ಹಾಗಿದ್ದರೆ ನಾನು ನನ್ನ ಬಟ್ಟೆಗಳನ್ನು ಮಾರಿ ಜನರಿಗೆ ಗೋಧಿಯ ಹಿಟ್ಟನ್ನು ಕಡಿಮೆ ದರದಲ್ಲಿ ದೊರಕಿಸಿಕೊಡುವೆನು ! – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ

ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ (ಎಡದಲ್ಲಿ)

ಇಸ್ಲಾಮಾಬಾದ (ಪಾಕಿಸ್ತಾನ) – ಒಂದು ಸಭೆಯಲ್ಲಿ ಮಾತನಾಡುತ್ತಿದ್ದಾಗ ‘ಮುಂದಿನ ೨೪ ಗಂಟೆಗಳಲ್ಲಿ ೧೦ ಕಿಲೋ ಗೋಧಿ ಹಿಟ್ಟಿನ ಚೀಲದ ಬೆಲೆಯನ್ನು ೪೦೦ ರೂಪಾಯಿಗಳಿಗಿಂತಲೂ ಕಡಿಮೆ ಮಾಡದಿದ್ದರೆ ನಾನು ನನ್ನ ಬಟ್ಟೆಗಳನ್ನು ಮಾರಿ ಆ ಹಣದಿಂದ ಜನರಿಗೆ ಗೋಧಿಯ ಹಿಟ್ಟನ್ನು ಅಗ್ಗದಲ್ಲಿ ದೊರಕಿಸಿಕೊಡುವೆನು, ಎಂಬ ಎಚ್ಚರಿಕೆಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫರವರು ಖೈಬರ ಪಖ್ತೂನಖ್ವಾ ಪ್ರಾಂತ್ಯದ ಪ್ರಮುಖರಾದ ಮಹಮೂದ ಖಾನರವರಿಗೆ ನೀಡಿದ್ದಾರೆ.