ಸಾಧಕರಲ್ಲಿನ ‘ಭಾವ ಮತ್ತು ತಳಮಳ’, ಹಾಗೆಯೇ ಅವರಲ್ಲಿನ ‘ಸ್ವಭಾವದೋಷ ಮತ್ತು ಅಹಂ’ಗಳತ್ತ ಗಮನಹರಿಸಿ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಅಲೌಕಿಕ ಪ್ರಜ್ಞೆಯ ಪರಾತ್ಪರ ಗುರು ಡಾ. ಆಠವಲೆ !
‘ಸಾಧಕರಿಗೆ ಸ್ವಭಾವದೋಷವನ್ನು ಹೇಳುವ ಪದ್ಧತಿಯಲ್ಲಿಯೇ ಇಂದಿನ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ಯ ಬೀಜ ಅಡಗಿತ್ತು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸುಮಾರು ೨೦೦೩ ರಲ್ಲಿ ‘ಸ್ವಭಾವದೋಷ-ನಿರ್ಮೂಲನೆ ಪದ್ಧತಿ’ ಮತ್ತು ‘ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು’, ಈ ಪದ್ಧತಿ ಬೇರೂರಲು ಅರಂಭವಾಯಿತು ಮತ್ತು ಈಗ ಅದು ಚೆನ್ನಾಗಿ ಬೇರೂರಿದೆ.