ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಸ್ಥಳಗಳಲ್ಲಿಯೂ ಹೀಗೆಯೇ ಇದೆ !

೧. ಪ್ರತಿ ಶಾಲೆಯಲ್ಲಿ ಶ್ರೀಮದ್ಭಗವದ್ಗೀತೆಯನ್ನು ಕಲಿಸಿ !

ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್ ಆಡಳಿತವು ವಿದ್ಯಾರ್ಥಿಗಳಿಗೆ ಶಾಲೆಗೆ ಬರುವಾಗ ಬೈಬಲ್ ತರುವುದು ಕಡ್ಡಾಯವೆಂದು ಆದೇಶಿಸಿದೆ. ಶಾಲೆಯ ಈ ನಿರ್ಧಾರದ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.

೨. ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಸ್ಥಳಗಳಲ್ಲಿಯೂ ಹೀಗೆಯೇ ಇದೆ !

ಪ್ರಸ್ತುತ ಪಾಕಿಸ್ತಾನದಲ್ಲಿ ೪೦ ಸಾವಿರ ಮದರಸಾಗಳಲ್ಲಿ ಉಗ್ರರು ಸಿದ್ಧರಾಗುತ್ತಿದ್ದಾರೆ. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಅಮೆರಿಕದ ‘ಬಾಲ್ಟಿಮೋರ್ ಪೋಸ್ಟ್ ಎಕ್ಸಾಮಿನರ್’ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

೩. ಸಮಾನ ನಾಗರಿಕ ಕಾನೂನು ಜಾರಿಯಾಗಲೇಬೇಕು !

ಆಲ್ ಇಂಡಿಯಾ ಮುಸ್ಲಿಮ ಪರ್ಸನಲ್ ಲಾ ಬೋರ್ಡ ಇದು ಸಮಾನ ನಾಗರಿಕ ಕಾನೂನನ್ನು ವಿರೋಧಿಸಿದ್ದು, ಇದು ಸಂವಿಧಾನಬಾಹಿರವಾಗಿದೆ ಎಂದು ಹೇಳಿದೆ. ಈ ಕಾನೂನನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದು ಬೋರ್ಡನ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಇವರು ಹೇಳಿದ್ದಾರೆ.

೪. ಇಂತಹವರನ್ನು ಸೆರೆಮನೆಗೆ ಅಟ್ಟಿ !

ನಾವು ಶೇ. ೨೦ ರಷ್ಟಿದ್ದರೆ ನೀವು (ಹಿಂದೂಗಳು) ಶೇ. ೭೦ ರಿಂದ ೮೦ ರಷ್ಟಿದ್ದೀರಿ. ಆದುದರಿಂದ ಯಾವುದೇ ತೊಂದರೆಯಾದರೆ ನಮ್ಮ ೨೦ ಮನೆಗಳನ್ನು ಮುಚ್ಚಲಾಗುವುದು ಮತ್ತು ನಿಮ್ಮ ೮೦ ಮನೆಗಳನ್ನು ಸಹ ಮುಚ್ಚಲಾಗುವುದು ಎಂದು ಜಾರ್ಖಂಡ್‌ನ ಸಚಿವ ಹಫೀಜುಲ್ ಅನ್ಸಾರಿ ಬೆದರಿಕೆಯೊಡ್ಡಿದ್ದಾರೆ.

೫. ಪಂಜಾಬ್‌ದಲ್ಲಿನ ಹಿಂದೂವಿರೋಧಿ ಖಲಿಸ್ತಾನಿವಾದಿಗಳ ವಿರುದ್ಧ ಕ್ರಮ ಕೈಗೊಳ್ಳಿ !

ಪಟಿಯಾಲದಲ್ಲಿ (ಪಂಜಾಬ್), ‘ಶಿವಸೇನಾ (ಬಾಳ ಠಾಕ್ರೆ)’ ಈ ಸಂಘಟನೆಯಿಂದ ಖಲಿಸ್ತಾನ್ ವಿರುದ್ಧ ‘ಖಲಿಸ್ತಾನ್ ಮುರ್ದಾಬಾದ್’ ಎಂಬ ಮೋರ್ಚಾವನ್ನು ಹೊರಡಿಸಲಾಯಿತು. ಅದರ ವಿರುದ್ಧ, ಕೆಲವು ಸಿಕ್ಖ್‌ರು ಖಲಿಸ್ತಾನವನ್ನು ಬೆಂಬಲಿಸಿ ಮೆರವಣಿಗೆ ನಡೆಸಿ ಶಿವಸೇನಾ ಮೋರ್ಚಾದ ಮೇಲೆ ಹಲ್ಲೆ ಮಾಡಿದರು.

೬. ಶೇ. ೧೫ ರಷ್ಟಿರುವವರ ಹಬ್ಬ ರಾಷ್ಟ್ರೀಯ ಹಬ್ಬ ಹೇಗೆ ?

ಈದ್ ರಾಷ್ಟ್ರೀಯ ಹಬ್ಬವಾಗಿರುವುದರಿಂದ ಆ ಪ್ರಯುಕ್ತ ಮೊದಲ ಬಾರಿಗೆ ಏಪ್ರಿಲ್ ತಿಂಗಳ ಸಂಬಳದ ಜೊತೆಗೆ ಮುಂದಿನ ಮೇ ತಿಂಗಳ ಸಂಬಳವನ್ನು ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.  ಈ ಬಗ್ಗೆ ಎಲ್ಲ ಜಿಲ್ಲಾ ಕೋಶಾಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ.

೭. ಆಮ್ ಆದ್ಮಿ ಪಕ್ಷದ ನಿಜಸ್ವರೂಪವನ್ನು ಅರಿತುಕೊಳ್ಳಿ !

ಗುರುಗ್ರಮದಲ್ಲಿ (ಹರಿಯಾಣ) ಅತಿಕ್ರಮಣವನ್ನು ತೆರವುಗೊಳಿಸುವ ದಳದ ಮೇಲೆ ಕಲ್ಲು ತೂರಟ ಮಾಡಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಸೇವಕಿ ನಿಶಾ ಸಿಂಹ ಸಹಿತ ೧೦ ಮಹಿಳೆಯರಿಗೆ ನ್ಯಾಯಾಲಯವು ೧೦ ವರ್ಷಗಳ ಸಶ್ರಮ ಜೈಲು ಶಿಕ್ಷೆ ಮತ್ತು ೧೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ.