ಮುಸಲ್ಮಾನರ ಪ್ರಾರ್ಥನೆಯ ಗೂಡಾರ್ಥ!

ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.

ಚೀನಾವು ಪಾಕಿಸ್ತಾನಕ್ಕೆ ೪ ಅತ್ಯಾಧುನಿಕ ಯುದ್ಧನೌಕೆಗಳು ನೀಡಲಿದೆ

ಚೀನಾ ಅತ್ಯಾಧುನಿಕ ‘ಟೈಪ ೦೫೪’ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ನೀಡಲಿದೆ. ಮುಂದಿನ ೩ ವರ್ಷಗಳಲ್ಲಿ ಪಾಕ್‌ಗೆ ಇನ್ನೂ ೩ ಯುದ್ಧ ನೌಕೆಗಳನ್ನು ನೀಡಲಿದೆ. ಈ ಹಿಂದೆ ಚೀನಾವು ಪಾಕಗೆ ‘ಜೆಎಫ್-೧೭ ಎಂಬ ನಾಲ್ಕನೇಯ ಶ್ರೇಣಿಯ ಯುದ್ಧ ವಿಮಾನವನ್ನು ವಿಕಸಿತಗೊಳಿಸಲು ಸಹಾಯ ಮಾಡಿತ್ತು.

ಅಫ್ಘಾನಿಸ್ತಾನದ ಪ್ರಕರಣದಲ್ಲಿ ಭಾರತದಿಂದ ಇಂದು ೮ ದೇಶಗಳ ಜೊತೆ ಸಭೆ

ಭಾರತವು ಅಫಘಾನಿಸ್ತಾನದ ವಿಷಯವಾಗಿ ನವೆಂಬರ್ ೧೦ ರಂದು ವಿಶೇಷ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಭಾರತ ಸಹಿತ ಇರಾನ್, ರಶಿಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ತುರ್ಕೆಮೆನಿಸ್ತಾನ್, ತಾಜಿಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಈ ದೇಶದ ಪ್ರತಿನಿಧಿಗಳು ಭಾಗವಹಿಸುವರು.

‘ನಾವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯಲ್ಲಿ ಕಾಶ್ಮೀರದ ಜನರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ !'(ಯಂತೆ) – ಆರ್ಗನೈಸೇಶನ್ ಆಫ್ ಇಸ್ಲಾಮಿ ಕೊಆಪರೇಶನ್(ಒ.ಐ.ಸಿ)

ಒ.ಐ.ಸಿ. ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆಯು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ದ್ವಾರಕಾ (ಗುಜರಾತ)ನಲ್ಲಿ ಭಾರತೀಯ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ನೌಕಾಪಡೆ : ಒಬ್ಬ ಮೀನುಗಾರ ಸಾವು, ಮತ್ತೊಬ್ಬರಿಗೆ ಗಾಯ

ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !

ಭಯೋತ್ಪಾದಕ ಹಾಫಿಜ ಸಯಿದ ಸಹಿತ ಆರು ಜನರನ್ನು ಖುಲಾಸೆ ಗೊಳಿಸಿದ ಲಾಹೋರ್ ಉಚ್ಚ ನ್ಯಾಯಾಲಯ

ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?

ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ವರ್ಷಗಳ ನಂತರ ದೀಪಾವಳಿ ಪ್ರಯುಕ್ತ ಉಭಯ ದೇಶದ ಸೈನಿಕರು ಪರಸ್ಪರರಿಗೆ ಸಿಹಿ ಹಂಚಿದರು !

ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ?

ಶ್ರೀನಗರದಿಂದ ಹಾರುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನದಿಂದ ನಿರಾಕರಣೆ !

ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದ ಉಪಯೋಗಿಸಲು ನಿರಾಕರಿಸಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !

ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯಾಚರಣೆಯ ವಿಡಿಯೋ ಪ್ರಸಾರ ಮಾಡಿದ್ದ ಜಮ್ಮುವಿನ ಮಹಿಳಾ ವೈದ್ಯಕೀಯ ಸಿಬ್ಬಂದಿ ಕೆಲಸದಿಂದ ವಜಾ

ಭಾರತದಲ್ಲಿದ್ದು ಪಾಕಿಸ್ತಾನದ ವಿಜಯ ಆಚರಿಸುವವರನ್ನು ಸರಕಾರವು ಪಾಕಿಸ್ತಾನಕ್ಕೆ ಏಕೆ ಅಟ್ಟುತ್ತಿಲ್ಲ?

ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯ ಆಚರಿಸುವವರ ವಿರುದ್ಧ ದೇಶದ್ರೋಹದ ಆರೋಪ ದಾಖಲು

ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.