ಒರಿಸ್ಸಾದಲ್ಲಿ ಮಳೆ ಮತ್ತು ಸಿಡಿಲಿನಿಂದ ೧೨ ಜನರ ಸಾವು

ಭುವನೇಶ್ಬರ (ಒರಿಸ್ಸಾ) – ಒರಿಸ್ಸಾದ ಭುವನೇಶ್ವರ, ಕಟಕ ಸಹಿತ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮತ್ತು ಸಿಡಿಲು ಬಡಿದ ಘಟನೆ ನಡೆದಿದೆ. ಇದರಲ್ಲಿ ಇದುವರೆಗೆ ೧೨ ಜನರ ಮೃತ್ಯು ಆಗಿದೆ ಹಾಗೂ ೧೫ ಜನರು ಗಾಯಾಗೊಂಡಿದ್ದಾರೆ. ಮುಂದಿನ ೪ ದಿನಗಳಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಿಡಿಲು ಬಡಿದು ೮ ಜಾನುವಾರುಗಳು ಸಾವನ್ನಪ್ಪಿವೆ.