ಪಾಕಿಸ್ತಾನದ ಮೌಲಾನಾ (ಇಸ್ಲಾಮಿ ಅಭ್ಯಾಸಕರು) ಇಂಜಿನಿಯರ್ ಮಹಮ್ಮದ್ ಅಲಿ ಇವರಿಂದ ನೂಪುರ ಶರ್ಮ ಇವರಿಗೆ ಬೆಂಬಲ
ಇಸ್ಲಾಮಾಬಾದ – ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮೌಲಾನಾ ಇಂಜಿನಿಯರ್ ಅಹಮ್ಮದ್ ಅಲಿ ಇವರು ನೂಪುರ ಶರ್ಮಾ ಇವರನ್ನು ಬೆಂಬಲಿಸಿದ್ದಾರೆ ಹಾಗೂ ಈ ಚರ್ಚಾಕೂಟದಲ್ಲಿ ಶರ್ಮಾ ಇವರಿಗೆ ಪ್ರಚೋದನೆ ನೀಡುವ ತಸಲಿಂ ಅಹಮ್ಮದ್ ರೆಹಮಾನ ಇವರ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ರಹಮಾನ್ ಇವರು ಹಿಂದೂ ದೇವತೆಗಳ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರಿಂದ ನೂಪುರ ಶರ್ಮಾ ಇವರು ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ. ಎಂದು ಮಹಮ್ಮದ್ ಅಲಿ ಅವರು ಹೇಳಿದರು.
(ಸೌಜನ್ಯ : Engineer Muhammad Ali Mirza – Official Channel)
ನೂಪುರ ಶರ್ಮಾ ಇವರನ್ನು ರೊಚ್ಚಿಗೆಬ್ಬಿಸಿದವನೇ ಮೊದಲ ಆರೋಪಿ
`ಅನ್ಯಧರ್ಮದ ವಿಷಯವಾಗಿ ವಾರ್ತಾವಾಹಿನಿಯಲ್ಲಿ ಹೇಳಿಕೆ ನೀಡಿದವನೇ ಮೊದಲು ಆರೋಪಿಯಾಗಿದ್ದಾನೆ. ವಿವಾದದ ಪೂರ್ಣ ವಾತಾವರಣ ನೋಡಬೇಕಾಗುತ್ತದೆ. ನೂಪುರ ಶರ್ಮ ಇವರ ಹೇಳಿಕೆಯ ಅಂದಾಜಿನಿಂದ ಗಮನಕ್ಕೆ ಬರುವುದೇನೆಂದರೆ ಇದು ಪ್ರತ್ಯುತ್ತರವಾಗಿ ಇದೆ. ನೂಪುರ ಶರ್ಮಾ ಇವರು, ನೀವೇನಾದರೂ ಈ ರೀತಿಯ ಹೇಳಿಕೆ ನೀಡಿದರೆ ನಾವೂ ಹಾಗೆ ಮಾತನಾಡುವೆವು’, ಎಂದಿದ್ದಾರೆ.
ಯಾವುದೇ ಧರ್ಮವನ್ನು ಟೀಕಿಸುವುದು ಕುರಾನಿನ ಪ್ರಕಾರ ಅಯೋಗ್ಯವಾಗಿದೆ.
ಮೌಲಾನಾ ಇಂಜಿನಿಯರ್ ಮಹಮ್ಮದ ಅಲಿಯವರು ಮಾತು ಮುಂದುವರಿಸುತ್ತಾ, `ಯಾವುದೇ ಧರ್ಮವನ್ನು ಟೀಕಿಸುವುದು ಕುರಾನಿನ ಪ್ರಕಾರ ಅಯೋಗ್ಯವಾಗಿದೆ. ಬೇರೆಯವರ ಧರ್ಮದ ಜನರ ಜೊತೆ ವಾದ ಮಾಡುವಾಗ ಯಾವಾಗಲೂ ಭಾಷೆಯ ಕಡೆ ಗಮನ ಇರಬೇಕು. ನೂಪುರ ಶರ್ಮಾ ಪ್ರಕರಣದಲ್ಲಿ ಅರಬ ದೇಶದ ಜನರು ವಾತಾನುಕೂಲ ಕೊಠಡಿಯಲ್ಲಿ ಕುಳಿತು ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ, ಎಂದರು.
ಅಮೇರಿಕಾ ಭಾರತದ ವಿರುದ್ಧ ಅರಬ ದೇಶಗಳನ್ನು ಕೆರಳಿಸಿದೆ
ಮೌಲಾನಾ ಇಂಜಿನಿಯರ್ ಮೊಹಮ್ಮದ್ ಅಲ್ಲಿ ಇವರು ದಾವೇ ಮಾಡಿದ್ದಾರೆ ಏನೆಂದರೆ, ಮೂಲತಃ ಇದು ಒಂದು ಅಂತರಾಷ್ಟ್ರೀಯ ರಾಜಕಾರಣವಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳುತ್ತಿದ್ದರು, `ಭಾರತವು ಅಮೆರಿಕ ಮತ್ತು ರಶಿಯಾ ಇಬ್ಬರಿಂದಲೂ ಲಾಭ ಪಡೆಯುತ್ತಿದೆ’, ಎನ್ನುತ್ತಿದ್ದರು. ಈಗ ಭಾರತ ಮತ್ತು ಇಮ್ರಾನ್ ಖಾನ್ ಇವರಿಗೆ ಅರಿವಿಗೆ ಬಂದಿರಬಹುದು ಏನೆಂದರೆ ಅಮೇರಿಕಾ ಅದಕ್ಕೆ ಯಾವಾಗ ಬೇಕಾದರೂ ಬಗ್ಗಿಸಬಹುದು. ಅರಬ ದೇಶಗಳಿಗೆ ರಶಿಯಾದ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ. ಅವು ಅಮೇರಿಕಾದ ಗುಲಾಮ ದೇಶಗಳಾಗಿವೆ. ಇಂತಹ ಅರಬ ದೇಶಗಳಿಗೆ ಅಮೇರಿಕಾ ನೂಪುರ ಶರ್ಮಾ ಪ್ರಕರಣದಲ್ಲಿ ಭಾರತದ ವಿರುದ್ಧ ಕೆರಳಿಸಿದೆ ಈ ಮೊದಲು ಇಂತಹ ಅನೇಕ ಘಟನೆಗಳು ನಡೆದಿದೆ ಅದರಲ್ಲಿ ಈ ಅರಬ ದೇಶಗಳು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಈಗ ರಶಿಯಾದ ಸಂಧರ್ಭದಲ್ಲಿ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಅರಬ್ ದೇಶಗಳನ್ನು ಕೆರಳಿಸುತ್ತಿದೆ.
ಸಂಪಾದಕೀಯ ನಿಲುವುಈಗ ಹಿಂದೂಗಳು ಈ ಚರ್ಚೆಗಳಲ್ಲಿ ಸಹಭಾಗಿಯಾಗಿ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಯ ಹೇಳಿಕೆ ನೀಡುವುದರಿಂದ ತಸಲಿಂ ಅಹಮ್ಮದ್ ರೆಹಮಾನಿ ಇವರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳುವುದಕ್ಕೆ ಪ್ರಯತ್ನಿಸಬೇಕು ! |