ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಕಳೆದ ೨ ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ ೩ ದಿನ ಧಾರಾಕಾರ ಮಳೆಯಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೂ ೩೫೧ ಜನರ ಸಾವಾಗಿದೆ. ೩೩೬ ಜನರು ಗಾಯಗೊಂಡಿದ್ದಾರೆ. ಹಾಗೆಯೇ ೩೮ ಜನರು ನಾಪತ್ತೆಯಾಗಿದ್ದಾರೆ.
ಹಿಮಾಚಲ ಪ್ರದೇಶ: ಭೂಕುಸಿತದಿಂದ ಧರೆಗುರುಳಿದ ಬಹುಮಹಡಿ ಕಟ್ಟಡಗಳು, ಹಲವರು ಸಿಲುಕಿರುವ ಶಂಕೆ
Massive Landslide In Himachal’s Kullu, Several Houses Collapse#Himachalpradesh #Kullu #HousesCollapse #ಹಿಮಾಚಲಪ್ರದೇಶ #ಕುಲ್ಲು #ಕಟ್ಟಡಕುಸಿತ
Read more here:https://t.co/HDg0edXnAO— kannadaprabha (@KannadaPrabha) August 24, 2023
ರಾಜ್ಯದಲ್ಲಿ ೩ ಹೆದ್ದಾರಿಗಳು ಸೇರಿದಂತೆ ೫೩೮ ರಸ್ತೆಗಳು ಸಂಚಾರಕ್ಕೆ ಸಂಪೂರ್ಣ ಬಂದ್ ಆಗಿವೆ, ೨ ಸಾವಿರದ ೮೯೭ ಗ್ರಾಮಗಳಲ್ಲಿ ವಿದ್ಯುತ್ ಇಲ್ಲ. ಹಲವು ಕಡೆ ವಿದ್ಯುತ್ ತಂತಿಗಳು (ಟಾನ್ಸಫಾರ್ಮರ್) ಕುಸಿದುಬಿದ್ದಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ೨೧೪ ಯೋಜನೆಗಳನ್ನು ಮುಚ್ಚಲಾಗಿದೆ, ಜನರಿಗೆ ವಿದ್ಯುತ್, ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಕಷ್ಟವಾಗಿದೆ.