ಹಿಮಾಚಲ್ ಪ್ರದೇಶದಲ್ಲಿ ಹಾಹಾಕಾರ : ಇಲ್ಲಿಯವರೆಗೆ ೬೦ ಕಿಂತಲೂ ಹೆಚ್ಚಿನ ಜನರ ಸಾವು !

ಭೂಕುಸಿತದಿಂದ ಅನೇಕ ಘಟನೆಗಳು !

ವ್ಯಾಸ ನದಿಯಲ್ಲಿ ಪ್ರವಾಹ !

ಶಿಮ್ಲಾ (ಹಿಮಾಚಲಪ್ರದೇಶ) – ಕಳೆದ ೪ – ೫ ದಿನಗಳಿಂದ ಬೆಟ್ಟಗಳಲ್ಲಿರುವ ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ಇಲ್ಲಿ ಧಾರಾಕಾರ ಮಳೆಯಿಂದ ಜನರು ಸಂತ್ರಸ್ತರಾಗಿದ್ದಾರೆ. ಇನ್ನೂ ಎರಡು ದಿನ ಧಾರಾಕಾರ ಮಳೆಯ ಆರ್ಭಟ ಮುಂದುವರೆಯುವುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಎರಡೂ ರಾಜ್ಯದ ಅನೇಕ ಸ್ಥಳಗಳಲ್ಲಿ ಭೂಕುಸಿತದ ಘಟನೆಗಳು ಘಟಿಸಿದ್ದು ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ ೪ ದಿನದಲ್ಲಿ ೬೦ ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ಪಡೆಯ ಅನೇಕ ತಂಡಗಳು ಶಿಮ್ಲಾ ಸಹಿತ ಸಂಪೂರ್ಣ ರಾಜ್ಯದಲ್ಲಿ ರಕ್ಷಣಾಕಾರ್ಯ ನಡೆಸಲು ಸಿದ್ಧವಾಗಿದೆ. ವಾಯು ಸೇನೆಯ ಹೆಲಿಕಾಪ್ಟರ್ ಕೂಡ ಈ ಕಾರ್ಯದಲ್ಲಿ ಸಹಾಯ ಮಾಡುತ್ತಿದೆ. ರಾಜ್ಯದಲ್ಲಿನ ವ್ಯಾಸ ನದಿಗೆ ಪ್ರವಾಹ ಬಂದು ಅನೇಕ ಸ್ಥಳಗಳಲ್ಲಿ ಪರಿಸ್ಥಿತಿ ಕೈಮೀರಿದೆ.

ರಾಜಧಾನಿ ಶಿಮ್ಲಾದಲ್ಲೇ ಹಾಹಾಕಾರ !

ಶಿಮ್ಲಾದಲ್ಲಿ ಸಮರಹಿಲ್ ಮತ್ತು ಕೃಷ್ಣನಗರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಆಗಿದ್ದು ಅಲ್ಲಿಯ ಅನೇಕ ಮನೆ ಮತ್ತು ಗಿಡಮರಗಳು ಕುಸಿದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಆಟಿಕೆಯಲ್ಲಿನ ಕಾಗದದಂತೆ ಕಟ್ಟಡಗಳು ಕುಸಿಯುತ್ತಿರುವುದು ಎಲ್ಲಾ ಕಡೆಗೆ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಸಮರಹಿಲ ಕ್ಷೇತ್ರದಲ್ಲಿನ ಶಿವಮಂದಿರದ ಹತ್ತಿರ ನಡೆದಿರುವ ಭೂಕುಸಿತದಿಂದ ಇಲ್ಲಿಯವರೆಗೆ ೧೪ ಭಕ್ತರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.

ನಿರೀಕ್ಷಿಸಲಾದ ಭೂಕುಸಿತದಿಂದ ರಕ್ಷಣೆಯ ಪ್ರಯತ್ನದಲ್ಲಿ ರಾಜ್ಯದ ನೂರಪುರದಲ್ಲಿನ ೪೧೫ ಜನರನ್ನು ಸುರಕ್ಷಿತ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಕಾಂಗಡ ಇಲ್ಲಿ ಕೂಡ ಈ ರೀತಿಯ ಘಟನೆಗಳಲ್ಲಿ ಸಮರೋಪಾದಿಯಲ್ಲಿ ಪ್ರಯತ್ನ ಮುಂದುವರೆದಿದೆ. ಇಲ್ಲಿಯ ಜನರ ಮನೆಗೆ ನೀರು ನುಗ್ಗಿದೆ.

ಉತ್ತರಖಂಡ ರಾಜ್ಯದಲ್ಲಿ ಕೂಡ ದೊಡ್ಡ ಪ್ರಮಾಣದ ಭೂಕುಸಿತ !

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಲ್ಲಿ ನೂರಾರು ಭಕ್ತರು ಸಿಲುಕಿದ್ದು ಅವರನ್ನು ಸುರಕ್ಷಿತವಾಗಿ ಹೊರ ತರುವ ಪ್ರಯತ್ನ ನಡೆಯುತ್ತಿದೆ. ಮದಮಹೇಶ್ವರ ಘಟ್ಟದಲ್ಲಿ ಕೂಡ ಈ ರೀತಿಯ ಸಹಾಯ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿನ ಜೋಶಿಮಠ ಮತ್ತು ಪೌಡಿ ಇಲ್ಲಿ ಕೂಡ ನಡೆದ ಭೂಕುಸಿತದಿಂದ ಅನೇಕ ಮನೆಗಳು ಕುಸಿದಿವೆ. ಪಂಜಾಬ್ ನ ಗುರುದಾಸಪುರ ಮತ್ತು ರೂಪನಗರದ ವ್ಯಾಸ ನದಿಗೆ ಬಂದಿರುವ ಪ್ರವಾಹದಿಂದ ಇಲ್ಲಿಯ ಜನಜೀವನ ಅಸ್ತವ್ಯಸ್ತವಾಗಿದೆ.