ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಗೆ ಸಿಲುಕಿ ಆಕೆಗೆ ಗೌಪ್ಯನಿಯ ಮಾಹಿತಿ ನೀಡಿರುವ ಸಂರಕ್ಷಣಾ ಪ್ರಯೋಗಶಾಲೆಯ ಇಂಜಿನಿಯರ ಬಂಧನ

ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವಂತೆ ಭಾರತದ ಪ್ರಸ್ತಾವನೆಗೆ ಚೀನಾದ ಅಡ್ಡಿ

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾವನೆಗೆ ಚೀನಾವು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಅಡ್ಡಿ ಪಡಿಸಿತು. ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದವು.

ಚರ್ಚೆಯಲ್ಲಿ ಪಾಲ್ಗೊಂಡ ಮುಸಲ್ಮಾನನು ಮೊದಲಿಗೆ ಅವಮಾನಕರ ಹೇಳಿಕೆ ನೀಡಿದ್ದರಿಂದ ನೂಪುರ ಶರ್ಮ ಇವರು ಪ್ರತ್ಯುತ್ತರ ನೀಡಿದ್ದಾರೆ !

ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ.

ಗುಜರಾತಿನಲ್ಲಿ ಪಾಕಿಸ್ತಾನದ ಬೋಟಿನಲ್ಲಿರುವ ೨೫೦ ಕೋಟಿ ರೂಪಾಯಿಗಳ ಹೆರಾಯಿನ (ಅಮಲು ಪದಾರ್ಥ) ಜಪ್ತು !

ಭಯೋತ್ಪಾದಕ ನಿಗ್ರಹ ದಳವು (‘ಎಟಿಎಸ್‌’) ರಾಜ್ಯದ ಕಚ್ಛನಿಂದ ಒಂದು ಪಾಕಿಸ್ತಾನಿ ಬೋಟಿನಿಂದ ೫೦ ಕೆಜಿ ಹೆರಾಯಿನ ಜಪ್ತು ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನನ ಬೆಲೆಯು ೨೫೦ ಕೋಟಿ ರೂಪಾಯಿ ಆಗಿದೆ. ಗಡಿ ಭದ್ರತಾ ಪಡೆಯ ಸಹಾಯದಿಂದ ಎಟಿಎಸ್‌ ಈ ಕಾರ್ಯಾಚರಣೆಯನ್ನು ಮಾಡಿದೆ.

ಹಾಗಿದ್ದರೆ ನಾನು ನನ್ನ ಬಟ್ಟೆಗಳನ್ನು ಮಾರಿ ಜನರಿಗೆ ಗೋಧಿಯ ಹಿಟ್ಟನ್ನು ಕಡಿಮೆ ದರದಲ್ಲಿ ದೊರಕಿಸಿಕೊಡುವೆನು ! – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ

ಪ್ರಧಾನಮಂತ್ರಿ ಶಾಹಬಾಜ ಶರೀಫರು ಒಂದು ಸಭೆಯಲ್ಲಿ ಮಾತನಾಡುತ್ತಿದ್ದಾಗ, ನನ್ನ ಬಟ್ಟೆಗಳನ್ನು ಮಾರಿ ಆ ಹಣದಿಂದ ಜನರಿಗೆ ಗೋಧಿಯ ಹಿಟ್ಟನ್ನು ಅಗ್ಗದಲ್ಲಿ ದೊರಕಿಸಿಕೊಡುವೆನು, ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಇಮ್ರಾನ ಖಾನರವರು ಆಂದೋಲನದಿಂದಾಗಿ ಹಿಂಸಾಚಾರ

ಇಮ್ರಾನ ಖಾನರವರ ಸಮರ್ಥಕರು ಮೆಟ್ರೋ ಸ್ಟೇಶನನ್ನು ಸುಟ್ಟು ಹಾಕಿದರು

ಕರ್ನಾಟಕದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದರಿಂದ ಪಾಕಿಸ್ತಾನಕ್ಕೆ ಹೊಟ್ಟೆಯುರಿ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿರುವ ಬಗ್ಗೆ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದಿಂದ ಪ್ರಸಾರ ಮಾಡಲಾಗಿರುವ ಪತ್ರಿಕೆಯಲ್ಲಿ, ಈ ಘಟನೆ ಶ್ರೀರಾಮ ಸೇನೆಯ ಪ್ರಮುಖರು ಆಜಾನ್‌ನ ವಿರುದ್ಧ ಮಾಡಿರುವ ಹೇಳಿಕೆಯಿಂದ ನಡೆಯುತ್ತಿದೆ.

ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕನ ಬಂಧನ

ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ.

ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಸ್ಥಳಗಳಲ್ಲಿಯೂ ಹೀಗೆಯೇ ಇದೆ !

ಪ್ರಸ್ತುತ ಪಾಕಿಸ್ತಾನದಲ್ಲಿ ೪೦ ಸಾವಿರ ಮದರಸಾಗಳಲ್ಲಿ ಉಗ್ರರು ಸಿದ್ಧರಾಗುತ್ತಿದ್ದಾರೆ. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಅಮೆರಿಕದ ‘ಬಾಲ್ಟಿಮೋರ್ ಪೋಸ್ಟ್ ಎಕ್ಸಾಮಿನರ್’ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.