತದೆ ಅಥವಾ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನಾ ಪ್ರಕ್ರಿಯೆಯ ಒತ್ತಡವಾಗುತ್ತದೆ. ಆಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರು, ”ಸಾಧಕರಿಗೆ ವ್ಯಷ್ಟಿ ವರದಿ ಸತ್ಸಂಗದಿಂದ ಆನಂದ ಮತ್ತು ಸಾಧನೆಯ ಪ್ರಯತ್ನವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗಬೇಕು. ನಾವು ಎಂತಹ ಆದರ್ಶ ವರದಿ ಸತ್ಸಂಗವನ್ನು ತೆಗೆದುಕೊಳ್ಳಬೇಕೆಂದರೆ, ವರದಿ ಸತ್ಸಂಗದಿಂದ ಸಾಧಕನಿಗೆ ಪ್ರಗತಿಯ ದಿಶೆ ಸಿಗಬೇಕು. ಆನಂದ ಸಿಗಬೇಕು ಮತ್ತು ಕೃತಜ್ಞತೆ ಸಹ ಅನಿಸಬೇಕು ! ನಾವು ನಮ್ಮ ಅಂತರಂಗವನ್ನು ಹೇಗೆ ಸಿದ್ಧ ಮಾಡಬೇಕು ಮತ್ತು ಮುಂದಿರುವ ಸಾಧಕನೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದರೆ, ಅವನಿಗೆ ಅದರಿಂದ ಆನಂದವೇ ಸಿಗಬೇಕು”, ಎಂದು ಹೇಳಿದರು. ‘ಪ್ರತಿ ಯೊಬ್ಬ ಸಾಧಕನ ಬಗ್ಗೆ ಆಯಾ ಹಂತದಲ್ಲಿ ಯಾವ ರೀತಿ ವಿಚಾರ ಮಾಡಬೇಕು ?’, ಎಂಬ ದೃಷ್ಟಿಯಿಂದ ನನ್ನ ಸದ್ಯದ ಪ್ರಯತ್ನ ನಡೆದಿದೆ.
ಸದ್ಗುರು ಡಾ. ಮುಕುಲ ಗಾಡಗೀಳ : ಮೊದಲು ನಾನು ಸಹ ಇದೇ ರೀತಿ ವ್ಯಷ್ಟಿ ವರದಿ ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದೆ. ಆಗ ನನಗೂ ‘ಸಾಧಕರಿಗೆ ಸಾಧನೆಯ ವರದಿ ಸತ್ಸಂಗದಿಂದ ಆನಂದ ಸಿಗಬೇಕು’, ಎಂದು ಅನಿಸುತ್ತಿತ್ತು. ನಾನು ತೆಗೆದುಕೊಂಡ ಸಾಧನೆಯ ವರದಿ ಸತ್ಸಂಗದ ನಂತರ ಸಾಧಕರು ಕೋಣೆಯಿಂದ ಹೊರಗೆ ಹೋದಾಗ, ಇತರ ಸಾಧಕರು ಅವರಿಗೆ, ”ನಿಮ್ಮ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ ಇತ್ತಲ್ಲ ! ಎಲ್ಲರೂ ನಗುಮುಖದಿಂದ ಅಧೇಗೆ ಹೊರಗೆ ಬರುತ್ತಿರುವಿರಿ !” ಎಂದು ಕೇಳುತ್ತಿದ್ದರು. ಆಗ ಸಾಧಕರು, ”ನಮಗೆ ಸಾಧನೆಯ ವರದಿ ಸತ್ಸಂಗದಿಂದ ಬಹಳ ಆನಂದ ಸಿಗುತ್ತದೆ ಮತ್ತು ಕಲಿಯಲೂ ಸಿಗುತ್ತದೆ”, ಎಂದು ಹೇಳುತ್ತಿದ್ದರು. ಸಾಧನೆಯ ವರದಿ ಸತ್ಸಂಗಕ್ಕೆ ಬರುವ ಕೆಲವು ಸಾಧಕರು ನಂತರ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನೂ ಪ್ರಾಪ್ತಮಾಡಿಕೊಂಡರು.
೩. ‘ಸುಪ್ರಿಯಾ ಅಕ್ಕನವರು ಚೆನ್ನಾಗಿ ಪ್ರಯತ್ನಿಸಿ ತಮ್ಮಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ’, ಎಂದು ಸಾಧಕರು ಹೇಳುವುದು
ಕು. ರಜನಿಗಂಧಾ ಕುರ್ಹೆ : ಸುಪ್ರಿಯಾ ಅಕ್ಕನವರು, ”ಕೆಲವು ಸಾಧಕರಿಗೆ ಅವರ ವ್ಯಷ್ಟಿ ಸಾಧನೆಯ ವರದಿ ಸತ್ಸಂಗಗಳಲ್ಲಿ ಒತ್ತಡವಾಗುತ್ತದೆ’’, ಎಂದು ಹೇಳಿದರು. ನಾನು ಸುಪ್ರಿಯಾ ಅಕ್ಕನವರ ೧-೨ ವರದಿ ಸತ್ಸಂಗಗಳಲ್ಲಿ ಉಪಸ್ಥಿತಳಿದ್ದೆನು. ಆ ಸಮಯದಲ್ಲಿ ಯಾವ ಸಾಧಕರ ವರದಿ ತೆಗೆದುಕೊಳ್ಳಲಿಕ್ಕಿತ್ತೋ, ಅವರ ಮುಖದ ಮೇಲೆ ಯಾವುದೇ ಒತ್ತಡವಿರಲಿಲ್ಲ. ಅಕ್ಕನವರ ಮಾತುಗಳು ಅತ್ಯಂತ ಸಹಜವಾಗಿದ್ದವು. ಈ ಹಿಂದೆ ಸಹ ನಾನು ಅಕ್ಕನವರು ಸಾಧನೆಯ ವರದಿ ಸತ್ಸಂಗವನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇನೆ. ಈಗ ಅಕ್ಕನವರಲ್ಲಿ ಬಹಳ ಬದಲಾವಣೆ ಆಗಿದೆ. ಅವರು ಬಹಳ ಚೆನ್ನಾಗಿ ಪ್ರಯತ್ನಿಸಿದ್ದಾರೆ.
ಆಧುನಿಕ ವೈದ್ಯೆ (ಡಾ.) ಸೌ. ಕಸ್ತೂರಿ ಭೋಸಲೆ : ‘ಸುಪ್ರಿಯಾ ಅಕ್ಕನವರಲ್ಲಿ ಪ್ರೇಮಭಾವ ಬಹಳ ಹೆಚ್ಚಾಗಿದೆ’, ಎಂದು ನನಗೂ ಅರಿವಾಯಿತು. ನಾನು ಅವಳಿಗಿಂತ ವಯಸ್ಸಿನಲ್ಲಿ ಹಿರಿಯಳಾಗಿದ್ದರೂ ಅವಳು ಬಹಳ ಆತ್ಮೀಯತೆಯಿಂದ ನನ್ನ ಬಳಿಗೆ ಬಂದಳು ಮತ್ತು ನನ್ನ ಕೈ ಹಿಡಿದು, ”ಕಾಕು ನೀವು ಹೇಗಿದ್ದೀರಿ ?’’, ಎಂದು ಕೇಳಿದಳು. ಅವಳು ಮೊದಲ ಬಾರಿಗೆ ನನ್ನನ್ನು ಈ ರೀತಿ ಕೇಳಿದಳು. ಆದುದರಿಂದ ನನಗೆ ಬಹಳ ಆಶ್ಚರ್ಯವಾಯಿತು. ‘ಸುಪ್ರಿಯಾ ಅಕ್ಕ’, ಎಂದರೆ ಎಲ್ಲರಿಗೂ ಒತ್ತಡವಾಗುತ್ತದೆ; ಆದರೆ ನನಗೆ ಆ ಭೇಟಿಯಲ್ಲಿ ಹಾಗೇನು ಅನಿಸಲೇ ಇಲ್ಲ.
೪. ‘ಪತ್ನಿಯಲ್ಲಿ ಬದಲಾವಣೆಯಾಗಿದೆ’, ಎಂದು ಶ್ರೀ. ಸುರಜೀತ ಮಾಥುರ ಇವರು ಹೇಳುತ್ತಲೇ ಮೊದಲು ‘ಅವಳು ನಿಮ್ಮನ್ನು ‘ಗಂಡ’ನೆಂದು ನೋಡುತ್ತಿದ್ದಳೋ ಅಥವಾ ‘ಸಾಧಕ’ನೆಂದು ನೋಡುತ್ತಿದ್ದಳೊ ?’ ಎಂದು ಪರಾತ್ಪರ ಗುರು ಡಾಕ್ಟರರು ಕೇಳುವುದು
ಶ್ರೀ. ಸುರಜೀತ ಮಾಥುರ : ಮೊದಲಿಗಿಂತ ಸುಪ್ರಿಯಾಳಲ್ಲಿ (ಪತ್ನಿಯಲ್ಲಿ) ಬಹಳ ಬದಲಾವಣೆಯಗಿದೆ. ಮೊದಲು ಅವಳು ಬಹಳ ಕಟುವಾಗಿ ತಪ್ಪನ್ನು ಹೇಳುತ್ತಿದ್ದಳು. ಈಗ ಅವಳು ಸ್ಪಷ್ಟವಾಗಿ ಹೇಳುತ್ತಾಳೆ. ಆದುದರಿಂದ ನನಗೂ ಮೊದಲಿನ ಹಾಗೆ ಒತ್ತಡ ಬರುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಮೊದಲು ‘ಅವಳು ‘ಗಂಡ’ನೆಂದು ನಿಮ್ಮ ಕಡೆಗೆ ನೋಡುತ್ತಿದ್ದಳೋ ಅಥವಾ ‘ಸಾಧಕ’ನೆಂದು ನೋಡುತ್ತಿದ್ದಳೊ ?’
೫. ಸೌ. ಸುಪ್ರಿಯಾ ಮಾಥುರ ಇವರು ಯಜಮಾನರಿಗೆ, ಹಾಗೆಯೇ ಸಾಧಕರಿಗೆ ಕಟುವಾಗಿ ತಪ್ಪುಗಳನ್ನು ಹೇಳುತ್ತಿದ್ದ ಬಗ್ಗೆ ಒಪ್ಪಿಕೊಂಡು ಅದರ ಹಿಂದಿನ ವಿಚಾರಪ್ರಕ್ರಿಯೆಯನ್ನು ಹೇಳುವುದು ಮತ್ತು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವುದರಿಂದ ಆಗುತ್ತಿರುವ ಪ್ರಯೋಜನದ ಬಗ್ಗೆ ಹೇಳುವುದು
ಸೌ. ಸುಪ್ರಿಯಾ ಮಾಥುರ : ನಾನು ನನ್ನ ಪತಿ ಶ್ರೀ. ಸುರಜೀತ ಇವರಿಗೆ ಅವರ ತಪ್ಪುಗಳನ್ನು ಇತರ ಸಾಧಕರಿಗಿಂತ ಹೆಚ್ಚು ಕಟುವಾಗಿ ಹೇಳುತ್ತಿದ್ದೆನು. ಅವರಿಂದ ತಪ್ಪುಗಳಾಗುತ್ತಿದ್ದವು ಮತ್ತು ನಾನು ಅವರಿಗೆ ಅವುಗಳನ್ನು ಅಯೋಗ್ಯ ರೀತಿಯಲ್ಲಿ ಹೇಳುತ್ತಿದ್ದೆನು. ಆಗ ‘ಸಾಧಕರಿಗೆ ಅವರ ತಪ್ಪುಗಳನ್ನು ಕಟುವಾಗಿ ಹೇಳಿದರೆ ಮಾತ್ರ ಅವರಿಗೆ ಅದು ಮನವರಿಕೆಯಾಗುತ್ತದೆ ಮತ್ತು ತಪ್ಪುಗಳನ್ನು ಅವರು ಸುಧಾರಿಸಿಕೊಳ್ಳುವರು’, ಎಂಬ ನನ್ನ ಮನಃಸ್ಥಿತಿ ಇರುತ್ತಿತ್ತು. (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದ ಸಂಭಾಷಣೆ) ಆ ಸಮಯದಲ್ಲಿ ಕಟುವಾಗಿ ಮಾತನಾಡುವುದರಿಂದ ಎದುರಿರುವ ವ್ಯಕ್ತಿಗೆ ಒತ್ತಡವಾಗಿ ಅವನ ಮನಸ್ಸು ನಕಾರಾತ್ಮಕವಾಗುತ್ತಿತ್ತು ಮತ್ತು ನನಗೂ ನಿರಾಶೆ ಬಂದು ‘ನನಗೆ ಸಾಧಕರನ್ನು ನಿಭಾಯಿಸಲು ಬರುವುದಿಲ್ಲ. ‘ನನಗೆ ಈ ಸೇವೆ ಬೇಡವೇ ಬೇಡ,’ ಎಂದು ಅನಿಸುತ್ತಿತ್ತು. ನನ್ನ ಮನಸ್ಸಿನಲ್ಲಿ ಈ ರೀತಿಯ ವಿಚಾರಗಳು ಬರುತ್ತಿದ್ದವು. ಈಗ, ನಾನು ಸಮಷ್ಟಿ ಸೇವೆಯನ್ನು ಮಾಡುತ್ತಿದ್ದೇನೆ; ಆದುದರಿಂದ ಈ ಅಡಚಣೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕೇವಲ ‘ನಾನು ಮತ್ತು ನನ್ನ ಸೇವೆ’, ಈ ರೀತಿ ವ್ಯಷ್ಟಿ ಸಾಧನೆಯನ್ನು ನಾನು ಮಾಡಿದ್ದರೆ, ನನಗೆ ಈ ಅಡಚಣೆಗಳ ಬಗ್ಗೆ ಎಂದಿಗೂ ತಿಳಿಯುತ್ತಿರಲಿಲ್ಲ’, ಎಂಬ ವಿಚಾರಗಳು ಬರುತ್ತವೆ.
ಮೊದಲು ನನ್ನ ಮನಸ್ಸಿನಲ್ಲಿ, ‘ಸಾಧಕರಿಗೆ ತಪ್ಪು ಹೇಳುವುದು ಮತ್ತು ಅವರ ಸತ್ಸಂಗ ತೆಗೆದುಕೊಳ್ಳುವುದು’, ಈ ಸೇವೆ ನನಗೆ ಇಷ್ಟವಿಲ್ಲದಿದ್ದರೂ ನನಗೇಕೆ ನೀಡಿದ್ದಾರೆಂಬ ವಿಚಾರ ಗಳು ಬರುತ್ತಿದ್ದವು. ನಂತರ ‘ಈ ಸೇವೆ ನನಗೆ ಸಿಗದಿದ್ದರೆ, ಆಧ್ಯಾತ್ಮಿಕಸ್ತರದಲ್ಲಿ ನಿರ್ದಿಷ್ಟವಾಗಿ ಅಡಚಣೆಗಳು ಎಲ್ಲಿವೆ’, ಎಂದು ನನಗೆ ಗೊತ್ತೇ ಆಗುತ್ತಿರಲಿಲ್ಲ, ಎಂದು ನನ್ನ ಗಮನಕ್ಕೆ ಬಂದಿತು.
ಈಗ ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ, ಯಾವನಾ ದರೊಬ್ಬ ಸಾಧಕನ ಮನಸ್ಸಿನಲ್ಲಿಯೂ ‘ನನ್ನ ಮನಸ್ಸಿನಲ್ಲಿ ಬರುವಂತಹ ವಿಚಾರಗಳೇ ಬರುತ್ತವೆ. ಆಗ ನಾನು ಸಹ ‘ಯಾವ ಪ್ರಯತ್ನ ಮಾಡಬೇಕು ?’, ಎಂದು ನನಗೆ ತಿಳಿಯುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಚಿಂತನೆ ಮಾಡತೊಡಗಿದಾಗ ‘ನನ್ನ ಮತ್ತು ಎದುರಿರುವ ಸಾಧಕನ ಅಂತರ್ಮುಖತೆ ಹೆಚ್ಚಾಗುತ್ತದೆ’, ಎಂಬುದೂ ನನ್ನ ಗಮನಕ್ಕೆ ಬಂದಿತು.
(ಮುಂದುವರಿಯುವುದು)
– (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿನ ಸಂಭಾಷಣೆ)
ಸದ್ಗುರು ಡಾ. ಮುಕುಲ ಗಾಡಗೀಳ ಇವರು ‘ಸಾಧಕರಿಗೆ ಸುಪ್ರಿಯಾ ಅಕ್ಕನವರ ಬಗ್ಗೆ ಏಕೆ ಭಯವೆನಿಸುತ್ತದೆ ?’, ಈ ಬಗ್ಗೆ ಉತ್ತರ ನೀಡಿದ ತಕ್ಷಣ ‘ಈಗ ಸಾಧಕರ ಭಯ ಕಡಿಮೆ ಆಗಿದೆಯಲ್ಲ ?’, ಎಂದು ಪರಾತ್ಪರ ಗುರು ಡಾಕ್ಟರರು ಕೇಳುವುದು![]() ಸದ್ಗುರು ಡಾ. ಮುಕುಲ ಗಾಡಗೀಳ : ಸುಪ್ರಿಯಾ ಅಕ್ಕನವರು ಸಾಧಕರ ಮನಸ್ಸಿನಲ್ಲಿರುವ ಎಲ್ಲವನ್ನೂ ಗುರುತಿಸುತ್ತಾರೆ ಅಲ್ಲವೇ ! ಆದುದರಿಂದ ಸಾಧಕರಿಗೆ ಈಗ ಅವರು ನಮ್ಮ ಬಗ್ಗೆ ಏನು ಹೇಳುವರು ಎಂಬ ಬಗ್ಗೆ ಹೆಚ್ಚು ಭಯವಿರುತ್ತದೆ ? ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈಗ ಸಾಧಕರ ಭಯ ಸ್ವಲ್ಪ ಕಡಿಮೆಯಾಗಿರಬೇಕಲ್ಲವೇ ? ಸೌ. ಸುಪ್ರಿಯಾ ಮಾಥುರ : ಹೌದು. ಈಗ ಕೆಲವು ಸಾಧಕರು, ನಮಗೆ ಒತ್ತಡ ಬರಲಿಲ್ಲವೆಂದು ಹೇಳುತ್ತಾರೆ. ನಾನು ನನ್ನ ದೃಷ್ಟಿಯಿಂದಲೂ, ‘ಯಾವ ಕಾರಣಗಳಿಂದ ಎದುರಿರುವವರಿಗೆ ಒತ್ತಡವಾಗುತ್ತದೆ’, ಎಂದು ವಿಚಾರ ಮಾಡುತ್ತೇನೆ. |