ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಗೆ ಸಿಲುಕಿ ಆಕೆಗೆ ಗೌಪ್ಯನಿಯ ಮಾಹಿತಿ ನೀಡಿರುವ ಸಂರಕ್ಷಣಾ ಪ್ರಯೋಗಶಾಲೆಯ ಇಂಜಿನಿಯರ ಬಂಧನ

(ಡಿ ಆರ್ ಡಿ ಎಲ್) ಇಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ

ಭಾಗ್ಯನಗರ(ತೆಲಂಗಾಣ) – ಇಲ್ಲಿಯ ಸಂರಕ್ಷಣಾ ಸಂಶೋಧನೆ ಮತ್ತು ವಿಕಾಸ ಪ್ರಯೋಗಶಾಲೆಯಲ್ಲಿ (ಡಿ ಆರ್ ಡಿ ಎಲ್) ಇಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ ಇವನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ರೆಡ್ಡಿ ಪಾಕಿಸ್ತಾನದ ಮಹಿಳೆಯ ಪ್ರೇಮದ ಬಲೆಯಲ್ಲಿ ಸಿಲುಕಿದ್ದರು. ಈ ಮಹಿಳೆಯು ರೆಡ್ಡಿ ಇವರನ್ನು ವಿವಾಹ ಮಾಡಿಕೊಳ್ಳುವ ವಚನ ನೀಡಿ ಅವರಿಂದ ಕ್ಷಿಪಣಿ ವಿಕಾಸದ ಸಂಬಂಧಿತ ಅನೇಕ ಸೂಕ್ಷ್ಮ ಮಾಹಿತಿ ತಿಳಿದುಕೊಂಡಿದ್ದಳು. ರೆಡ್ಡಿ ಅನೇಕ ತಿಂಗಳುಗಳಿಂದ ಈ ಮಹಿಳೆಯ ಸಂಪರ್ಕದಲ್ಲಿದ್ದರು. ಈ ಮಹಿಳೆಯು ರೆಡ್ಡಿಯವರಿಗೆ ತನ್ನ ಪರಿಚಯ ಭಾರತೀಯ ನಾಗರೀಕವೆಂದು ಮಾಡಿಕೊಟ್ಟಿದ್ದಳು, ಹಾಗೂ ಆಕೆಯ ಹೆಸರು ನತಾಶ ರಾವ ಎಂದು ಹೇಳಿದ್ದಳು.

ಸಂಪಾದಕೀಯ ನಿಲುವು

* ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.