
ಮೊಬೈಲ್ ಅನ್ನು ಅನಾವಶ್ಯಕ ಬಳಸುವುದರಿಂದ ಇಂದಿನ ಪೀಳಿಗೆಯು ನಾಶವಾಗುತ್ತಿದೆ. ‘ದಿನವಿಡೀ ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡುವುದರಿಂದ ಬೇರೆ ಏನಾದರೂ ಮಾಡಬೇಕೆಂಬ ಇಚ್ಛೆಯಾಗುವುದಿಲ್ಲ. ಈ ಹವ್ಯಾಸದಿಂದ ಶಾರೀರಿಕ ಮಾನಸಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ. ‘ನಾವು ಅರಿವಿಲ್ಲದೆ ಈ ಹವ್ಯಾಸಕ್ಕೆ ಬಲಿಯಾಗುತ್ತಿದ್ದೇವೆ ಇದರ ಅರಿವು ಇಟ್ಟುಕೊಳ್ಳಬೇಕು. ನನಗೂ ಮೊಬೈಲ್ ನೋಡುವ ಹವ್ಯಾಸವಿತ್ತು. ಈ ಹವ್ಯಾಸದಿಂದ ಹೊರಬರಲು ಪರಾತ್ಪರ ಗುರು ಡಾ. ಆಠವಲೆ ಇವರ ಕೃಪೆಯಿಂದ ನಾನು ಮಾಡಿದ ಪ್ರಯತ್ನಗಳನ್ನು ಮುಂದೆ ಹೇಳಿರುವೆನು.
‘ಶ್ರೀಮತಿ ಗೀತಾ ಪ್ರಭು ಇವರು ತಮ್ಮ ೬೭ ನೇಯ ವಯಸ್ಸಿನಲ್ಲಿ ಅನಾವಶ್ಯಕ ಮೊಬೈಲ್ ಬಳಸುವ ಅಭ್ಯಾಸವನ್ನು ಬಿಡಲು ಮಾಡಿದ ಪ್ರಯತ್ನಗಳು ಶ್ಲಾಘನೀಯವಾಗಿವೆ. ಈ ಲೇಖನದಿಂದ ಇತರ ಸಾಧಕರಿಗೂ ಮೊಬೈಲ್ ನೋಡುವ ಹವ್ಯಾಸ ಬಿಡುವುದಕ್ಕಾಗಿ ಪ್ರಯತ್ನಿಸಲು ನಿಶ್ಚಿತವಾಗಿ ಪ್ರೇರಣೆ ಸಿಗುವುದು !’ – ಪರಾತ್ಪರ ಗುರು ಡಾ. ಆಠವಲೆ (೧೮.೧೧.೨೦೨೩) |
೧. ಮುಂಬೈಗೆ ಹೋದ ಮೇಲೆ ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡುವುದು ಮತ್ತು ‘ನಾನು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ’, ಇದರ ಅರಿವಾಗುವುದು
‘ನವೆಂಬರ್ ೨೦೨೧ ರಿಂದ ಫೆಬ್ರುವರಿ ೨೦೨೨ ರ ವರೆಗೆ ನನಗೆ ವೈಯಕ್ತಿಕ ಕಾರಣಕ್ಕಾಗಿ ರಾಮನಾಥಿ ಆಶ್ರಮದಿಂದ ಮುಂಬೈಗೆ ಹೋಗಬೇಕಾಯಿತು. ಅಲ್ಲಿ ನಾನು ಸತತವಾಗಿ ‘ಯೂಟ್ಯೂಬ್‌ನ ಕಾರ್ಯಕ್ರಮಗಳನ್ನು ನೋಡುತ್ತಿದ್ದನು. ನಂತರ ರಾಮನಾಥಿ ಆಶ್ರಮಕ್ಕೆ ಬಂದ ಮೇಲೆಯೂ ನಿವಾಸಕ್ಕೆ ಹೋದ ಮೇಲೆ ನಾನು ಮೊಬೈಲ್ ನೋಡುತ್ತಿದ್ದೆ. ಆಗ ನನ್ನ ಮನಸ್ಸಿನಲ್ಲಿ ನಾನು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ, ಎಂಬ ಅಪರಾಧಿ ಭಾವನೆಯು ಇರುತ್ತಿತ್ತು.
೨. ಮೊಬೈಲ್ ನೋಡುವ ಹವ್ಯಾಸವನ್ನು ಬಿಡಲು ಮಾಡಿದ ಪ್ರಯತ್ನಗಳು
೨ ಅ. ಮೊಬೈಲ್ ಇನ್ನೊಬ್ಬ ಸಾಧಕಿಯ ಹತ್ತಿರ ಇಡುವುದು : ಒಮ್ಮೆ ನಾನು ನನ್ನ ಸಮಸ್ಯೆಯನ್ನು ‘ಸನಾತನ ಪ್ರಭಾತ’ದ ಸಂಪಾದಕರಾದ ಶ್ರೀ. ಯೋಗೇಶ ಜಲತಾರೆ ಇವರಿಗೆ ಹೇಳಿದೆನು. ಆಗ ಅವರು ನಿವಾಸಕ್ಕೆ ಹೋದ ನಂತರ ಮೊಬೈಲ್‌ನ್ನು ಇನ್ನೊಬ್ಬ ಸಾಧಕಿಯ ಹತ್ತಿರ ಇಡಲು ಹೇಳಿದರು ‘ಆ ರೀತಿ ಮಾಡಿಯೂ ನನಗೆ ಕೇವಲ ಮೂರು ದಿನ ಮೊಬೈಲ್‌ನಿಂದ ದೂರ ಇರಲು ಸಾಧ್ಯವಾಯಿತು’.
೨ ಆ. ಸ್ವಯಂಸೂಚನೆ ಕೊಡುವುದು : ಅನಂತರ ನಾನು ನನ್ನ ಈ ಸ್ವಭಾವದೋಷಕ್ಕಾಗಿ ಸ್ವಯಂಸೂಚನೆಯನ್ನು ಕೊಡಲು ಪ್ರಾರಂಭಿಸಿದೆ, ಇದರಿಂದ ನನಗೆ ೯ ದಿನ ಮೊಬೈಲ್ ನಿಂದ ದೂರ ಇರಲು ಸಾಧ್ಯವಾಯಿತು. ಮತ್ತೆ ನನಗೆ ಮೊಬೈಲ್ ನೋಡುವ ಮೋಹವಾಗಿ ನಾನು ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡಲು ಪ್ರಾರಂಭಿಸಿದೆ.
೨ ಇ. ಓರ್ವ ಸಂತರ ಮಾರ್ಗದರ್ಶನದ ನಂತರ ಯುವ ಸಾಧಕರ ವಿಚಾರಗಳನ್ನು ಕೇಳಿ ನಾನು ಪ್ರಭಾವಿತಳಾದೆನು ಮತ್ತು ಮೊಬೈಲ್ ಅನ್ನು ಅನಾವಶ್ಯಕ ಬಳಸದಿರಲು ನಿರ್ಧರಿಸಿದೆನು : ಒಮ್ಮೆ ನಾನು ಓರ್ವ ಸಂತರಿಂದ ಯುವ ಸಾಧಕರಿಗೆ ಮಾರ್ಗದರ್ಶನವಿತ್ತು ಅದನ್ನು ಕೇಳಿದಾಗ ಆ ಯುವ ಸಾಧಕರು ‘ತಮ್ಮ ಸಾಧನೆಯಲ್ಲಿ ಬರುವ ಅಡೆತಡೆಗಳು ಮತ್ತು ಅವುಗಳನ್ನು ಪರಿಹರಿಸಲು ಅವರಿಂದಾದ ಪ್ರಯತ್ನಗಳ ಬಗ್ಗೆ ಹೇಳಿದರು. ಅದನ್ನು ಕೇಳಿ ನಾನು ಪ್ರಭಾವಿತಳಾದೆನು. ಆಗ ನನ್ನ ಬಗ್ಗೆ ನನಗೇ ನಾಚಿಕೆಯಾಯಿತು. ಆಗ ನನ್ನ ಮನಸ್ಸಿನಲ್ಲಿ ‘ಇಷ್ಟು ಸಣ್ಣ ಹುಡುಗರು ಎಷ್ಟು ತಳಮಳದಿಂದ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ೬೭ ವರ್ಷದ ನನಗೆ ಮೊಬೈಲ್ ನೋಡುವ ಹವ್ಯಾಸ ಬಿಡಲು ಆಗುತ್ತಿಲ್ಲವಲ್ಲ’ ಆಗ ನಾನು ಇನ್ನೆಂದೂ ಅನಾವಶ್ಯಕ ಮೊಬೈಲ್ ಬಳಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಪರಿಣಾಮವಾಗಿ ೧೯ ದಿನ ಮೊಬೈಲ್‌ನಿಂದ ದೂರ ಇದ್ದೆನು. ಆಗ ನನಗೆ ಮೊಬೈಲ್ ನೋಡುವ ನನ್ನ ಹವ್ಯಾಸ ಮುಗಿಯಿತು ಎಂದೆನಿಸಿತು. ಆದರೆ ೨೦ ನೇ ದಿನ ಮತ್ತೆ ನಾನು ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡಲು ಪ್ರಾರಂಭಿಸಿದೆ.
೨ ಈ. ವ್ಯಷ್ಟಿ ವರದಿ ಸಾಧಕಿಗೆ ಪ್ರಾಮಾಣಿಕವಾಗಿ ನನ್ನ ಸ್ಥಿತಿಯ ಬಗ್ಗೆ ಹೇಳಿ ಅನಾವಶ್ಯಕ ಮೊಬೈಲ್ ಬಳಕೆಯನ್ನು ತಡೆಗಟ್ಟಲು ಪ್ರಯತ್ನಿಸಿದೆ : ತದನಂತರ ಒಬ್ಬ ಸಾಧಕನು ನನ್ನ ಈ ಹವ್ಯಾಸದ ಬಗ್ಗೆ ನನ್ನ ವ್ಯಷ್ಟಿ ವರದಿಯ ಸಾಧಕಿಗೆ ಹೇಳಿದನು. ಅವಳು ನನ್ನ ಈ ಹವ್ಯಾಸದ ಬಗ್ಗೆ ಕೇಳಿದಾಗ ನಾನು ಪ್ರಾಮಾಣಿಕವಾಗಿ ನನ್ನ ಈ ಸ್ಥಿತಿಯ ಬಗ್ಗೆ ಹೇಳಿ, ಮತ್ತೆ ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡುವುದಿಲ್ಲ ಎಂದು ಹೇಳಿದೆ. ಯಾವ ಸಾಧಕನು ವರದಿ ತೆಗೆದುಕೊಳ್ಳುವ ಸಾಧಕಿಗೆ ಈ ಎಲ್ಲಾ ಅಂಶಗಳನ್ನು ಹೇಳಿದನೊ ಆ ಸಾಧಕನ ಬಗ್ಗೆ ನನಗೆ ಕೃತಜ್ಞತೆ ಎನಿಸಿತು. ನಾನು ವರದಿಸೇವಕಿಗೆ ಹೇಳಿದ ಪ್ರಕಾರ ಮೂರು ದಿನ ಮೊಬೈಲ್ ನೋಡಲಿಲ್ಲ. ಮತ್ತೆ ನನಗೆ ಮೊಬೈಲ್ ನೋಡುವ ಮೋಹವಾಯಿತು, ಆದರೆ ಈಗ ನಾನು ಕೇವಲ ನಿವಾಸದಲ್ಲಿರುವಾಗ ಮೊಬೈಲ್ ನೋಡುತ್ತಿದ್ದೆ. ಕಾರಣ ಈಗ ನನಗೆ ನಿಜವಾಗಿಯೂ ಈ ಹವ್ಯಾಸದಿಂದ ಬಿಡುಗಡೆ ಬೇಕಾಗಿತ್ತು.
೨ ಉ. ‘ಇಂಟರ್ನೆಟ್’ನ ಅವಧಿ ಮುಗಿದ ಮೇಲೆ ಮತ್ತೆ ರಿಚಾರ್ಜ್ ಮಾಡದಿರುವುದು : ನನಗೆ ಮೊಬೈಲ್ ನೋಡುವ ಹವ್ಯಾಸ ಬಿಡಲೇಬೇಕಿತ್ತು. ಆದುದರಿಂದ ೧೧.೮.೨೦೨೨ ರಂದು ಇಂಟರ್ನೆಟ್ ಅವಧಿ ಮುಗಿದ ಮೇಲೆ ನಾನು ಮತ್ತೆ ರಿಚಾರ್ಜ್ ಮಾಡಲಿಲ್ಲ. ತದನಂತರ ನಾನು ೨೮.೮.೨೦೨೨ ರಂದು ಗಣಪತಿಯ ಹಬ್ಬಕ್ಕೆ ಮಗನ ಮನೆಗೆ ಮುಂಬೈಗೆ ಹೋದೆ. ಅವನ ಮನೆಯಲ್ಲಿ ಇಂಟರ್ನೆಟ್ ಇದ್ದರೂ ನಾನು ಯೂಟ್ಯೂಬ್‌ನಲ್ಲಿ ಕಾರ್ಯಕ್ರಮಗಳನ್ನು ನೋಡಲಿಲ್ಲ. ಈಗ ನನಗೆ ಯೂಟ್ಯೂಬ್ ನ ಕಾರ್ಯಕ್ರಮಗಳನ್ನು ನೋಡುವ ಬಯಕೆಯೂ ಆಗುವುದಿಲ್ಲ.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಕೃಪೆಯಿಂದ ನನಗೆ ಈ ಕೆಟ್ಟ ಹವ್ಯಾಸದಿಂದ ಹೊರಗೆ ಬರಲು ಸಾಧ್ಯವಾಯಿತು. ಅದಕ್ಕಾಗಿ ಅವರ ಕೋಮಲ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
– ಶ್ರೀಮತಿ ಗೀತಾ ಪ್ರಭು (ವಯಸ್ಸು ೬೭) ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೮.೨೦೨೨