ಶ್ರೀನಗರದಿಂದ ಹಾರುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನದಿಂದ ನಿರಾಕರಣೆ !

ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದ ಉಪಯೋಗಿಸಲು ನಿರಾಕರಿಸಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !- ಸಂಪಾದಕರು

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಜಮ್ಮು – ಕಾಶ್ಮೀರದ ಶ್ರೀನಗರದಿಂದ ಶಾರ್ಜಾವರೆಗೂ ವಿಮಾನ ಹಾರಾಟಕ್ಕಾಗಿ ಅವರ ವಾಯುಪ್ರದೇಶವನ್ನು ಬಳಸಲು ನಿರಾಕರಿಸಿದೆ. ಇದರಿಂದ ಇನ್ನು ಶ್ರೀನಗರದಿಂದ ಹಾರುವ ವಿಮಾನಗಳು ಉದಯಪೂರ, ಕರ್ಣಾವತಿ, ಒಮಾನ ಮಾರ್ಗವಾಗಿ ಶಾರ್ಜಾಗೆ ಹೋಗುತ್ತವೆ. ಇದರಿಂದ ಶ್ರೀನಗರದಿಂದ ಶಾರ್ಜಾದವರೆಗೂ ವಿಮಾನ ಪ್ರವಾಸವು ಒಂದು ಗಂಟೆಗಿಂತಲೂ ಹೆಚ್ಚು ಕಾಲಾವಧಿ ಹಿಡಿಯಬಹುದು, ಸಮಯ ಮತ್ತು ಪ್ರಯಾಣ ಹೆಚ್ಚಿರುವುದರಿಂದ ಪ್ರವಾಸದ ವೆಚ್ಚ ಹೆಚ್ಚಾಗಿ ಟಿಕೇಟುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇರುವುದೆಂದು ಹೇಳಲಾಗುತ್ತಿದೆ.