‘ನಾವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯಲ್ಲಿ ಕಾಶ್ಮೀರದ ಜನರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ !'(ಯಂತೆ) – ಆರ್ಗನೈಸೇಶನ್ ಆಫ್ ಇಸ್ಲಾಮಿ ಕೊಆಪರೇಶನ್(ಒ.ಐ.ಸಿ)

ಪಾಕಿಸ್ತಾನದ ಒತ್ತಡಕ್ಕೆ ಮಣಿದು ಇಂತಹ ಹೇಳಿಕೆ ನೀಡುವ ಮೂಲಕ ‘ಒ.ಐ.ಸಿ’ ಕೇವಲ ಪಾಕಿಸ್ತಾನವನ್ನು ಮೆಚ್ಚಿಸುವುದನ್ನು ಬಿಟ್ಟು ಬೇರೇನನ್ನೂ ಸಾಧಿಸಲಾರದು; ಏಕೆಂದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಯಾರು ಎಷ್ಟೇ ಮಾತನಾಡಿದರೂ ಅದರಲ್ಲಿ ಬದಲಾಗುವುದಿಲ್ಲ, ಎಂಬುದನ್ನು ‘ಒ.ಐ.ಸಿ’ಯಂತಹ ಸಂಘಟನೆಗಳು ಗಮನದಲ್ಲಿಡಬೇಕು ! – ಸಂಪಾದಕರು 

ಒ.ಐ.ಸಿ. ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆ

ನವ ದೆಹಲಿ – ಒ.ಐ.ಸಿ.(ಆರ್ಗನೈಸೇಶನ್ ಆಫ್ ಇಸ್ಲಾಮಿ ಕೊಆಪರೇಶನ್) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯಲ್ಲಿ ಕಾಶ್ಮೀರದ ಜನರ ಸ್ವಯಂನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆಯು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ. ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಭೇಟಿ ನೀಡಿದ್ದರು. ಯೂಸೆಫ್ ಅಲ್ಡೋಬೆ ತಮ್ಮ ಮಾತನ್ನು ಮುಂದುವರೆಸುತ್ತಾ, “ಒ.ಐ.ಸಿ.ಯ ಮುಂದಿನ ಸಭೆಯಲ್ಲಿ ಕಾಶ್ಮೀರದ ಪರಿಸ್ಥಿತಿ ಕುರಿತು ವರದಿ ಸಿದ್ಧಪಡಿಸಿ ಮಂಡಿಸಲಾಗುವುದು”, ಎಂದರು. ಅಲ್ಡೋಬೆಯು ಪಾಕಿಸ್ತಾನದಲ್ಲಿ ಆಲ್ ಪಾರ್ಟಿಸ್ ಹುರ್ರಿಯತ್ ಕಾನ್ಫರೆನ್ಸ್‍ನ ಪ್ರತಿನಿಧಿಗಳೊಂದಿಗೆ ಕಾಶ್ಮೀರದ ಬಗ್ಗೆ ಚರ್ಚಿಸಿದರು.