ಒರಿಸ್ಸಾದಲ್ಲಿ ಮಳೆ ಮತ್ತು ಸಿಡಿಲಿನಿಂದ ೧೨ ಜನರ ಸಾವು

ಒರಿಸ್ಸಾದ ಭುವನೇಶ್ವರ, ಕಟಕ ಸಹಿತ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮತ್ತು ಸಿಡಿಲು ಬಡಿದ ಘಟನೆ ನಡೆದಿದೆ. ಇದರಲ್ಲಿ ಇದುವರೆಗೆ ೧೨ ಜನರ ಮೃತ್ಯು ಆಗಿದೆ ಹಾಗೂ ೧೫ ಜನರು ಗಾಯಾಗೊಂಡಿದ್ದಾರೆ.

ಸಪ್ಟೆಂಬರ್ ನಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆ ! – ಜ್ಯೋತಿಷಿ ಸಿದ್ದೇಶ್ವರ ಮಾರಾಟಕರ

ಸಪ್ಟೆಂಬರ್ ೨೦೨೩ ರಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆಯಿದ್ದು ದೇವಸ್ಥಾನ ಮತ್ತು ಮಸೀದಿ ಅಥವಾ ಹಿಂದೂ ಮುಸ್ಲಿಮ ಇವರ ವಿವಾದದಿಂದ ಹಿಂಸಾಚಾರ, ಅಗ್ನಿ ಅವಘಡ ನಡೆಸುವ ಪ್ರಯತ್ನಗಳು ಈ ಸಮಯದಲ್ಲಿ ಸಂಭವಿಸಬಹುದು

ಹಿಮಾಚಲ ಪ್ರದೇಶದ ಅನಿಯಲ್ಲಿ 5ಕ್ಕೂ ಹೆಚ್ಚು ಕಟ್ಟಡಗಳ ಕುಸಿತ !

ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಧಾರಾಕಾರ ಮಳೆ ಇರುತ್ತದೆ; ಆದರೆ ಈ ವರ್ಷ ಮನೆ, ಕಟ್ಟಡ ಕುಸಿತದ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರ ಹಿಂದೆ ಬೆಟ್ಟಗಳ ಮೇಲೆ ಮನಸೋ ಇಚ್ಛೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪ್ರಾಣಹಾನಿ ಮತ್ತು ಧನಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು !

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಇದುವರೆಗೂ ೩೫೧ ಜನರ ಸಾವು !

ಹಿಮಾಚಲ ಪ್ರದೇಶದಲ್ಲಿ ಕಳೆದ ೨ ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ ೩ ದಿನ ಧಾರಾಕಾರ ಮಳೆಯಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೂ ೩೫೧ ಜನರ ಸಾವಾಗಿದೆ.

ಚಂದ್ರಯಾನ-3 ಮಿಷನ್ ಯಶಸ್ವಿಯಾಗಲಿದೆ ! – ಕೋಡಿಮಠದ ಶ್ರೀ

ಶ್ರಾವಣ ಮಾಸದ ಮಧ್ಯದ ಕಾಲಾವಧಿಯಲ್ಲಿ ಜಗತ್ತನ್ನೇ ಕೊಚ್ಚಿಕೊಂಡು ಹೋಗುವಂತಹ ಮಳೆಯಾಗಲಿದೆ. ಭೂಕಂಪದಂತಹ ಘಟನೆಗಳು ನಡೆಯಲಿವೆ. ಸುನಾಮಿ ಬರಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ವಿಶ್ವ ಮಟ್ಟದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲಿದೆ

ಹಿಮಾಚಲ್ ಪ್ರದೇಶದಲ್ಲಿ ಹಾಹಾಕಾರ : ಇಲ್ಲಿಯವರೆಗೆ ೬೦ ಕಿಂತಲೂ ಹೆಚ್ಚಿನ ಜನರ ಸಾವು !

ಕಳೆದ ೪ – ೫ ದಿನಗಳಿಂದ ಬೆಟ್ಟಗಳಲ್ಲಿರುವ ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ಇಲ್ಲಿ ಧಾರಾಕಾರ ಮಳೆಯಿಂದ ಜನರು ಸಂತ್ರಸ್ತರಾಗಿದ್ದಾರೆ. ಇನ್ನೂ ಎರಡು ದಿನ ಧಾರಾಕಾರ ಮಳೆಯ ಆರ್ಭಟ ಮುಂದುವರೆಯುವುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚೀನಾದ ಶಿಯಾನ್ ಭಾಗದಲ್ಲಿ ಪ್ರವಾಹ : 21 ಜನರ ಸಾವು

ಚೀನಾದ ಷಾನಕ್ಸೀ ಪ್ರಾಂತ್ಯದ ಶಿಯಾನ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಭಾಗದಲ್ಲಿ ಭೂಕುಸಿತವು ಸಂಭವಿಸಿದೆ. ಈ ಪ್ರವಾಹದಲ್ಲಿ ಇದುವರೆಗೂ 12 ಜನರು ಸಾವನ್ನಪ್ಪಿದ್ದಾರೆ. ಅನೇಕರು ನಾಪತ್ತೆಯಾಗಿದ್ದಾರೆ.

ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆ !

ಹವಾಮಾನ ಇಲಾಖೆಯು ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಬಂಗಾಳ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಭೀಕರ ಉಷ್ಣತೆಯಿಂದ ಗ್ರೀಸ್ ನಲ್ಲಿ ಕಾಡಿಗೆ ತಗಲಿದ್ದ ಬೆಂಕಿಯನ್ನು ನಂದಿಸುವಾಗ ವಿಮಾನ ಪತನ !

ಅನೇಕ ದಶಕಗಳ ದಾಖಲೆಗಳನ್ನು ಮುರಿಯುತ್ತಿರುವ ಭೀಕರ ಉಷ್ಣತೆಯಿಂದ ಯುರೋಪಿನ ಗ್ರೀಸ್ ದೇಶ ತತ್ತರಿಸಿದೆ. ಇಲ್ಲಿನ ಅರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಸಮಯದಲ್ಲಿ ದೇಶದ ಎವ್ಹಿಯಾ ದ್ವೀಪದಲ್ಲಿರುವ ಅರಣ್ಯದ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸಿದ ವಿಮಾನ ಪತನಗೊಂಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಅತಿ ಬಳಕೆಯ ಪ್ರತಿಫಲ

ಭೀಕರ ಉಷ್ಣತೆಯ ಅಲೆಗಳ ನಂತರ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ.