ಜನರು ಮಾಂಸಹಾರ ಸೇವಿಸುತ್ತಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟ ಮತ್ತು ಭೂಕುಸಿತಕ್ಕೆ ಕಾರಣ ! – ಐಐಟಿಯ ಸಂಚಾಲಕ ಲಕ್ಷ್ಮಿಧರ ಬೇಹರಾ

ಮಂಡಿ (ಹಿಮಾಚಲ ಪ್ರದೇಶ) ಇಲ್ಲಿಯ ಐಐಟಿಯ ಸಂಚಾಲಕ ಲಕ್ಷ್ಮಿಧರ ಬೇಹರಾ ಇವರ ದಾವೆ !

(ಮೇಘ ಸ್ಪೋಟ ಎಂದರೆ, ಹೆಚ್ಚುವರಿ ಭಾರ ಪಡೆದು ಮಾರ್ಗಕ್ರಮಣ ಮಾಡುತ್ತದೆ. ಅದರ ಮಾರ್ಗದಲ್ಲಿ ಯಾವುದಾದರೂ ಬೆಟ್ಟ ಬಂದರೆ ಅದಕ್ಕೆ ಅದು ಅಪ್ಪಳಿಸಿ ಸಿಡಿಯುತ್ತವೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುತ್ತದೆ.)

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮೇಘಸ್ಪೋಟ ಮತ್ತು ಭೂಕುಸಿತ ಇದು ಜನರು ಸೇವಿಸುವ ಮಾಂಸಹಾರದಿಂದ ಆಗುತ್ತಿದೆ ಎಂದು ಮಂಡಿ ಇಲ್ಲಿಯ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಚಾಲಕ ಲಕ್ಷ್ಮಿದರ ಬೇಹರಾ ಇವರು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈಗ ಮಳೆಗಾಲದಲ್ಲಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ನೆರೆಯ ಪರಿಸ್ಥಿತಿಯಿಂದ ೨೩೮ ಕ್ಕಿಂತಲೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
ಲಕ್ಷ್ಮಿ ಧರ ಬೇಹರಾ ಇವರು, ನಾವು ಏನಾದರೂ ಪ್ರಾಣಿ ಹತ್ಯೆ ನಿಲ್ಲಿಸದಿದ್ದರೆ, ಹಿಮಾಚಲ ಪ್ರದೇಶ ನಾಶವಾಗುವುದು. ನೀವು ಪ್ರಾಣಿಗಳನ್ನು ಹತ್ಯೆ ಮಾಡುತ್ತಿರುವುದ ಅದರ ಸಂಬಂಧ ಪರಿಸರದ ಜೊತೆ ಇದೆ. ಈ ಸಂಬಂಧ ನಿಮಗೆ ಕಾಣುತ್ತಿಲ್ಲ. ಮೇಲಿಂದ ಮೇಲೆ ಭೂಕುಸಿತ, ಮೇಘ ಸ್ಪೋಟ ಮತ್ತು ಇತರ ಅನೇಕ ಘಟನೆಗಳು ಘಟಿಸುತ್ತಿವೆ, ಇದು ಎಲ್ಲಾ ಪ್ರಾಣಿಗಳ ಮೇಲೆ ನಡೆಯುವ ಅಮಾನವಿಯತೆಯ ಪರಿಣಾಮವಾಗಿದೆ. ಜನರು ಮಾಂಸ ಸೇವಿಸುತ್ತಾರೆ, ‘ಒಳ್ಳೆಯ ಮನುಷ್ಯನಾಗಲು ಏನು ಮಾಡಬೇಕು ?’, ಎಂದು ಕೇಳಿದಾಗ, ಮಾಂಸ ಸೇವಿಸುವುದನ್ನು ನಿಲ್ಲಿಸಿ. ವಿದ್ಯಾರ್ಥಿಗಳಿಗೆ ಮಾಂಸಾಹಾರ ಸೇವಿಸದಿರಲು ಶಪಥ ನೀಡಬೇಕೆಂದು ಅವರು ಕರೆ ನೀಡಿದರು.

ಸಂಪಾದಕೀಯ ನಿಲುವು

ಐಐಟಿ ಶಿಕ್ಷಣ ಸಂಸ್ಥೆಗೆ ಜಗತ್ತಿನಾದ್ಯಂತ ಗೌರವ ಇದೆ. ಇಂತಹ ಸಂಸ್ಥೆಯ ಸಂಚಾಲಕರು ಯಾವಾಗ ಈ ರೀತಿಯ ದಾವೆ ಮಾಡುತ್ತಾರೆ, ಆಗ ಅವರ ಬಗ್ಗೆ ಟಿಕಿಸುವ ಬದಲು ಅದನ್ನು ಗಂಭೀರವಾಗಿ ಯೋಚಿಸಿ ಅಧ್ಯಯನ ಮಾಡುವ ಅವಶ್ಯಕತೆ ಇದೆ !