ಹಿಮಾಚಲ ಪ್ರದೇಶದ ಅನಿಯಲ್ಲಿ 5ಕ್ಕೂ ಹೆಚ್ಚು ಕಟ್ಟಡಗಳ ಕುಸಿತ !

ಶಿಮ್ಲಾ (ಹಿಮಾಚಲ ಪ್ರದೇಶ) – ರಾಜ್ಯದ ಕುಲ್ಲು ಜಿಲ್ಲೆಯ ಅನಿಯಲ್ಲಿ ಆಗಸ್ಟ್ 24 ರಂದು 5 ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿವೆ. ಅಧಿಕಾರಿಗಳು ಮೊದಲೇ ಜನರನ್ನು ಸ್ಥಳಾಂತರಿಸಿದ್ದರಿಂದ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅನಿ ಬಸ್ ನಿಲ್ದಾಣದ ಬಳಿ ಇನ್ನೂ 2 ರಿಂದ 3 ಕಟ್ಟಡಗಳು ಕುಸಿಯುವ ಅಪಾಯವಿದೆ ಎನ್ನಲಾಗುತ್ತಿದೆ.

1. ಅನಿಯ ಆಡಳಿತಾಧಿಕಾರಿ ನರೇಶ್ ವರ್ಮಾ ಇವರ ನೇತೃತ್ವದಲ್ಲಿ ಸ್ಥಳೀಯ ಆಡಳಿತವು ಘಟನಾ ಸ್ಥಳಕ್ಕೆ ಆಗಮಿಸಿ ಹಾನಿಯ ಪರಿಶೀಲನೆ ನಡೆಸುತ್ತಿದೆ.

2. ಕುಸಿದಿರುವ ಕಟ್ಟಡಗಳ ಸಂಖ್ಯೆ 7 ರಿಂದ 8 ಇರಬಹುದು ಎಂದು ಅಂದಾಜಿಸಲಾಗಿದೆ.

3. ಜುಲೈ 7 ರಿಂದ 11 ರವರೆಗೆ ಸುರಿದ ಧಾರಾಕಾರ ಮಳೆಗೆ ಈ ಕಟ್ಟಡಗಳು ಬಿರುಕು ಬಿಡಲಾರಂಭಿಸಿವೆ. ಈ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ಮೊದಲೇ ಜಾಗವನ್ನು ಖಾಲಿ ಮಾಡುವಂತೆ ಕೇಳಿಕೊಂಡಿದೆ ಮತ್ತು ಕಟ್ಟಡ ಮಾಲೀಕರಿಗೆ ತೆರವು ನೋಟಿಸ್ ನೀಡಿತ್ತು.

4. ಕಟ್ಟಡಗಳ ಕುಸಿತದಿಂದ ಆನಿ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಂಪಾದಕೀಯ ನಿಲುವು

ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಧಾರಾಕಾರ ಮಳೆ ಇರುತ್ತದೆ; ಆದರೆ ಈ ವರ್ಷ ಮನೆ, ಕಟ್ಟಡ ಕುಸಿತದ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರ ಹಿಂದೆ ಬೆಟ್ಟಗಳ ಮೇಲೆ ಮನಸೋ ಇಚ್ಛೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪ್ರಾಣಹಾನಿ ಮತ್ತು ಧನಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು !