ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯಾಚರಣೆಯ ವಿಡಿಯೋ ಪ್ರಸಾರ ಮಾಡಿದ್ದ ಜಮ್ಮುವಿನ ಮಹಿಳಾ ವೈದ್ಯಕೀಯ ಸಿಬ್ಬಂದಿ ಕೆಲಸದಿಂದ ವಜಾ

ಜಮ್ಮುವಿನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಾಕಿಸ್ತಾನ ವಿಜಯದ ಆಚರಣೆ !

ಭಾರತದಲ್ಲಿದ್ದು ಪಾಕಿಸ್ತಾನದ ವಿಜಯ ಆಚರಿಸುವವರನ್ನು ಸರಕಾರವು ಪಾಕಿಸ್ತಾನಕ್ಕೆ ಏಕೆ ಅಟ್ಟುತ್ತಿಲ್ಲ?- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಜಮ್ಮು – ಇಲ್ಲಿಯ ರಾಜೌರಿ ಜಿಲ್ಲೆಯ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ಸಾಫಿಯಾ ಮಜೀದಿ ಇವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇತ್ತೀಚೆಗೆ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ವಿಜಯ ಪಡೆದ ನಂತರ ಸಾಫಿಯಾ ಇವರು ಈ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಕಿಸ್ತಾನ ವಿಜಯವನ್ನು ಆಚರಿಸುತ್ತಿರುವ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು.