ಮುಸಲ್ಮಾನರ ಪ್ರಾರ್ಥನೆಯ ಗೂಡಾರ್ಥ!

ಸಂಪಾದಕೀಯ

ಜಗತ್ತಿನಾದ್ಯಂತದ ಹಿಂದೂಗಳು ಸಾಧನೆಯನ್ನು ಮಾಡಿ ರಾಷ್ಟ್ರರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡಿದರೆ ಅದು ಫಲಪ್ರದವಾಗಬಹುದು !

(ಬಲಭಾಗದಲ್ಲಿ) ಪಾಕಿಸ್ತಾನದ ಕೇಂದ್ರ ಗೃಹ ಸಚಿವ ಶೇಖ ರಶೀದ ಅಹಮದ್

ಅಕ್ಟೋಬರ್ ೨೪ ರಂದು ಜರುಗಿದ ಟಿ-೨೦ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಪರಾಭವಗೊಳಿಸಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿತು. ‘ಈ ಪಂದ್ಯವನ್ನು ರದ್ದುಗೊಳಿಸಬೇಕು’, ಎಂದು ದೇಶಭಕ್ತ ಹಿಂದೂಗಳು ಮನವಿ ಮಾಡಿದ್ದರು. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂ ಮತ್ತು ಸಿಕ್ಖ್‌ರನ್ನು ಹುಡುಕಿ ಅವರನ್ನು ಗುರಿ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಈ ಪಂದ್ಯವನ್ನು ಭಾರತವು ಆಡದಿರುವುದೇ ಯೋಗ್ಯವಾಗಿತ್ತು. ಇದು ವರೆಗಿನ ಇತಿಹಾಸವನ್ನು ನೋಡಿದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ‘ಕ್ರಿಕೆಟ್’ ಎಂಬುದಕ್ಕಿಂತ ‘ಯುದ್ಧ’ ಎಂದೇ ನೋಡಲಾಗುತ್ತದೆ. ಅಕ್ಟೋಬರ್ ೨೪ ರ ಪಂದ್ಯವೂ ಅದಕ್ಕೆ ಹೊರತಾಗಿರಲಿಲ್ಲ;  ಇದಕ್ಕೆ ಕಾರಣ, ಪಾಕಿಸ್ತಾನದ ಕೇಂದ್ರ ಗೃಹ ಸಚಿವ ಶೇಖ ರಶೀದ ಅಹಮದ್ ಇವರು ನೀಡಿದ ಹೇಳಿಕೆ. ಪಾಕಿಸ್ತಾನವು ಈ ಪಂದ್ಯವನ್ನು ಗೆದ್ದಾಗ ಅಹಮದ್ ಅವರು, “ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಿದ ರೀತಿಗೆ ನನ್ನ ಸಲಾಮ್. ಪಾಕಿಸ್ತಾನದ ತಂಡ ಮತ್ತು ಮುಸಲ್ಮಾನ ಬಾಂಧವರಿಗೂ ಶುಭಾಶಯಗಳು ! ಇದು ಜಗತ್ತಿನ ಎಲ್ಲ ಇಸ್ಲಾಮಿ ಜನರ ವಿಜಯವಾಗಿದೆ. ಭಾರತದ ಮುಸಲ್ಮಾನ ಬಾಂಧವರ ಪ್ರಾರ್ಥನೆಯೂ ಪಾಕಿಸ್ತಾನದ ತಂಡದೊಂದಿಗಿತ್ತು. ಕೇವಲ ಭಾರತವಷ್ಟೇ ಅಲ್ಲ, ಇಡೀ ವಿಶ್ವಾದ್ಯಂತದ  ಮುಸಲ್ಮಾನ ಸಹೋದರರು ಪಾಕಿಸ್ತಾನ ತಂಡದ ಬೆಂಬಲಕ್ಕಿದ್ದರು”, ಎಂದರು. ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ, ಈ ಪಂದ್ಯವು ಒಂದು ದೇಶದ ತಂಡ ಮತ್ತು ಇನ್ನೊಂದು ದೇಶದ ತಂಡ ಎಂದು ಇರಲಿಲ್ಲ, ಅದು ಹಿಂದೂ ಮತ್ತು ಮುಸಲ್ಮಾನರ ನಡುವೆ ನಡೆದಿತ್ತು. ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.

‘ಮೌನಂ ಸರ್ವಾರ್ಥಸಾಧನಮ್ |

ಪಾಕಿಸ್ತಾನದ ರಾಜಕೀಯ ಮುಖಂಡರು ಭಾರತದಲ್ಲಿರುವ ಮುಸಲ್ಮಾನರು ‘ತಮ್ಮ ಪರವಾಗಿದ್ದಾರೆ’, ಎಂದು ಸ್ಪಷ್ಟವಾಗಿ ತಿಳಿಯುತ್ತಾರೆ ಮತ್ತು ಬಹಿರಂಗವಾಗಿ ಹೇಳುತ್ತಾರೆ. ಇದು ಹೀಗಿರುವಾಗ ಮತ್ತು ಇನ್ನೊಂದೆಡೆ ಭಾರತದಲ್ಲಿ ಭಾರತ ಮತ್ತು ಪಾಕಿಸ್ತಾನ ಇವರ ನಡುವಿನ ಪಂದ್ಯದಲ್ಲಿ ಪಾಕಿಸ್ತಾನವು ಗೆದ್ದರೆ, ಅನೇಕ ‘ಚಿಕ್ಕ ಪಾಕಿಸ್ತಾನಗಳು’ ಎಂದು ಹೇಳುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆಯಾಗುತ್ತದೆ. ಇನ್ನಿತರ ಸಂದರ್ಭದಲ್ಲಿ ನೋಡಿದಾಗಲೂ ಧಾರ್ಮಿಕ ಮೆರವಣಿಗೆ ಅಥವಾ ಕಾರ್ಯಕ್ರಮಗಳಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗುವುದು ಈಗ ಸರ್ವೇಸಾಮಾನ್ಯ ವಿಷಯವಾಗಿದೆ. ಹಾಗಾಗಿ ಶೇಖ ರಶೀದ ಅಹಮದ ಇವರು ಪ್ರಾರ್ಥನೆಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯವನ್ನು ನಿರಾಕರಿಸುವಂತಿಲ್ಲ ಎಂದು ಯಾರೂ ಹೇಳಬಹುದು. ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯದ ವಿಷಯದಲ್ಲಿಯೇ ಇಂತಹ ಸ್ಥಿತಿಯಿದ್ದರೆ, ಭಾರತ-ಪಾಕಿಸ್ತಾನದ ನಡುವೆ ಯುದ್ಧವಾದರೆ ಏನಾಗಬಹುದು ಎಂಬುದರ ಕಲ್ಪನೆ ಮೂಡಬಹುದು. ಕೇವಲ ಪ್ರಾರ್ಥನೆಯ ಸ್ತರದಲ್ಲಿಯಷ್ಟೇ ಅಲ್ಲ, ಪ್ರತ್ಯಕ್ಷವಾಗಿ ಯಾರಾದರೂ ಆಂತರಿಕವಾಗಿ ಬಂಡಾಯವೆದ್ದರೆ ಅದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ. ಭಾರತೀಯ ಸೇನೆ ಗಡಿಯಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿದೆ. ಪೊಲೀಸರು ದೇಶದೊಳಗೆ ಪಾಕಿಸ್ತಾನದ ಬೆಂಬಲಿಗರೊಂದಿಗೆ ಹೋರಾಡುತ್ತಿರುವ ಚಿತ್ರಣ ಕಾಣಿಸಬಹುದು. ಕಾಶ್ಮೀರದಲ್ಲಿಯಂತೂ ಇದು ಯಾವಾಗಲೂ ಕಾಣಿಸುತ್ತದೆ. ಅಲ್ಲಿ ಸುರಕ್ಷಾ ದಳದವರೊಂದಿಗೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಘರ್ಷಣೆ ನಡೆಯುತ್ತಿರುತ್ತದೆ. ಆಗ ದೇಶದ್ರೋಹಿ ಕಾಶ್ಮೀರಿ ಮುಸಲ್ಮಾನರು ಭಾರತೀಯ ಸುರಕ್ಷಾದಳದವರ ಮೇಲೆ ಕಲ್ಲು ತೂರುತ್ತಿರುವುದು ಅನೇಕ ಸಲ ಕಂಡು ಬಂದಿದೆ. ಅಹಮದ್‌ರ ಹೇಳಿಕೆಯ ಬಗ್ಗೆ ಇಲ್ಲಿಯವರೆಗೂ ಭಾರತದ ಅನೇಕ ಮುಸಲ್ಮಾನ ಸಂಘಟನೆಗಳು, ಅವುಗಳ ಮುಖಂಡರು, ಧಾರ್ಮಿಕ ಮುಖಂಡರು ವಿರೋಧಿಸಿಲ್ಲ ಅಥವಾ ಅಹಮದ್‌ರಿಗೆ ‘ಭಾರತದಲ್ಲಿರುವ ಮುಸಲ್ಮಾನರು ಪಾಕಿಸ್ತಾನಕ್ಕಾಗಿ ಅಲ್ಲ, ಭಾರತದ ವಿಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು’, ಎನ್ನುವ ಮಾತುಗಳಲ್ಲಿ ಕಟುವಾಗಿ ಪ್ರತ್ಯುತ್ತರ ನೀಡಿಲ್ಲ. ಇದರಿಂದ ‘ಮೌನಂ ಸರ್ವಾರ್ಥಸಾಧನಮ್ |’ (‘ಮೌನದಿಂದ ಎಲ್ಲ ಕಾರ್ಯಗಳು ಕೈಗೂಡುತ್ತವೆ.’) ಎನ್ನುವ ಸಂಸ್ಕೃತ ವಚನವಿದೆ, ಎಂಬುದು ಅನುಭವಕ್ಕೆ ಬರುತ್ತದೆ. ಇದನ್ನು ಹಿಂದೂಗಳು ಮತ್ತು ವಿಶೇಷವಾಗಿ ಡಾಂಭಿಕ ಜಾತ್ಯತೀತವಾದಿಗಳು, ಪ್ರಗತಿಪರರು(ಅಧೋಗತಿಪರರು) ಗಮನಿಸಬೇಕಾಗಿದೆ.

ಚೀನಾದಂತೆ ಉಪಾಯಯೋಜನೆಗಳು ಬೇಕಾಗಿವೆ !

ದೇಶದ್ರೋಹಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲು ಈಗಿನಿಂದಲೇ ಕಠಿಣ ಪರಿಹಾರೋಪಾಯಗಳನ್ನು ಮಾಡುವುದು ಆವಶ್ಯಕವಾಗಿದೆ. ಈಗಿನ ಕೇಂದ್ರ ಸರಕಾರ ಸ್ವಲ್ಪ ಮಟ್ಟಿಗೆ ಉಪಾಯ ಯೋಜನೆಗಳನ್ನು ಕೈಕೊಳ್ಳುತ್ತಿದ್ದರೂ, ಅದು ಸಾಕಾಗುವುದಿಲ್ಲ. ಅದಕ್ಕಿಂತ ಕಠಿಣ ಉಪಾಯಗಳನ್ನು ಕಂಡು ಹಿಡಿಯುವ ಆವಶ್ಯಕತೆ ಇದೆ. ಇಲ್ಲದಿದ್ದರೆ ಒಂದೊಂದು ಮನೆಯ ಮನುಷ್ಯ ಮುಂದಿನ ಗೃಹಯುದ್ಧದಲ್ಲಿ ಕೈ ಜೋಡಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಚೀನಾ ಈ ಅಪಾಯವನ್ನು ಗಮನಿಸಿ, ಮೊದಲೇ ಕಠಿಣ ಉಪಾಯಯೋಜನೆಯನ್ನು ಮಾಡಲು ಪ್ರಾರಂಭಿಸಿದೆ. ಈ ಕಾರಣದಿಂದ ಚೀನಾದಲ್ಲಿ ಜಿಹಾದಿ ಭಯೋತ್ಪಾದನೆ ಅಸ್ತಿತ್ವದಲ್ಲಿಲ್ಲ ಅಥವಾ ಅದರ ಪ್ರಭಾವವಂತೂ ಇಲ್ಲ. ಭಾರತದ ಈಗಿನ ಆಡಳಿತಾಧಿಕಾರಿಗಳಿಗೆ ಅನೇಕ ಮಿತಿಗಳಿರುವುದರಿಂದ ಅವರು ಉಪಾಯಯೋಜನೆಯನ್ನು ಕಂಡು ಹಿಡಿಯುವಲ್ಲಿ ಅಸಹಾಯಕರಾಗಿದ್ದಾರೆ ಎಂದು ಹೇಳಬಹುದು. ಭಾರತವು ಚೀನಾದಂತೆ ಹೆಜ್ಜೆ ಇಡುವ ಆವಶ್ಯಕತೆಯಿಲ್ಲದಿದ್ದರೂ ಕೆಲವು ಕಠಿಣ ನಿಯಮಗಳನ್ನು ರಚಿಸುವ ಆವಶ್ಯಕತೆಯಿದೆ. ಹಾಗೆಯೇ ಧಾರ್ಮಿಕ ಮೂಲಭೂತ ಶಿಕ್ಷಣ ಸಿಗುವ ಸ್ಥಳದಲ್ಲಿ, ಆ ಶಿಕ್ಷಣ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಆವಶ್ಯಕವಾಗಿದೆ. ಈ ರೀತಿಯ ಶಿಕ್ಷಣವನ್ನು ನೀಡುವಂತಹ ಶಿಕ್ಷಕರ ಮೇಲೆ ನಿರ್ಬಂಧವನ್ನು ವಿಧಿಸುವುದು ಮುಂತಾದ ಉಪಾಯಗಳನ್ನು ಕೈಗೊಳ್ಳಬಹುದು.

ಭಕ್ತರ ಪ್ರಾರ್ಥನೆಯನ್ನು ದೇವರು ಆಲಿಸುತ್ತಾನೆ !

ಶೇಖ ರಶೀದ ಅಹಮದರ ಪ್ರಾರ್ಥನೆಯ ಹೇಳಿಕೆಯ ಬಗ್ಗೆ ಮತ್ತೊಂದು ಆಯಾಮದಿಂದ ವಿಚಾರ ಮಾಡುವ ಆವಶ್ಯಕತೆಯಿದೆ. ಒಂದು ವೇಳೆ ಪಾಕಿಸ್ತಾನ ಮತ್ತು ಅಹಮದ ಹೇಳುತ್ತಿರುವಂತೆ ‘ಭಾರತದಲ್ಲಿರುವ ಮುಸಲ್ಮಾನರ ಪ್ರಾರ್ಥನೆಯಿಂದ ಪಾಕಿಸ್ತಾನದ ಕ್ರಿಕೆಟ್ ತಂಡ ಪಂದ್ಯವನ್ನು ಗೆದ್ದಿತು’ ಎಂದಾಗಿದ್ದರೆ, ‘ಭಾರತೀಯರು ಮಾಡಿರುವ ಪ್ರಾರ್ಥನೆ ಅವರ ತುಲನೆಯಲ್ಲಿ ಕಡಿಮೆಯಾಗಿದೆ’, ಎಂದೇ ಹೇಳಬೇಕಾಗುವುದು. ಮೂಲದಲ್ಲಿ ಪ್ರಾರ್ಥನೆಯು ನಿಷ್ಕಾಮ ಮತ್ತು ಆಧ್ಯಾತ್ಮಿಕ ಉನ್ನತಿಯ ಅಡಚಣೆಗಳನ್ನು ದೂರಗೊಳಿಸಲು ಮತ್ತು ದೇವರ ಕೃಪಾಶೀರ್ವಾದವನ್ನು ಪಡೆಯಲು ಮಾಡಬೇಕು. ಹೀಗಿದ್ದರೂ ಯಾರಾದರೂ ಕ್ರಿಕೆಟ್ ಪಂದ್ಯಗಳಂತಹ ವಿಷಯಗಳಿಗಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದರೆ ಮತ್ತು ಅದು ಫಲಪ್ರದವಾಗದಿದ್ದರೆ, ಅದರ ಹಿಂದೆ ಅವರ ಆರ್ತತೆ, ಭಾವ, ಭಕ್ತಿ ಕಡಿಮೆಯಿದೆ ಎಂದೂ ತಿಳಿಯಬೇಕು. ಭಾರತೀಯರಲ್ಲಿ, ವಿಶೇಷವಾಗಿ ಹಿಂದೂಗಳಲ್ಲಿ ಮುಸಲ್ಮಾನರ ತುಲನೆಯಲ್ಲಿ ಧರ್ಮಪಾಲನೆ, ಧರ್ಮಾಚರಣೆಯು ಅತ್ಯಲ್ಪವಿದೆ. ಹಿಂದೂಗಳು ತಮ್ಮನ್ನು ಅಧಿಕ ಪ್ರಗತಿಪರರೆಂದು ತಿಳಿಯುತ್ತಾರೆ ಮತ್ತು ಧರ್ಮದ ವಿಷಯದಲ್ಲಿ ಬುದ್ಧಿಯನ್ನು ಉಪಯೋಗಿಸಿ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಇದರ ಬದಲಾಗಿ ಹಿಂದೂಗಳು ಶ್ರದ್ಧೆಯನ್ನಿಟ್ಟು ಸಾಧನೆಯನ್ನು ಮಾಡಿದರೆ, ಅವರ ಪ್ರಾರ್ಥನೆಯಲ್ಲಿ ಶಕ್ತಿ ಬರಲು ಸಾಧ್ಯವಿದೆ. ಹೀಗಾದರೆ, ಕ್ರಿಕೆಟ್ ಪಂದ್ಯವನ್ನು ಗೆಲ್ಲಲು ಅಲ್ಲ, ಪಾಕಿಸ್ತಾನದ ಅಸ್ತಿತ್ವವೇ ನಾಶವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲು ಬುದ್ಧಿ ಬರಬಹುದು ಮತ್ತು ದೇವರು ಸಾಧನೆ ಮಾಡುವ ಭಕ್ತರನ್ನು ಆಲಿಸುವುದರಿಂದ ಆ ಪ್ರಾರ್ಥನೆ ಫಲಪ್ರದವಾಗಬಹುದು ಎನ್ನುವುದನ್ನು ಗಮನಿಸಬೇಕು.