ಪಾಕಿಸ್ತಾನದಲ್ಲಿ ಇಮ್ರಾನ ಖಾನರವರು ಆಂದೋಲನದಿಂದಾಗಿ ಹಿಂಸಾಚಾರ

ಇಮ್ರಾನ ಖಾನರವರ ಸಮರ್ಥಕರು ಮೆಟ್ರೋ ಸ್ಟೇಶನನ್ನು ಸುಟ್ಟು ಹಾಕಿದರು.

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರ ನೇತೃತ್ವದಲ್ಲಿ ಅವರ ‘ಪಾಕಿಸ್ತಾನ ತಹರಿಕ ಇನ್ಸಾಫ’ (ಪಿಟಿಐ) ಪಕ್ಷದಿಂದ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಬೇಡಿಕೆಗಾಗಿ ಆಂದೋಲನ ನಡೆಸಲಾಗುತ್ತಿದೆ. ‘ಆಝಾದಿ ಮೋರ್ಚಾ’ ಎಂಬ ಹೆಸರಿನಿಂದ ಅವರು ಆಂದೋಲನವನ್ನು ಆರಂಭಿಸಿದ್ದಾರೆ. ಈ ಮೋರ್ಚಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಸ್ಲಾಮಾಬಾದನ್ನು ತಲುಪಿದ್ದಾರೆ. ಈ ಆಂದೋಲನವನ್ನು ತಡೆಯಲು ಪಾಕಿಸ್ತಾನ ಸರಕಾರವು ಇಸ್ಲಾಮಾಬಾದನ್ನು ‘ರೆಡ್‌ ಝೋನ್‌’ ಎಂದು ಘೋಷಿಸಿದೆ, ಆದರೆ ಗೃಹಮಂತ್ರಾಲಯವು ಇಸ್ಲಾಮಾಬಾದಿಗೆ ಸೈನ್ಯವನ್ನು ಕಳಿಸಲು ಆದೇಶಿಸಿದೆ. ಪಿಟಿಐನ ಕಾರ್ಯಕರ್ತರು ನಗರವನ್ನು ಪ್ರವೇಶಿಸುವಾಗ ಪಾಕಿಸ್ತಾನ ಸರಕಾರದ ಸಮರ್ಥಕರೊಂದಿಗೆ ಹಿಂಸಾತ್ಮಕ ಜಟಾಪಟಿ ನಡೆಯಿತು. ಈ ಸಮಯದಲ್ಲಿ ಇಮ್ರಾನ ಖಾನರವರ ಸಮರ್ಥಕರು ಇಸ್ಲಾಮಾಬಾದ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದರು. ಅನಂತರ ಪೊಲೀಸರು ಅಶ್ರುವಾಯು ಸಿಡಿಸಿ ಸಮರ್ಥಕರನ್ನು ಚದುರಿಸಲು ಪ್ರಯತ್ನಿಸಿದರು. ಕೆಲವು ಕಡೆಗಳಲ್ಲಿ ಲಾಠಿಚಾರ್ಜ ಮಾಡಲಾಯಿತು. ಇದರಿಂದ ಸಿಟ್ಟಾದ ಪಿಟಿಐನ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದರು.

ಪಿಟಿಐ ಪಕ್ಷವು ಪ್ರಧಾನಮಂತ್ರಿ ಶಾಹಬಾಜ ಶರೀಫರವರ ೧೩ ಪಕ್ಷಗಳ ಮೈತ್ರಿ ಸರಕಾರವನ್ನು ತಕ್ಷಣ ವಿಸರ್ಜಿಸಲು ಮನವಿ ಮಾಡಿದೆ. ಇದರೊಂದಿಗೆ ಜಾಗೃತೆಯಿಂದ ಸರಕಾರವನ್ನು ನಿರ್ಮಿಸಬೇಕು ಹಾಗೂ ಆದಷ್ಟು ಬೇಗ ಚುನಾವಣೆಯನ್ನು ನಡೆಸಬೇಕು, ಎಂದು ಪಿಟಿಐ ಮನವಿ ಮಾಡಿದೆ. ಸದ್ಯದ ಸಂಸತ್ತಿನ ಕಾರ್ಯಕಾಲವು ಅಗಸ್ಟ ೨೦೨೩ರ ವರೆಗೆ ಇದೆ.