ಗುಜರಾತಿನಲ್ಲಿ ಪಾಕಿಸ್ತಾನದ ಬೋಟಿನಲ್ಲಿರುವ ೨೫೦ ಕೋಟಿ ರೂಪಾಯಿಗಳ ಹೆರಾಯಿನ (ಅಮಲು ಪದಾರ್ಥ) ಜಪ್ತು !

ಕರ್ಣಾವತಿ (ಗುಜರಾತ) – ಭಯೋತ್ಪಾದಕ ನಿಗ್ರಹ ದಳವು (‘ಎಟಿಎಸ್‌’) ರಾಜ್ಯದ ಕಚ್ಛನಿಂದ ಒಂದು ಪಾಕಿಸ್ತಾನಿ ಬೋಟಿನಿಂದ ೫೦ ಕೆಜಿ ಹೆರಾಯಿನ ಜಪ್ತು ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನನ ಬೆಲೆಯು ೨೫೦ ಕೋಟಿ ರೂಪಾಯಿ ಆಗಿದೆ. ಗಡಿ ಭದ್ರತಾ ಪಡೆಯ ಸಹಾಯದಿಂದ ಎಟಿಎಸ್‌ ಈ ಕಾರ್ಯಾಚರಣೆಯನ್ನು ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆಯೇ ಮುಂಬ್ರಾ ಬಂದರಿನಿಂದ ೫೦೦ ಕೆಜಿ ಕೊಕೇನನ್ನು ಜಪ್ತು ಮಾಡಲಾಗಿತ್ತು. ಪಾಕಿಸ್ತಾನಿ ಬೋಟಿನಿಂದ ಹೆರಾಯಿನನ ರಾಶಿಯನ್ನು ಭಾರತಕ್ಕೆ ತರಲಾಗುತ್ತಿರುವ ಮಾಹಿತಿಯು ಎಟಿಎಸ್‌ಗೆ ದೊರೆತಿತ್ತು. ಸಂದೇಹಾಸ್ಪದ ಬೋಟನ್ನು ಹಿಂದಿಕ್ಕಿ ಈ ಕಾರ್ಯಾಚರಣೆಯನ್ನು ಮಾಡಲಾಯಿತು.

ಸಂಪಾದಕೀಯ ನಿಲುವು

ಭಾರತೀಯರನ್ನು ವ್ಯಸನಾಧೀನರನ್ನಾಗಿಸುವ ಪಾಕಿಸ್ತಾನದ ಕುತಂತ್ರವನ್ನು ಅರಿಯಿರಿ ! ಭಾರತವು ಪಾಕಿಸ್ತಾನಕ್ಕೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರದಂತಹ ಪಾಠವನ್ನು ಕಲಿಸುವುದು ಆವಶ್ಯಕವಾಗಿದೆ !