ಭಯೋತ್ಪಾದಕ ಹಾಫಿಜ ಸಯಿದ ಸಹಿತ ಆರು ಜನರನ್ನು ಖುಲಾಸೆ ಗೊಳಿಸಿದ ಲಾಹೋರ್ ಉಚ್ಚ ನ್ಯಾಯಾಲಯ

ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?- ಸಂಪಾದಕರು 

ಹಾಫಿಜ ಸಯಿದ

ಲಾಹೋರ್ (ಪಾಕಿಸ್ತಾನ) – ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿದ ಪ್ರಕರಣದಲ್ಲಿ ಲಾಹೋರ್ ನ್ಯಾಯಾಲಯವು ಮುಂಬಯಿಯ ಮೇಲಾದ ದಾಳಿಯ ಮುಖ್ಯ ಸೂತ್ರಧಾರ ಭಯೋತ್ಪಾದಕ ಆಫೀಸ್ ಸಯಿದ ಮತ್ತು ಜಮಾತ್-ಉದ್-ದವಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರನ್ನು ಸಾಕ್ಷಿಯ ಅಭಾವದಿಂದ ಖುಲಾಸೆಗೊಳಿಸಿದೆ. ಈ ಆರು ಜನರಿಗೆ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ನೀಡಿರುವ ಶಿಕ್ಷೆಯನ್ನು ಉಚ್ಚನ್ಯಾಯಾಲಯವು ರದ್ದುಪಡಿಸಿದೆ. ಲಾಹೋರನ ಭಯೋತ್ಪಾದಕ ವಿರೋಧಿ ನ್ಯಾಯಾಲಯವು ಈ ವರ್ಷ ಎಪ್ರಿಲ್‍ನಲ್ಲಿ ಆಫೀಸ ಸಯಿದ ಸಹಿತ ಆರು ಜನರಿಗೆ ತಲಾ 9 ವರ್ಷದ ಶಿಕ್ಷೆಯನ್ನು ನೀಡಿತ್ತು.