ಪುಲ್ವಾಮಾದಲ್ಲಿ ದಾಳಿಯ ನಂತರ ನಿಂತಿತ್ತು ಪರಂಪರೆ !
* ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ? – ಸಂಪಾದಕರು * ಇದು ಹಾವಿಗೆ ಹಾಲುಣಿಸುವಂತೆ ಅಲ್ಲವೇ ?- ಸಂಪಾದಕರು |
ನವ ದೆಹಲಿ – ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ವರ್ಷಗಳ ನಂತರ ದೀಪಾವಳಿಯ ಪ್ರಯುಕ್ತ ಉಭಯ ದೇಶದ ಸೈನಿಕರು ಪರಸ್ಪರರಿಗೆ ಸಿಹಿ ಹಂಚಿದರು. ಜಮ್ಮು-ಕಾಶ್ಮೀರ್, ಪಂಜಾಬ್, ರಾಜಸ್ಥಾನ ಮುಂತಾದ ಗಡಿಭಾಗದಲ್ಲಿ ಸಿಹಿ ಹಂಚಲಾಯಿತು. ಇದರ ಮೊದಲು ಪ್ರತಿವರ್ಷ ಈ ಪರಂಪರೆ ನಡೆಯುತ್ತಿತ್ತು; ಆದರೆ ಕಾಶ್ಮೀರದಲ್ಲಿ ಪುಲ್ವಾಮಾದಲ್ಲಿಯ ಉಗ್ರರ ದಾಳಿಯ ನಂತರ ಈ ಪರಂಪರೆ ನಿಲ್ಲಿಸಲಾಗಿತ್ತು.
Personnel of the border security force and #Pakistan Rangers exchanged sweets and #Diwali wishes on the international border in Gujarat and Barmer in neighbouring Rajasthan on Thursday, according to the #BSF.https://t.co/A1pLKD4yqV
— The Hindu (@the_hindu) November 4, 2021
ರಾಜಸ್ಥಾನದ ಬಾಡಮೇರ್ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತದ ಗಡಿ ಭದ್ರತಾ ದಳದ ಸೈನಿಕ ಮತ್ತು ಪಾಕಿಸ್ತಾನದ ಸೈನಿಕ ಪರಸ್ಪರರಿಗೆ ಸಿಹಿ ಹಂಚಿದರು. ಪಂಜಾಬದ ಅಮೃತಸರ್‍ದಲ್ಲಿ ಪ್ರಸಿದ್ಧ ಅಟಾರಿ-ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಪರಸ್ಪರರಿಗೆ ಸಿಹಿ ತಿನ್ನಿಸಿದರು. ಜಮ್ಮು-ಕಾಶ್ಮೀರದ ಕುಪವಾಡ ಜಿಲ್ಲೆಯ ಗಡಿಯಲ್ಲಿಯೂ ಸೈನಿಕರಿಂದ ಇದೇ ರೀತಿಯ ಸಿಹಿ ಹಂಚಲಾಯಿತು.